ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Club House Completes 5 Years: ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ʼಹೌಸ್ʼಗೆ 5 ವರ್ಷ

ಕರೋನಾ ಕಾಲದಲ್ಲಿ ಆರಂಭಗೊಂಡ ವಿಶ್ವವಾಣಿ ಕ್ಲಬ್‌ಹೌಸ್ (ಸಂವಾದದ APP) ಚರ್ಚೆಗೆ ಇದೀಗ ಐದು ವರ್ಷ ಭರ್ತಿಯಾಗಿದೆ. ‘ಆಡುಮುಟ್ಟದ ಸೊಪ್ಪಿಲ್ಲ; ವಿಶ್ವವಾಣಿ ಕ್ಲಬ್‌ಹೌಸ್‌ ನಲ್ಲಿ ನಡೆಯದ ಚರ್ಚೆಯಿಲ್ಲ’ ಎನ್ನುವಂತೆ ಸತತ 5 ವರ್ಷಗಳ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಿರಂತರ ಚರ್ಚೆಗಳು ನಡೆದಿವೆ. ವಿಶ್ವದಲ್ಲಿ ಯಾವುದೇ ಒಂದು ಕ್ಲಬ್‌ಹೌಸ್ ರೂಮ್ ಇಷ್ಟು ಸುದೀರ್ಘವಾಗಿ ನಡೆದ ಇತಿಹಾಸ ವಿಲ್ಲ

ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ʼಹೌಸ್ʼಗೆ 5 ವರ್ಷ

-

ಸತತ 5 ವರ್ಷ ಕ್ಲಬ್‌ಹೌಸ್ ಕಾರ್ಯಕ್ರಮ ನಡೆಸಿದ ವಿಶ್ವವಾಣಿ

ವಿಶ್ವದಲ್ಲೇ ದಾಖಲೆ, ಇಂದು ಕೇಳುಗರೊಂದಿಗೆ ವಿಶ್ವೇಶ್ವರ ಭಟ್ಟರ ವಿಶೇಷ ಸಂವಾದ

ಬೆಂಗಳೂರು: ಕರೋನಾ ಕಾಲದಲ್ಲಿ ಆರಂಭಗೊಂಡ ವಿಶ್ವವಾಣಿ ಕ್ಲಬ್‌ಹೌಸ್ (ಸಂವಾದದ APP) ಚರ್ಚೆಗೆ ಇದೀಗ ಐದು ವರ್ಷ ಭರ್ತಿಯಾಗಿದೆ. ‘ಆಡುಮುಟ್ಟದ ಸೊಪ್ಪಿಲ್ಲ; ವಿಶ್ವವಾಣಿ ಕ್ಲಬ್‌ಹೌಸ್‌ ನಲ್ಲಿ ನಡೆಯದ ಚರ್ಚೆಯಿಲ್ಲ’ ಎನ್ನುವಂತೆ ಸತತ 5 ವರ್ಷಗಳ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಿರಂತರ ಚರ್ಚೆಗಳು ನಡೆದಿವೆ. ವಿಶ್ವದಲ್ಲಿ ಯಾವುದೇ ಒಂದು ಕ್ಲಬ್‌ಹೌಸ್ ರೂಮ್ ಇಷ್ಟು ಸುದೀರ್ಘವಾಗಿ ನಡೆದ ಇತಿಹಾಸವಿಲ್ಲ.

ವಿಶ್ವವಾಣಿ ಕ್ಲಬ್'ಹೌಸ್‌ಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಫಾಲೋವರ‍್ಸ್ ಇದ್ದಾರೆ. ಕ್ಲಬ್‌ಹೌಸ್‌ನ ಕನ್ನಡ ವಿಭಾಗದಲ್ಲಿ ಈ ಸಾಧನೆಯನ್ನು ಬೇರಾರೂ ಮಾಡಿಲ್ಲ ಎನ್ನುವುದು ವಿಶೇಷ. ಪ್ರಪಂಚ ವನ್ನೇ ನಲುಗಿಸಿದ್ದ ಕರೋನಾ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು ಕ್ಲಬ್‌ಹೌಸ್. ಏಕಮುಖವಾಗಿ ಮಾತನಾಡಿ, ಅದನ್ನು ಕೇಳಲು ಮಾತ್ರ ರೇಡಿಯೋ ವ್ಯವಸ್ಥೆಯಲ್ಲಿ ಅವಕಾಶವಿದೆ.

ಕ್ಲಬ್‌ಹೌಸ್‌ನಲ್ಲಿ ಅದನ್ನು ಬದಲಿಸಿ ಕೇಳುಗರಿಗೂ ನೇರವಾಗಿ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅದರಲ್ಲಿ ವಿಶ್ವವಾಣಿ ಆರಂಭಿಸಿದ ಮಾತಿನ ಮಂಟಪಕ್ಕೆ ಶುಕ್ರವಾರಕ್ಕೆ ಐದು ವರ್ಷ ತುಂಬಲಿದೆ.

