ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Parag Tyagi: ವಿವಾಹ ವಾರ್ಷಿಕೋತ್ಸವದಂದು ಅಗಲಿದ ಪತ್ನಿಯ ಟ್ಯಾಟೂ ಹಾಕಿಸಿಕೊಂಡ ಬಾಲಿವುಡ್‌ ನಟಿಯ ಪತಿ

ನಟ ಪರಾಗ್ ತ್ಯಾಗಿ ಅವರು ಶೆಫಾಲಿಯನ್ನು ತುಂಬಾ ಪ್ರೀತಿಸುತ್ತಿದ್ದು ಅವರ ಅಗಲುವಿಕೆ ಇಂದಿಗೂ ಅವರ ಜೀವನಕ್ಕೆ ದೊಡ್ಡ ಆಘಾತ ತಂದಂತಾಗಿದೆ. ಹೀಗಿರುವಾಗಲೇ ನಟ ಪರಾಗ್ ತ್ಯಾಗಿ ಅವರು ವಿವಾಹ ವಾರ್ಷಿಕೋತ್ಸವದಂದು ಅವರ ದಿವಂಗತ ಪತ್ನಿ ಸವಿನೆನಪಿಮ ಗೌರವಾರ್ಥವಾಗಿ ಅವರ ಮುಖದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿ ಯಾದಲ್ಲಿ ವೈರಲ್ ಆಗುತ್ತಿದೆ...

ಅಗಲಿದ ಪತ್ನಿಯ ಟ್ಯಾಟೂ ಹಾಕಿಸಿಕೊಂಡ ಬಾಲಿವುಡ್‌ ನಟಿ ಪತಿ

Parag Tyagi

Profile Pushpa Kumari Aug 18, 2025 7:27 PM

ನವದೆಹಲಿ: ಕಾಂತಾ ಲಗಾ ಮ್ಯೂಸಿಕಲ್ ಮೂಲಕ ಖ್ಯಾತಿ ಪಡೆದ ನಟಿ ಶೆಫಾಲಿ ಝರಿವಾಲ (Shefali Jariwala) ಅವರು ತಮ್ಮ ಅದ್ಭುತ ನೃತ್ಯ ಹಾಗೂ ಅಭಿನಯದಿಂದ ಅಪಾರ ಅಭಿ ಮಾನಿಗಳ ಮನಗೆದ್ದಿದ್ದರು. ನಚ್ ಬಲಿಯೆ 5 ಮತ್ತು ನಚ್ ಬಲಿಯೆ7 ರಂತಹ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದ ಇವರು ಬಿಗ್ ಬಾಸ್ 13 ರಲ್ಲಿ ಸ್ಪರ್ಧಿಯಾಗಿ ಕೂಡ ಪ್ರಸಿದ್ಧರಾಗಿದ್ದರು. ಆದರೆ ವಿಧಿಯಾಟ ಎಂಬಂತೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯೇಜಿಸಿದ್ದಾರೆ. ಜೂನ್ 27 ರಂದು ಹೃದಯಾಘಾತದಿಂದ ಇವರು ಮೃತರಾಗಿದ್ದು ಅವರ ಕುಟುಂಬದವರಿಗೆ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದಂತಾಗಿತ್ತು. ಅವರ ಪತಿ, ನಟ ಪರಾಗ್ ತ್ಯಾಗಿ (Parag Tyagi) ಅವರು ಶೆಫಾಲಿಯನ್ನು ತುಂಬಾ ಪ್ರೀತಿಸುತ್ತಿದ್ದು ಅವರ ಅಗಲುವಿಕೆ ಇಂದಿಗೂ ಅವರ ಜೀವನಕ್ಕೆ ದೊಡ್ಡ ಆಘಾತ ತಂದಂತಾಗಿದೆ. ಹೀಗಿರುವಾಗಲೇ ನಟ ಪರಾಗ್ ತ್ಯಾಗಿ ಅವರು ವಿವಾಹ ವಾರ್ಷಿಕೋತ್ಸವದಂದು ಅವರ ದಿವಂಗತ ಪತ್ನಿ ಸವಿನೆನಪಿಮ ಗೌರವಾರ್ಥವಾಗಿ ಅವರ ಮುಖದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟ ಪರಾಗ್ ತ್ಯಾಗಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಎದೆಯ ಮೇಲೆ ಶೆಫಾಲಿ ಅವರ ಮುಖದ ಚಿತ್ರ ಇರುವ ಹಚ್ಚೆ ಹಾಕಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ನಮ್ಮ 15 ನೇ ವಿವಾಹ ವಾರ್ಷಿಕೋತ್ಸವದಂದು ಅವಳಿಗೆ ನನ್ನ ಉಡುಗೊರೆ ಇಲ್ಲಿದೆ. ಅವಳು ಯಾವಾಗಲೂ ನನ್ನ ಹೃದಯದಲ್ಲಿ, ನನ್ನ ದೇಹದ ಪ್ರತಿಯೊಂದು ಜೀವಕೋಶದಲ್ಲಿ ಇದ್ದಾಳೆ. ಈಗ ಎಲ್ಲರೂ ಅದನ್ನು ನೋಡಬಹುದು ಎಂದು ನಟ ಪರಾಗ್ ಅವರು ಬರೆದುಕೊಂಡಿದ್ದಾರೆ.

