ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಾತ್‌ರೂಂ ಇಣುಕಿದ ಹುಲಿರಾಯ! ಸ್ನಾನ ಮಾಡ್ತಿದ್ದವನ ಕಥೆ ಏನ್‌ ಹೇಳೋದು?

Man’s Shower Turns Deadly: ವ್ಯಕ್ತಿಯೊಬ್ಬರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುತ್ತಾ ಆನಂದ ಪಡುತ್ತಿರಬೇಕಾದ್ರೆ ಕಿಟಕಿಯಲ್ಲಿ ಅದ್ಯಾರೋ ಇಣುಕಿದಂತೆ ಸದ್ದಾಗಿದೆ. ಕಿಟಕಿಯಿಂದ ಇಣುಕಿದ್ಯಾರು ಎಂದು ನೋಡಿದಾಗ ಆ ವ್ಯಕ್ತಿಗೆ ಅಚ್ಚರಿ ಜೊತೆಗೆ ಆಘಾತ ತಂದಿದೆ. ಯಾಕೆಂದರೆ ಕಿಟಕಿಯಿಂದ ಇಣುಕಿದ್ದು, ಬೇರಾರು ಅಲ್ಲ ಹುಲಿ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬಾತ್‌ರೂಂ ಇಣುಕಿದ ಹುಲಿರಾಯ! ಸ್ನಾನ ಮಾಡ್ತಿದ್ದವನ ಕಥೆ ಏನ್‌ ಹೇಳೋದು?

Priyanka P Priyanka P Aug 18, 2025 4:33 PM

ದೆಹಲಿ: ವ್ಯಕ್ತಿಯೊಬ್ಬ ಸ್ನಾನ ಮಾಡುವಾಗ ಕಿಟಕಿಯಿಂದ ಅದ್ಯಾರೋ ಇಣುಕಿದ್ದಾರೆ. ಇಣುಕಿದವರು ಯಾರೆಂದು ತಿಳಿದಾಗ ಆ ವ್ಯಕ್ತಿಗೆ, ಸ್ನಾನ ಮಾಡುವಾಗಲೂ ಬೆವತು ಹೋಗುವಂತಾಗಿತ್ತು. ಹೌದು, ಹುಲಿಯೊಂದು (Tiger) ಸಣ್ಣ ಕಿಟಕಿಯ ಮೂಲಕ ಸ್ನಾನಗೃಹಕ್ಕೆ ಪ್ರವೇಶಿಸಲು ಪ್ರಯತ್ನಿಸಿದೆ. ವ್ಯಕ್ತಿಯೊಬ್ಬರು ಸ್ನಾನ ಮಾಡುತ್ತಿರುವಾಗಲೇ ಈ ಭಯಾನಕ ಘಟನೆ (Horrific incident) ನಡೆದಿದೆ. ಈ ಘಟನೆ ನಿಖರವಾಗಿ ಎಲ್ಲಿ ನಡೆದಿದ್ದು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ, ಕಾಡಿನ ಹತ್ತಿರವಿರುವ ಪಟ್ಟಣ ಪ್ರದೇಶವೊಂದರಲ್ಲಿ ನಡೆದಿದೆ ಎನ್ನಲಾಗಿದೆ.

ಹುಲಿ ಅಷ್ಟು ಹತ್ತಿರದಿಂದ ಸಮೀಪಿಸಿದಾಗ ಆ ವ್ಯಕ್ತಿಗೆ ಎಷ್ಟು ಭಯ, ಆಘಾತ ಉಂಟಾಗಿರಬಹುದು? ಅಬ್ಬಾ.. ವಿಡಿಯೊ ನೋಡಿದರೆ ಎದೆ ಝಲ್ಲೆನಿಸುತ್ತದೆ. ಭಾರತದಲ್ಲಿ, ಹಳ್ಳಿಗಳು ಮತ್ತು ಪಟ್ಟಣಗಳ ಹತ್ತಿರ, ವಿಶೇಷವಾಗಿ ಕಾಡುಗಳ ಸಮೀಪವಿರುವ ಪ್ರದೇಶಗಳಲ್ಲಿ ವನ್ಯಜೀವಿಗಳು ಅಲೆದಾಡುವುದು ಅಸಾಮಾನ್ಯವೇನಲ್ಲ. ಅದೇ ರೀತಿ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರುವ ಹುಲಿಯು ಕಿಟಕಿಯ ಮೂಲಕ ಬಾತ್‍ರೂಮ್‍ಗೆ ನುಗ್ಗಲು ಯತ್ನಿಸಿದೆ. ಈ ಅನಿರೀಕ್ಷಿತ ಕ್ಷಣವು ಆ ವ್ಯಕ್ತಿಗೆ ಆಘಾತ ತಂದಿದೆ.

ವಿಡಿಯೊ ವೀಕ್ಷಿಸಿ:

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ (Viral Video) ಆಗಿದ್ದು, ನೆಟ್ಟಿಗರಲ್ಲಿ ಅಚ್ಚರಿ ತರಿಸಿದೆ. ಕೆಲವರು ಆ ವ್ಯಕ್ತಿಯ ಬಗ್ಗೆ ಕಾಳಜಿ ತೋರಿದರೆ, ಇನ್ನೂ ಕೆಲವರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. “ತಾನು ಆ ಸ್ಥಳದಲ್ಲಿ ಇರುತ್ತಿದ್ದರೆ ಸಾಯುವವರೆಗೂ ಕಿರುಚುತ್ತಿದ್ದೆ. ಏನೇ ಆಗಲಿ ಹುಲಿ ಮಾತ್ರ ತುಂಬಾ ಮುದ್ದಾಗಿ ಕಾಣುತ್ತಿದೆ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಬಹುಶಃ ವ್ಯಕ್ತಿ ಮತ್ತು ಹುಲಿ, ಇಬ್ಬರೂ ಗೊಂದಲಕ್ಕೊಳಗಾಗಿದ್ದಾರೆ ಮತ್ತು ಹೆದರುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ವಿಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಆ ವ್ಯಕ್ತಿಯು ಸ್ನಾನ ಮಾಡುವಾಗ ದೃಶ್ಯವನ್ನು ಹೇಗೆ ಚಿತ್ರೀಕರಿಸಲು ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ನಡುರಸ್ತೆಯಲ್ಲೇ ಕಂಬಕ್ಕೆ ಕಟ್ಟಿ ಯೋಧನ ಮೇಲೆ ಡೆಡ್ಲಿ ಅಟ್ಯಾಕ್‌! ಆಘಾತಕಾರಿ ವಿಡಿಯೊ ವೈರಲ್