World's Most Luxurious Cruises: ವಿಶ್ವದ ಟಾಪ್ 10 ಐಷಾರಾಮಿ ಕ್ರೂಸ್ಗಳಿವು; ಈ ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತು?
ಕ್ರೂಸ್ ಹೋಟೆಲ್ಗಳು ಐಷಾರಾಮಿ ಮತ್ತು ಸಾಹಸಮಯ ಪ್ರಯಾಣಕ್ಕೆ ಅತ್ಯುತ್ತಮ ಮಾರ್ಗಗಳಾಗಿದ್ದು, ಒಂದೇ ಟ್ರಿಪ್ನಲ್ಲಿ ಹಲವು ಸ್ಥಳಗಳನ್ನು ಅನ್ವೇಷಣೆ ಮಾಡಲು ಅವಕಾಶ ನೀಡುತ್ತದೆ. ಕ್ರೂಸ್(World's Most Luxurious Cruises) ಪ್ರಯಾಣ ವಿಶ್ರಾಂತಿ ಮತ್ತು ಆರಾಮದಾಯಕವಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ಒತ್ತಡ ಅಥವಾ ಆತಂಕವಿಲ್ಲದೆ ಸುಗಮ ಪ್ರಯಾಣ ಒದಗಿಸುತ್ತದೆ. ಈ ವರದಿಯಲ್ಲಿ ವಿಶ್ವದ ಟಾಪ್ 10 ಐಷಾರಾಮಿ ಮತ್ತು ದುಬಾರಿ ಕ್ರೂಸ್ ಹೋಟೆಲ್ಗಳು ಪಟ್ಟಿ ಮಾಡಲಾಗಿದೆ.



ಕ್ರೂಸ್ ಹೋಟೆಲ್ಗಳು ಐಷಾರಾಮಿ ಮತ್ತು ಸಾಹಸಮಯ ಪ್ರಯಾಣದಕ್ಕೆ ಅತ್ಯುತ್ತಮ ಮಾರ್ಗಗಳಾಗಿದ್ದು,ಒಂದೇ ಟ್ರಿಪ್ನಲ್ಲಿ ಹಲವು ಸ್ಥಳಗಳನ್ನು ಅನ್ವೇಷಣೆ ಮಾಡಲು ಅವಕಾಶ ನೀಡುತ್ತದೆ. ಕ್ರೂಸ್ ಪ್ರಯಾಣ ವಿಶ್ರಾಂತಿ ಮತ್ತು ಆರಾಮದಾಯಕವಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ಒತ್ತಡ ಅಥವಾ ಆತಂಕವಿಲ್ಲದೆ ಸುಗಮ ಪ್ರಯಾಣ ಒದಗಿಸುತ್ತದೆ. ವಿಶ್ವದ ಟಾಪ್ 10 ಐಷಾರಾಮಿ ಮತ್ತು ದುಬಾರಿ ಕ್ರೂಸ್ ಹೋಟೆಲ್ಗಳ ವಿವರ ಇಲ್ಲಿದೆ.

ಸೆವೆನ್ ಸೀಸ್ ಎಕ್ಸ್ಪ್ಲೋರರ್
ಈ ಕ್ರೂಸ್ ಕೆರಿಬಿಯನ್, ಮೆಡಿಟರೇನಿಯನ್, ಅಲಾಸ್ಕಾ ಮುಂತಾದ ಪ್ರದೇಶಗಳಲ್ಲಿ ಸಂಚರಿಸಲಿದೆ. ಇದು ಅತ್ಯಂತ ಐಷಾರಾಮಿ ಹಡಗುಗಳಲ್ಲಿ ಒಂದಾಗಿದ್ದು, ಪ್ರೀಮಿಯಂ ವಸತಿ ಸೌಲಭ್ಯ, ಡಿಲಕ್ಸ್ ಸ್ಪಾ, ಉತ್ತಮ ಆಹಾರ ಮತ್ತು ವಿಶ್ವದ ಅತ್ಯುತ್ತಮ ವೈನ್ಗಳ ರುಚಿಯನ್ನು ನೀವು ಹೊಂದಬಹುದು.

ಕ್ರಿಸ್ಟಲ್ ಸೆರೆನಿಟಿ
ದಕ್ಷಿಣ ಪೆಸಿಫಿಕ್, ಯೂರೋಪಿಯನ್ ರಿವರ್ಸ್, ಅಲಾಸ್ಕಾ, ಅಂಟಾರ್ಟಿಕಾದಲ್ಲಿ ಈ ಹಡಗು ಸಂಚರಿಸಲಿದ್ದು, ಸೊಗಸಾದ ಕೊಠಡಿಗಳು, ಮಿಶೆಲಿನ್-ಪ್ರೇರಿತ ಭೋಜನ, ಪ್ರೀಮಿಯಂ ಸ್ಪಾ ಹೊಂದಿದ್ದು ಮರೆಯಲಾಗದ ರಜಾ ದಿನಗಳನ್ನು ಕಳೆಯಲು ಉತ್ತಮ ಸ್ಥಳವಾಗಿದೆ.