ಲಾಕ್‌ಡೌನ್ ಸಮಯದಲ್ಲಿ ಭಾರೀ ಸದ್ದು ಮಾಡಿದ್ದ ಕ್ಲಬ್‌ಹೌಸ್‌ನ ಜನಪ್ರಿಯತೆ, ಕರೋನಾ ಕಡಿಮೆಯಾದಂತೆ ಕಡಿಮೆಯಾಗುತ್ತಾ ಬಂತು. ಆದರೆ ಕ್ಲಬ್‌ಹೌಸ್‌ನಲ್ಲಿ ವಿಶ್ವವಾಣಿಯ ಕ್ರೇಜ್ ಮಾತ್ರ ಈಗಲೂ ಮೊದಲ ದಿನದಷ್ಟೇ ತಾಜಾ ಆಗಿ ಮುಂದು ವರಿದಿದೆ.

ಇದನ್ನೂ ಓದಿ: Vishweshwar Bhat Column: ಟಾಟಾ ಪೆನ್ ಕಳೆದುಕೊಂಡ ಪ್ರಸಂಗ!

ಲಾಕ್‌ಡೌನ್ ಸಮಯದಲ್ಲಿ ಕಾಲ ಕಳೆಯುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾಗ ಲಾಂಚ್ ಆದ ಕ್ಲಬ್‌ಹೌಸ್ ಎನ್ನುವ ಆಪ್ ಅನ್ನು ಬಳಸಿಕೊಂಡ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ನಿತ್ಯ ಕ್ಲಬ್'ಹೌಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಆರಂಭಿಕ ದಿನದಲ್ಲಿ ಗಣ್ಯಾತಿಗಣ್ಯರು ಕ್ಲಬ್‌ಹೌಸ್ ರೂಮಿಗೆ ಬಂದು ವಿಶ್ವವಾಣಿ ಕೇಳುಗರೊಂದಿಗೆ ಸಂವಾದ ನಡೆಸಿದರು. ಅಧಿಕಾರ ವಹಿಸಿಕೊಂಡ ಕೆಲವೇ ನಿಮಿಷ ದಲ್ಲಿ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಜರಾಗಿದ್ದರು. ಇನ್ನು ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗವಹಿಸಿದಾಗ, ಆಪ್‌ನ ಸರ್ವರ್ ಕ್ರ್ಯಾಶ್ ಆಗಿದ್ದು ಇತಿಹಾಸ. ಇಂತಹ ಹತ್ತು ಹಲವು ಇತಿಹಾಸ ಸೃಷ್ಟಿಸಿರುವ ವಿಶ್ವವಾಣಿ ಕ್ಲಬ್‌ಹೌಸ್ ಸೋಮ ವಾರದಿಂದ ಶುಕ್ರವಾರದವರೆಗೆ ವಿಶಿಷ್ಟ, ವಿಭಿನ್ನ ರೀತಿಯ ಸಂವಾದವನ್ನು ನಡೆಸಿಕೊಂಡು ಬರುತ್ತಿದೆ.

ಇವರು ನಿತ್ಯ ಕೇಳುಗರು: ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆಯು ತ್ತಿರುವ ಕ್ಲಬ್‌ಹೌಸ್ ಮಾತಿನ ಮಂಟಪಕ್ಕೆ ಸಾವಿರಾರು ಮಂದಿ ಬಂದು ಆಲಿಸುತ್ತಾರೆ. ಆದರೆ ಕೆಲ ಕೇಳುಗರು ಮೊದಲ ದಿನದಿಂದ ಇಲ್ಲಿಯವರೆಗೆ ನಿತ್ಯ ಆಗಮಿಸುತ್ತಾರೆ. ಏಳು ಗಂಟೆಗೆ ಸರಿಯಾಗಿ ಎಂಟ್ರಿಯಾಗುವ ಇವರು, ಕಾರ್ಯಕ್ರಮ ಮುಗಿಯುವ ತನಕ ಕ್ಲಬ್‌ಹೌಸ್ ರೂಮ್‌ನಲ್ಲಿರುತ್ತಾರೆ.

ಪ್ರಮುಖವಾಗಿ ಸವಿತಾ ಭಟ್, ನಯನಾ ಕೆ.ಆರ್., ವಿಭಾಕರ್ ಶರ್ಮಾ, ಪ್ರಸಾದ್ ಬೆಸಗರಹಳ್ಳಿ, ರವೀಂದ್ರ ಟಿ.ಜಿ, ಮಂಜುಳಾ ರಾವ್, ಜ್ಯೋತಿ ರಾಜ್, ಅಮೆರಿಕದ ಲಕ್ಷ್ಮೀ, ನರೇಂದ್ರ ಹರಿಹರ್, ರವೀಂದ್ರ, ಶಂಕರ್ ಗೌಡ, ಆಶಾ ಬಾಲಕೃಷ್ಣ, ಅನಿಲ್ ಕುಮಾರ್, ಜಯಲಕ್ಷ್ಮೀ, ಬಸವಲಿಂಗರಾಜು, ವರಲಕ್ಷ್ಮೀ ಮುಕುಂದರಾವ್ ನಿತ್ಯ ಕೇಳುಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

