ದೇಶದ ಆರ್ಥಿಕತೆಯನ್ನೇ ಬದಲಿಸುತ್ತಿವೆ ಫುಡ್ ಡೆಲಿವರಿ ಆಪ್‌ಗಳು!
ಎನ್‌ಸಿಎಇಆರ್ ವರದಿಯ ಪ್ರಕಾರ, 2023-24ನೇ ಸಾಲಿನಲ್ಲಿ ಫುಡ್ ಡೆಲಿವರಿ ವಲಯವು ಬರೋ ಬ್ಬರಿ 1.2 ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ಗಳಿಸುವಲ್ಲಿ ಸಫಲವಾಗಿದೆ. ಜೊತೆಗೆ 13.7 ಲಕ್ಷ ಜನರಿಗೆ ನೇರ ಉದ್ಯೋಗ ನೀಡಿದೆ. ಅಚ್ಚರಿಯ ವಿಚಾರವೆಂದರೆ, ಈ ವಲಯದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಉದ್ಯೋಗವು, ಇತರ ವಲಯಗಳಲ್ಲಿ ಪರೋಕ್ಷವಾಗಿ 2.7 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.