Mohan Vishwa Column: ಬ್ರಿಟಿಷರನ್ನು ಸೋಲಿಸಿದ್ದ ಅಫ್ಘಾನಿಸ್ತಾನದ ಸುತ್ತಮುತ್ತ
ಇಂಥ ದೇಶದ ಮೇಲೆ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರ ಕಣ್ಣು ಬಿತ್ತು. ಹತ್ತೊಂಬತ್ತನೆಯ ಶತಮಾನ ದಲ್ಲಿ ಜಗತ್ತಿನಾದ್ಯಂತ ತನ್ನ ಸಾಮ್ರಾಜ್ಯಶಾಹಿ ವಿಸ್ತರಣಾ ಮನೋಭಾವದೊಂದಿಗೆ ಸಿಕ್ಕ ಸಿಕ್ಕ ದೇಶ ಗಳನ್ನು ಆಕ್ರಮಿಸಿಕೊಂಡು ಬಂದಿದ್ದ ಬ್ರಿಟಿಷರಿಗೆ, ಭಾರತದ ಪಕ್ಕದಲ್ಲಿದ್ದ ಈ ದೇಶದ ಮೇಲೆ ಕಣ್ಣು ಬಿದ್ದಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಭಾರತವು, ಇಂದಿನ ಪಾಕಿಸ್ತಾನದ ವರೆಗೂ ಹಬ್ಬಿತ್ತು. ಹಾಗಾಗಿ ಆಫ್ಘನ್ನರ ಮೇಲೆ ಬ್ರಿಟಿಷರ ಕಣ್ಣು ಬಿತ್ತು.

-

ವೀಕೆಂಡ್ ವಿತ್ ಮೋಹನ್
ಅಫ್ಘಾನಿಸ್ತಾನ ಎಂದಾಕ್ಷಣ ನೆನಪಾಗುವುದು ಯುದ್ಧ, ಉಗ್ರಗಾಮಿಗಳು, ಬಡತನ, ಅಲ್ಲಿನ ಬೆಟ್ಟ-ಗುಡ್ಡ, ಅತ್ಯಂತ ಹಿಂದುಳಿದ ಮುಸ್ಲಿಂ ಜನಾಂಗ, ಹೆಚ್ಚಿನ ಅವಿದ್ಯಾವಂತರಿರುವ ದೇಶ. ಇಂಥ ಬಡದೇಶದ ಮೇಲೆ ಕಳೆದ ಇನ್ನೂರು ವರ್ಷಗಳಲ್ಲಿ ಬ್ರಿಟನ್, ರಷ್ಯಾ, ಅಮೆರಿಕದಂಥ ಜಗತ್ತಿನ ಸೂಪರ್ ಪವರ್ ದೇಶಗಳು ಮೇಲಿಂದ ಮೇಲೆ ಯುದ್ಧ ಮಾಡಿವೆ. ಯುದ್ಧ ಮಾಡಿ ಕೊನೆಗೆ ಕೈ ಸುಟ್ಟುಕೊಂಡಿವೆ.
ಅಮೆರಿಕ ದೇಶವಂತೂ ಒಸಾಮಾ ಬಿನ್ ಲಾಡೆನ್‌ನ ಹುಡುಕಾಟದಲ್ಲಿ ಮಿಲಿಟರಿ ಕಾರ್ಯಾಚರಣೆ ಮೇಲೆ ಖರ್ಚು ಮಾಡಿದ ಹಣದಿಂದಾಗಿ ಸಾಲದ ಸುಳಿಗೆ ಸಿಲುಕಿತ್ತು. ಸತತವಾಗಿ ಎಂಟು ವರ್ಷಗಳ ಕಾಲ ಆಫ್ಘನ್ ನೆಲದಲ್ಲಿ ಬೇರೂರಿತ್ತು ಅಮೆರಿಕ. ನರಿಬುದ್ಧಿಯ ದೇಶವಾದ ಪಾಕಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ಸಿಕ್ಕಿಬಿದ್ದ.
