ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Buchi Babu 2025: ಭರ್ಜರಿ ಶತಕ ಸಿಡಿಸಿ ಬಿಸಿಸಿಐಗೆ ಸಂದೇಶ ರವಾನಿಸಿದ ಸರ್ಫರಾಜ್‌ ಖಾನ್‌!

ಫಿಟ್‌ನೆಸ್‌ ಸಮಸ್ಯೆಯಿಂದ ಸದಾ ಬಳಲುತ್ತಿರುವ ಸರ್ಫರಾಝ್‌ ಖಾನ್‌ ಬುಚಿ ಬಾಬು ಟೂರ್ನಿಯ ಪಂದ್ಯದಲ್ಲಿ ಮುಂಬೈ ಪರ ಭರ್ಜರಿ ಶತಕ ಸಿಡಿಸಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಫಿಟ್‌ನೆಸ್‌ ಸಮಸ್ಯೆಯಿಂದಾಗಿ ಕಳೆದ ಇಂಗ್ಲೆಂಡ್‌ ಸರಣಿಯಿಂದ ಸರ್ಫರಾಝ್‌ ಖಾನ್‌ ಅವಕಾಶ ವಂಚಿತರಾಗಿದ್ದರು. ಆದರೆ ಇದೀಗ ಸಂಪೂರ್ಣ ಫಿಟ್ನೆಸ್‌ ಸಾಧಿಸಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.

ಶತಕ ಸಿಡಿಸಿ ಬಿಸಿಸಿಐಗೆ ಸಂದೇಶ ರವಾನಿಸಿದ ಸರ್ಫರಾಜ್‌ ಖಾನ್‌!

‌ಬುಚಿ ಬಾಬು ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿದ ಸರ್ಫರಾಝ್‌ ಖಾನ್.

Profile Ramesh Kote Aug 18, 2025 7:34 PM

ಚೆನ್ನೈ: ಈ ಬಾರಿ ಬುಚಿ ಬಾಬು ಆಹ್ವಾನಿತ (Buchi Babu Invitational Cricket Tournament) ಟೂರ್ನಿಯು ಪ್ರಾರಂಭವಾಗಿದೆ. ಸೋಮವಾರ ಚೆನ್ನೈನಲ್ಲಿ ಟಿಎನ್‌ಸಿಎ ಇಲೆವೆನ್‌ ವಿರುದ್ಧ ನಡೆದಿದ್ದ ಪಂದ್ಯದ ಮೊದಲ ದಿನವೇ ಮುಂಬೈ ತಂಡದ ಸರ್ಫರಾಝ್‌ ಖಾನ್‌ (Sarfaraz Khan) ಭರ್ಜರಿ ಶತಕ ಸಿಡಿಸಿದ್ದು, ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ದದ ಸರಣಿಯ ತಂಡದಲ್ಲಿ ತನಗೆ ಸ್ಥಾನ ನೀಡುವಂತೆ ಆಯ್ಕೆ ಸಮಿತಿಗೆ ಸಂದೇಶ ರವಾನಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಭಾರತ ಟೆಸ್ಟ್‌ ತಂಡದಲ್ಲಿ (Indian Test Team) ಸ್ಥಾನ ಸಿಗದೆ ನಿರಾಶಗೊಂಡಿದ್ದ ಸರ್ಫರಾಝ್‌ ಖಾನ್‌ ಇದೀಗ ಶತಕ ಸಿಡಿಸಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಚೆನ್ನೈನ ಗೋಜನ್ ಕಾಲೇಜು ಬಿ ಮೈದಾನದಲ್ಲಿ ಮೊದಲನೇ ಸುತ್ತಿನ ಪಂದ್ಯದಲ್ಲಿ 98 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಮುಂಬೈ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಬ್ಯಾಟ್‌ ಮಾಡಿದ ಸರ್ಫರಾಜ್‌ ಖಾನ್‌ 114 ಎಸೆತಗಳಲ್ಲಿ 138 ರನ್‌ಗಳನ್ನು ಸಿಡಿಸಿದರು. ಇದರಲ್ಲಿ ಅವರು 10 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆ ಮೂಲಕ ತಂಡ ಮೊದಲನೇ ದಿನದಾಟದಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 367 ರನ್‌ ಕಲೆಹಾಕಿದೆ. ಇನ್ನೂ ಸರ್ಫರಾಝ್ ಖಾನ್‌ ಕೊನೆಯ ಬಾರಿ ಭಾರತವನ್ನು ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಪ್ರತಿನಿಧಿಸಿದ್ದರು, ಆ ಸರಣಿಯಲ್ಲಿ ಭಾರತ 0-3 ಅಂತರದಲ್ಲಿ ಸೋತಿತ್ತು. ಇದಾದ ಬಳಿಕ ಫಿಟ್‌ನೆಸ್‌ ಸಮಸ್ಯೆಯಿಂದ ಅವರನ್ನು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.