75ಕ್ಕೂ ಹೆಚ್ಚು ಬಾರಿ ಆಗಮಿಸಿರುವ: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೇಳುಗರಷ್ಟೇ ಅಲ್ಲದೇ, ಅತಿಥಿಗಳಲ್ಲಿಯೂ ಅನೇಕರು ಪದೇಪದೆ ಬಂದಿದ್ದಾರೆ. ಅದರಲ್ಲಿಯೂ ಪ್ರತಿ ಶುಕ್ರವಾರ ಸಂವಾದದಲ್ಲಿ ಭಾಗವಹಿಸುವ ಪಿ.ಕೆ.ನಂದೀಶ್ ಅವರು, ಶ್ರೀರಾಮಾಯಣ ದರ್ಶನಂ ಸಮೀಕ್ಷೆ 18ಸರಣಿ, ಅರವಿಂದರ ‘ಸಾವಿತ್ರಿ’ 29 ಸರಣಿ ಉಪನ್ಯಾಸ ಸೇರಿದಂತೆ 70ಕ್ಕೂ ಹೆಚ್ಚು ಬಾರಿ ಆಗಮಿಸಿದ್ದಾರೆ. ಇನ್ನುಳಿದಂತೆ ಡಾ.ಡಿ.ವಿ.ಗುರು ಪ್ರಸಾದ್ ಅವರು ದೇಶದ ಭದ್ರತೆ, ಪ್ರವಾಸ, ತಮ್ಮ ಕೃತಿಯ ಪರಿಚಯದ ವಿಷಯ ವಾಗಿ 26 ಬಾರಿ, ಪ್ರೊ.ಪ್ರಶಾಂತ ಹೆಗಡೆ ಮೂಡಲಮನೆ ಅವರ ಷಟ್ಪದಿಯಲ್ಲಿ ಸರಳ ರಾಮಾಯಣ, ಭಗವದ್ಗೀತೆ ಸರಣಿ ಉಪನ್ಯಾಸ 45ಕ್ಕೂ ಹೆಚ್ಚು ಬಾರಿ, ಸತ್ಯೇಶ ಎನ್.ಬೆಳ್ಳೂರು ಅವರು, ವೃತ್ತಿಜೀವನದ ಕಲಿಕೆ ಹಾಗೂ ಮ್ಯಾನೇಜ್‌ ಮೆಂಟ್ ಕಥೆಗಳ ಸರಣಿಯ ಭಾಗವಾಗಿ 40ಕ್ಕೂ ಹೆಚ್ಚು ಬಾರಿ ಭಾಗವಹಿಸಿದ್ದಾರೆ. ಡಾ.ನಾ.ಸೋಮೇಶ್ವರ ಅವರು 25ಕ್ಕೂ ಹೆಚ್ಚು ಬಾರಿ, ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು 21ಕ್ಕೂ ಹೆಚ್ಚು ಬಾರಿ, ಡಾ.ಸಿ.ಆರ್.ಚಂದ್ರಶೇಖರ್ ಅವರು 22 ಬಾರಿ, ಡಾ.ಪುಷ್ಪಾವತಿ ಮರಿಸ್ವಾಮಿ ಹಾಗೂ ವೈದ್ಯರ ತಂಡ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯ ಬಗ್ಗೆ 15 ಬಾರಿ, ಡಾ.ಮಲ್ಲಿಕಾರ್ಜುನ ಡಂಬಳ 15 ಬಾರಿ, ಡಾ.ಕವಿತಾ ಎಂ.ಬಿ ಹಾಗೂ ಡಾ.ಸಾಧನಾಶ್ರೀ ಪಟ್ಟಾಭಿರಾಮ್ ಅವರು 10 ಬಾರಿ ಅತಿಥಿಗಳಾಗಿ ಆಗಮಿಸಿದ್ದಾರೆ