೧೮೩೬ರವರೆಗೂ ಅಫ್ಘಾನಿಸ್ತಾನದ ಮೇಲೆ ಹೊರಗಿನಿಂದ ದಾಳಿಗಳು ಆಗಿರಲಿಲ್ಲ. ಅವರೂ ಕಾಲು ಕೆರೆದುಕೊಂಡು ಯಾರ ತಂಟೆಗೂ ಹೋಗಿರಲಿಲ್ಲ. ಕಟ್ಟರ್ ಮುಸ್ಲಿಂ ಸಂಪ್ರದಾಯಗಳ ಆಚರಣೆಗಳ ಮೂಲಕ ಷರಿಯಾ ಕಾನೂನಿನೊಂದಿಗೆ ಆಡಳಿತ ನಡೆಸುತ್ತಿದ್ದಂಥ ದೇಶ ಅಫ್ಘಾನಿಸ್ತಾನ.
ಇಂಥ ದೇಶದ ಮೇಲೆ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರ ಕಣ್ಣು ಬಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ತನ್ನ ಸಾಮ್ರಾಜ್ಯಶಾಹಿ ವಿಸ್ತರಣಾ ಮನೋಭಾವದೊಂದಿಗೆ ಸಿಕ್ಕ ಸಿಕ್ಕ ದೇಶಗಳನ್ನು ಆಕ್ರಮಿಸಿಕೊಂಡು ಬಂದಿದ್ದ ಬ್ರಿಟಿಷರಿಗೆ, ಭಾರತದ ಪಕ್ಕದಲ್ಲಿದ್ದ ಈ ದೇಶದ ಮೇಲೆ ಕಣ್ಣು ಬಿದ್ದಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಭಾರತವು, ಇಂದಿನ ಪಾಕಿಸ್ತಾನದವರೆಗೂ ಹಬ್ಬಿತ್ತು. ಹಾಗಾಗಿ ಆಫ್ಘನ್ನರ ಮೇಲೆ ಬ್ರಿಟಿಷರ ಕಣ್ಣು ಬಿತ್ತು. ಅಫ್ಘಾನಿಸ್ತಾನ ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟನ್ ಹಾಗೂ ಕಮ್ಯುನಿಸ್ಟ್ ದೇಶ ರಷ್ಯಾಕ್ಕೆ ಭೌಗೋಳಿಕವಾಗಿ ‘ಸ್ಟ್ರಾಟೆಜಿಕ್ ದೇಶ’ವಾಗಿತ್ತು.
ಇದನ್ನೂ ಓದಿ: Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ
ರಷ್ಯನ್ನರಿಗೆ, ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡರೆ ಬ್ರಿಟಿಷ್ ಆಡಳಿತದ ಬಹುದೊಡ್ಡ ದೇಶವಾಗಿದ್ದ ಭಾರತವನ್ನು ತಲುಪುವುದು ಸುಲಭವಾಗುತ್ತದೆಯೆಂಬ ಉದ್ದೇಶದಿಂದ ಅಫ್ಘಾನಿ ಸ್ತಾನದ ಮೇಲೆ ಕಣ್ಣು ಬಿದ್ದಿತ್ತು. ಆಗಿನ ರಷ್ಯಾ ಈಗಿನ ರಷ್ಯಾಗಿಂತಲೂ ದೊಡ್ಡದಾಗಿತ್ತು, ‘ಯುಎಸ್‌ಎಸ್‌ಆರ್’ ಒಕ್ಕೂಟದ ಅಡಿಯಲ್ಲಿ ಈಗಿನ ಹಲವಾರು ದೇಶಗಳಿದ್ದವು. ಬ್ರಿಟನ್ ಹಾಗೂ ರಷ್ಯಾ ಮಧ್ಯೆ ಅಫ್ಘಾನಿಸ್ತಾನ ಸಿಕ್ಕಿಹಾಕಿಕೊಂಡಿತ್ತು.
