ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಎಷ್ಟೇ ಬೇಡಿಕೊಂಡ್ರೂ ರೈಲ್ವೇ ಪ್ರಯಾಣಿಕನನ್ನು ಮುಖಾಮೂತಿ ನೋಡದೆ ಚಚ್ಚಿದ ಪೊಲೀಸ್‌- ಶಾಕಿಂಗ್‌ ವಿಡಿಯೊ ಇಲ್ಲಿದೆ

RPF Constable beating passenger: ಪ್ರಯಾಣಿಕನೊಬ್ಬನಿಗೆ ಚಲಿಸುತ್ತಿರುವ ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೇಬಲ್ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ದೆಹಲಿ ಸರೈ ರೋಹಿಲ್ಲಾ (ಡಿಇಇ) - ಜೋಧ್‌ಪುರ (ಜೆಯು) ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ರೈಲು ಪ್ರಯಾಣಿಕನಿಗೆ ಮನಬಂದಂತೆ ಥಳಿಸಿದ ಪೊಲೀಸ್

Priyanka P Priyanka P Aug 20, 2025 7:17 PM

ದೆಹಲಿ: ಪ್ರಯಾಣಿಕನೊಬ್ಬನಿಗೆ ಚಲಿಸುತ್ತಿರುವ ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೇಬಲ್ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ (social media) ವೈರಲ್ ಆಗಿದೆ. ಆ ಅಧಿಕಾರಿ ಆ ವ್ಯಕ್ತಿಯನ್ನು ಪದೇ ಪದೇ ಹೊಡೆಯುವುದನ್ನು ಮತ್ತು ಯುವಕನನ್ನು ಲಗೇಜ್‌ ಸಹಿತ ರೈಲಿನಿಂದ ಹೊರಗೆ ತಳ್ಳಲು ಪ್ರಯತ್ನಿಸುವ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

42 ಸೆಕೆಂಡುಗಳ ಈ ವಿಡಿಯೊದಲ್ಲಿ, ಪ್ರಯಾಣಿಕ ತನ್ನ ಮೇಲಿನ ಹಲ್ಲೆಯನ್ನು ವಿರೋಧಿಸುತ್ತಿದ್ದಂತೆ ಅವನನ್ನು ರೈಲ್ವೇ ಕೋಚ್‍ನ ಬಾಗಿಲಿನ ಕಡೆಗೆ ಆರ್‌ಪಿಎಫ್ ಪೊಲೀಸ್ ತಳ್ಳಿದ್ದಾರೆ. ಅಧಿಕಾರಿಯಿಂದ ನಿಂದಿಸಲ್ಪಟ್ಟಿದ್ದರೂ ಅವನು ಕ್ಷಮೆಯಾಚಿಸುತ್ತಿರುವುದನ್ನು ಸಹ ವಿಡಿಯೊದಲ್ಲಿ ನೋಡಬಹುದು. ಕಾನ್‌ಸ್ಟೇಬಲ್ ಆತನ ಮೇಲೆ ಆಕ್ರಮಣಕಾರಿಯಾಗಿ ಹಲ್ಲೆ ನಡೆಸುವುದು, ಅವನ ವಸ್ತುಗಳನ್ನು ಕಸಿದುಕೊಳ್ಳುವುದು ಮತ್ತು ಲಗೇಜ್ ಸಹಿತ ಪ್ರಯಾಣಿಕನನ್ನು ಹೊರಗೆ ತಳ್ಳಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ದೃಶ್ಯ ತೀವ್ರ ಟೀಕೆಗೆ ಗುರಿಯಾಗಿದೆ.

ವಿಡಿಯೊ ವೀಕ್ಷಿಸಿ:



ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಪಿಎನ್‌ಆರ್ ಮಾಹಿತಿಯ ಪ್ರಕಾರ, ಆಗಸ್ಟ್ 18 ರಂದು ಹೊರಟಿದ್ದ ದೆಹಲಿ ಸರೈ ರೋಹಿಲ್ಲಾ (ಡಿಇಇ) - ಜೋಧ್‌ಪುರ (ಜೆಯು) ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ಸಂಭವಿಸಿದೆ. ರೈಲ್ವೆಸೇವಾದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಆರ್‌ಪಿಎಫ್ ಉತ್ತರ ರೈಲ್ವೆ, ಆರ್‌ಪಿಎಫ್ ದೆಹಲಿ ವಿಭಾಗವನ್ನು ಟ್ಯಾಗ್ ಮಾಡಿ ತನಿಖೆ ನಡೆಸುವಂತೆ ಸೂಚಿಸಿದೆ.

ಆರ್‌ಪಿಎಫ್ ದೆಹಲಿ ವಿಭಾಗವು, ಸಂಬಂಧಪಟ್ಟ ಕಾನ್‌ಸ್ಟೇಬಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ದೃಢಪಡಿಸಿದೆ. ಈ ಸಂಬಂಧ ರೈಲ್ವೆ ಕಾಯ್ದೆಯ ಸೆಕ್ಷನ್ 141 ರ ಅಡಿಯಲ್ಲಿ ಆರ್‌ಪಿಎಫ್/ಪೋಸ್ಟ್/ಡಿಇಇಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ವಿಭಾಗೀಯ ಮಟ್ಟದಲ್ಲಿ ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಚೆಪಾಕ್ ಕ್ರೀಡಾಂಗಣ ನವೀಕರಣದ ವಿಡಿಯೊ ಹಂಚಿಕೊಂಡ ಟಿಎನ್‌ಸಿಎ