image

ವಿಶ್ವವಾಣಿ ಕ್ಲಬ್‌ಹೌಸ್: ಜ್ಞಾನದ ದೇಗುಲ ವಸುದೈವ ಕುಟುಂಬಕಂ ಅನ್ನೋ ಮಾತು ನಿಜವಾಗಲೂ ಅನುಭವಕ್ಕೆ ಬರುವುದು ನಮ್ಮ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ. ಪ್ರಪಂಚದ ಹಲವಾರು ಭಾಗಗಳಿಂದ ದಿನವೂ ಕೂಡ 7ಕ್ಕೆ ಸರಿಯಾಗಿ ಪ್ರೀತಿಯಿಂದ ಜತೆಯಾಗುವ ಅನೇಕ ಸಹೃದಯಿ ಕ್ಲಬ್ ಹೌಸ್ ಕೇಳುಗರ ಒಡನಾಟದಲ್ಲಿ. ಕೋವಿಡ್ ಸಮಯದಲ್ಲಿ ವಿಶ್ವೇಶ್ವರ ಭಟ್ಟರ ವಿಶಿಷ್ಟ ಆಲೋಚನೆಯಿಂದ ಆರಂಭವಾಗಿ ಇಂದು ಜ್ಞಾನದ ದೊಡ್ಡ ಕಣಜವಾಗಿ ಬೆಳೆದಿದೆ ನಮ್ಮ ಕ್ಲಬ್ ಹೌಸ್. ಸದ್ಗುರು, ನಾನಾ ರಂಗದ ಕರ್ನಾಟಕದ ನೂರಾರು ಮೇರು ವ್ಯಕ್ತಿಗಳು ಇಲ್ಲಿ ತಮ್ಮ ಜೀವನದ ಅನುಭವವನ್ನು ಗಂಟೆಗಳಲ್ಲಿ ಧಾರೆ ಎರೆಯು ತ್ತಾರೆ. ದಿನವೂ ಹೊಸ ವಿಷಯಗಳ ಚರ್ಚೆ, ಸದ್ವಿಚಾರಗಳು ಇಲ್ಲಿ ಪ್ರಸ್ತಾಪವಾಗು ತ್ತಿದ್ದು, ಕೇಳುಗರಲ್ಲಿ ಹೊಸ ಉತ್ಸಾಹ ಹಾಗೂ ಜ್ಞಾನವನ್ನು ತುಂಬುತ್ತಿವೆ. ಐದು ವರ್ಷಗಳಿಂದ ಈ ವೇದಿಕೆ ಯ ಭಾಗವಾಗಿರುವ ನನಗೆ ಇದು ಬದುಕಿನ ಅವಿಭಾಜ್ಯ ಅಂಗ. 100ರಿಂದ ಒಂದೊಂದಾಗಿ ಮೈಲಿಗಲ್ಲುಗಳನ್ನು ದಾಟುತ್ತಾ ಈಗ 1425 ಹೊಸ್ತಿಲಲ್ಲಿ ನಾವಿದ್ದೇವೆ ಎಂಬ ದೊಡ್ಡ ಸಾರ್ಥಕತೆ ಇದೆ. ನೂರಾರು ಸಂಪನ್ಮೂಲ ವ್ಯಕ್ತಿಗಳ ಜತೆಗೆ ಒಡನಾಟ, ಅವರ ವಿದ್ವತ್ಪೂರ್ಣ ಮಾತುಗಳಲ್ಲಿ ನೂರಾರು ಪುಸ್ತಕಗಳನ್ನು ಓದಿದ ಅನುಭವ, ಅಪರೂಪದಲ್ಲಿ ಅಪರೂಪದ ಹಾಡುಗಳನ್ನು ಕೇಳುವ, ಹರಿಕಥೆ, ಕಗ್ಗ, ವಚನಗಳು, ರಾಮಾಯಣ ದರ್ಶನಂ, ಭಾಗವತದ ಕಥೆಗಳು, ಅದ್ಭುತವಾದ ಚಾರಣದ ಅನುಭವಗಳು ಇವೆಲ್ಲ ಒಂದೇ ವೇದಿಕೆಯಲ್ಲಿ ದಕ್ಕಿದೆ ಎಂದರೆ ಅದರ ಸಂಪೂರ್ಣ ಶ್ರೇಯ ಭಟ್ಟರಿಗೆ ಸಲ್ಲಬೇಕು. ಕಿರಣ್ ಉಪಾಧ್ಯಾಯ, ಶಿಶಿರ್ ಹೆಗಡೆ ಕ್ಲಬ್‌ನಿಂದ ಸಿಕ್ಕ ಅಪರೂಪದ ಸ್ನೇಹಿತರು. ವಿಶ್ವೇಶ್ವರ ಭಟ್ಟರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ 6.55ಕ್ಕೆ ಕ್ಲಬ್ ಹೌಸ್ ಪ್ರಾರಂಭ ಮಾಡುತ್ತಾರೆ. ರಾಜೀವ್ ಹೆಗಡೆ ಐದು ವರ್ಷದಿಂದ ಸ್ಪೀಕರ್ಸ್ ಪರಿಚಯ ವನ್ನು ಸಿದ್ಧಮಾಡಿ ಕಳಿಸಿಕೊಡುತ್ತಿದ್ದಾರೆ. ರಂಜಿತ್ ಚಂದದ ಪೋಸ್ಟರ್‌ಗಳನ್ನು ರೆಡಿ ಮಾಡಿಸಿ ಕೊಡುತ್ತಾರೆ. ಇವರೆಲ್ಲ ಕ್ಲಬ್ ಹೌಸ್‌ನ ಆಧಾರ ಸ್ಥಂಭಗಳು. ಇಲ್ಲಿಂದ ಪರಿಚಯವಾದ ಅನೇಕರುಎದುರಿಗೆ ಸಿಕ್ಕಾಗ ಮಾತನಾಡಿಸುವ ಆತ್ಮೀಯತೆ ಹೃದಯ ತುಂಬಿ ಬರುವಂತದ್ದು. ಒಂದು ವರ್ಚುಯಲ್ ವೇದಿಕೆ ಎಷ್ಟೆಲ್ಲಾ ಮನಸ್ಸುಗಳನ್ನ ಬೆಸೆದಿದೆ, ಎಷ್ಟೊಂದು ಜ್ಞಾನವನ್ನು ಹಂಚುತ್ತಿದೆ ಇದೆಲ್ಲದರ ಜತೆ ಅದರ ಪ್ರೀತಿಯ ಸದಸ್ಯರಾದ ನಮ್ಮನ್ನೆಲ್ಲಾ ಮಾಗಿಸುತ್ತಿದೆ. ನಿಮಗೆ ಚಿರಋಣಿ.