ಇತ್ತ ಬ್ರಿಟಿಷರು, ಆಫ್ಘನ್ ದೇಶವನ್ನು ತಾವು ಆಕ್ರಮಿಸಿಕೊಂಡರೆ ರಷ್ಯಾ ಭಾರತದ ಕಡೆ ಬರುವುದನ್ನು ತಡೆಯಬಹುದೆಂಬ ಉದ್ದೇಶದಿಂದ ೧೮೩೬ರಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿ ಕೊಳ್ಳಲು ನಿರ್ಧರಿಸಿದರು. ಆದರೆ ಅಫ್ಘಾನಿಸ್ತಾನವು ಕೇವಲ ಗುಡ್ಡಗಾಡುಗಳಿಂದ ತುಂಬಿದ ದೇಶ ವಾದ್ದರಿಂದ ಅಲ್ಲಿನ ವಾಸ್ತವ ಪರಿಸ್ಥಿತಿಗಳ ಬಗ್ಗೆ ಅವಲೋಕನವಾಗಬೇಕಿತ್ತು. ಅಲ್ಲಿನ ಪರಿಸ್ಥಿತಿ ಯನ್ನು ತಿಳಿಯಲು ಬ್ರಿಟಿಷ್ ಪರಿಶೋಧಕನಾಗಿದ್ದ ಅಲೆಕ್ಸಾಂಡರ್ ಬರ್ನ್ಸ್‌ನನ್ನು ಪತ್ತೇದಾರನ ನ್ನಾಗಿ ಕಳುಹಿಸಲಾಯಿತು.
ತಮ್ಮ ಧರ್ಮಕ್ಕೆ ಕೊಂಚ ಹಾನಿಯಾದರೆ ಸಾಯಿಸಲು ಸಿದ್ಧವಿರುವ ಮುಸಲ್ಮಾನ್ ದೇಶಕ್ಕೆ ಅವನನ್ನು ಕಳುಹಿಸಲಾಗಿತ್ತು. ಆತ ಸುಮಾರು ಹನ್ನೆರಡು ತಿಂಗಳುಗಳ ಕಾಲ ಭಾರತದಿಂದ, ಕಾಬುಲ್ ಮೂಲಕ ಉತ್ತರ ಅಫ್ಘಾನಿಸ್ತಾನದ ಬುಕಾರದವರೆಗೂ ಪ್ರಯಾಣ ಮಾಡಿದ. ತನ್ನ ಪ್ರಯಾಣ ಮುಗಿಸಿ ಬಂದ ನಂತರ ಈತ ‘ಟ್ರಾವೆಲ್ ಟು ಬುಕಾರ್’ ಎಂಬ ಪುಸ್ತಕವನ್ನು ಬರೆದ. ಈತ ತನ್ನ ಪುಸ್ತಕದಲ್ಲಿ ಆಫ್ಘನ್ನಿನ ಸಂಸ್ಕೃತಿ, ಅಲ್ಲಿನ ಜನರ ಉಡುಗೆ-ತೊಡುಗೆಗಳು, ಅಲ್ಲಿನ ಸುಂದರ ಉದ್ಯಾನಗಳು, ಆಚರಣೆಗಳ ಬಗ್ಗೆ ಸುಂದರವಾಗಿ ಬರೆದ. ಬ್ರಿಟಿಷ್ ಅಧಿಕಾರಿಗಳ ಮುಂದೆ ಅಫ್ಘಾನಿಸ್ತಾನದ ಬಗ್ಗೆ ಒಂದು ಒಳ್ಳೆಯ ಚಿತ್ರಣವನ್ನು ಮುಂದಿಟ್ಟ.
ಅಲ್ಲಿನ ಜನರು ಮುಗ್ಧರು, ಏನೂ ಮಾಡುವುದಿಲ್ಲ, ತುಂಬಾ ಹಿಂದುಳಿದವರು, ಅವರನ್ನು ಸುಮ್ಮನೆ ಬಿಟ್ಟರೆ ಉತ್ತಮವೆಂದು ಹೇಳಿದ. ಅಲೆಕ್ಸಾಂಡರ್ ಬರ್ನ್ಸ್ ಬರೆದ ಪುಸ್ತಕವನ್ನು ಓದಿದ ನಂತರ ರಷ್ಯನ್ನರೂ ತಮ್ಮ ಪತ್ತೇದಾರನನ್ನು ಕಳುಹಿಸಿದರು. ಈ ವಿಚಾರವು, ಬ್ರಿಟಿಷರು ಅಫ್ಘಾನಿಸ್ತಾನದ ಮೇಲೆ ಬಹುಬೇಗ ಮುಗಿಬೀಳಲು ಕಾರಣವಾಯಿತು.
