ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಡಾ.ಸ್ವಾಮಿನಾಥನ್‌ ಮತ್ತು ನರೇಂದ್ರ ಮೋದಿ

2004ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಕೃಷಿ ಸಚಿವರಾಗಿದ್ದಂಥ ರಾಜನಾಥ್ ಸಿಂಗ್ ನೇತೃತ್ವದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಷ್ಟ್ರೀಯ ಆಯೋಗ ವೊಂದನ್ನು ಸ್ಥಾಪಿಸಲಾಯಿತು. ಈ ಆಯೋಗವು ರೈತರ ಸಮಸ್ಯೆಗಳನ್ನು ಆಳವಾಗಿ ಪರಿಶೀಲಿಸಿ, ಸಂಭವನೀಯ ಪರಿಹಾರವನ್ನು 2006ರ ತನ್ನ ವರದಿಯಲ್ಲಿ ತಿಳಿಸಿತ್ತು.

Mohan Vishwa Column: ಡಾ.ಸ್ವಾಮಿನಾಥನ್‌ ಮತ್ತು ನರೇಂದ್ರ ಮೋದಿ

-

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ರೈತರ ವಿಷಯಗಳ ಕುರಿತು ಭಾರತದಲ್ಲಿ ಚರ್ಚೆಗಳು ಪ್ರಾರಂಭವಾದರೆ ಮೊದಲು ನೆನಪಾಗುವುದು ಡಾ.ಸ್ವಾಮಿನಾಥನ್. ಕೃಷಿ ಸುಧಾರಣೆಗಳ ಕುರಿತಾಗಿ ಅವರು ನೀಡಿರುವ ವರದಿಯ ಬಗ್ಗೆ ಆಗಾಗ ಚರ್ಚೆ ಆಗುತ್ತಿರುತ್ತದೆ. ಒಂದು ಕಾಲದಲ್ಲಿ ದೇಶದಲ್ಲಿದ್ದ ಆಹಾರ ಕೊರತೆಯನ್ನು ನೀಗಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಡಾ.ಸ್ವಾಮಿನಾಥನ್.

ತಮ್ಮ ಆಯೋಗದ ವರದಿಯ ಪ್ರಮುಖ ಅಂಶಗಳನ್ನು ಹೆಚ್ಚಾಗಿ ಅನುಷ್ಠಾನ ಗೊಳಿಸಿರುವುದು ಪ್ರಧಾನಿ ನರೇಂದ್ರ ಮೋದಿ ಎಂದು ಸ್ವತಃ ಡಾ.ಸ್ವಾಮಿನಾಥನ್ ಪತ್ರಿಕೆ ಯೊಂದರಲ್ಲಿ ಹೇಳಿದ್ದಾರೆ. ರೈತರಿಗೆ ಅನುಕೂಲವಾಗುವ ಸ್ವಾಮಿನಾಥನ್ ಆಯೋಗದ ವರದಿಯ ಅನೇಕ ಅಂಶಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸಲಾಗಿದೆ.

ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ರೈತನ ಬೆಳೆಯ ಖರ್ಚನ್ನು ಹೇಗೆ ಲೆಕ್ಕಾಚಾರ ಮಾಡಬೇಕೆಂಬುದನ್ನು ಹೇಳಲಾಗಿದೆ. ರೈತನ ಬೆಳೆಗೆ ತಗಲುವ ನೇರ ವೆಚ್ಚಗಳಾದ ಬೀಜ, ರಸಗೊಬ್ಬರ, ಕೂಲಿ, ಸಾಗಾಣಿಕಾ ವೆಚ್ಚ ಒಂದು ಭಾಗವಾದರೆ, ತಮ್ಮ ಹೊಲದಲ್ಲಿ ರೈತ ಹಾಗೂ ಆತನ ಕುಟುಂಬಸ್ಥರು ದುಡಿಯುವ ಸಮಯದ ಕೂಲಿಯನ್ನು ಸೇರಿಸಲಾಗಿದೆ.

