ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video:ಜುಟ್ಟು ಹಿಡಿದುಕೊಂಡು ಬಡಿದಾಡಿಕೊಂಡ ಹುಡುಗಿಯರು; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಗೆಳೆಯನ ಜೊತೆ ಸೇರಿ ರೀಲ್ಸ್ ಮಾಡುವ ವಿಚಾರಕ್ಕೆ ಉತ್ತರ ಪ್ರದೇಶದ ಬರೇಲಿಯ ಗಾಂಧಿ ಉದ್ಯಾನ್ ಬಳಿ ಇಬ್ಬರು ಹುಡುಗಿಯರು ಜುಟ್ಟು ಹಿಡಿದುಕೊಂಡು ಕಿತ್ತಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಈ ಕಾರಣಕ್ಕೆ ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಹುಡುಗಿಯರು!

Profile pavithra May 22, 2025 5:13 PM

ಲಖನೌ: ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಕ್ಷುಲಕ ಕಾರಣಕ್ಕೆ ಜುಟ್ಟು ಜುಟ್ಟು ಹಿಡಿದುಕೊಂಡು ಬಡಿದಾಡಿಕೊಳ್ಳುವ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇತ್ತೀಚೆಗಷ್ಟೇ ಇಂದೋರ್‌ನ ವಿಜಯ್ ನಗರ ಪ್ರದೇಶದಲ್ಲಿನ ಪಬ್‍ನಲ್ಲಿ ಹುಡುಗಿಯರು ಕಿತ್ತಾಡಿಕೊಂಡ ವಿಡಿಯೊ ವೈರಲ್ ಆಗಿತ್ತು. ಇದೀಗ ಉತ್ತರ ಪ್ರದೇಶದ ಬರೇಲಿಯ ಗಾಂಧಿ ಉದ್ಯಾನ್ ಬಳಿ ಇಬ್ಬರು ಹುಡುಗಿಯರು ತಮ್ಮ ಗೆಳೆಯರ ಮುಂದೆಯೇ ಜಗಳವಾಡುತ್ತಾ ಪರಸ್ಪರ ನಿಂದಿಸಿಕೊಂಡ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇವರಿಬ್ಬರ ಜಗಳ ಕಣ್ತುಂಬಿಕೊಳ್ಳಲು ಜನ ಜಮಾಯಿಸಿದ್ದಾರಂತೆ.

ವೈರಲ್ ಆದ ವಿಡಿಯೊದಲ್ಲಿ, ಇಬ್ಬರು ಹುಡುಗಿಯರು ಪರಸ್ಪರ ನಿಂದಿಸುತ್ತಿರುವುದು, ಕೂದಲು ಎಳೆಯುವುದು ಮತ್ತು ಒಬ್ಬರನೊಬ್ಬರು ಒದೆಯುವುದು ಸೆರೆಯಾಗಿದೆ. ಅಲ್ಲಿದ್ದ ಹುಡುಗರು ಅವರನ್ನು ಬಿಡಿಸಲು ಪ್ರಯತ್ನಿಸಿದರೂ ಅವರಿಬ್ಬರು ಮತ್ತೆ ಮತ್ತೆ ಹೊಡೆದಾಡಿಕೊಂಡಿದ್ದಾರೆ.

ವಿಡಿಯೊ ನೋಡಿ...



ಹೊಡೆದಾಟಕ್ಕೆ ಕಾರಣ?

ಇಬ್ಬರೂ ತಮ್ಮ ಗೆಳೆಯರ ಜೊತೆ ರೀಲ್ ಮಾಡಲು ಬಯಸಿದ್ದರು. ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕೊನೆಗೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಈ ಸಮಯದಲ್ಲಿ, ಇಬ್ಬರೂ ಹುಡುಗಿಯರ ಗೆಳೆಯರು ಸಹ ಸ್ಥಳದಲ್ಲಿದ್ದರು. ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಇವರ ಜಗಳ ನಿಲ್ಲಿಸಲು ಆಗಲಿಲ್ಲವಂತೆ. ಈ ಘಟನೆಯನ್ನು ನೋಡುಗರೊಬ್ಬರು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಎಲ್ಲರ ಗಮನ ಸೆಳೆದು ವೈರಲ್ ಆಗಿದೆ. ವಿಡಿಯೊ ವೈರಲ್ ಆದ ನಂತರ, ಬರೇಲಿ ಪೊಲೀಸರು ಕೂಡ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸೋಶಿಯಲ್ ಮೀಡಿಯಾದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಭಾರೀ ಮಳೆಗೆ ರಸ್ತೆಯಲ್ಲಿ ಹರಿದ ನೀರಿನ ರಭಸಕ್ಕೆ ಸ್ಕೂಟಿ ಜೊತೆ ಕೊಚ್ಚಿ ಹೋದ ವ್ಯಕ್ತಿ- ವಿಡಿಯೊ ವೈರಲ್

ಹುಡುಗಿಯರು ಜುಟ್ಟು ಹಿಡಿದು ಜಗಳವಾಡಿದ ವಿಡಿಯೊ ವೈರಲ್ ಆಗಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಕುಡಿದ ಮತ್ತಿನಲ್ಲಿ ಪಬ್‍ನ ಹೊರಗೆ ಹುಡುಗಿಯರ ಗುಂಪೊಂದರ ನಡುವೆ ಭೀಕರ ಹೊಡೆದಾಟ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಜಗಳವಾಡುವಾಗ ಹುಡುಗಿಯರು ಪರಸ್ಪರ ಹೊಡೆದಾಡಿಕೊಂಡು ಕೂದಲು ಹಿಡಿದುಕೊಂಡು ಕಿತ್ತಾಡಿದ್ದಾರೆ.