ಅಲೆಕ್ಸಾಂಡರ್ ಬರ್ನ್ಸ್ ಹೇಳಿದ ಮಾತನ್ನು ಬ್ರಿಟಿಷರು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೆ ಅಫ್ಘಾನಿಸ್ತಾನ ಯಾರೂ ಮುಟ್ಟದ ಕೇವಲ ಒಂದು ಬರಡು ಭೂಮಿಯಾಗಿ ಕಂಡಿತು. ಆ ದೇಶವನ್ನು ರಷ್ಯನ್ನರು ಆಕ್ರಮಿಸಿಕೊಳ್ಳುತ್ತಾರೆಂಬ ಆತಂಕದೊಂದಿಗೆ, ಅಲ್ಲಿ ತಮ್ಮ ಆಡಳಿತ ನೀತಿಯನ್ನು ಸ್ಥಾಪಿಸಬೇಕೆಂದು ಅವರು ನಿರ್ಧರಿಸಿದ್ದರು.
ಬ್ರಿಟಿಷರು ಎಂದಿನಂತೆ ತಮ್ಮ ತಂತ್ರಗಾರಿಕೆಯನ್ನು ಹೆಣೆಯಲು ಪ್ರಾರಂಭಿಸಿದರು. ಅಫ್ಘಾನಿಸ್ತಾನದ ರಾಜ ದೋಸ್ತ್ ಮೊಹಮ್ಮದ್‌ನನ್ನು ಕೆಳಗಿಳಿಸಿ ಭಾರತದಲ್ಲಿ ತಾವು ಹೇಳಿದಂತೆ ಕೇಳುತ್ತಿದ್ದ ಶಾಹ್ ಶುಜಾನನ್ನು ಅಫ್ಘಾನಿಸ್ತಾನದಲ್ಲಿ ಪಟ್ಟಕ್ಕೇರಿಸಲು ಸಿದ್ಧತೆ ನಡೆಸಿದರು. ಯಥಾಪ್ರಕಾರ ದೋಸ್ತ್ ಮೊಹಮ್ಮದ್‌ನ ಮೇಲೆ ರಾಜದ್ರೋಹದ ಆರೋಪ ಮಾಡಲಾಯಿತು.
೧೮೩೬ರಲ್ಲಿ ಸುಮಾರು ಇಪ್ಪತ್ತು ಸಾವಿರ ಬಲದ ಸೈನ್ಯದೊಂದಿಗೆ ಬ್ರಿಟಿಷರು ಕಾಬೂಲ್ ಕಡೆಗೆ ಹೊರಟರು. ಎಂದಿನಂತೆ ಕೆಂಪು ಕೋಟುಗಳು, ಕುದುರೆಗಳು, ಆನೆಗಳನ್ನು ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಅಫ್ಘಾನಿಸ್ತಾನದ ಒಳಗೆ ಬಂದರು. ವಿಚಿತ್ರವೆಂದರೆ ಅಫ್ಘಾನಿನ ಜನರಿಗೆ ತಮ್ಮ ಊರಿನಲ್ಲಿ ಏನಾಗುತ್ತಿದೆಯೆಂದು ತಿಳಿಯಲಿಲ್ಲ.
ಎಲ್ಲರೂ ಸುಮ್ಮನೆ ನೋಡುತ್ತಿದ್ದರು. ಅವರಲ್ಲಿ ಕೇವಲ ಮೌನವಿತ್ತು. ಹೀಗೆ ಸುಮಾರು ಮೂರು ವರ್ಷ ಕಳೆಯಿತು. ನಂತರ ಬ್ರಿಟಿಷರು ನಿಧಾನವಾಗಿ ತಮ್ಮ ಕುಟುಂಬ ಸದಸ್ಯರನ್ನು ಅಫ್ಘಾನಿ ಸ್ತಾನಕ್ಕೆ ಕರೆ ತರಲು ಪ್ರಾರಂಭಿಸಿದರು. ಯೂರೋಪಿನ ಬಳಿಯ ಬಣ್ಣದ ಹೆಂಗಸರು ಮತ್ತು ಪುಟ್ಟ ಮಕ್ಕಳು ಕಾಬುಲ್ ಗೆ ಬರಲು ಪ್ರಾರಂಭಿಸಿದರು. ಅಲ್ಲಿಯವರೆಗೂ ಸುಮ್ಮನಿದ್ದ ಆಫ್ಘನ್ನರಿಗೆ ಬ್ರಿಟಿಷ್ ಕುಟುಂಬಗಳು ಬರಲು ಪ್ರಾರಂಭವಾದ ನಂತರ, ಬ್ರಿಟಿಷರ ತಂತ್ರಗಾರಿಕೆ ಅರ್ಥವಾಯಿತು. 1841ರ ಹೊತ್ತಿಗೆ ರಾಜ ಶಾಹ್ ಶುಜಾ ಬ್ರಿಟಿಷರ ಆಟದ ಗೊಂಬೆಯೆಂದು ತಿಳಿಯಿತು.