ಇದನ್ನೂ ಓದಿ: Mohan Vishwa Column: ಆಫ್ಘಾನಿಸ್ತಾನದ ಕಮ್ಯುನಿಸ್ಟ್ ಆಡಳಿತ

ಜಮೀನಿಗೆ ತಗಲುವ ಬಾಡಿಗೆ. ಬ್ಯಾಂಕಿನಿಂದ ಅಥವಾ ಖಾಸಗಿಯಾಗಿ ತಂದಿರುವ ಸಾಲದ ಮೇಲಿನ ಬಡ್ಡಿಯನ್ನೂ ಸೇರಿಸಲಾಗಿದೆ. ಇವೆಲ್ಲವನ್ನೂ ಸೇರಿಸಿದ ನಂತರ ತಗಲುವ ಒಟ್ಟಾರೆ ವೆಚ್ಚದ ಮೇಲೆ ಶೇ.50ರಷ್ಟು ಲಾಭವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಪಡಿಸಬೇಕೆಂಬುದು ವರದಿಯ ಸಾರಾಂಶ.

ಸಂಪೂರ್ಣ ವರದಿಯನ್ನು ಒಮ್ಮೆಲೇ ಅನುಷ್ಠಾನಗೊಳಿಸಲು ಸಾಧ್ಯವಾಗದಿದ್ದರೂ, ಅಲ್ಲಿರುವ ಹೆಚ್ಚಿನ ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಅನುಷ್ಠಾನಗೊಳಿಸಿ ದ್ದಾರೆಂದು ಸ್ವತಃ ಸ್ವಾಮಿನಾಥನ್ ಹೇಳಿದ್ದಾರೆ.

2004ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಕೃಷಿ ಸಚಿವರಾಗಿದ್ದಂಥ ರಾಜನಾಥ್ ಸಿಂಗ್ ನೇತೃತ್ವದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಷ್ಟ್ರೀಯ ಆಯೋಗವೊಂದನ್ನು ಸ್ಥಾಪಿಸಲಾಯಿತು. ಈ ಆಯೋಗವು ರೈತರ ಸಮಸ್ಯೆಗಳನ್ನು ಆಳ ವಾಗಿ ಪರಿಶೀಲಿಸಿ, ಸಂಭವನೀಯ ಪರಿಹಾರವನ್ನು 2006ರ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರದಿಯಲ್ಲಿ ಕೇವಲ ಕೃಷಿ ಸಂಬಂದಿತ ಸಮಸ್ಯೆಗಳ ಪರಿಹಾರಗಳಲ್ಲದೆ, ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಬಗ್ಗೆಯೂ ಉಲ್ಲೇಖವಾಗಿತ್ತು.

Screenshot_2 R

ಕೃಷಿ, ಹೈನುಗಾರಿಕೆ, ಮೀನುಗಾರಿಕೆಯಲ್ಲಿರುವ ಮೂಲಭೂತ ಸಮಸ್ಯೆಗಳು, ಅವಕ್ಕೆ ಪರಿಹಾರಗಳು, ಅಲ್ಲಿನ ಕೃಷಿಕರನ್ನು ಹೇಗೆ ಆರ್ಥಿಕವಾಗಿ ಸದೃಢಗೊಳಿಸಬೇಕೆಂಬ ಅಂಶ ವನ್ನೂ ಹೇಳಲಾಗಿತ್ತು. ನಶಿಸಿಹೋಗುತ್ತಿದ್ದ ಅನೇಕ ನೈಸರ್ಗಿಕ ಕೃಷಿ ಪದ್ದತಿಗಳನ್ನು ಪುನಃ ಹೇಗೆ ಉತ್ತೇಜಿಸಬೇಕು, ನೀರನ್ನು ಯಾವ ರೀತಿಯಲ್ಲಿ ಮಿತವಾಗಿ ಬಳಕೆ ಮಾಡಬೇಕು, ಕಡಿಮೆ ಖರ್ಚಿನಲ್ಲಿ ಉತ್ತಮ ಕೃಷಿ ಪದ್ಧತಿಯನ್ನು ಹೇಗೆ ಉತ್ತೇಜಿಸಬೇಕೆಂದು ಹೇಳಲಾಗಿತ್ತು.