-ರೂಪಾ ಗುರುರಾಜ್
image

ವಿಶ್ವವಾಣಿ ಕ್ಲಬ್‌ಹೌಸ್ ಉಪನ್ಯಾಸದ ಕಲ್ಪವೃಕ್ಷ ‘ಕ್ಲಬ್‌ಹೌಸ್’! ಐದು ವರ್ಷದ ಹಿಂದೆ ಈ ರೀತಿಯ ಒಂದು APP ಬರುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಆದ ಸಾಕಷ್ಟು ಅನ್ವೇಷಣೆಗಳ ಪೈಕಿ ಕ್ಲಬ್‌ಹೌಸ್ ಸಹ ಒಂದು. ಜನರೆಲ್ಲ ಭಯದ ಛಾಯೆಯಲ್ಲಿ ಬದುಕುತ್ತಿರುವಾಗ ಕ್ಲಬ್ʼಹೌಸ್‌ನಲ್ಲಿ ವಿಶ್ವವಾಣಿಯ ಸಸಿ ನೆಟ್ಟು, ಜ್ಞಾನವೃಕ್ಷದ ನೆರಳಿನಲ್ಲಿ ಸಹೃದಯ ರೊಂದಿಗೆ ಒಟ್ಟಾಗಿ ಕುಳಿತುಕೊಳ್ಳುವ ಅವಕಾಶ ಮಾಡಿಕೊಟ್ಟವರು ವಿಶ್ವೇಶ್ವರ ಭಟ್ಟರು. ಹೊಸತನವನ್ನು ಶೀಘ್ರ ಆಘ್ರಾಣಿಸಿ, ತಾವು ಉಣ್ಣುವುದಲ್ಲದೆ, ಬೇರೆಯ ವರಿಗೂ ಬಡಿಸುವುದರಲ್ಲಿ ಅವರದ್ದು ಎತ್ತಿದ ಕೈ ಎನ್ನುವುದಕ್ಕೆ ಇನ್ನೊಂದು ಉದಾಹರಣೆ, ಸಾಕ್ಷಿ ’ವಿಶ್ವವಾಣಿ ಕ್ಲಬ್‌ಹೌಸ್’. ಅಂದು ನೆಟ್ಟ ’ವಿಶ್ವವಾಣಿ ಕ್ಲಬ್‌ಹೌಸ್’ ಸಸಿ ಇಂದು ಬೆಳೆದು ವಿಷಯಾಧಾರಿತ ಉಪನ್ಯಾಸದ ಕಲ್ಪವೃಕ್ಷವಾಗಿದೆ. ಈಗ ಜನರ ಮನಸ್ಸಿನಿಂದ ಕೋವಿಡ್ ನೆನಪು ಸತ್ತು ದೂರವಾಗಿದೆ, ಆದರೆ ವಿಶ್ವವಾಣಿ ಕ್ಲಬ್ಹೌಸ್ ಇನ್ನೂ ಅಪ್ಯಾಯಮಾನವಾಗಿ ಹೃದಯದಂಗಳದಲ್ಲಿ ಚಿರಸ್ಥಾಯಿಯಾಗಿದೆ. ಪ್ರತಿನಿತ್ಯ ಬೇರೆ ಬೇರೆ ವಿಷಯ ತಿಳಿಸಿಕೊಡುವ ಶಿಕ್ಷಕರು. ನೂರಾರು ಸಹ ಕೇಳುಗರು, ಅಲ್ಲ, ಸಹಪಾಠಿಗಳು. ಬೇರೆ ರಾಜ್ಯ, ಬೇರೆ ದೇಶದಲ್ಲಿದ್ದರೂ, ಐದು ವರ್ಷದಲ್ಲಿ ಒಮ್ಮೆಯೂ ಮುಖ ನೋಡದಿದ್ದರೂ, ಪರಸ್ಪರ ಭೇಟಿಯಾಗದಿದ್ದರೂ, ಕೇಳುಗರಾದ ನಾವು ವಿಶ್ವವಾಣಿ ತರಗತಿಯ ಗೆಳೆಯರು. ಆರಂಭದ ದಿನದಿಂದ ಇಲ್ಲಿಯವರೆಗೂ, ನೂರಾರು ಉಪನ್ಯಾಸಕರನ್ನು ಹುಡುಕಿ, ಕರೆತಂದು, ಶಾಂತಚಿತ್ತರಾಗಿ ತಾವು ಕೇಳುವುದಲ್ಲದೇ, ಸಾವಿರಾರು ಶ್ರೋತೃಗಳು ಕುಳಿತು ಕೇಳುವಂತೆ ಮಾಡುತ್ತಿರು ರೂಪಾ ಗುರುರಾಜ್ ಅವರ ಪಾತ್ರ ಮಹತ್ತರವಾದದ್ದು. ಐದರ ಈ ಸಂಭ್ರಮ ಐವತ್ತಾಗಲಿ, ಮತ್ತೆ ಇಮ್ಮಡಿಯಾಗಲಿ ಎಂದು ಹಾರೈಸುತ್ತೇನೆ.