ಅವನು ಅಫ್ಘಾನಿಸ್ತಾನದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಲು ಬಂದಿದ್ದಾನೆಂಬ ವಿಷಯದ ಅರಿವಾಯಿತು. ಬ್ರಿಟಿಷರು ತಮ್ಮ ಹೆಂಗಸರ ಮೇಲೆ ಕಣ್ಣು ಹಾಕುತ್ತಿದ್ದಾರೆಂಬ ವದಂತಿಗಳು ನಿಧಾನವಾಗಿ ಅಫ್ಘಾನಿಸ್ತಾನದಾದ್ಯಂತ ಹರಡಲು ಶುರುವಾಯಿತು. ಆಗ ಆಫ್ಘನ್ನರಿಗೆ ಬ್ರಿಟಿಷರ ಮೇಲೆ ಮತ್ತಷ್ಟು ಕೋಪ ಬಂದಿತ್ತು.
ಬ್ರಿಟಿಷರು ನಮ್ಮ ಸಂಸ್ಕೃತಿಯನ್ನು ಹಾಳು ಮಾಡಲು ಬಂದಿದ್ದಾರೆಂದು ತಿಳಿದು ಅವರ ವಿರುದ್ಧ ತಿರುಗಿ ಬೀಳಲು ನಿರ್ಧರಿಸಿದರು. ಇತ್ತ ದೋಸ್ತ್ ಮೊಹಮ್ಮದ್, ಅಫ್ಘಾನಿಸ್ತಾನ್ ದೇಶದಾದ್ಯಂತ ಅಲ್ಲಿನ ಜನರು ಬ್ರಿಟಿಷರ ವಿರುದ್ಧ ದಂಗೆಯೇಳುವಂತೆ ಮೊಟ್ಟ ಮೊದಲ ಬಾರಿಗೆ ಜಿಹಾದ್‌ಗೆ ಕರೆ ನೀಡಿದನು.
1841ರ ನವೆಂಬರ್ ರಾತ್ರಿಯಲ್ಲಿ ಅಲೆಕ್ಸಾಂಡರ್ ಬರ್ನ್ಸ್ ಕಾಬುಲ್‌ನಲ್ಲಿ ತನ್ನ ಮನೆಗೆ ಬಂದಾಗ, ತಾನು ಪ್ರವಾಸ ಮಾಡಿದ್ದಾಗ ಕಾಣದ ಅಫ್ಘಾನಿಸ್ತಾನಿಯರನ್ನು ಕಂಡನು. ಆತನನ್ನು ಕೊಲ್ಲಲು ನೂರಾರು ಜನ ಅವನ ಮನೆ ಮುಂದೆ ಬಂದು ನಿಂತಿದ್ದರು. ಕಷ್ಟಪಟ್ಟು ಅವರಿಂದ ತಪ್ಪಿಸಿಕೊಂಡು ಮನೆಯೊಳಗೆ ಓಡಿಬಂದು, ಬ್ರಿಟಿಷರಿಗೆ ವಿಷಯ ಮುಟ್ಟಿಸಿ ತ್ವರಿತವಾಗಿ ತನಗೆ ದೊಡ್ಡದೊಂದು ಬ್ರಿಟಿಷ್ ಸೈನ್ಯದ ಅಗತ್ಯವಿದೆಯೆಂದು ಹೇಳಿದ. ಆದರೆ ಬ್ರಿಟಿಷ್ ಸೈನ್ಯ ಬರುವ ಮುನ್ನ ಆತನನ್ನು ಅಫ್ಘನಿಗಳು ಕೊಚ್ಚಿ ಕೊಂದಿದ್ದರು, ಅವನ ತಲೆಯನ್ನು ಊರ ಮುಂದಿನ ಕಂಬವೊಂದಕ್ಕೆ ನೇತು ಹಾಕಿದ್ದರು.