ವಾಜಪೇಯಿಯವರ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ವರದಿಯನ್ನು ಅನುಷ್ಠಾನಗೊಳಿಸಲಿಲ್ಲ, ಅದರ ಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಎಂಟು ವರ್ಷಗಳ ಕಾಲ ಧೂಳು ಹಿಡಿದಿದ್ದ ಆಯೋಗದ ವರದಿಗೆ 2014ರಲ್ಲಿ ಮತ್ತೆ ಜೀವ ಬಂತು.

ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ವರದಿ ಯನ್ನು ಗಂಭೀರವಾಗಿ ಪರಿಗಣಿಸಿತು. ವರದಿಯ ಪ್ರತಿಯೊಂದು ಅಂಶವನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬ ಯೋಜನೆಗಳು ಪ್ರಾರಂಭವಾದವು. ಹನಿ ನೀರಾವರಿ ಪದ್ಧತಿಯನ್ನು ಅನುಷ್ಠಾನಗೊಳಿಸಿ ಕಡಿಮೆ ಖರ್ಚಿನಲ್ಲಿ ನೀರಿನ ಬಳಕೆಯನ್ನು ಮಾಡಲು ‘ಪ್ರಧಾನ್ ಮಂತ್ರಿ ಕೃಷಿ ಸಿಂಚಾಯಿ’ ಯೋಜನೆಯನ್ನು ಜಾರಿಗೆ ತರಲಾಯಿತು.

ಈ ಯೋಜನೆಗೆಂದು ಸಾವಿರಾರು ಕೋಟಿಯಷ್ಟು ಹಣವನ್ನು ಕೇಂದ್ರ ಬಜೆಟ್‌ನಲ್ಲಿ ಮೀಸಲಿಡಲಾಯಿತು. ದೇಸಿ ಜಾನುವಾರುಗಳ ತಳಿಗಳನ್ನು ಸಂರಕ್ಷಿಸಿಸಲು ‘ರಾಷ್ಟ್ರೀಯ ಗೋಕುಲ್ ಮಿಷನ್’ ಯೋಜನೆಗೆ ಚಾಲನೆ ನೀಡಲಾಯಿತು.

1990ರ ಕಾಲಘಟ್ಟದಲ್ಲಿ ವಿದೇಶಿ ‘ಜೆರ್ಸಿ’ ತಳಿಗಳನ್ನು ಭಾರತಕ್ಕೆ ಪರಿಚಯಿಸಿ ಸ್ವದೇಶಿ ತಳಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ದೇಸಿ ಜಾನುವಾರುಗಳ ಹಾಲು, ಮೊಸರು, ತುಪ್ಪಕ್ಕೆ ಬೇಡಿಕೆ ಅದೆಷ್ಟು ಹೆಚ್ಚಿದೆಯೆಂದರೆ, ಬಹುತೇಕ ಗ್ರಾಹಕರು ದೇಸಿ ತಳಿಗಳ ಉತ್ಪನ್ನಗಳನ್ನು ಖರೀದಿ ಮಾಡಲು ಪ್ರಾರಂಭಿಸಿದ್ದಾರೆ.

ಸ್ವಾಮಿನಾಥನ್ ಆಯೋಗದ ವರದಿಯ ಅಂಶಗಳನ್ನು ಒಂದೊಂದಾಗಿ ಪರಿಶೀಲಿಸುತ್ತಾ ಹೋದರೆ, ನರೇಂದ್ರ ಮೋದಿ ನೇತೃತ್ವದ ಸರಕಾರವು ಅವನ್ನು ಎಷ್ಟರ ಮಟ್ಟಿಗೆ ತಲಸ್ಪರ್ಶಿ ಯಾಗಿ ಅನುಷ್ಠಾನಗೊಳಿಸಿದೆಯೆಂಬ ವಿಷಯ ತಿಳಿಯುತ್ತದೆ. ರೈತನ ಒಟ್ಟಾರೆ ಖರ್ಚಿನಲ್ಲಿ ರಸಗೊಬ್ಬರದ ಪ್ರಮಾಣ ಹೆಚ್ಚಿರುತ್ತದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಇಡೀ ದೇಶದಲ್ಲಿ ರಸಗೊಬ್ಬರದ ಕೊರತೆಯಿತ್ತು.

