Viral News: ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ
SSLC ಮತ್ತು PUC ಪರೀಕ್ಷೆಯ ಫಲಿತಾಂಶ ಹೊರ ಬಂದಾಗ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದವರ ಫೋಟೊ ವೈರಲ್ ಆಗುತ್ತದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 48.8 ಅಂಕ ಗಳಿಸಿದ್ದು, ಆತನ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪರ- ವಿರೋಧದ ಚರ್ಚೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ -
ದೆಹಲಿ, ಏ. 22: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಪೋಷಕರು ಒತ್ತು ನೀಡುತ್ತಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಹೆಚ್ಚಿನ ಅಂಕ ಗಳಿಸಬೇಕೆಂದು ಟ್ಯೂಷನ್, ತರಬೇತಿ ಎಂದು ಹೆಚ್ಚಿನ ಹಣ ವ್ಯಯಿಸುತ್ತಾರೆ. ಆದರಲ್ಲೂ SSLC ಮತ್ತು PUC ಪರೀಕ್ಷೆಯ ಫಲಿತಾಂಶ ಅಂದಾಗ ವಿದ್ಯಾರ್ಥಿಗಳಿಗೆ ಸಹಜವಾಗಿ ಆತಂಕ ಎದುರಾಗುತ್ತದೆ. ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದವರ ಫೋಟೊಗಳು ವೈರಲ್ ಆಗುತ್ತವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 48.8 ಅಂಕ ಗಳಿಸಿದ್ದು, ಆತನ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಸದ್ಯ ಈ ಪೋಸ್ಟ್ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಪರ- ವಿರೋಧದ ಚರ್ಚೆ ಆರಂಭಿಸಿದ್ದಾರೆ.
ಕೇವಲ 48.8% ಅಂಕಗಳನ್ನು ಗಳಿಸಿದ 10ನೇ ತರಗತಿಯ ವಿದ್ಯಾರ್ಥಿಯ ಫೋಟೊ ವೈರಲ್ ಆಗಿದೆ. ಇದು ಉತ್ತೇಜನ ನೀಡುವ ಮಾರ್ಗವೇ ಅಥವಾ ಸಾರ್ವಜನಿಕವಾಗಿ ಅವಮಾನ ಮಾಡುವ ಉದ್ದೇಶವೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಇದನ್ನು ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ಎಂದರೆ ಕೆಲವರು ಸಾರ್ವಜನಿಕ ಅವಮಾನ ಎಂದು ಕಿಡಿಕಾರಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
i would have sued them if they did this to me 😭😭😭 pic.twitter.com/S67loOCuK3
— Ramen 🍉 (@CoconutShawarma) April 21, 2026
ಇನ್‌ಸ್ಟಾಗ್ರಾಮ್ ಪೇಜ್ @Padhlein ಎಂಬ ಖಾತೆಯಲ್ಲಿ ವಿದ್ಯಾರ್ಥಿ ಭವ್ಯ ಜಿಂದಾಲ್ ಫೋಟೊವನ್ನು ಪಡೆದ ಅಂಕದೊಂದಿಗೆ ಹಂಚಿಕೊಳ್ಳಲಾಗಿದೆ. “ಯಾವುದೇ ಅಂಕಗಳು ಹೆಚ್ಚು ಅಥವಾ ಕಡಿಮೆ ಅಲ್ಲ. ಭವ್ಯ ಜಿಂದಾಲ್ ಪ್ರಯತ್ನ ಮತ್ತು ಆತ ಮಾಡಿದ ಕಠಿಣ ಪರಿಶ್ರಮಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಅಭಿನಂದನೆಗಳು" ಎಂದು ಬರೆಯಲಾಗಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು 634.5Kಕ್ಕೂ ಹೆಚ್ಚು ವೀಕ್ಷಣೆಗಳು, 25K ಲೈಕ್‌ಗಳು ಮತ್ತು 141ಕ್ಕೂ ಹೆಚ್ಚು ಕಮೆಂಟ್ ಗಳಿಸಿದೆ.
ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ
ಕೆಲವರು, ʼʼಅಂಕ ಮಾತ್ರ ಮುಖ್ಯವಲ್ಲ...ಜೀವನದ ಹಲವು ವಿಚಾರಗಳು ಮುಖ್ಯವಾಗುತ್ತದೆʼʼ ಎಂದು ಹೇಳಿದ್ದಾರೆ. ʼʼವಿದ್ಯಾರ್ಥಿ ಪಡೆದ ಕಡಿಮೆ ಅಂಕಗಳನ್ನು ಇಡೀ ಜಗತ್ತಿಗೆ ತೋರಿಸುವುದು ಸರಿಯಲ್ಲʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼನನಗೆ ಹೀಗೆ ಮಾಡಿದ್ದರೆ ನಾನು ಅವರ ಮೇಲೆ ಮೊಕದ್ದಮೆ ಹೂಡುತ್ತಿದೆ. ಲೈಕ್‌ಗಳಿಗಾಗಿ ಈ ರೀತಿಯ ಮಗುವಿನ ಫಲಿತಾಂಶವನ್ನು ಸಾರ್ವಜನಿಕವಾಗಿ ಹಾಕುವುದು ತಪ್ಪುʼʼ ಎಂದು ಮಗದೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ʼʼಈ ಬಳಕೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ತಿಳಿಸಿದ್ದಾರೆ.