ಮುಂದಿನ ಮೂರು ದಿನಗಳಲ್ಲಿ ಬ್ರಿಟಿಷರ ಮೇಲೆ ಮುಗಿಬಿದ್ದ ಅಫ್ಘನಿಗಳು, ಸಿಕ್ಕ ಸಿಕ್ಕವರನ್ನು ಕೊಂದರು. ಅವರ ಆಕ್ರಮಣದಿಂದ ಬೆಚ್ಚಿದ ಬ್ರಿಟಿಷರು ಅಫ್ಘನಿಗಳ ಮುಂದೆ ಶರಣಾಗತಿಯಾಗಲು ನಿರ್ಧರಿಸಿದರು. ಮಧ್ಯ ಏಷ್ಯಾ ಖಂಡದಲ್ಲಿ ಸೋಲನ್ನೇ ಕಾಣದ ಬ್ರಿಟಿಷರಿಗೆ ಅಫ್ಘನಿಗಳು ಸೋಲಿನ ರುಚಿ ತೋರಿಸಿದ್ದರು. ಬ್ರಿಟಿಷರು ಶರಣಾಗಿ ತಮ್ಮ ಕುಟುಂಬ ಸದಸ್ಯರೊಂದಿಗೆ ವಾಪಸ್ ಆಗಬೇಕಿತ್ತು. ಆದರೆ ಅಫ್ಘನಿಗಳು ಬ್ರಿಟಿಷರನ್ನು ಬಿಟ್ಟು ಕಳುಹಿಸಲು ಷರತ್ತೊಂದನ್ನು ಹಾಕಿದರು. ಬ್ರಿಟಿಷರು ತಾವು ತಂದಿರುವ ಎಲ್ಲಾ ಆಯುಧಗಳನ್ನು ಅಲ್ಲಿಯೇ ಬಿಟ್ಟರೆ ಮಾತ್ರ ಅವರಿಗೆ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಡುತ್ತೇವೆಂದು ಹೇಳಿದರು.
ವಿಧಿಯಿಲ್ಲದೆ ಬ್ರಿಟಿಷರು ಅವರ ಮಾತು ಕೇಳಬೇಕಾಯಿತು. ತಮ್ಮ ಕುಟುಂಬಗಳೊಂದಿಗೆ ಬ್ರಿಟಿಷರು ಒಂಬತ್ತು ದಿನಗಳ ಕಾಲ ತಮ್ಮ ಆಡಳಿತದಲ್ಲಿದ್ದ ಜಲಾಲಾಬಾದ್ ಕಡೆಗೆ ಹೊರಟರು. ಅಫ್ಘಾನಿಸ್ತಾನದ ದೊಡ್ಡ ದೊಡ್ಡ ಬೆಟ್ಟಗಳ ಕಣಿವೆಗಳ ನಡುವೆ ಮೂರು ಅಡಿಯಷ್ಟಿದ್ದ ಹಿಮದ ಮೇಲೆ ಬ್ರಿಟಿಷರು ಸಾಗುತ್ತಿದ್ದರು.
ಅವರಿಗೆ ತಮ್ಮ ಪ್ರಾಣ ಉಳಿಸಿಕೊಂಡು ತಮ್ಮ ತಮ್ಮ ನೆಲೆಗಳಿಗೆ ವಾಪಸ್ ಹೋದರೆ ಸಾಕಾಗಿತ್ತು. ಆಫ್ಘನ್ನರಿಗೆ ಬ್ರಿಟಿಷರ ಮೇಲೆ ನಂಬಿಕೆಯಿರಲಿಲ್ಲ, ಜೀವವನ್ನು ಉಳಿಸಿಕೊಳ್ಳಲು ಭಯದ ವಾತಾವರಣದಲ್ಲಿ ಸಾಗುತ್ತಿರುವಾಗ ಬ್ರಿಟಿಷರ ಮೇಲೆ ಆಫ್ಘನ್ನರು ಮನಬಂದಂತೆ ಗುಂಡು ಹಾರಿಸಿದ್ದರು. ಗುಡ್ಡಗಳ ಮೇಲೆ ಕುಳಿತು ಕಣಿವೆಯ ಎರಡೂ ಕಡೆಯಿಂದಲೂ ಬ್ರಿಟಿಷರ ಮೇಲೆ ಸಿಕ್ಕ ಸಿಕ್ಕಂತೆ ದಾಳಿ ಮಾಡಿದರು.
