Ranganath Gudimani Column: ತಾಳುವಿಕೆಗಿಂತ ಅನ್ಯ ತಪವಿಲ್ಲ
ಮದುವೆಯ ಸಮಯದಲ್ಲಿ ಸಪ್ತಪದಿ ತುಳಿದು ವಧುವಿಗೆ ವರನು ತಾಳಿ ಕಟ್ಟುವುದು ಯಾಕೆ? ಸಂಸಾರ ಸಾಗರದಲ್ಲಿ ತಾಳಿಕೊಂಡು ಒಂದಾಗಿ, ಚೆಂದಾಗಿ ಸುಖವಾಗಿ ಬಾಳಿ ಬದುಕಲು ತಾನೇ? ಭೂಮಿಗೆ ಬಿದ್ದ ಬೀಜವು ಮೊಳೆತು ಹುಲುಸಾಗಿ ಬೆಳೆಯಲು ಕಾಲಾವಕಾಶ ಬೇಕಲ್ಲವೇ? ಅದಕ್ಕಾ ಗಿಯೇ ಭರವಸೆಯ ಜತೆಗೆ ತಾಳ್ಮೆಯಿಂದ ಕಾಯಬೇಕು.
-
ರಂಗನಾಥ್ ಗುಡಿಮನಿ
ಮನುಷ್ಯನ ಹತ್ತು ಹಲವು ಗುಣಗಳಲ್ಲಿ ತಾಳ್ಮೆಯು ಶ್ರೇಷ್ಠವಾದ ಗುಣ. ಇದು ಪ್ರತಿಯೊಬ್ಬರ ಬದುಕಿನಲ್ಲಿ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ತಪಸ್ಸಿಗಿಂತ ದೊಡ್ಡ ಪ್ರತಿಫಲವನ್ನು ನೀಡುತ್ತದೆ. ಅವಸರವೇ ಅಪಘಾತಕ್ಕೆ ಕಾರಣ ಅಲ್ಲವೇ? ಯಾವುದಕ್ಕೂ, ಯಾವುದ ರಲ್ಲಿಯೂ ಅವಸರ ಮಾಡದೇ ಸಮಾಧಾನದಿಂದ, ತದೇಕಚಿತ್ತದಿಂದ ಕೆಲಸವನ್ನು ಕೈ ಗೊಂಡರೆ ಸಫಲತೆಯು ಕಟ್ಟಿಟ್ಟಬುತ್ತಿ.
ನಮ್ಮಲ್ಲಿ ತಾಳ್ಮೆಯು ಇದ್ದರೆ ಮನಸ್ಸಿನಲ್ಲಿ ಎಣಿಸಿದ ವಿಚಾರಗಳೆಲ್ಲವೂ ಕಾರ್ಯರೂಪಕ್ಕೆ ಬಂದು ಗೆಲುವು ಸಲೀಸಾಗಿ ದಕ್ಕುವುದು. ‘ಕಡಲಿಂದ ನೀರನು ತಂದು, ಮಳೆಯಂತೆ ಭೂಮಿಗೆ ಸುರಿವ’ ಅದಮ್ಯ ಉತ್ಸಾಹದ ಚಿಲುಮೆಯು ತನ್ನಿಂತಾನೇ ನಮ್ಮೊಳಗೆ ಜಿನುಗುವುದು.
ತಾಳ್ಮೆಯು ಸದ್ಯಕ್ಕೆ ಕಹಿ ಅನುಭವ ನೀಡಿದರೂ ಮುಂದೊಂದು ದಿನ ಸಿಹಿಯನ್ನು ನೀಡುವು ದರಲ್ಲಿ ಸಂದೇಹವಿಲ್ಲ. ಬದುಕಿನಲ್ಲಿ ಇದೊಂದು ಸಿಹಿ ಸಂಕಟದಂತೆ. ಇದನ್ನು ಅನುಭವಿಸಿದವರಿಗೆ, ರೂಢಿಸಿಕೊಂಡವರಿಗೆ ಮಾತ್ರವೇ ಅದರ ರುಚಿ ಗೊತ್ತು.
ಇದನ್ನೂ ಓದಿ: Maya Balachandra Column: ದೇವರು ಮೇಲಿದ್ದಾನೆಯೇ? ನಮ್ಮೊಳಗಿದ್ದಾನೆಯೇ ?
