Viral Video: ಬಿಕಾನೆರ್ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ನೀರು ಸೋರಿಕೆ; ಪ್ರಯಾಣಿಕರಿಗೆ 'ಶವರ್ ವ್ಯವಸ್ಥೆ' ಎಂದು ವ್ಯಂಗ್ಯವಾಡಿದ ನೆಟ್ಟಿಗರು
Bikaner Express: ಮಧ್ಯ ಪ್ರದೇಶದ ಬಿಕಾನೆರ್ ಎಕ್ಸ್‌ಪ್ರೆಸ್‌ನ ಎಸಿ ಕೋಚ್ ಬುಕ್ ಮಾಡಿದ ಪ್ರಯಾಣಿಕರಿಗೆ ಶಾಕ್ ಕಾದಿದ್ದು, ರೈಲಿನೊಳಗಡೆ ನೀರು ಸೋರಿಕೆಯಾಗಿ ಕಂಗಾಲಾಗಿದ್ದಾರೆ. ರೈಲಿನ ಶೌಚಾಲಯದ ಹೊರಗಿನ ಸ್ಥಳ ಹಾಗೂ ಇಡೀ ಬೋಗಿ ನೀರಿನಿಂದ ತುಂಬಿ ಹೋಗಿರುವ ದೃಶ್ಯ ವೈರಲ್ ಆಗಿದೆ.
ಬಿಕಾನೆರ್ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನೊಳಗೆ ನೀರು ಸೋರಿಕೆ -
ಭೋಪಾಲ್, ಜೂ. 21: ಸದ್ಯ ಬಹುತೇಕರು ರೈಲು ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಕಡಿಮೆ ಪ್ರಯಾಣ ವೆಚ್ಚ ಮತ್ತು ವೇಗವಾಗಿ ತಲುಪಬಹುದು ಹೀಗೆ ನಾನಾ ಕಾರಣಕ್ಕೆ ರೈಲು ಪ್ರಯಾಣ ಆಯ್ಕೆ ಮಾಡುತ್ತಾರೆ. ಅದರಲ್ಲೂ ರೈಲಿನಲ್ಲೂ ವಿವಿಧ ವಿಭಾಗಗಳಿದ್ದುನ, ನೆಮ್ಮದಿಯ ಪ್ರಯಾಣಕ್ಕಾಗಿ ಹೆಚ್ಚಿನ ಹಣ ತೆತ್ತು ಎಸಿ ಕೋಚ್ ಕೂಡ ಬುಕ್ ಮಾಡಬಹುದು. ಆದರೆ ಮಧ್ಯ ಪ್ರದೇಶದ ಬಿಕಾನೆರ್ ಎಕ್ಸ್‌ಪ್ರೆಸ್‌ನಲ್ಲಿ ಎಸಿ ಕೋಚ್ ಬುಕ್ ಮಾಡಿದ ಪ್ರಯಾಣಿಕರಿಗೆ ಶಾಕ್ ಕಾದಿದ್ದು, ರೈಲಿನೊಳಗಡೆ ನೀರು ಸೋರಿಕೆಯಾಗಿದೆ. ರೈಲಿನ ಶೌಚಾಲಯದ ಹೊರಗಿನ ಸ್ಥಳ ಹಾಗೂ ಇಡೀ ಬೋಗಿ ನೀರಿನಿಂದ ತುಂಬಿ ಹೋಗಿರುವ ದೃಶ್ಯ ವೈರಲ್ (Viral News) ಆಗಿದೆ.
ಪ್ರಯಾಣಿಕರು ಈ ಘಟನೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಕೋಚ್‌ನ ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದರಿಂದಾಗಿ ಒಳಗೆ ಇದ್ದ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ರೈಲ್ವೆ ಸಿಬ್ಬಂದಿ ನೀರನ್ನು ತೆರವುಗೊಳಿಸಲು ವೈಪರ್ ಬಳಸುವುದನ್ನು ಕಾಣಬಹುದು.
ವಿಡಿಯೊ ನೋಡಿ:
ये बीकानेर एक्सप्रेस के फर्स्ट AC का कोच है, शानदार झरने की व्यवस्था है शौचालय के अंदर नहीं, उसके बाहर! पधारो म्हारे देस... pic.twitter.com/stZbPsxUuS
— Anurag Dwary (@Anurag_Dwary) June 20, 2026
ಈ ವಿಡಿಯೊವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ 'ಎಕ್ಸ್' ಹ್ಯಾಂಡಲ್ ಕೂಡ ಶೇರ್ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟೀಕಿಸಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ರೈಲು ಪ್ರಯಾಣಿಕರಿಗೆ 'ಹೊಸ ಉಡುಗೊರೆ' ಎಂದು ಕಾಂಗ್ರೆಸ್ ತನ್ನ ಪೋಸ್ಟ್‌ನಲ್ಲಿ ವ್ಯಂಗ್ಯವಾಡಿದ್ದು ಬೇಸಗೆಯ ಬಿಸಿಲಿಗೆ ಈಗ 'ಶವರ್ ವ್ಯವಸ್ಥೆ' ಎಂದು ಹೇಳಿದೆ.
ಈ ಜನ್ಮದಲ್ಲೂ ಕುರುಡು, ಮುಂದಿನ ಜನ್ಮದಲ್ಲೂ ಇದೇ ಸ್ಥಿತಿ; ಅಂಧ ಮಹಿಳೆಗೆ ಬಿಜೆಪಿ ನಾಯಕಿ ಕಿರುಕುಳ
ಈ ಘಟನೆಯು ರೈಲ್ವೆ ನಿರ್ವಹಣೆ ಮತ್ತು ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ಟೀಕೆಗೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, ʼʼಭಾರತದಲ್ಲಿ ಅಭಿವೃದ್ಧಿ ಎಷ್ಟು ವೇಗವಾಗಿ ಆಗುತ್ತಿದೆʼʼ ಎಂದು ವ್ಯಂಗ್ಯ ಮಾಡಿದ್ದಾರೆ. ಮತ್ತೊಬ್ಬರು, ʼʼಇದು ಎಐ ದೃಶ್ಯ ಆಗಿರಬಹುದು. ಸತ್ಯಾಸತ್ಯತೆ ಪರಿಶೀಲಿಸಿʼʼ ಎಂದಿದ್ದಾರೆ.