- ಕಿರಣ್ ಉಪಾಧ್ಯಾಯ
image

ವಿಶ್ವವಾಣಿ ಮಾಡರೇಟರ್‌ಗಳೇನು ಹೇಳುತ್ತಾರೆ? ಧ್ವನಿಗೊಂದು ಶಕ್ತಿ ತುಂಬಿದ್ದು ಕ್ಲಬ್‌ಹೌಸ್ ಕೇವಲ ಗುಂಪಿನಲ್ಲಷ್ಟೇ ವಾಚಾಳಿಯಾಗಿದ್ದ ನನ್ನ ‘ಧ್ವನಿ’ಗೊಂದು ಶಕ್ತಿ ತುಂಬಿದ್ದು ಕ್ಲಬ್‌ಹೌಸ್. ಈ ಮಿನಿ ಬಾನುಲಿ ಕೇಂದ್ರಕ್ಕೆ ಇಂದಿಗೆ ಐದು ವರ್ಷದ ಸಂಭ್ರಮ. ಕೋವಿಡ್ ವೇಳೆ ವಿಶ್ವೇಶ್ವರ ಭಟ್ಟರಿಂದ ನಯಾಪೈಸೆ ಬಂಡವಾಳವಿಲ್ಲದೆ, ಆದಾಯ ವೂ ಇಲ್ಲದೆ ಬೆಳಕಿಗೆ ಬಂದ ಒಂದು ಸೃಜನಶೀಲ ಬಾನುಲಿ ಪ್ರಯೋಗ ಇದು. ನಾಡು, ದೇಶ - ವಿದೇಶಗಳಲ್ಲಿ ಕುಳಿತ ಸಾವಿ ರಾರು ಮಂದಿ ಶ್ರೋತೃಗಳು ಅಂಗೈಯಗಲದ ಮೊಬೈಲ್‌ನಲ್ಲಿ ಸಂಜೆಯಾಯಿತೆಂದರೆ ಕ್ಯಾಪ್ಟನ್ ವಿಶ್ವೇಶ್ವರ ಭಟ್ಟರ, ಮಾಡರೇಟರ‍್ಸ್‌ ಗಳಾದ ನನ್ನ ಮತ್ತು ರೂಪಾ ಅವರ ಮಾತುಗಳನ್ನು ಆಲಿಸಿ, ಲೈವ್ ಮೆಸೇಜ್‌ಗಳಿಂದ ಬೆನ್ನುತಟ್ಟಿ, ಕೆಲವೊಮ್ಮೆ ಕಾಲೆಳೆದು ನಂತರ ನೇರ ಸಂವಾದದಲ್ಲಿ ತೊಡಗುತ್ತಿದ್ದ ಪರಿ ನನ್ನ ಮಾಧ್ಯಮ ಕಸುಬಿಗೊಂದು ಮರುಹುಟ್ಟು ನೀಡಿತ್ತು. ಉತ್ತಮ ದರ್ಜೆಯ ಕಾರ್ಯಕ್ರಮ ನಿರ್ಮಾಣಕ್ಕೆ ಪ್ರತಿದಿನ ಬೆಳಗ್ಗೆ ಭಟ್ಟರು ನನ್ನನ್ನು ಪ್ರೆರೇಪಿಸಿ ಸಜ್ಜುಗೊಳಿಸುತ್ತಿದ್ದದ್ದು,ಜತೆಗೆ ನನ್ನ ಮತ್ತು ರೂಪಾಳ ಹುರುಪು-ಉತ್ಸಾಹ ಕೆಲವೇ ದಿನಗಳಲ್ಲಿ ಕ್ಲಬ್‌ಹೌಸ್ ಮನೆ ಮಾತಾಯಿತು. ಸಿದ್ದರಾಮಯ್ಯ, ಸದ್ಗುರು ಜಗ್ಗಿ, ರವಿಶಂಕರ್ ಗುರೂಜಿ ಸೇರಿ ನೂರಾರು ಗಣ್ಯರು ಮಾತಿನ ಮಂಟಪದಲ್ಲಿ ಕುಳಿತು ವಿಜೃಂಭಿಸಿದರು. ಎಲ್ಲೇ ಹೋಗಲಿ ಭಟ್ಟರನ್ನು ಕಂಡವರು ಮೋಹನ್ ಎಲ್ಲಿ? ರೂಪ ಬಂದಿಲ್ವಾ? ಎಂದು ಕೇಳುವಷ್ಟರಮಟ್ಟಿಗೆ ನಮಗೆ ಜನಪ್ರಿಯತೆ ತಂದುಕೊಟ್ಟಿತು. ಭಟ್ಟರು ಕ್ಲಬ್ ಹೌಸ್‌ನಿಂದ ನಯಾಪೈಸೆ ಸಂಪಾದಿಸಲಿಲ್ಲ, ಆದರೆ ನನ್ನನ್ನು ಮತ್ತು ರೂಪಾಳನ್ನು ಸುಮ್ಮನೆ ದುಡಿಸಲಿಲ್ಲ. ಬೊಗಸೆ ತುಂಬಾ ಕೊಟ್ಟರು, ಜತೆಗೆ ಬೆಳೆಸಿದರು.

