ಅಶ್ಲೀಲ ಕಂಟೆಂಟ್ ಮೂಲಕ ಖ್ಯಾತರಾದ ಯುಟ್ಯೂಬರ್ ಸಹೋದರಿಯರಿಂದ ಬೈಕ್ ಸವಾರರ ಜತೆ ಜಗಳ; ವಿಡಿಯೊ ವೈರಲ್
Viral Video: ಅಶ್ಲೀಲ ರೀಲ್‌ಗಳನ್ನು ರಚಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದ ಉತ್ತರ ಪ್ರದೇಶದ ಸಂಭಾಲ್‌ನ ಇಬ್ಬರು ಖ್ಯಾತ ಯುಟ್ಯೂಬರ್ ಸಹೋದರಿಯರಾದ ಮೆಹಕ್ ಮತ್ತು ಪರಿ ಇದೀಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದು, ವ್ಯಕ್ತಿಯೋರ್ವನ ಜತೆಗೆ ಜಗಳ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಲಖನೌ: ಉತ್ತರ ಪ್ರದೇಶದ (Uttar Pradesh) ಅಮ್ರೋಹಾದ ಜೋಯಾ ಪಟ್ಟಣದಲ್ಲಿ ನಡೆಯುವ ವಾರದ ಜಾತ್ರೆಗೆ (Fair) ಸಂಬಂಧಿಸಿದ ವಿವಾದಾತ್ಮಕ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಸಂಭಾಲ್ ಜಿಲ್ಲೆಯ ಪ್ರಸಿದ್ಧ ಯೂಟ್ಯೂಬರ್ ಸಹೋದರಿಯರಾದ ಮೆಹಕ್ ಮತ್ತು ಪರಿ, ಬೈಕ್ ಸವಾರನೊಂದಿಗೆ ಜಗಳವಾಡುವ ದೃಶ್ಯಗಳು ಈ ವಿಡಿಯೊದಲ್ಲಿವೆ (Viral Video). ಈ ಎರಡು ದಿನದ ಹಿಂದಿನ ಘಟನೆಯನ್ನು ಜಾತ್ರೆಯಲ್ಲಿ ಇದ್ದ ಯುವಕನೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಮೆಹಕ್ ಮತ್ತು ಪರಿ ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್ ಡಿಕ್ಕಿಯಾದಾಗ ಈ ಗಲಾಟೆ ಆರಂಭವಾಯಿತು.
ದಿಡೌಲಿ ಕೊತ್ವಾಲಿ ವ್ಯಾಪ್ತಿಯ ಜೋಯಾದ ಮೈದಾನದಲ್ಲಿ ಶನಿವಾರ ರಾತ್ರಿ ಜಾತ್ರೆ ನಡೆಯುತ್ತಿತ್ತು. ಮೆಹಕ್ ಮತ್ತು ಪರಿ ತಮ್ಮ ಕಾರಿನಲ್ಲಿ ಜಾತ್ರೆಗೆ ಭೇಟಿ ನೀಡಿದ್ದರು. ಜಾತ್ರೆಯಿಂದ ವಾಪಸಾಗುವಾಗ, ಅವರ ಕಾರಿಗೆ ಬೈಕ್ ಡಿಕ್ಕಿಯಾಯಿತು. ಆರೋಪದ ಪ್ರಕಾರ, ಡಿಕ್ಕಿಯ ನಂತರ ಕಾರಿನ ಚಾಲಕ ವಾಹನವನ್ನು ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಇದರಿಂದ ಕೋಪಗೊಂಡ ಜಾತ್ರೆಯಲ್ಲಿದ್ದ ಜನರು ಕಾರನ್ನು ಹಿಂಬಾಲಿಸಿದರು.
संभल जिले की सोशल मीडिया से चर्चाओं में आई महक और परी को अमरोहा के जोया में पब्लिक ने घेर लिया। मोटरसाइकिल टकराने से हुवे विवाद में महक, परी ओर राहगीरों में हुई झड़प देखे वीडियो.... pic.twitter.com/z4FDlUBoc0
— Shanu Bharty (@riyaz_shanu) August 17, 2025
ಸ್ವಲ್ಪ ದೂರದಲ್ಲಿ ಜನರು ಕಾರನ್ನು ಸುತ್ತುವರಿದಾಗ, ಕಾರನ್ನು ಡ್ರೈವ್ ಮಾಡುತ್ತಿದ್ದ ಯುವಕನನ್ನು ಹೊರಗೆ ಎಳೆದು ಥಳಿಸಿದರು. ಈ ಸಂದರ್ಭದಲ್ಲಿ ಮೆಹಕ್ ಮತ್ತು ಪರಿ ಕಾರಿನಿಂದ ಇಳಿದು, ಬೈಕ್ ಸವಾರರು ಮತ್ತು ಜನರೊಂದಿಗೆ ವಾಗ್ವಾದ ನಡೆಸಿದರು. ಜನಸಂದಣಿಯು ಹೆಚ್ಚಾದಂತೆ, ಜಾತ್ರೆಯ ವಾತಾವರಣ ಉದ್ವಿಗ್ನವಾಯಿತು. ಸ್ಥಳದಲ್ಲಿದ್ದ ಯುವಕನೊಬ್ಬ ಈ ಘಟನೆಯನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದು ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಮೆಹಕ್-ಪರಿ ಮತ್ತು ಬೈಕ್ ಸವಾರನ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವುದು ಮತ್ತು ಸುತ್ತಲೂ ಸಾಕಷ್ಟು ಜನರು ಸೇರಿರುವುದನ್ನು ಕಾಣಬಹುದು.
ಈ ಸುದ್ದಿಯನ್ನು ಓದಿ: Crime News: ರಾಜಸ್ಥಾನದಲ್ಲಿ ದಾರುಣ ಘಟನೆ: ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಶವವಾಗಿ ಕಾರಿನಲ್ಲಿ ಪತ್ತೆ
ಗಲಾಟೆಯ ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿಗಾಗ ಇಬ್ಬರೂ ಸ್ಥಳದಿಂದ ತೆರಳಿರುವುದು ಗೊತ್ತಾಗಿದೆ. ಇನ್ಸ್‌ಪೆಕ್ಟರ್ ಹರೀಶ್ ವರ್ಧನ್ ಸಿಂಗ್, ಈ ವಿಷಯದಲ್ಲಿ ಯಾರೂ ದೂರು ದಾಖಲಿಸಿಲ್ಲ. ದೂರು ದಾಖಲಾದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.