ರೈತರಿಗೆ ಸರಿಯಾದ ಪ್ರಮಾಣದಲ್ಲಿ ಯೂರಿಯ ಸಿಗುತ್ತಿರಲಿಲ್ಲ. ಕಾಳಸಂತೆಯಲ್ಲಿ ಹಾಲಿನ ಮಿಶ್ರಣ, ಪೈಂಟ್ ಮಿಶ್ರಣದಲ್ಲಿ ಯೂರಿಯ ಬಳಕೆಯಾಗುತ್ತಿತ್ತು. ನಂತರ ಯೂರಿಯಾಗೆ ಬೇವು ಲೇಪನ ಮಾಡುವ ಮೂಲಕ, ಕಾಳಸಂತೆಯಲ್ಲಿ ಮಾರಾಟವಾಗುತ್ತಿದ ಯೂರಿಯಾಗೆ ಕಡಿವಾಣ ಹಾಕಲಾಯಿತು. ಬೇವು ಲೇಪಿತ ಯೂರಿಯಾವನ್ನು ಹಾಲಿನ ಕಲಬೆರಕೆಯಲ್ಲಿ ಬಳಸಿದರೆ ಏನಾಗುತ್ತದೆಯೆಂದು ಬಿಡಿಸಿ ಹೇಳಬೇಕಿಲ್ಲ.

ಬೇವು ಲೇಪಿತ ಯೂರಿಯ ಬಳಸಿದ ರೈತನ ಇಳುವರಿಯು ಹೆಚ್ಚಾಯಿತು. ಭೂಮಿಯಿಂದ ಆವಿಯಾಗುತ್ತಿದಂಥ ಗೊಬ್ಬರದ ಸಾರದ ಪ್ರಮಾಣ ಕಡಿಮೆಯಾಯಿತು. ಇದರಿಂದ ರೈತ ಎಕರೆಗೆ ಬಳಸುವ ರಸಗೊಬ್ಬರದ ಪ್ರಮಾಣ ಕಡಿಮೆಯಾಯಿತು. ಬಳಕೆ ಕಡಿಮೆಯಾದಂತೆ ರೈತನ ಉತ್ಪನ್ನದ ಖರ್ಚು ಕಡಿಮೆಯಾಯಿತು. ಇಂದಿಗೂ ರಸಗೊಬ್ಬರದ ಪೂರೈಕೆ ಸರಾಗ ವಾಗಿದೆ.

ಕೇಂದ್ರ ಸರಕಾರವು ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಹೆಚ್ಚು ಮಾಡಿತು. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಕೃಷಿ ಚಟುವಟಿಕೆಗಳಿಗೆ ಹಣವನ್ನು ಬಳಸುತ್ತಿದ್ದ ರೈತರು ಬಡ್ಡಿಯನ್ನು ಕಟ್ಟಲಾಗದೆ ಹೈರಾಣಾಗಿ ಹೋಗಿದ್ದರು. ರೈತರಿಗೆ ಅನುಕೂಲವಾಗಲು ‘ಪ್ರಧಾನ ಮಂತ್ರಿ ಕೃಷಿ ಸಮ್ಮಾನ್’ ಯೋಜನೆಯಡಿಯಲ್ಲಿ ಪ್ರತಿ ವರ್ಷ ಮೂರು ಕಂತು ಗಳಲ್ಲಿ 6000 ರುಪಾಯಿಯನ್ನು ನೇರವಾಗಿ ರೈತನ ಖಾತೆಗೆ ವರ್ಗಾವಣೆ ಮಾಡುವ ಮೂಲಕ ರೈತನ ಸಾಲದ ಹೊರೆಯನ್ನು ಕಡಿಮೆ ಮಾಡಲಾಯಿತು.

ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಪಾಲಾಗಿ 4000 ರುಪಾಯಿಯನ್ನು ಸೇರಿಸಿ ಒಟ್ಟು 10000 ರುಪಾಯಿ ನೀಡಲಾಗು ತ್ತಿತ್ತು. ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಉಲ್ಲೇಖವಾಗಿರುವ ಒಟ್ಟಾರೆ ಖರ್ಚಿನ ಲೆಕ್ಕಾಚಾರದಲ್ಲಿ ಬಡ್ಡಿಯ ಖರ್ಚನ್ನೂ ಸೇರಿಸಲಾಗಿತ್ತು.