Asia Cup 2025: ಶುಭಮನ್‌ ಗಿಲ್‌ ಅಲ್ಲ! ಭಾರತ ತಂಡಕ್ಕೆ ನೇರವಾಗಿ ಆಯ್ಕೆಯಾಗಬಲ್ಲ ಆಟಗಾರರನ್ನು ಆರಿಸಿದ ಆರ್‌ ಅಶ್ವಿನ್‌

ಸರ್ಫರಾಝ್‌ ಖಾನ್‌ಗೆ ಫಿಟ್‌ನೆಸ್‌ ಸವಾಲು

ಸರ್ಫರಾಝ್‌ ಖಾನ್ ಕಳೆದ ಕೆಲ ದಿನಗಳಿಂದ ತಮ್ಮ ಫಿಟ್ನೆಸ್ ಸಮಸ್ಯೆಯನ್ನು ಎದುರಿಸಿದ್ದರು. ಈ ಕಾರಣ ಅವರು ಹಲವು ಬಾರಿ ಟೀಮ್‌ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡು ನಿರಾಶರಾಗಿದ್ದರು. ಕಳೆದ ಇಂಗ್ಲೆಂಡ್‌ ಪ್ರವಾಸದಲ್ಲೂ ಸ್ಥಾನ ಕಳೆದುಕೊಂಡ ಬಳಿಕ ಫಿಟ್ನೆಸ್ ಮೇಲೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ನಿರಂತರ ಅಭ್ಯಾಸದಲ್ಲಿ ತೊಡಗಿದ್ದು, ತನ್ನ ದೇಹದ ಬರೋಬ್ಬರಿ 17 ಕೆಜಿ ತೂಕ ಇಳಿಕೆ ಮಾಡಿಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಇದಾದ ಬಳಿಕ ಇದು ಅವರ ಮೊದಲನೇ ಪಂದ್ಯವಾಗಿದೆ. ನಿರೀಕ್ಷೆಯಂತೆ ಅಮೋಘ ಪ್ರದರ್ಶನ ತೋರಿ ಇದೀಗ ಎಲ್ಲರ ಗಮನ ಸೆಳೆದಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವ ನಿರೀಕ್ಷೆಯಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ಭಾರತ ಎ ತಂಡದಲ್ಲಿ ಆಡಿದ್ದ ಅವರು ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಸ್ಥಾನ ಪಡೆದಿದ್ದರೂ ಟೆಸ್ಟ್‌ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಿರಲು ಸಾಧ್ಯವಾಗಿರಲಿಲ್ಲ.

Asia Cup ಭಾರತ ತಂಡದಲ್ಲಿ 14ರ ವಯಸ್ಸಿನ ಬಾಲಕನಿಗೆ ಅವಕಾಶ ನೀಡಬೇಕೆಂದ ಕೆ ಶ್ರೀಕಾಂತ್!

ನಂತರ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 92 ರನ್ ಕಲೆಹಾಕಿದ್ದರು. ಬಳಿಕ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಗೆ ಆಯ್ಕೆ ಸಮಿತಿ ಅವರನ್ನು ಪರಿಗಣಿಸಲಿಲ್ಲ. ಇನ್ನೊಂದು ಆಘಾತವೆಂದರೆ 2025ರ ಐಪಿಎಲ್ ಹರಾಜಿನಲ್ಲಿಯೂ ಯಾವ ತಂಡವೂ ಅವರನ್ನು ಖರೀದಿಸಲು ಮುಂದಾಗಲಿಲ್ಲ. ಇನ್ನೂ 2024 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸರ್ಫರಾಝ್‌, ಈ ತನಕ ಆರು ಟೆಸ್ಟ್ ಪಂದ್ಯಗಳನ್ನಾಡಿದ್ದು, 37.10 ರ ಸರಾಸರಿಯಲ್ಲಿ 371 ರನ್ ಕಲೆಹಾಕಿದ್ದಾರೆ.

ಏನಿದು ಬುಚಿ ಬಾಬು ಟೂರ್ನಿ?

ಈ ಟೂರ್ನಿಯನ್ನು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ನಡೆಸುತ್ತಿದೆ. ಇದು ಹಲವು ಪ್ರಮುಖ ದೇಶಿ ಟೆಸ್ಟ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಒಂದಾಗಿದೆ. ಆಗಸ್ಟ್ 18 ರಿಂದ ಸೆಪ್ಟೆಂಬರ್ 9 ರವರೆಗೆ ಈ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, ಇವುಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.