ಐದು ಮೈಲಿಗಳವರೆಗೂ ಸತತವಾಗಿ ಬ್ರಿಟಿಷರ ವಿರುದ್ಧ ದಾಳಿ ನಡೆಸಿದ್ದರು. ಅಫ್ಘನಿಗಳ ಕೈಗೆ ಸಿಕ್ಕ ಬ್ರಿಟಿಷರು ಏನೂ ಮಾಡದ ಪರಿಸ್ಥಿತಿಯಲ್ಲಿದ್ದರು. ಅಫ್ಘಾನಿಸ್ತಾನದಲ್ಲಿ ಸುಮಾರು ಇಪ್ಪತ್ತು ಸಾವಿರದಷ್ಟು ಬುಡಕಟ್ಟು ಜನಾಂಗವಿರುವ ಹಳ್ಳಿಗಳಿವೆ. ಇವರೆಲ್ಲರೂ ಬೆಟ್ಟ ಗುಡ್ಡಗಳ ಮೇಲೆ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಇಂಥವರ ಕೈಗೆ ಸಿಕ್ಕ ಬ್ರಿಟಿಷರ ಪರಿಸ್ಥಿತಿ ಹೇಗಿರಬೇಕು ಯೋಚಿಸಿ ನೋಡಿ. ಅಫ್ಘಾನಿಸ್ತಾನದ ಜಿಹಾದಿಗಳು ಶೇ.90ರಷ್ಟು ಬ್ರಿಟಿಷ್ ಸೈನ್ಯವನ್ನು ಕೊಂದು ಮುಗಿಸಿದ್ದರು.
17000 ಬ್ರಿಟಿಷರು ಕಾಬುಲ್ ನಗರದಿಂದ ಹೊರಟಿದ್ದರು. ಆದರೆ ಕೊನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಜೀವಂತವಾಗಿ ಜಲಾಲಾಬಾದ್ ತಲುಪಿದ್ದ. ಹತ್ತೊಂಬತ್ತನೆಯ ಶತಮಾನದಲ್ಲಿ ಅತ್ಯಾಧುನಿಕ ಸೈನ್ಯವೆಂದು ಕರೆಯುತ್ತಿದ್ದ ಬ್ರಿಟಿಷ್ ಸೈನ್ಯವನ್ನು ಅಫ್ಘಾನಿಸ್ತಾನದವರು ಸರ್ವನಾಶಗೊಳಿಸಿದ್ದರು.
ಅಫ್ಘಾನಿಸ್ತಾನದ ವಿರುದ್ಧದ ಸೋಲು ಅಂದಿನ ಕಾಲಘಟ್ಟದಲ್ಲಿ ಬ್ರಿಟಿಷರಿಗೆ ಜಗತ್ತಿನದ ದೊಡ್ಡ ಅವಮಾನವಾಗಿತ್ತು. ಕಾಬುಲ್‌ನಲ್ಲಿದ್ದ ಬ್ರಿಟಿಷ್ ಅಧಿಕಾರಿಯೊಬ್ಬನ ಹೆಂಡತಿಯಾಗಿದ್ದ ಸೈಲ್ ತನ್ನ ಡೈರಿಯಲ್ಲಿ ಬ್ರಿಟಿಷ್ ಹಾಗು ಅಫ್ಘನಿಗಳ ನಡುವಿನ ಯುದ್ಧದ ಬಗ್ಗೆ ಕೂಲಂಕಷವಾಗಿ ಬರೆದಿದ್ದಳು. ಆಕೆ ಬರೆದ ಡೈರಿಯಿಂದ ತಮ್ಮ ಮರ್ಯಾದೆ ಬೀದಿಗೆ ಬರುತ್ತದೆಯೆಂಬ ಕಾರಣದಿಂದ, ಆಕೆಯನ್ನು ಸಮಾಧಾನ ಪಡಿಸಲು ಬ್ರಿಟನ್ನಿನ ರಾಣಿ ವಿಕ್ಟೋರಿಯ ಆಕೆಗೆ ಸನ್ಮಾನ ಮಾಡಿ ಕಿರೀಟವನ್ನಿಟ್ಟಿದ್ದರು.
