Viral Video: ಚಲಿಸುತ್ತಿದ್ದ ಕಾರಿನಲ್ಲಿ ಯುವಕರ ಡೇಂಜರಸ್ ಸ್ಟಂಟ್; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ
ಹರಿದ್ವಾರದ ಬಿಎಚ್‌ಇಎಲ್ ಪ್ರದೇಶದಲ್ಲಿ ಯುವಕರ ಗುಂಪೊಂದು ಚಲಿಸುವ ಕಾರಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದು, ಅವರ ಕೃತ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಈ ವಿಡಿಯೊವನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.


ಡೆಹಡ್ರೂನ್: ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಜನರು ಏನೇನೋ ಸರ್ಕಸ್ ಮಾಡುತ್ತಾರೆ. ಈ ಹಿಂದೆ ಕೆಲವು ಜನರು ಚಲಿಸುತ್ತಿರುವ ಕಾರಿನಲ್ಲಿ, ರೈಲಿನಲ್ಲಿ ಸ್ಟಂಟ್ ಮಾಡಿದ್ದ ವಿಡಿಯೊ ಈ ಹಿಂದೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಹರಿದ್ವಾರದ ಬಿಎಚ್‌ಇಎಲ್ ಪ್ರದೇಶದಲ್ಲಿ ಯುವಕರ ಗುಂಪೊಂದು ಚಲಿಸುವ ಕಾರಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದು, ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದರಿಂದ ಯುವಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಬಿಎಚ್‌ಇಎಲ್ ಪ್ರದೇಶದ ಸಾರ್ವಜನಿಕ ರಸ್ತೆಗಳಲ್ಲಿ ಯುವಕರು ಕಾರಿನ ಕಿಟಕಿಗಳಿಂದ ಹೊರಗೆ ನೇತಾಡುತ್ತಾ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸೆರೆಯಾಗಿದೆ. ವಾಹನಗಳು ಸಂಚರಿಸುವ ರಸ್ತೆಯಲ್ಲಿ ಅವರು ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದೆ.
ವಿಡಿಯೊ ನೋಡಿ...
लोकेशन : हरिद्वार का BHL रोड...
— TRUE STORY (@TrueStoryUP) May 14, 2025
सडक पर युवको ने चलती कार से बाहर निकलकर खूब उत्पात मचाया। किसी ने वीडियो बनाकर वायरल कर दी। अब पुलिस गाडी को ट्रेस कर इन छपरियो के इलाज की तैयारी कर रही है।#Uttarakhand #Haridwar pic.twitter.com/a1lheEvvxx
ವಿಡಿಯೊ ವೈರಲ್ ಆದ ಕಾರಣ ಇದು ರಾಣಿಪುರ ಕೊತ್ವಾಲಿ ಪೊಲೀಸರ ಗಮನಸೆಳೆದು ಕೂಡಲೇ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ವೈರಲ್ ವಿಡಿಯೊ ಮೂಲಕ ವಾಹನವನ್ನು ಪತ್ತೆಹಚ್ಚಿ ಅದನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಯುವಕರ ಮೇಲೆ ಮದ್ಯಪಾನ ಮಾಡಿ ವಾಹನ ಚಲಾಯಿಸುವ ನಿಯಮದ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ತಪ್ಪಿತಸ್ಥ ಯುವಕರಿಗೆ ದಂಡ ವಿಧಿಸಲಾಗಿದೆ ಮತ್ತು ಮತ್ತೆ ಈ ತಪ್ಪು ಮಾಡದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಶಾಲೆಗಳಲ್ಲಿ ನಿಯಮಿತವಾಗಿ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ. ಹರಿದ್ವಾರ ಪೊಲೀಸರ ಮೇಲ್ವಿಚಾರಣೆಯಲ್ಲಿ ನಿರಂತರವಾಗಿ ತಪಾಸಣೆ ನಡೆಸಿ ಹಲವಾರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರು ಈಗಾಗಲೇ ಕಠಿಣ ದಂಡವನ್ನು ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಭಾರತದ ಕ್ವಿಕ್ ಡೆಲಿವರಿ ಸರ್ವಿಸ್ ನೋಡಿ ವಿದೇಶಿ ಮಹಿಳೆ ಹೇಳಿದ್ದೇನು? ವಿಡಿಯೊ ವೈರಲ್!
ಚಲಿಸುವ ಕಾರಿನಲ್ಲಿ ಜನರು ಸ್ಟಂಟ್ ಮಾಡಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಯುವಕನೊಬ್ಬ ಸ್ಟಂಟ್ ಮಾಡಿದ್ದು, ಇದರ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊವನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಶುರುಮಾಡಿದ್ದರು.ವೈರಲ್ ಆದ ವಿಡಿಯೊದಲ್ಲಿ, ಬಿಳಿ ಮಾರುತಿ ಎರ್ಟಿಗಾದಲ್ಲಿ ಒಬ್ಬ ಯುವಕ ವೇಗವಾಗಿ ಚಲಿಸುವ ಕಾರಿನ ಮೇಲ್ಭಾಗದಲ್ಲಿ ನಿಂತಿದ್ದರೆ, ಇನ್ನೊಬ್ಬ ಕಿಟಕಿಯಿಂದ ಹೊರಗೆ ವಾಲುತ್ತಿರುವುದು ರೆಕಾರ್ಡ್ ಆಗಿದೆ. ಇಬ್ಬರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡಿದ್ದಾರೆ. ಹಾಗೇ ಅವರು ಈ ಅಪಾಯಕಾರಿ ಸ್ಟಂಟ್ ಮಾಡುವಾಗ ಮೊಬೈಲ್ ಫೋನ್ ಅನ್ನು ಕೂಡ ಬಳಸಿದ್ದಾರಂತೆ.