- ಎಂ.ಎನ್.ಮೋಹನ್ ಕುಮಾರ್, ವಿಶ್ವವಾಣಿ
image

ವಿಶ್ವವಾಣಿ ಕ್ಲಬ್‌ಹೌಸ್‌ಗೆ ಐದ್ ವರ್ಷ ಆಯ್ತಾ !! ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ವೊಂದಕ್ಕೆ ಹೋಗಿದ್ದೆ. ಅಬ್ಬರು ಸಿಕ್ಕಿದ್ದರು, ಪರಿಚಯವಾಯಿತು. ಸ್ವಲ್ಪ ಹೊತ್ತಿನ ನಂತರ ಈ ಕ್ಲಬ್‌ಹೌಸ್ ವಿಶ್ವವಾಣಿಯವರದ್ದಲ್ಲವಾ? ಎಂದು ಕೇಳಿದರು. ನನಗೆ ಒಮ್ಮೆ ನಗು ಬಂತು. ಆದರೆ ಮರುಕ್ಷಣ ವಿಶ್ವವಾಣಿ ಕ್ಲಬ್ ಹೌಸ್‌ನ ಜನಪ್ರಿಯತೆ ಕಂಡು ಹೆಮ್ಮೆಯೆನಿಸಿತು. ಕರೋನಾ ಮಹಾಮಾರಿಯಿಂದಾಗಿ ಜಗತ್ತೇ ಬಾಗಿಲು ಮುಚ್ಚಿ ಕೂತಾಗ ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು ಕ್ಲಬ್‌ಹೌಸ್ ಎಂಬ ಕಿಟಕಿ ತೆರೆದು ಕೂತರು. ನೂರಾರು ದೇಶದ ಸಾವಿರಾರು ಜನರಿಗೆ ಬೆಳಕಾಗಿ ಕಂಡದ್ದು ಇದೇ ಕಿಟಕಿ. ಅದಕ್ಕೀಗ ಐದು ವರ್ಷ ಎಂದರೆ ಖುಷಿಯಾಗುತ್ತಿದೆ ! ಇದರ ಹಿಂದೆ ವಿಶ್ವೇಶ್ವರ ಭಟ್ಟರ ದೂರದೃಷ್ಟಿ, ರೂಪಾ ಗುರುರಾಜ್ ಅವರ ಅವಿರತ ಶ್ರದ್ಧೆ, ತೆರೆಯ ಹಿಂದೆ ನಿಂತ ರಾಜೀವ್ ಪಟವರ್ಧನ ಅವರ ಶ್ರಮವಿದೆ. ಮಾತುಗಾರರಾಗಿ ಬಂದವರ ಬದುಕಿನ ಮಾತಿಗೆ ಕಿವಿಯಾಗುವ ಸಾವಿರಾರು ಕಿವಿಗಳಲ್ಲ, ಬದುಕುಗಳಿವೆ. ಕೆಲವು ಕ್ಲಬ್‌ಹೌಸ್ ಕಾರ್ಯಕ್ರಮಗಳಲ್ಲಿ ರೂಪಾ ಅವರ ಜತೆ ನಾನು ಕೂಡ ಸಾಕ್ಷಿಯಾಗಿ ದ್ದಿದೆ. ಹಾಗಾಗಿ ಈ ಯಶಸ್ಸಿನ ಒಂದು ಪುಟ್ಟ ತುಣುಕನ್ನು ಸಹ-ಅಂಕಣಕಾರ ಕಿರಣ್ ಉಪಾಧ್ಯಾಯ ಅವರ ಜತೆ ಹಂಚಿಕೊಳ್ಳುವುದು ನನಗೆ ಸೊಕ್ಕಿನ ವಿಷಯ.

-ಶಿಶಿರ್ ಹೆಗಡೆ

ನಿರೂಪಕರು ಏನಂತಾರೆ?