ಅದೇ ವರದಿಯಲ್ಲಿ ರೈತನಿಗೆ ತಗಲುವ ಸಾಗಣೆ ವೆಚ್ಚದ ಬಗ್ಗೆ ಉಲ್ಲೇಖವಾಗಿದೆ. ಸಾಗಣೆ ವೆಚ್ಚ ಕಡಿಮೆಯಾದರೆ ರೈತನಿಗೂ ಲಾಭ, ಗ್ರಾಹಕನಿಗೂ ಲಾಭ. ಈ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ‘ಕಿಸಾನ್ ರೈಲು’ಗಳನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಯಲ್ಲಿ ಮೊದಲಿಗೆ ವಾರಕ್ಕೊಮ್ಮೆ ಪ್ಯಾಸೆಂಜರ್ ರೈಲುಗಳಿಗೆ ಒಂದು ಹೆಚ್ಚುವರಿ ಬೋಗಿ ಯನ್ನು ಅಳವಡಿಸಿ ಅದರಲ್ಲಿ ಶೀತಲೀಕರಣದ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.

ಹಲವು ರೈತರು ಇದರ ಸದುಪಯೋಗಪಡಿಸಿಕೊಂಡು, ತಾವು ಬೆಳೆದ ಬೆಳೆಯನ್ನು ಹತ್ತಿರದ ಮಂಡಿಗಳಿಗೆ ಕಡಿಮೆ ವೆಚ್ಚದಲ್ಲಿ ಸಾಗಿಸುತ್ತಿದ್ದಾರೆ. ಸದ್ಯ ದೇಶದಲ್ಲಿ 2364 ಕಿಸಾನ್ ರೈಲು ಗಳಿವೆ, ಬೇಡಿಕೆ ಹೆಚ್ಚಾದಂತೆ ವಾರದಲ್ಲಿ ಮೂರು ಬಾರಿ ಈ ರೈಲುಗಳನ್ನು ಓಡಿಸಲು ಸೂಚಿಸಲಾಗಿದೆ. ಇದರೊಂದಿಗೆ, ಸ್ವಾಮಿನಾಥನ್ ಆಯೋಗದ ವರದಿಯ ಮತ್ತೊಂದು ಪ್ರಮುಖ ಅಂಶವನ್ನು ನರೇಂದ್ರ ಮೋದಿ ಸರಕಾರ ಅನುಷ್ಠಾನಗೊಳಿಸಿದಂತಾಗಿದೆ.

ವರದಿಯ ಪ್ರಮುಖ ಅಂಶಗಳನ್ನು ಸರಕಾರದ ಅನೇಕ ಯೋಜನೆಗಳ ಮೂಲಕ ನರೇಂದ್ರ ಮೋದಿಯವರು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು 2018ರ ಅಂಕಣ ದಲ್ಲಿ ಸ್ವತಃ ಸ್ವಾಮಿನಾಥನ್ ಬರೆದಿದ್ದಾರೆ.

ರೈತನು ತನ್ನ ದಿನನಿತ್ಯದ ಕೃಷಿ ಚಟುವಟಿಕೆಗಳ ಜತೆಗೆ ಇತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ, ಬಿದಿರಿನ ಉತ್ಪನ್ನಗಳ ಮಾರುಕಟ್ಟೆ, ಅಣಬೆ ಕೃಷಿ, ಜೇನು ಕೃಷಿ, ಎರೆಹುಳುವಿನ ಗೊಬ್ಬರ ತಯಾರಿಕೆಯಂಥ ಚಟುವಟಿಕೆಗಳಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಹೊಲದಲ್ಲಿ ದುಡಿದು ಆರ್ಥಿಕವಾಗಿ ಸದೃಢನಾಗುವುದರ ಜತೆಗೆ ಇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ರೈತನನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಕೆಲಸ ನಡೆಯುತ್ತಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ, ಹಿಂದಿನ ಸರಕಾರ ಗಳು ನೀಡದಂಥ ಹೆಚ್ಚಿನ ‘ಕನಿಷ್ಠ ಬೆಂಬಲ ಬೆಲೆ’ಯನ್ನು ಅನೇಕ ಬೆಳೆಗಳಿಗೆ ದೇಶದಾ ದ್ಯಂತ ನೀಡಲಾಗಿದೆ.

