Viral Video: ಏಕತಾ ಓಟ ಕಾರ್ಯಕ್ರಮದಲ್ಲಿ ಕ್ರೇನ್‌ನಲ್ಲಿ ಸಿಲುಕಿದ ಬಿಜೆಪಿ ಸಂಸದ; ವಿಡಿಯೋ ವೈರಲ್
ಮಧ್ಯಪ್ರದೇಶದ ಸತ್ನಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಗಣೇಶ್ ಸಿಂಗ್ ಶುಕ್ರವಾರ ಕ್ರೇನ್‌ಗೆ ಸಿಲುಕಿಕೊಂಡ ಘಟನೆ ನಡೆದಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಏಕತಾ ದಿವಸ್ ಆಚರಿಸಲು ಆಯೋಜಿಸಲಾದ 'ಏಕತಾ ಓಟದಲ್ಲಿ ಈ ಘಟನೆ ನಡೆದಿದೆ. ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದ 2014 ರಿಂದ ಅಕ್ಟೋಬರ್ 31 ರಂದು ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) ಎಂದು ಆಚರಿಸಲಾಗುತ್ತಿದೆ.
 
                                -
 Vishakha Bhat
                            
                                Oct 31, 2025 4:52 PM
                                
                                Vishakha Bhat
                            
                                Oct 31, 2025 4:52 PM
                            ಮಧ್ಯಪ್ರದೇಶದ ಸತ್ನಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಗಣೇಶ್ ಸಿಂಗ್ ಶುಕ್ರವಾರ ಕ್ರೇನ್‌ಗೆ ಸಿಲುಕಿಕೊಂಡ ಘಟನೆ ನಡೆದಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಏಕತಾ ದಿವಸ್ (Ekta Diwas) ಆಚರಿಸಲು ಆಯೋಜಿಸಲಾದ 'ಏಕತಾ ಓಟ' ಕಾರ್ಯಕ್ರಮದ ಸಂದರ್ಭದಲ್ಲಿ ಸತ್ನಾದ ಸೆಮರಿಯಾ ಚೌಕ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ವರದಿಗಳ ಪ್ರಕಾರ, ಸಿಂಗ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸ್ಥಳಕ್ಕೆ ಹೋದರು.
ಮಧ್ಯಾಹ್ನ ನಡೆದ "ಏಕತಾ ಓಟ"ದ ನಂತರ, ಸತ್ನಾ ಸಂಸದರನ್ನು ಹೈಡ್ರಾಲಿಕ್ ಕ್ರೇನ್ ಮೂಲಕ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮೇಲಕ್ಕೆತ್ತಲಾಯಿತು. ಕೆಳಗೆ ಇಳಿಯುವಾಗ ಕ್ರೇನ್ ಗಾಳಿಯಲ್ಲಿ ನಿಂತಿತು ಮತ್ತು ಸಿಂಗ್ ಸುಮಾರು ಒಂದು ನಿಮಿಷ ಗಾಳಿಯಲ್ಲಿ ನೇತಾಡುತ್ತಿದ್ದರು. ಹಿರಿಯ ಜಿಲ್ಲಾ ಅಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಕೂಡ ಸ್ಥಳದಲ್ಲಿದ್ದರು. ಸಂಸದರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಆದಾಗ್ಯೂ, ಕೆಳಗೆ ಬಂದ ನಂತರ, ಸಿಂಗ್ ಕ್ರೇನ್ ಆಪರೇಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ये है सतना के भाजपा सांसद श्री गणेश सिंह जी जो नगर निगम के साधारण कर्मचारी को थप्पड़ मार रहे है।भाजपाई सत्ता के मद में मदहोश है अहंकार चरम पर है परन्तु समय सबका इलाज कर देता है रावण का अहंकार टिका नहीं इनका कहा टिकेगा। pic.twitter.com/EhyKmu1GTG
— सच्चिदानंद मिश्रा (@M8Sachchidanand) October 31, 2025
ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದ 2014 ರಿಂದ ಅಕ್ಟೋಬರ್ 31 ರಂದು ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) ಎಂದು ಆಚರಿಸಲಾಗುತ್ತಿದೆ. ಸರ್ದಾರ್ ಪಟೇಲ್ ಅವರು ಅಕ್ಟೋಬರ್ 31, 1875 ರಂದು ಗುಜರಾತ್‌ನ ನಂದಿಯಾದಲ್ಲಿ ಜನಿಸಿದರು. "ಭಾರತದ ಉಕ್ಕಿನ ಮನುಷ್ಯ" ಎಂದೂ ಕರೆಯಲ್ಪಡುವ ಅವರು ದೇಶದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿದ್ದರು. ಸ್ವಾತಂತ್ರ್ಯದ ನಂತರ 560 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳು ಮತ್ತು ಭಾರತೀಯ ಒಕ್ಕೂಟದ ಏಕೀಕರಣದಲ್ಲಿ ಅವರ ಪ್ರಮುಖ ಪಾತ್ರಕ್ಕಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ನಾಯಕತ್ವವು ಭಾರತವು ಅತ್ಯಂತ ಕಷ್ಟದ ಸಮಯದಲ್ಲಿ ಏಕೀಕೃತ ಮತ್ತು ಗೌರವಾನ್ವಿತ ರಾಷ್ಟ್ರವಾಗಿ ಹೊರಹೊಮ್ಮುವಂತೆ ಮಾಡಿತು.
ಈ ಸುದ್ದಿಯನ್ನೂ ಓದಿ:Viral Video: ದೀಪ ಬೆಳಗಿಸಿ, ರಸ್ತೆ ಗುಂಡಿಗಳಿಗೆ ಹೂವಿನ ಅಲಂಕಾರ ; ವಿನೂತನ ಪ್ರತಿಭಟನೆಯ ವಿಡಿಯೋ ವೈರಲ್
ರಾಷ್ಟ್ರೀಯ ಏಕತಾ ದಿವಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ಏಕತಾ ದಿನಾಚರಣೆಯ ನೇತೃತ್ವ ವಹಿಸಿ, ಏಕತಾ ಪ್ರತಿಮೆಗೆ ಪ್ರಧಾನಿ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿವಸ್' ಪರೇಡ್ ನಡೆಸಲಾಯಿತು. ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಸಿಮ್ರಾನ್ ಭಾರದ್ವಾಜ್ ಅವರು ಪ್ರಧಾನಿಗೆ ಗೌರವ ವಂದನೆ ಸಲ್ಲಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿವಸ್ ಸಂದರ್ಭದಲ್ಲಿ, ಭವ್ಯ ಮೆರವಣಿಗೆಯ ಮೂಲಕ ಏಕತೆ ಮತ್ತು ಧೈರ್ಯದ ಮನೋಭಾವಕ್ಕೆ ಗೌರವ ಸಲ್ಲಿಸಲಾಯಿತು.
 
            