ಆಕೆಯ ಹೆಸರನ್ನು ಬ್ರಿಟನ್ನಿನ ಹಡಗಿಗೆ ಇಟ್ಟರು, ನಂತರ ಆಕೆಯ ಹೆಸರನ್ನು ಆಸ್ಟ್ರೇಲಿಯಾದ ಒಂದು ನಗರಕ್ಕಿಟ್ಟರು. ಜಗತ್ತಿನ ಮುಂದೆ ಬ್ರಿಟಿಷರಿಗೆ ಅವಮಾನ ಆಗಿಲ್ಲದಂತೆ ನೋಡಿಕೊಂಡರು. ಬ್ರಿಟಿಷರಿಗಾದ ಈ ಅವಮಾನವೇನಾದರೂ ತಮ್ಮ ಕೆಳಗಿನ ದೇಶಗಳಿಗೆ ತಿಳಿದರೆ ಅವರೂ ತಮ್ಮ ಮೇಲೆ ಮುಗಿಬೀಳುತ್ತಾರೆಂಬ ಭಯ ಬ್ರಿಟಿಷರಿಗಿತ್ತು.
ಕಾಕತಾಳೀಯವೆಂಬಂತೆ ಬ್ರಿಟಿಷರಿಗೆ ಆಫ್ಘನ್ನರು ಸೋಲುಣಿಸಿದ 16 ವರ್ಷಗಳ ನಂತರ 1857ರಲ್ಲಿ ಭಾರತದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು. 1841ರ ಅವಮಾನದ ನಂತರ ಬ್ರಿಟಿಷರು ತಮ್ಮ ವಶದಲ್ಲಿದ್ದ ದೋಸ್ತ್ ಮೊಹಮ್ಮದ್‌ನನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದರು.
ಆದರೆ ಬ್ರಿಟಿಷರು ಅವನಿಗೆ, ‘ನೀವು ಮಿಲಿಟರಿ ಯುದ್ಧದಲ್ಲಿ ನಮ್ಮನ್ನು ಗೆದ್ದಿಲ್ಲ, ಹಾಗಾಗಿ ನಾವು ಮತ್ತೆ ಯಾವಾಗ ಬೇಕಾದರೂ ನಿಮ್ಮ ಮೇಲೆ ಆಕ್ರಮಣ ಮಾಡಬಹುದು’ ಎಂದು ಹೇಳಿ ಕಳುಹಿಸಿದ್ದರು. ಬ್ರಿಟಿಷರಿಗೆ ಏನು ಬೇಕೆಂಬುದು ದೋಸ್ತ್ ಮೊಹಮ್ಮದ್‌ನಿಗೆ ಚೆನ್ನಾಗಿ ತಿಳಿದಿತ್ತು. ಈಗ ಅವನು ಹಳೆಯ ದೋಸ್ತ್ ಆಗಿರಲಿಲ್ಲ. ಬ್ರಿಟಿಷರ ಜತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದ.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಪರವಾಗಿ ಭಾಗವಹಿಸಲು ಅಫ್ಘಾನಿ ಸ್ತಾನದವರು ಸಿದ್ಧರಿದ್ದರು. ಆದರೆ ದೋಸ್ತ್ ಮೊಹಮ್ಮದ್ ಅವರನ್ನು ಭಾರತಕ್ಕೆ ಕಳುಹಿಸಲಿಲ್ಲ, ಕಾರಣ ಅವನು ಬ್ರಿಟಿಷರೊಂದಿಗೆ ಸಹಿ ಹಾಕಿದ್ದ. ಬ್ರಿಟಿಷರಿಗೆ ಅಫ್ಘನಿಗಳು ಎಂದಿಗೂ ಅಪಾಯಕಾರಿ ಯೆಂಬ ಅಂಶ ತಿಳಿದ್ದಿದ್ದರಿಂದ ದೋನ ಬಳಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದರು.