ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿಗೆ ಶುಭಕೋರಿದ ರಾಹುಲ್ ಗಾಂಧಿ: ಕಾರಣ ಏನು?

ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದ ಪ್ರಮುಖ ಸ್ಥಾನಕ್ಕೆ ಚುನಾಯಿತರಾಗಿದ್ದು, ಅವರನ್ನು ಕಾಂಗ್ರೆಸ್‌ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಅಭಿನಂದಿಸಿ ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿ ಸಂಸದನಿಗೆ ರಾಹುಲ್‌ ಗಾಂಧಿ ಅಭಿನಂದನೆ

ರಾಹುಲ್ ಗಾಂಧಿ - ರಾಜೀವ್ ಪ್ರತಾಪ್ ರೂಡಿ

Profile Sushmitha Jain Aug 20, 2025 9:28 PM

ನವದೆಹಲಿ: ಕಾಂಗ್ರೆಸ್‌ನ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ (Leader of the Opposition) ರಾಹುಲ್ ಗಾಂಧಿ (Rahul Gandhi) ಬುಧವಾರ ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ (Rajiv Pratap Rudy) ಅವರನ್ನು ಅಭಿನಂದಿಸಿದರು. ರಾಜೀವ್ ಪ್ರತಾಪ್ ರೂಡಿ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದ (Constitution Club of India) ಪ್ರಮುಖ ಸ್ಥಾನಕ್ಕೆ ಚುನಾಯಿತರಾದ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅಭಿನಂದಿಸಿದ್ದು, ಇದನ್ನು ಅಚ್ಚರಿಯ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.

ರಾಹುಲ್ ಗಾಂಧಿ ಬೆಳಗ್ಗೆ ಸಂಸತ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ರೂಡಿ ಅವರನ್ನು ಗುರುತಿಸಿ, ಶುಭಾಶಯ ಕೋರಿದರು. “ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಅಸಾಮಾನ್ಯ ಒಡನಾಟಕ್ಕೆ ಧನ್ಯವಾದಗಳು” ಎಂದು ರಾಹುಲ್ ಗಾಂಧಿ ಹೇಳಿದರೆ, ರೂಡಿ “ಧನ್ಯವಾದ” ಎಂದು ಪ್ರತಿಕ್ರಿಯಿಸಿದರು.



ರಾಜೀವ್ ಪ್ರತಾಪ್ ರೂಡಿ ಇತ್ತೀಚೆಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನ ಸೆಕ್ರೆಟರಿ (ಆಡಳಿತ) ಸ್ಥಾನಕ್ಕೆ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಇದು ಕ್ಲಬ್‌ನ ಇತಿಹಾಸದ ಅತ್ಯಂತ ತೀವ್ರ ಸ್ಪರ್ಧಾತ್ಮಕ ಚುನಾವಣೆಯಾಗಿತ್ತು. ಈ ಚುನಾವಣೆಯಲ್ಲಿ ರೂಡಿ ತಮ್ಮದೇ ಪಕ್ಷದ ನಾಯಕ ಸಂಜೀವ್ ಬಲಿಯಾನ್ ಅವರನ್ನು ಸೋಲಿಸಿದರು. ಆರು ಬಾರಿ ಸಂಸದರಾಗಿರುವ ಮತ್ತು ಕೇಂದ್ರದ ಮಾಜಿ ಸಚಿವ ರೂಡಿ ಬಿಜೆಪಿ ಮತ್ತು ಬಿಜೆಪಿ ಸ್ಪರ್ಧೆಯಲ್ಲಿ ವಿರೋಧ ಪಕ್ಷದ ಸಂಸದರ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇಬ್ಬರೂ ಬಿಜೆಪಿ ನಾಯಕರು ಈ ಚುನಾವಣೆಯನ್ನು ಪಕ್ಷದ ರಾಜಕೀಯದ ದೃಷ್ಟಿಯಿಂದ ನೋಡಬಾರದು ಎಂದು ಒತ್ತಿಹೇಳಿದ್ದಾರೆ.

ಕಾನ್‌ಸ್ಟಿಟ್ಯೂಷನ್ ಕ್ಲಬ್‌ನ ಈ ಚುನಾವಣೆಯಲ್ಲಿ 1,295 ಸದಸ್ಯರಲ್ಲಿ 707 ಮಂದಿ ಮತದಾನ ಮಾಡಿದ್ದು, ಹೆಚ್ಚು ಸದಸ್ಯರು ಮತದಾನದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜಕೀಯ ಕ್ಷೇತ್ರದ ದಿಗ್ಗಜರು ಮತದಾನದಲ್ಲಿ ಭಾಗವಹಿಸಿದ್ದರು. ಈ ಚುನಾವಣೆಯು ರಾಜಕೀಯ ವರ್ಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು, ವಿಶೇಷವಾಗಿ ರಾಹುಲ್ ಗಾಂಧಿ ಅವರ ಬೆಂಬಲವು ರೂಡಿ ಅವರ ಗೆಲುವಿನಲ್ಲಿ ನಿರ್ಣಾಯಕವಾಗಿತ್ತು ಎಂದು ವರದಿಗಳು ತಿಳಿಸಿವೆ.