ಸಂಪರ್ಕ ಸೇತುವೆ!
ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಇಂತಹ ಅಡಿಕೆ ಮರದ ಕಾಂಡಗಳ ಸೇತುವೆ ಹೆಚ್ಚು ಪ್ರಚಲಿತವಿದೆ. ಹರಿಯುವ ನೀರಿನ ನಿನಾದದ ನಡುವೆ ತುಂತುರು ಮಳೆಯಲ್ಲಿ ತಲೆಯ ಮೇಲೆ ಕೊಪ್ಪಿ ಹಾಕಿಕೊಂಡೊ ಅಥವಾ ಕೊಡೆ ಹಿಡಿದುಕೊಂಡೋ ಇಂತಹ ಸೇತುವೆಯ ಮೇಲೆ ನಡೆದುಕೊಂಡು ದಾಟುವುದು ಹಿತಕರ ಹಾಗೂ ರೋಮಾಂಚಕಾರಿ ಅನುಭವ ನೀಡಬಲ್ಲದು.