ದಿ ರಿಟ್ಜ್-ಕಾರ್ಲ್ಟನ್ ಯಾಟ್ ಕಲೆಕ್ಷನ್
ಮೆಡಿಟರೇನಿಯನ್, ಕೆರಿಬಿಯನ್, ಆಗ್ನೇಯ ಏಷ್ಯಾ, ದಕ್ಷಿಣ ಅಮೆರಿಕದ ತಾಣಗಳಿಗೆ ಈ ಕ್ರೂಸ್ ಭೇಟಿ ನೀಡಲಿದೆ. ತುಂಬಾ ಸ್ಟೈಲಿಶ್ಗೆ ಉದಾಹರಣೆಯಂತಿರುವ ಈ ಹಡಗು ಫೈವ್ ಸ್ಟಾರ್ ರೆಸಾರ್ಟ್ಗಳು, ಇನ್ಫಿನಿಟಿ ಪೂಲ್ಗಳು, ವಿಶಾಲ ಸೂಟ್ಗಳು, ಉತ್ತಮ ಆಹಾರ ಸೌಲಭ್ಯವನ್ನು ಒದಗಿಸಲಿದೆ.

ಓಷಿಯಾನಿಯಾ ಮರೀನಾ
ಯೂರೋಪ್, ಏಷ್ಯಾ, ಓಷಿಯಾನಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾದ ತಾಣಗಳಿಗೆ ಈ ಹಡಗು ಭೇಟಿ ಕೊಡಲಿದೆ. ಓಷಿಯಾನಿಯಾ ಕ್ರೂಸ್ನ ಐಷಾರಾಮಿ ಕ್ರೂಸ್ ಹೊಟೆಲ್ ಅದ್ಭುತ ಒಳಾಂಗಣ, ಉತ್ತಮ ಭೋಜನ, ಯೂರೋಪಿಯನ್-ವಿನ್ಯಾಸದ ಸೂಟ್ಗಳನ್ನು ಹೊಂದಿದೆ. ಬಾಲಿ, ಸ್ಯಾಂಟೊರಿನಿ, ಮೊನಾಕೊದಂತಹ ಐಕಾನಿಕ್ ಬಂದರುಗಳಿಗೆ ಇದು ಭೇಟಿ ನೀಡುತ್ತದೆ.

ಕ್ವೀನ್ ಮೇರಿ 2
ಟ್ರಾನ್ಸ್ಅಟ್ಲಾಂಟಿಕ್, ನ್ಯೂ ಇಂಗ್ಲೆಂಡ್, ಕೆರಿಬಿಯನ್, ಮೆಡಿಟರೇನಿಯನ್ನಲ್ಲಿ ಈ ಹಡಗು ಸಂಚರಿಸಲಿದೆ. ಈ ಕ್ರೂಸ್ ಸಮುದ್ರದಲ್ಲಿ ಅತ್ಯಂತ ಐಷಾರಾಮಿ ಅನುಭವಗಳನ್ನು ಒದಗಿಸುತ್ತದೆ. ಇದರಲ್ಲಿ ರಾಯಲ್ ಕೋರ್ಟ್ ಥಿಯೇಟರ್, ಪ್ಲಾನೆಟೇರಿಯಂ, ಸೊಗಸಾದ ವಸತಿ ಮತ್ತು ವಿಶಿಷ್ಟ ಟ್ರಾನ್ಸ್ಅಟ್ಲಾಂಟಿಕ್ ಕ್ರಾಸಿಂಗ್ ಸೇರಿವೆ.

ರೀಗಲ್ ಪ್ರಿನ್ಸೆಸ್
ಅಲಾಸ್ಕಾ, ಕೆರಿಬಿಯನ್, ಮೆಡಿಟರೇನಿಯನ್, ಉತ್ತರ ಯೂರೋಪ್ಗೆ ಈ ಕ್ರೂಸ್ ಭೇಟಿ ನೀಡುತ್ತದೆ. ಈ ಕ್ರೂಸ್ ಹೆಚ್ಚು ಐಷಾರಾಮಿಯಾಗಿದ್ದು, ವರ್ಲ್ಡ್ಕ್ಲಾಸ್ ಭೋಜನ, ಅದ್ಭುತ ಸ್ಪಾ ಮತ್ತು ಪ್ರೈವೇಟ್ ಅಡ್ವೆಂಚ್ಗಳನ್ನು ಒಳಗೊಂಡಿದೆ. ಸಾಹಸ, ಐಷಾರಾಮಿ ಮತ್ತು ಸೊಬಗಿಗೆ ಈ ಹಡಗು ಹೆಸರುವಾಸಿ.