ಮತ್ತೊಮ್ಮೆ ರೈತನ ಸಾಲದ ಬಗ್ಗೆ ಮಾತನಾಡುವುದಾದರೆ, ಖಾಸಗಿ ವ್ಯಕ್ತಿಗಳ ಬಡ್ಡಿ ಹಾವಳಿ ಯನ್ನು ತಪ್ಪಿಸುವ ಸಲುವಾಗಿ ನರೇಂದ್ರ ಮೋದಿ ಸರಕಾರ ‘ಕಿಸಾನ್ ಕಾರ್ಡ್’ಗಳನ್ನು ಜಾರಿಗೆ ತಂದಿದೆ. ಇದರಡಿಯಲ್ಲಿ ಬಡ್ಡಿ ಇಲ್ಲದೆ ಸಾಲ ಸಿಗುತ್ತಿದೆ. ಕೆಲವು ಕಡೆ ಬಡ್ಡಿ ವಿಧಿಸಿ ದರೂ ಅದರ ದರ ಕಡಿಮೆಯಿದೆ. ಮಲೆನಾಡು ಭಾಗದ ಹಲವೆಡೆ ಇದರ ಬಗ್ಗೆ ವಿಚಾರಿಸಿದರೆ ರೈತರು ತಮ್ಮ ಅನುಭವಗಳನ್ನು ಹೇಳುತ್ತಾರೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವುದೆಂದರೆ ಕೇವಲ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸುವುದಲ್ಲ, ಅದರ ಜತೆಗೆ ರೈತನ ಒಟ್ಟಾರೆ ಇಳುವರಿಯನ್ನು ಹೆಚ್ಚು ಮಾಡಬೇಕಿದೆ. ಹಾಗೆ ಹೆಚ್ಚು ಮಾಡಲು ಕೃಷಿ ಚಟುವಟಿಕೆಯ ಪ್ರತಿಯೊಂದು ಹಂತದಲ್ಲಿಯೂ ಸುಧಾರಣೆ ಗಳನ್ನು ತರುವ ಕೆಲಸವನ್ನು ನರೇಂದ್ರ ಮೋದಿ ಸರಕಾರ ಮಾಡುತ್ತಿದೆ. ಬೀಜ, ರಸಗೊಬ್ಬರ, ಸಾರಿಗೆ ವ್ಯವಸ್ಥೆ, ನೀರಿನ ಬಳಕೆ, ಮಾರುಕಟ್ಟೆ ಹೀಗೆ ಎಲ್ಲಾ ವಿಭಾಗದಲ್ಲಿಯೂ ಸಜ್ಜು ಗೊಳಿಸಿರುವ ಅನೇಕ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.

ಭೂ ಸುಧಾರಣಾ ವ್ಯವಸ್ಥೆಯ ಬಗ್ಗೆ ತಮ್ಮ ಅಂಕಣದಲ್ಲಿ ಚರ್ಚೆ ಮಾಡಿರುವ ಡಾ. ಸ್ವಾಮಿ ನಾಥನ್, ಭೂ ಸುಧಾರಣಾ ಕಾಯ್ದೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಕರ್ನಾಟಕ ದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರಲು ಮುಂದಾದಾಗ ಅನೇಕರು ವಿರೋಧಿಸಿದ್ದರು. ಡಾ.ಸ್ವಾಮಿನಾಥನ್ ಆಯೋಗದ ವರದಿಯ ಅನೇಕ ಅಂಶಗಳನ್ನು ಅತಿ ಹೆಚ್ಚು ಅನುಷ್ಠಾನಗೊಳಿಸಿರುವ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲಬೇಕೆಂದು ಸ್ವತಃ ಸ್ವಾಮಿನಾಥನ್ ಹೇಳಿದ್ದರು.