ಕೇವಲ ಗುಂಪಿನಲ್ಲಷ್ಟೇ ವಾಚಾಳಿಯಾಗಿದ್ದ ನನ್ನ ‘ಧ್ವನಿ’ಗೊಂದು ಶಕ್ತಿ ತುಂಬಿದ್ದು ಕ್ಲಬ್‌ಹೌಸ್. ಕೋವಿಡ್ ಸಮಯದಲ್ಲಿ ವಿಶ್ವೇಶ್ವರ ಭಟ್ಟರಿಂದ ನಯಾ ಪೈಸೆ ಬಂಡವಾಳವಿಲ್ಲದೆ, ಆದಾಯವೂ ಇಲ್ಲದೆ ಬೆಳಕಿಗೆ ಬಂದ ಒಂದು ಸೃಜನಶೀಲ ಬಾನುಲಿ ಪ್ರಯೋಗ ಇದು.

-ಎಂ.ಎನ್.ಮೋಹನ್ ಕುಮಾರ್, ಪತ್ರಕರ್ತ

ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ವೊಂದಕ್ಕೆ ಹೋಗಿದ್ದೆ. ಅಬ್ಬರು ಸ್ವಲ್ಪಹೊತ್ತಿನ ನಂತರ ಈ ಕ್ಲಬ್‌ಹೌಸ್ ವಿಶ್ವವಾಣಿ ಯವರದ್ದಲ್ಲವಾ? ಎಂದು ಕೇಳಿದರು. ನನಗೆ ನಗು ಬಂದರೂ, ಮರುಕ್ಷಣ ವಿಶ್ವವಾಣಿ ಕ್ಲಬ್‌ಹೌಸ್‌ನ ಜನಪ್ರಿಯತೆ ಕಂಡು ಹೆಮ್ಮೆಯೆನಿಸಿತು.

-ಶಿಶಿರ್ ಹೆಗಡೆ, ಲೇಖಕ

‘ಐದು ವರ್ಷಗಳ ಹಿಂದೆ ಈ ರೀತಿಯ ಒಂದು APP ಬರುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಜನರೆಲ್ಲ ಭಯದ ಛಾಯೆಯಲ್ಲಿ ಬದುಕುತ್ತಿರುವಾಗ ಕ್ಲಬ್ಹೌಸ್‌ನಲ್ಲಿ ವಿಶ್ವವಾಣಿಯ ಸಸಿ ನೆಟ್ಟು, ಒಟ್ಟಾಗಿ ಕುಳಿತುಕೊಳ್ಳುವ ಅವಕಾಶ ಕೊಟ್ಟವರು ಭಟ್ಟರು.

-ಕಿರಣ್ ಉಪಾಧ್ಯಾಯ, ಲೇಖಕ

‘ವಸುಧೈವ ಕುಟುಂಬಕಂ’ ಅನ್ನುವ ಮಾತು ಅನುಭವಕ್ಕೆ ಬರುವುದು ನಮ್ಮ ವಿಶ್ವವಾಣಿ ಕ್ಲಬ್‌ ಹೌಸ್‌ನಲ್ಲಿ. ಪ್ರಪಂಚದ ಹಲವಾರು ಭಾಗಗಳಿಂದ ದಿನವೂ ಕೂಡ 7ಕ್ಕೆ ಸರಿಯಾಗಿ ಪ್ರೀತಿಯಿಂದ ಕ್ಲಬ್ ಹೌಸ್ ಕೇಳುಗರ ಒಡನಾಟದಲ್ಲಿ. ಇದು ಭಟ್ಟರ eನದ ಕಣಜ.

-ರೂಪಾ ಗುರುರಾಜ್, ಲೇಖಕಿ

ಇದು ಸಾಧನೆ

ಸದ್ಗುರು ಜಗ್ಗಿ ವಾಸುದೇವ್ ಸಂವಾದದಲ್ಲಿ ಭಾಗವಹಿಸಿದ್ದಾಗ ಕ್ಲಬ್‌ಹೌಸ್ ಸರ್ವರ್ ಕ್ರ್ಯಾಶ್ ಆಗುವಷ್ಟು ಕೇಳುಗರು ಭಾಗಿ ಸತತ ಐದು ವರ್ಷಗಳಿಂದ ನಿರಂತರ ಹಲವು ವೈವಿಧ್ಯಮಯ ವಿಷಯಗಳ ಸಂವಾದ ನಡೆಯುತ್ತಿರುವ ವಿಶ್ವದ ಏಕೈಕ ಕ್ಲಬ್‌ಹೌಸ್ ರೂಮ್ ಮುಖ್ಯಮಂತ್ರಿಯಾದ ಕೆಲವೇ ಗಂಟೆಗಳಲ್ಲಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಬಸವರಾಜ ಬೊಮ್ಮಾಯಿ ವಿಶ್ವವಾಣಿ ಕ್ಲಬ್‌ಹೌಸ್‌ಗೆ ವಿಷಯದ ಹಂಗಿಲ್ಲ; ಜಗತ್ತಿನ ಹಲವು ವಿಷಯಗಳ ಬಗ್ಗೆ ಆಳವಾದ, ದೀರ್ಘವಾದ ಸಂವಾದಗಳು ನಡೆದಿವೆ.