ಮದುವೆಯ ಸಮಯದಲ್ಲಿ ಸಪ್ತಪದಿ ತುಳಿದು ವಧುವಿಗೆ ವರನು ತಾಳಿ ಕಟ್ಟುವುದು ಯಾಕೆ? ಸಂಸಾರ ಸಾಗರದಲ್ಲಿ ತಾಳಿಕೊಂಡು ಒಂದಾಗಿ, ಚೆಂದಾಗಿ ಸುಖವಾಗಿ ಬಾಳಿ ಬದುಕಲು ತಾನೇ? ಭೂಮಿಗೆ ಬಿದ್ದ ಬೀಜವು ಮೊಳೆತು ಹುಲುಸಾಗಿ ಬೆಳೆಯಲು ಕಾಲಾವಕಾಶ ಬೇಕಲ್ಲವೇ? ಅದಕ್ಕಾಗಿಯೇ ಭರವಸೆಯ ಜತೆಗೆ ತಾಳ್ಮೆಯಿಂದ ಕಾಯಬೇಕು. ಆಗಲೇ ಒಳ್ಳೆಯ ಬೆಳೆ ಬರಲು ಸಾಧ್ಯ. ಮರದಲ್ಲಿನ ಹಣ್ಣುಗಳು ಚೆನ್ನಾಗಿ ಮಾಗುವವರೆಗೂ ನಾವು ತಾಳ್ಮೆಯಿಂದ ಕಾಯಬೇಕು.
ಅಂದಾಗಲೇ ಹಣ್ಣಿಗೊಂದು ರುಚಿ, ಬೆಲೆ ಬರಲು ಸಾಧ್ಯ. ಎಲ್ಲದರಲ್ಲಿಯೂ, ಎಲ್ಲದ ರೊಂದಿಗೂ ತಾಳ್ಮೆಯಿಂದ ವರ್ತಿಸುವವನು ಬದುಕಿನಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಇಂಥ ತಾಳ್ಮೆಯಿಂದಲೇ ವೈಚಾರಿಕ ಪ್ರಜ್ಞೆ, ಸಂಶೋಧನಾ ಪ್ರವೃತ್ತಿಯು ನಮಗೆ ಬಳುವಳಿ ಯಾಗಿ ಬರುವುದು.
ತಾಳ್ಮೆಯಿಂದ ಅಸಾಧ್ಯವೆನಿಸಿದ್ದೆಲ್ಲವೂ ಸಾಧ್ಯವೆನಿಸುತ್ತವೆ. ತಾಳ್ಮೆಯು ನಮಗೆ ಒಳಿತನ್ನು ಮಾಡುತ್ತದೆ. ಅದೇ ಕೋಪವು ಕೆಡುಕನ್ನು ಉಂಟುಮಾಡುವುದು. ಕೋಪದ ಕೈಗೆ ಯಾವತ್ತೂ ಬುದ್ಧಿಯನ್ನು ಕೊಡಬಾರದು. ಸಮಸ್ಯೆ, ಸಂಕಷ್ಟಗಳು ಬಂದೊದಗಿದಾಗ ಆತುರಪಡದೇ ತಾಳ್ಮೆಯಿಂದ ಕಾಯುವವನು ಬದುಕಿನಲ್ಲಿ ಯಶಸ್ವಿಯಾಗುತ್ತಾನೆ, ತುಂಬಾ ಎತ್ತರಕ್ಕೆ ಬೆಳೆಯುತ್ತಾನೆ.
ಅದಕ್ಕೆಂದೇ ವಾದಿ ರಾಜರು, ‘ತಾಳುವಿಕೆಗಿಂತ ಅನ್ಯ ತಪವೂ ಇಲ್ಲ’ ಎಂದು ಹೇಳಿದ್ದಾರೆ. ಬದುಕಿನ ಬವಣೆಗಳಿಂದ ಕಂಗೆಟ್ಟಾಗ ತಾಳ್ಮೆಯು ತುಂಬಾ ಅತ್ಯವಶ್ಯಕ. ಇಲ್ಲದೇ ಹೋದರೆ ಬದುಕೆಲ್ಲವೂ ಮಣ್ಣು ಪಾಲಾಗಿ, ಸೂತ್ರ ಹರಿದ ಗಾಳಿಪಟದಂತಾಗುವುದು. ತಾಳ್ಮೆಯಿಂದ ಇದ್ದರೆ ಕಠಿಣ ಸವಾಲುಗಳನ್ನು ಎದುರಿಸುವಾಗ ಎಲ್ಲವೂ ನಮ್ಮ ಪರವಾಗಿಯೇ ಬದಲಾಗು ವುದು. ಯಾವುದೇ ಸಮಯ-ಸಂದರ್ಭಗಳಲ್ಲಿ ವಿಚಲಿತರಾಗದೇ ಮುನ್ನಡೆದರೆ ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಫಲ ದೊರಕುವುದು.