ದಿ ವರ್ಲ್ಡ್
ಜಗತ್ತಿನಾದ್ಯಂತ ಸಂಚರಿಸುವ ಈ ಕ್ರೂಸ್ ಪ್ರೀಮಿಯಂ ವಸತಿ, ಉನ್ನತ ಸೇವೆಗಳು, ಖಾಸಗಿ ಬಟ್ಲರ್, ರುಚಿಕರ ಆಹಾರದ ಅನುಭವ ನೀಡಲಿದೆ. ವಿಶ್ವದಾದ್ಯಂತ ಪ್ರಸಿದ್ಧ ಬಂದರುಗಳಿಗೆ ಭೇಟಿ ನೀಡುವ ಈ ಕ್ರೂಸ್ ದೀರ್ಘ ಕಾಲದ ರಜೆ ಕಳೆಯಲು ಸೂಕ್ತವಾಗಿದೆ.

ಸಿಲ್ವರ್ ಮ್ಯೂಸ್
ಅಲಾಸ್ಕಾ, ಮೆಡಿಟರೇನಿಯನ್, ದಕ್ಷಿಣ ಅಮೆರಿಕಾ, ಆರ್ಕ್ಟಿಕ್ಗೆ ಈ ಹಡಗು ಸಂಚರಿಸಲಿದೆ. ಈ ಕ್ರೂಸ್ ಸೊಗಸಾದ ಸೂಟ್ಗಳು, ಉತ್ತಮ ಭೋಜನ ಮತ್ತು ವಿಶ್ರಾಂತಿಗಾಗಿ ವಿನ್ಯಾಸಗೊಳಿಸಿದ ಸ್ಪಾಗೆ ಹೆಸರುವಾಸಿ. ಆರ್ಕ್ಟಿಕ್ನಂತಹ ಪ್ರಸಿದ್ಧ ತಾಣಗಳಿಗೆ ಪ್ರವಾಸ ಕೈಗೊಳ್ಳುವವರಿಗೆ ಉತ್ತಮ ಅನುಭವ ನೀಡುತ್ತದೆ.

ಸೀಬೋರ್ನ್ ಓವೇಶನ್
ಅಂಟಾರ್ಕ್ಟಿಕಾ, ಮೆಡಿಟರೇನಿಯನ್, ಅಲಾಸ್ಕಾ, ಆಗ್ನೇಯ ಏಷ್ಯಾದಲ್ಲಿ ಈ ಹಡಗು ಸಂಚರಿಸಲಿದೆ. ಈ ಕ್ರೂಸ್ ಐಷಾರಾಮಿ ಸೂಟ್ಗಳು, ವೈಯಕ್ತಿಕ ಸೇವೆ ಮತ್ತು ಉತ್ತಮ ಭೋಜನವನ್ನು ಒಳಗೊಂಡಿದೆ. ಉತ್ತಮ ವೈನ್ಗಳು ಮತ್ತು ಸೊಗಸಾದ ಲೌಂಜ್ನೊಂದಿಗೆ ಸಮುದ್ರದಲ್ಲಿ ಒಳ್ಳೆಯ ರಜೆಯ ಅನುಭ ನೀಡುತ್ತದೆ.

ಯೂರೋಪಾ 2
ಮೆಡಿಟರೇನಿಯನ್, ಫಾರ್ ಈಸ್ಟ್, ಉತ್ತರ ಯೂರೋಪ್, ಕೆರಿಬಿಯನ್ನಲ್ಲಿ ಸಂಚರಿಸುವ ಈ ಯೂರೋಪಾ 2 ಎಂಬ ಈ ಐಷಾರಾಮಿ ಹಡಗು ವಿಶಾಲ ವಸತಿ, ಉತ್ತಮ ಭೋಜನಕ್ಕೆ ಹೆಸರುವಾಸಿಯಾಗಿದೆ. ಕೆರಿಬಿಯನ್, ಫಾರ್ ಈಸ್ಟ್ನಂತಹ ಪ್ರಸಿದ್ಧ ತಾಣಗಳಿಗೆ ಪ್ರವಾಸಕ್ಕೆ ತೆರಳುವವರಿಗೆ ರೋಮಾಚನಕಾರಿ ಅನುಭವ ಒದಗಿಸುತ್ತದೆ.