ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗೋಕರ್ಣದಲ್ಲಿ ಜಪಾನ್‌ ಮಹಿಳೆಯ ಕೊಳಲ ನಾದಕ್ಕೆ ಭಕ್ತರು ಫಿದಾ; ವೀಸಾ ನಿಯಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

Viral Video: ಗೋಕರ್ಣದಲ್ಲಿ ಜಪಾನಿನ ಪ್ರವಾಸಿಯೊಬ್ಬರು ಕೃಷ್ಣ ವಿಗ್ರಹದೊಂದಿಗೆ ಕೊಳಲು ನುಡಿಸುತ್ತ ಹಣ ಸಂಗ್ರಹಿಸುತ್ತಿರುವ ಸುದ್ದಿಯೊಂದು ಇದೀಗ ಚರ್ಚೆಗೆ ಕಾರಣವಾಗಿದೆ. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿದ ಆಕೆ ರಸ್ತೆಬದಿಯಲ್ಲಿ ಕುಳಿತು ಕೊಳಲು ನುಡಿಸುತ್ತ ಗಮನ ಸೆಳೆದಿದ್ದಾರೆ. ಭಾರತಕ್ಕೆ ಭೇಟಿ ನೀಡಿ ಹಣ ಸಂಗ್ರಹಿಸುತ್ತಿರುವುದು ಕಾನೂನು ಪ್ರಕಾರ ತಪ್ಪು ಎಂದು ಅನೇಕರು ಅಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಕೃಷ್ಣ ವಿಗ್ರಹ ಇಟ್ಟು ಕೊಳಲು ನುಡಿಸಿದ ಜಪಾನ್‌ ಮಹಿಳೆ

ಗೋಕರ್ಣದಲ್ಲಿ ಕೃಷ್ಣ ವಿಗ್ರಹದೊಂದಿಗೆ ಕೊಳಲು ನುಡಿಸುವ ವಿದೇಶಿ ಮಹಿಳೆ -

Profile
Pushpa Kumari Apr 1, 2026 7:42 PM

ಗೋಕರ್ಣ, ಏ. 1: ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಸಂಸ್ಕೃತಿ, ಪ್ರಕೃತಿ, ಆಹಾರ ಶೈಲಿಗೆ ಫಿದಾ ಆದ ಆನೇಕ ವಿದೇಶಿಗರಿದ್ದಾರೆ. ಈ ನಡುವೆ ಜಪಾನಿನ ಪ್ರವಾಸಿ (Japanese woman) ಕೃಷ್ಣ ವಿಗ್ರಹದೊಂದಿಗೆ ಕೊಳಲು ನುಡಿಸುತ್ತ ಹಣ ಸಂಗ್ರಹಿಸುತ್ತಿರುವ ಸುದ್ದಿಯೊಂದು ಇದೀಗ ಚರ್ಚೆಗೆ ಕಾರಣವಾಗಿದೆ. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿದ ಆ ಮಹಿಳೆ ರಸ್ತೆಬದಿಯಲ್ಲಿ ಕುಳಿತು ಸಂಗೀತ ನುಡಿಸುತ್ತ ಗಮನ ಸೆಳೆದಿದ್ದಾಳೆ. ಆದರೆ‌ ಭಾರತಕ್ಕೆ ಭೇಟಿ ನೀಡಿ ಹಣ ಸಂಗ್ರಹಿಸುತ್ತಿರುವುದು ಕಾನೂನು ಪ್ರಕಾರ ತಪ್ಪು ಎಂದು ಅನೇಕರು ಅಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದ ಗೋಕರ್ಣ ದೇವಾಲಯದ ಬಳಿ ವಿದೇಶಿ ಮಹಿಳೆ ಯೊಬ್ಬರು ಕೊಳಲು ನುಡಿಸುತ್ತಿದ್ದರು. ಇವರ ಈ ನಾದಕ್ಕೆ ಹೆಚ್ಚಿನ ಜನರು ಮೆಚ್ಚುಗೆ ನೀಡಿದ್ದು ದಾರಿಹೋಕರು ಮತ್ತು ಪ್ರವಾಸಿಗರು ತಟ್ಟೆಯಲ್ಲಿ ಹಣವನ್ನು ಹಾಕಿ ಹೋಗುತ್ತಿದ್ದರು‌. ಆದರೆ ಭಾರತಕ್ಕೆ ಪ್ರವಾಸಿ ವೀಸಾದ ಮೇಲೆ ಬಂದಿದ್ದು ಹಣ ಸಂಗ್ರಹಿಸುವುದು ಕಾನೂನು ಪ್ರಕಾರ ತಪ್ಪು ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.

ಝಕೋ ಎಂದು ಪರಿಚಯಿಸಿಕೊಳ್ಳುವ ಮಹಿಳೆ ಪ್ರತಿದಿನ ಮಹಾ ಗಣಪತಿ ದೇವಾಲಯದ ಎದುರಿನ ಇಂದ್ರೇಶ್ವರ ದೇವಾಲಯದ ಬಳಿ ಕುಳಿತುಕೊಳ್ಳುತ್ತಾಳೆ. ಆಕೆ ಶ್ರೀಕೃಷ್ಣನ ಸಣ್ಣ ವಿಗ್ರಹದೊಂದಿಗೆ ತನ್ನ ಮುಂದೆ ಒಂದು ತಟ್ಟೆಯನ್ನು ಇಟ್ಟು ಕೌಶಲ್ಯದಿಂದ ಕೊಳಲು ನುಡಿಸುತ್ತಾಳೆ. ಆಕೆಯ ಸಂಗೀತವು ಭಕ್ತರು ಮತ್ತು ಹಾದುಹೋಗುವ ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ.

ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

ಆದರೆ ವಿದೇಶಿ ಪ್ರಜೆ ರಸ್ತೆಬದಿಯಲ್ಲಿ ಕುಳಿತು ಹಣ ಸಂಗ್ರಹಿಸುವ ದೃಶ್ಯವು ಮಿಶ್ರ ಪ್ರತಿಕ್ರಿಯೆಗಳಿಗೆ ಇದೀಗ ಕಾರಣವಾಗಿದೆ. ಕೆಲವರು ಆಕೆಯ ಸಂಗೀತ ಪ್ರತಿಭೆಯನ್ನು ಮೆಚ್ಚಿದರೆ ಇನ್ನೂ ಕೆಲವರು ಇಂತಹ ಚಟುವಟಿಕೆಗಳ ಬಗ್ಗೆ ಕಾನೂನಿನ ನಿಯಮಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಭಾರತಕ್ಕೆ ಪ್ರವಾಸಿ ವೀಸಾದ ಮೇಲೆ ಬಂದವರು ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ಮಾಡುವಂತಿಲ್ಲ. ಇದು ನಿಯಮ ಉಲ್ಲಂಘಿಸಿದಂತೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.