ಇದನ್ನು ಓದಿ:Coolie Movie: ರಜನಿಕಾಂತ್‌ ಅಭಿನಯದ ʼಕೂಲಿʼ ಚಿತ್ರ ನೋಡಲು ಸುಳ್ಳು ಸಿಕ್‌ ಲೀವ್‌ ಹಾಕಬೇಕಿಲ್ಲ; ಕಂಪೆನಿಯೇ ರಜೆ ಜತೆ ಟಿಕೆಟ್ ಕೂಡ ನೀಡುತ್ತಿದೆ!

ಆಗಸ್ಟ್ 12 ರಂದು ಪರಾಗ್ ಈ ಪೋಸ್ಟ್ ಹಂಚಿಕೊಂಡಿದ್ದು 15 ವರ್ಷಗಳ ಹಿಂದೆ ಶೆಫಾಲಿಯನ್ನು ನೋಡಿದಾಗ, ಅವಳು ನನ್ನ ಮನಸ್ಸಿಗೆ ಬಹಳ ಆಪ್ತಳಾಗಿದ್ದಳು, ಹೀಗೆ ಸ್ನೇಹ ಸಂಬಂಧ ವಿವಾಹಕ್ಕೆ ಮುನ್ನುಡಿಯಾಯ್ತು ಎಂದು ಹಳೆ ನೆನಪನ್ನು ಕೂಡ ನಟ ಪರಾಗ್ ಅವರು ನೆನಪಿಸಿ ಕೊಂಡು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಮದುವೆಯ ಆರಂಭಿಕ ದಿನಗಳ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ವೈರಲ್ ಆದ ಹಳೆ ಫೋಟೊದಲ್ಲಿ ತಮ್ಮ ಮದುವೆಯ ಉಂಗುರಗಳನ್ನು ಪ್ರದರ್ಶಿಸುತ್ತಿರುವುದು ಬಹಳ ಹೈಲೈಟ್ ಆಗಿದೆ. ನನ್ನ ಪ್ರೀತಿ, ನನ್ನ ಜಾನ್, ನನ್ನ ಪರಿ ನಾನು 15 ವರ್ಷಗಳ ಹಿಂದೆ ನಿನ್ನನ್ನು ಮೊದಲ ಬಾರಿಗೆ ನೋಡಿದಾಗ ನಾವು ಹೀಗಿದ್ದೆವು, ನನಗೆ ಅಪಾರ ಪ್ರೀತಿಯನ್ನು ನೀಡಿದ್ದ ಕ್ಕಾಗಿ ನಿನಗೆ ಎಷ್ಟು ಧನ್ಯವಾದ ತಿಳಿಸಿದರು ಅದು ಕಡಿಮೆಯೇ ಎಂದು ಈ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಪರಾಗ್ ಅವರು ಶೆಫಾಲಿ ಜರಿವಾಲಾ ರೈಸ್ ಫೌಂಡೇಶನ್ ಅನ್ನು ಸಹ ಪ್ರಾರಂಭಿಸಿದ್ದಾರೆ.