Viral Video: ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ; ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು 'ಆರ್ಡರ್' ಎಂದು ಆದೇಶ
Viral News: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಹಿಳೆಯೊಬ್ಬಳು ಕೋರ್ಟ್‌ನಲ್ಲಿ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ. ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತ ಮಹಿಳೆ, ʼʼಇಂದು ನಾನು ಜಿಲ್ಲಾ ನ್ಯಾಯಾಧೀಶೆʼʼ ಎಂದು ಹೇಳಿಕೊಂಡಿದ್ದಾಳೆ. ಮಹಿಳೆಯ ಈ ನಡೆಯನ್ನು ಕಂಡು ಅಲ್ಲಿದ್ದ ವಕೀಲರು ಅಚ್ಚರಿ ಪಟ್ಟಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಾರಣಾಸಿ ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತ ಮಹಿಳೆ -
ವಾರಾಣಸಿ, ಜೂ. 13: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಹಿಳೆಯೊಬ್ಬಳು ಕೋರ್ಟ್‌ನಲ್ಲಿಯೇ ಹುಚ್ಚಾಟ ಮೆರೆದ ಘಟನೆ ನಡೆದಿದೆ. ವಾರಾಣಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತ ಮಹಿಳೆ, 'ʼಇಂದು ನಾನು ಜಿಲ್ಲಾ ನ್ಯಾಯಾಧೀಶೆʼʼ ಎಂದು ಹೇಳಿಕೊಂಡಿದ್ದಾಳೆ. ಮಹಿಳೆಯ ಈ ನಡೆಯನ್ನು ಕಂಡು ಅಲ್ಲಿದ್ದ ವಕೀಲರೇ ಅಚ್ಚರಿಗೆ ಒಳಗಾಗಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಶುಕ್ರವಾರ (ಜೂನ್ 12) ಈ ಘಟನೆ ನಡೆದಿದೆ. ಜಿಲ್ಲಾ ನ್ಯಾಯಾಲಯದ ಒಳಗೆ ಮಧ್ಯ ವಯಸ್ಕ ಮಹಿಳೆಯೊಬ್ಬರು ನ್ಯಾಯಾಲಯದ ಕೋಣೆಗೆ ಪ್ರವೇಶಿಸಿ, ಜಿಲ್ಲಾ ನ್ಯಾಯಾಧೀಶರ ಕುರ್ಚಿಯನ್ನು ಆಕ್ರಮಿಸಿಕೊಂಡಿದ್ದಾಳೆ. ಆಕೆ ಕೋರ್ಟ್ ಹಾಲ್ ಪ್ರವೇಶಿಸಿ ಕುರ್ಚಿಯ ಮೇಲೆ ಕುಳಿತು ಮುಖ್ಯ ನ್ಯಾಯಾಧೀಶೆ ಎಂದಿದ್ದಾಳೆ.
ವಿಡಿಯೊ ನೋಡಿ:
Varanasi: Woman sat in district judge’s chair, banged gavel, shouted “Order! Order!” and declared “Today I’m the judge, present evidence.” Police detained her. pic.twitter.com/fcoZVpmMwL
— Ghar Ke Kalesh (@gharkekalesh) June 12, 2026
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಯಜುವೇಂದ್ರ ವಿಕ್ರಮ್ ಸಿಂಗ್ ರಜೆಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಮಹಿಳೆ ಮೊದಲು ನ್ಯಾಯಾಧೀಶರ ಆಗಮನದ ಸಮಯದ ಬಗ್ಗೆ ನ್ಯಾಯಾಲಯದ ಸಿಬ್ಬಂದಿಯನ್ನು ಕೇಳಿದ್ದಳು. ನಂತರ ನೇರವಾಗಿ ಹೋಗಿ ಅವರ ಆಸನದಲ್ಲಿ ಆಕೆ ಕುಳಿತಿದ್ದಾಳೆ. ಕುರ್ಚಿಯಲ್ಲಿ ಕುಳಿತ ತಕ್ಷಣ ಆಕೆ ಮೇಜಿನ ಮೇಲೆ ಕೈ ಬಡಿದು ಪದೇ ಪದೆ ಆರ್ಡರ್...ಆರ್ಡರ್ ಎಂದು ಕೂಗಿದ್ದಾಳೆ. ʼʼಇಂದು, ನಾನು ಜಿಲ್ಲಾ ನ್ಯಾಯಾಧೀಶೆ. ಸಾಕ್ಷಿಗಳು ಮತ್ತು ಸಾಕ್ಷ್ಯಗಳನ್ನು ನನ್ನ ಮುಂದೆ ಹಾಜರುಪಡಿಸಿʼʼ ಎಂದು ಆದೇಶ ನೀಡಿದ್ದಾಳೆ. ಅಷ್ಟೇ ಅಲ್ಲದೆ, ಅಲ್ಲಿದ್ದ ಕೇಸ್ ಫೈಲ್‌ಗಳನ್ನು ಕೂಡ ಪರಿಶೀಲಿಸುವಂತೆ ನಟಿಸಿದ್ದಾಳೆ.
ಪಾಕ್ ಪ್ರಧಾನಿಯನ್ನು 40 ನಿಮಿಷ ಕಾಯಿಸಿದ ಪುಟಿನ್
ನ್ಯಾಯಾಲಯದ ನೌಕರರು ಮತ್ತು ವಕೀಲರು ಮಹಿಳೆಯನ್ನು ಕುರ್ಚಿಯಿಂದ ಏಳುವಂತೆ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ. ಆಕೆ ಕೆಳಗಿಳಿಯಲು ನಿರಾಕರಿಸಿದ್ದಾಳೆ. ತನ್ನ ಬಳಿ ಬಂದವರ ಮೇಲೆಯೇ ಜೋರಾಗಿ ಕೂಗಾಡಿದ್ದಾಳೆ. ಕೊನೆಗೆ ಮಹಿಳಾ ಪೊಲೀಸರು ಬಂದು ಆಕೆಯನ್ನು ಅಲ್ಲಿಂದ ಬಲವಂತವಾಗಿ ಕರೆದೊಯ್ದಿದ್ದಾರೆ. ವಿಚಾರಣೆಯ ನಂತರ ಆಕೆಯ ಮಾನಸಿಕ ಸ್ಥಿರತೆ ಸರಿ ಇಲ್ಲದಿರುವುದು ತಿಳಿದುಬಂದಿದೆ.