ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದಾಗ ಎಂಟ್ರಿ ಕೊಟ್ಟೇ ಬಿಟ್ಟ ಗಂಡ! ಆಮೇಲೆ ನಡೆದಿದ್ದೇ ಬೇರೆ

ವಿವಾಹಿತ ಗೆಳತಿಯ ಮನೆಯಲ್ಲಿ ಏಕಾಂತದಲ್ಲಿದ್ದ ಯುವಕನೊಬ್ಬ ಅನಿರೀಕ್ಷಿತವಾಗಿ ಮನೆಗೆ ಬಂದ ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಬಾಲ್ಕನಿಯಿಂದ ಜಿಗಿದಿದ್ದಾನೆ. ಪಕ್ಕದ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಎಲ್ಲರ ಗಮನಸೆಳೆದು ವೈರಲ್(Viral News) ಆಗಿದೆ.

ಲವ್ವರ್‌ ಜೊತೆ ಲವ್ವಿ-ಡವ್ವಿ; ಎಂಟ್ರಿ ಕೊಟ್ಟ ಗಂಡ! ಈ ವಿಡಿಯೊ ನೋಡಿ

Profile pavithra Jun 5, 2025 3:53 PM

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮಾಷೆಯ ಘಟನೆಗಳ ಜೊತೆಗೆ ಕೆಲವು ಆಘಾತಕಾರಿ ಘಟನೆಗಳ ವಿಡಿಯೊಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚೆಗೆ ಅಂತಹದೊಂದು ಆಘಾತಕಾರಿ ಘಟನೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿವಾಹಿತ ಗೆಳತಿಯ ಮನೆಯಲ್ಲಿದ್ದ ಯುವಕ ಗೆಳತಿಯ ಗಂಡ ಅನೀರಿಕ್ಷಿತವಾಗಿ ಮನೆಗೆ ಬಂದಿದ್ದನ್ನು ನೋಡಿ ಬಾಲ್ಕನಿಯಿಂದ ಜಿಗಿದಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಒಳ ಉಡುಪು ಮಾತ್ರ ಧರಿಸಿದ ಯುವಕನೊಬ್ಬ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಸೆರೆಯಾಗಿದೆ. ಪಕ್ಕದ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ

ಮಾಹಿತಿ ಪ್ರಕಾರ, ಆ ವ್ಯಕ್ತಿ ತನ್ನ ವಿವಾಹಿತ ಗೆಳತಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಬಂದಾಗ ಆಕೆಯ ಪತಿ ಸಡನ್ನಾಗಿ ಮನೆಗೆ ಬಂದಿದ್ದಾನಂತೆ.ಮೈನ್‌ ಡೋರ್‌ ಅಥವಾ ಬಾಲ್ಕನಿಯನ್ನು ಹೊರತುಪಡಿಸಿ ಹೊರಗೆ ಬರಲು ಬೇರೆ ಯಾವುದೇ ದಾರಿ ಇಲ್ಲದ ಕಾರಣ, ಅವನು ಬಾಲ್ಕನಿಯಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನಂತೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಅವನ ಪರಿಸ್ಥಿತಿ ಕಂಡು ತಮಾಷೆ ಮಾಡಿದ್ದಾರೆ.ಇನ್ನು ಕೆಲವರು ಇಂತಹ ಸಾಹಸಗಳು ಜೀವಕ್ಕೆ ಮಾರಕವೆಂದು ತಿಳಿಸಿದ್ದಾರೆ. "ಪ್ರೀತಿ ಎಂದರೆ ಜನರು ತಮ್ಮ ಜೀವವನ್ನು ಪಣಕ್ಕಿಡುವುದು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನಾಯಿಯ ದಾಳಿಯಿಂದ ಬೆಕ್ಕನ್ನು ರಕ್ಷಿಸಿದ ರಿಯಲ್‌ ಹೀರೋ; ನೆಟ್ಟಿಗರ ಮನ ಗೆದ್ದ ವಿಡಿಯೊ ಇಲ್ಲಿದೆ

ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ 2021 ರಲ್ಲಿ ನಡೆದ ಒಂದು ಪ್ರಕರಣದಲ್ಲಿ, ಸೂರತ್‌ನಲ್ಲಿ 30 ವರ್ಷದ ವ್ಯಕ್ತಿಯೊಬ್ಬ ಇದೇ ರೀತಿಯ ಪರಿಸ್ಥಿತಿಯಲ್ಲಿ ಮೂರನೇ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದನಂತೆ.