Viral Video: ವೃದ್ಧನಿಗೆ ಮನಬಂದಂತೆ ಥಳಿಸಿದ ವೈದ್ಯರು; ಕ್ರಮ ಕೈಗೊಳ್ಳುವಂತೆ ನೆಟ್ಟಿಗರ ಆಕ್ರೋಶ
ಮಧ್ಯ ಪ್ರದೇಶದ ಛತರ್ಪುರ ಜಿಲ್ಲೆಯ ಆಸ್ಪತ್ರೆಯಲ್ಲಿ 77 ವರ್ಷದ ವೃದ್ಧನೊಬ್ಬರನ್ನು ಆಸ್ಪತ್ರೆಯ ವೈದ್ಯರು ಕ್ರೂರವಾಗಿ ಥಳಿಸಿದ ದಾರುಣ ಘಟನೆ ನಡೆದಿದೆ. ವರದಿಯ ಪ್ರಕಾರ ಈ ಘಟನೆ ಏ. 17ರಂದು ನಡೆದಿದ್ದು, ವದ್ಧ ಜೋಶಿ ಎಂಬವರು ತಮ್ಮ ಪತ್ನಿಯ ಹೊಟ್ಟೆಯ ನಾಳದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭ ಆಸ್ಪತ್ರೆಯಲ್ಲಿ ಜನದಟ್ಟಣೆಯಿಂದ ಕೂಡಿದ್ದು, ಈ ವ್ಯಕ್ತಿಯು ಸಾಲನ್ನು ತಪ್ಪಿಸಿದ ಕಾರಣ ವೈದ್ಯರು ಈ ರೀತಿಯಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Elderly Man Thrashed By Doctor,

ಛತರ್ಪುರ: ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯ ಆಸ್ಪತ್ರೆಯಲ್ಲಿ 77 ವರ್ಷದ ವೃದ್ಧರೊಬ್ಬರನ್ನು ಆಸ್ಪತ್ರೆಯ ವೈದ್ಯರು ಕ್ರೂರವಾಗಿ ಥಳಿಸಿದ ದಾರುಣ ಘಟನೆ ನಡೆದಿದೆ. ವೃದ್ಧ ಜೋಶಿ ಎನ್ನುವವರು ತಮ್ಮ ಪತ್ನಿಯ ವೈದ್ಯಕೀಯ ತಪಾಸಣೆಗಾಗಿ ಛತ್ತರ್ಪುರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವೃದ್ಧರ ಜತೆ ವೈದ್ಯರು ಕ್ರೂರವಾಗಿ ನಡೆದುಕೊಂಡಿದ್ದು, ಆ ಮನ ಬಂದಂತೆ ಥಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video) ಆಗಿದೆ.
ವರದಿಯ ಪ್ರಕಾರ ಈ ಘಟನೆ ಏ. 17ರಂದು ನಡೆದಿದ್ದು, ಜೋಶಿ ತಮ್ಮ ಪತ್ನಿಯ ಹೊಟ್ಟೆಯ ನಾಳದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭ ಆಸ್ಪತ್ರೆಯಲ್ಲಿ ಜನದಟ್ಟಣೆಯಿಂದ ಕೂಡಿದ್ದು ಜೋಶಿ ಸಾಲನ್ನು ತಪ್ಪಿಸಿದ ಕಾರಣ ವೈದ್ಯರು ಈ ರೀತಿಯಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ವೈದ್ಯರು ವೃದ್ಧರ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಲ್ಲದೆ, ಕಾಲುಗಳನ್ನು ಹಿಡಿದು ಆಸ್ಪತ್ರೆಯ ಆವರಣದಲ್ಲಿ ಎಳೆದೊಯ್ದಿದ್ದಾರೆ. ಸದ್ಯ ವೃದ್ಧನಿಗೆ ಥಳಿಸುತ್ತಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು, ನೆಟ್ಟಿಗರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ
ಈ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದು, ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ವೈದ್ಯರ ಈ ರೀತಿಯ ವರ್ತನೆ ಸರಿಯಲ್ಲ, ಇವರಿಗೆ ಸರಿಯಾಗಿಯೇ ಶಿಕ್ಷೆ ನೀಡಬೇಕೆಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂದು ಮಾನ ವೀಯತೆ, ಪ್ರಾಮಾಣಿಕತೆ ಮರೆಯಾಗಿದೆ ಅನ್ನೋವುದಕ್ಕೆ ಈ ವಿಡಿಯೊ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ.
ये वीडियो देखिए 👇
— Mumbai Congress (@INCMumbai) April 20, 2025
यह मध्य प्रदेश के छतरपुर का सरकारी अस्पताल है, जहां एक 77 साल के बुजुर्ग मरीज को डॉक्टरों ने घसीटकर बाहर फेंक दिया।
ये बेहद अमानवीय और घटिया व्यवहार है, जिस पर #BJP सरकार खामोश है।
यह पहला मामला नहीं हैं, इससे पहले भी प्रदेश के अस्पतालों में मरीजों को बेहतर… pic.twitter.com/pE2YCDHZ22
ಈ ಕೃತ್ಯದ ಬಗ್ಗೆ ಜೋಶಿ ಮಾತನಾಡಿ, ನಾನು ಇತರರಂತೆ ಸರದಿಯಲ್ಲಿ ಕಾಯುತ್ತಿದ್ದೆ. ಈ ಸಂದರ್ಭದಲ್ಲಿ ತನ್ನ ಸರದಿ ಬಂದಾಗ ವೈದ್ಯರು ತನ್ನನ್ನು ಒದ್ದು ಕಪಾಳಮೋಕ್ಷ ಮಾಡಿದರು ಎಂದು ಹೇಳಿಕೊಂಡಿದ್ದಾರೆ. ಜನ ಸಂದಣಿಯಿಂದ ಸಿಟ್ಟಿಗೆದ್ದ ವೈದ್ಯರು ಏಕಾಏಕಿ ನನಗೆ ಹಲ್ಲೆ ನಡೆಸಿದ್ದಾರೆ. ನಾನು ಸಾಲಿನಲ್ಲಿ ಸರಿಯಾಗಿ ನಿಂತಿಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆ ಅಧಿಕಾರಿಗಳು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: Viral News: ಎಷ್ಟೇ ಬೇಡ ಅಂದ್ರು ಕೇಳದೆ ಬ್ಯೂಟಿ ಪಾರ್ಲರ್‌ಗೆ ಹೋದ ಪತ್ನಿ- ಸಿಟ್ಟಿಗೆದ್ದ ಪತಿ ಮಾಡಿದ್ದೇನು ಗೊತ್ತಾ?
ಸ್ಥಳವು ಜನದಟ್ಟಣೆಯಿಂದ ಕೂಡಿದ್ದು ಜೋಶಿ ಸರತಿ ಸಾಲನ್ನು ತಪ್ಪಿದ ಕಾರಣ ವೈದ್ಯರು ಈ ರೀತಿಯ ಕೃತ್ಯ ಎಸಗಿದ್ದಾರೆ. ಇನ್ನೂ ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.ಈ ಘಟನೆ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಿದ್ದಂತೆ ಕೃತ್ಯ ಎಸಗಿದ್ದ ವೈದ್ಯರು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಜಿ.ಎಲ್. ಅಹಿರ್ವಾರ್, ಈ ಘಟನೆ ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ನಡೆದಿದ್ದು ವೈದ್ಯರ ಅಪ್ರಮಾಣಿಕ ಮತ್ತು ಶ್ರದ್ಧೆಯಿಲ್ಲದ ವರ್ತನೆ ಸ್ಪಷ್ಟವಾಗಿದೆ. ಹೀಗಾಗಿ ತಕ್ಷಣವೇ ವಿಭಾ ಗೀಯ ತನಿಖೆಗೆ ಆದೇಶ ನೀಡಲಾಗಿದ್ದು ನೋಟಿಸ್ ಹೊರಡಿಸಲಾಗಿದೆ. ಇನ್ನೂ ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.