ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾಷ್ಟ್ರಧ್ವಜಕ್ಕೆ ಕಾಲಿನಿಂದ ಒದ್ದ ದುಷ್ಕರ್ಮಿಗಳು; ವಿಡಿಯೋ ನೋಡಿದ್ರೆ ನಿಮ್ಮ ರಕ್ತ ಕುದಿಯೋದು ಗ್ಯಾರಂಟಿ

Youths Arrested: ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಘಟನೆ ಗುವಾಹಟಿಯ ಖಾಂಕರ್ ಗಾಂವ್‌ನಲ್ಲಿ ನಡೆದಿದೆ. ಯುವಕರು ರಾಷ್ಟ್ರಧ್ವಜವನ್ನು ಕಾಲಿನಿಂದ ಒದ್ದು ಅವಮಾನ ಮಾಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ಭಾರತದ ರಾಷ್ಟ್ರಧ್ವಜಕ್ಕೆ ಕಾಲಿನಿಂದ ಒದ್ದು ಅಗೌರವ

Priyanka P Priyanka P Aug 18, 2025 6:01 PM

ಗುವಾಹಟಿ: ಭಾರತದ ರಾಷ್ಟ್ರಧ್ವಜಕ್ಕೆ (national flag) ಅಗೌರವ ತೋರಿದ ವಿಡಿಯೊ ವೈರಲ್ ಆಗಿದ್ದು, ಮೂವರು ಯುವಕರನ್ನು ಬಂಧಿಸಲಾಗಿದೆ. ಅಸ್ಸಾಂನ ಗುವಾಹಟಿಯಲ್ಲಿ (Guwahati) ಈ ಘಟನೆ ನಡೆದಿದ್ದು, ಯುವಕರು ರಾಷ್ಟ್ರಧ್ವಜವನ್ನು ಒದೆಯುವ ದೃಶ್ಯ ವಿಡಿಯೊದಲ್ಲಿದೆ. ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಗುವಾಹಟಿಯ ಖಾಂಕರ್ ಗಾಂವ್ ಬಳಿ ನಡೆದಿದ್ದು, ಯುವಕರು ಹತ್ತಿರದ ಪಿಜಿಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಅವರ ಗುರುತು ಮತ್ತು ಇತರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಗುವಾಹಟಿಯ ಖಾಂಕರ್ ಗಾಂವ್ ಬೀದಿಗಳಲ್ಲಿ ಅಸ್ಸಾಂನ ಮೂವರು ಯುವಕರು ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರುತ್ತಿರುವ ವಿಡಿಯೊ ವೈರಲ್ ಆಗಿದ್ದು, ಆಕ್ರೋಶ ಭುಗಿಲೆದ್ದಿತು. ಈ ವಿಡಿಯೊದಲ್ಲಿ ಮೂವರು ಯುವಕರು ಧ್ವಜದೊಂದಿಗೆ ಆಟವಾಡುತ್ತಾ ಅದನ್ನು ಎಸೆದಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ಧ್ವಜವನ್ನು ಕಾಲಿನಲ್ಲಿ ಒದ್ದಿದ್ದಾರೆ. ಇನ್ನೊಬ್ಬ ವ್ಯಕ್ತಿ ಅದನ್ನು ಹಿಡಿಯಲು ಪ್ರಯತ್ನಿಸುವಾಗ ಎರಡು ಬಾರಿ ಕೆಳಗೆ ಬೀಳಿಸಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಡಿಯೊ ವೀಕ್ಷಿಸಿ:



ಇದನ್ನೂ ಓದಿ: Viral News: ನಿದ್ರೆ ಮಾಡಿಯೇ ಲಕ್ಷ ಲಕ್ಷ ಸಂಪಾದಿಸುವ ಮಹಿಳೆ; ಹೇಗೆ ಗೊತ್ತೆ?

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಯುವಕರ ವಿರುದ್ಧ ದೂರುಗಳು ದಾಖಲಾಗಿವೆ. ವರದಿಗಳ ಪ್ರಕಾರ, ಅಸ್ಸಾಂ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕರನ್ನು ಬಂಧಿಸಿದ್ದಾರೆ. ಆದರೆ, ಯುವಕರ ಗುರುತುಗಳು ಮತ್ತು ಇತರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಒಬ್ಬ ಬಳಕೆದಾರರು ವಿಡಿಯೊವನ್ನು ಮರುಹಂಚಿಕೊಂಡಿದ್ದಾರೆ. “ಅಸ್ಸಾಂನ ಪಾಣಿಖೈತಿಯಲ್ಲಿರುವ ಪಿಜಿಯಲ್ಲಿ ವಾಸಿಸುವ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ದಿನದಂದು ಭಾರತೀಯ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ” ಎಂದು ಪೋಸ್ಟ್ ಮಾಡಲಾಗಿದೆ.

ತಿರಂಗವನ್ನು ಒದೆಯುವುದು ಪ್ರತಿಯೊಬ್ಬ ಭಾರತೀಯನಿಗೂ ಮಾಡಿದ ಅವಮಾನ. ಅಗೌರವದ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಶಿಕ್ಷೆ ಜರುಗಿಸುವಂತೆ ಬಳಕೆದಾರರು ಒತ್ತಾಯಿಸಿದ್ದಾರೆ. ನಮ್ಮ ರಾಷ್ಟ್ರಧ್ವಜವನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಬಳಕೆದಾರರೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ನಡುರಸ್ತೆಯಲ್ಲೇ ಕಂಬಕ್ಕೆ ಕಟ್ಟಿ ಯೋಧನ ಮೇಲೆ ಡೆಡ್ಲಿ ಅಟ್ಯಾಕ್‌! ಆಘಾತಕಾರಿ ವಿಡಿಯೊ ವೈರಲ್