ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯದ ತಗ್ಗಿದ ಮಳೆ ವಾತಾವರಣ; ಹಲವೆಡೆ ಚಳಿ ಪ್ರಾರಂಭ

ಕಳೆದ ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಹಿಂಗಾರು ಮಳೆಯ ತೀವ್ರತೆ ಇಂದಿನಿಂದ (ಅಕ್ಟೋಬರ್ 27) ಗಣನೀಯವಾಗಿ ಕಡಿಮೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತದ ಪ್ರಭಾವ ತಮಿಳುನಾಡು ಮತ್ತು ಆಂಧ್ರ ಕರಾವಳಿಯತ್ತ ಸರಿದಿರುವುದರಿಂದ ಕರ್ನಾಟಕದಲ್ಲಿ ಮಳೆಯ ಪ್ರಭಾವ ಕ್ಷೀಣಿಸಿದೆ.

ರಾಜ್ಯದ ತಗ್ಗಿದ ಮಳೆ ವಾತಾವರಣ; ಹಲವೆಡೆ ಚಳಿ ಪ್ರಾರಂಭ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 27, 2026 8:16 AM

ಬೆಂಗಳೂರು: ಕಳೆದ ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಹಿಂಗಾರು ಮಳೆಯ ತೀವ್ರತೆ ಇಂದಿನಿಂದ (ಅಕ್ಟೋಬರ್ 27) (Karnataka Weather) ಗಣನೀಯವಾಗಿ ಕಡಿಮೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತದ ಪ್ರಭಾವ ತಮಿಳುನಾಡು ಮತ್ತು ಆಂಧ್ರ ಕರಾವಳಿಯತ್ತ ಸರಿದಿರುವುದರಿಂದ ಕರ್ನಾಟಕದಲ್ಲಿ ಮಳೆಯ ಪ್ರಭಾವ ಕ್ಷೀಣಿಸಿದೆ. ಪರಿಣಾಮವಾಗಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ಒಣಹವೆ ಮುಂದುವರಿಯಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಇಂದು ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ತದನಂತರ ಅಕ್ಟೋಬರ್ 28 ರಿಂದ 31 ರವರೆಗೆ ಸಂಪೂರ್ಣ ಒಣಹವೆ ಇರಲಿದ್ದು, ಮುಂಜಾನೆ ಲಘು ಚಳಿಯ ವಾತಾವರಣ ಇರಲಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಸಂಪೂರ್ಣವಾಗಿ ತಗ್ಗಿದೆ. ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಲಿದ್ದು, ದಿನವಿಡೀ ಸಂಪೂರ್ಣ ಒಣಹವೆ ಮತ್ತು ಬಿಸಿಲು ಇರಲಿದೆ. ಮುಂಜಾನೆ ಮತ್ತು ರಾತ್ರಿಯ ಅವಧಿಯಲ್ಲಿ ಮಾತ್ರ ತಂಪಾದ ಗಾಳಿ ಬೀಸಲಿದೆ.

ಬರದ ಆತಂಕದ ನಡುವೆ ಹಾವೇರಿಗೆ ಮಳೆರಾಯನ ಸಿಂಚನ; ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದ ಗುಡುಗು ಸಹಿತ ಮಳೆ

ಬಂಗಾಳಕೊಲ್ಲಿ ಉಂಟಾಗಿರುವ ಚಂಡ ಮಾರುತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಇರಲಿದೆ. ನವೆಂಬರ್ 2 ಮತ್ತು 3 ರಂದು ಬೆಂಗಳೂರು ಸೇರಿದಂತೆ ಹಲವೆಡೆ ಸಾಧಾರಣದಿಂದ ಭಾರೀ ಮಳೆಯಾಗುವ ಹೆಚ್ಚಿನ ಸಂಭವನೀಯತೆ ಇದೆ. ನವೆಂಬರ್ ಆರಂಭದಿಂದ ದಿನದ ಆಕಾಶವು ಮೋಡದಿಂದ ಕೂಡಿರುವುದರಿಂದ ಗರಿಷ್ಠ ತಾಪಮಾನವು 27°C ಆಸುಪಾಸಿಗೆ ಇಳಿಯಲಿದೆ. ಇದರೊಂದಿಗೆ, ಮುಂಜಾನೆ ಮತ್ತು ರಾತ್ರಿಯ ಅವಧಿಯಲ್ಲಿ ಒಣಹವೆಯ ಶುಷ್ಕ ಗಾಳಿಯ ಕಾರಣದಿಂದಾಗಿ ತಾಪಮಾನವು 18°C ವರೆಗೆ ಕುಸಿಯಲಿದ್ದು, ಚಳಿಯ ತೀವ್ರತೆ ಲಘುವಾಗಿ ಹೆಚ್ಚಾಗಲಿದೆ