Narada Sanchara: ಎಲ್ಲಾ ಗದ್ದುಗೆ ಮಹಿಮೆ!
ಅಧಿಕಾರವನ್ನು ಬೆನ್ನತ್ತುವ ಪರಿಪಾಠವು ವ್ಯಕ್ತಿಯೊಬ್ಬನನ್ನು ಹೇಗೆಲ್ಲಾ ಪ್ರಲೋಭಿಸುತ್ತದೆ, ಯಾವೆಲ್ಲಾ ವಿಚಿತ್ರವಾದ ‘ಕತ್ತಲ ಹಾದಿ’ಗಳಲ್ಲಿ ಕರೆದೊಯ್ಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಅಲ್ಲಿನ ರಾಯಗಢ ಜಿಲ್ಲೆಯ ಉಸ್ತುವಾರಿ ಸಚಿವರ ಹುದ್ದೆಯನ್ನು ದಕ್ಕಿಸಿಕೊಳ್ಳಲು ಶಿವಸೇನೆಯ (ಏಕನಾಥ್ ಶಿಂದೆ ಬಣದ) ಸಚಿವ ಭರತ್ ಗೋಗವಾಲೆ ಅವರು ‘ಅಘೋರಿ ಆಚರಣೆಗಳಿಗೆ’ ಮುಂದಾಗಿದ್ದಾರೆ ಎಂಬು ದು ಈಗ ಕೇಳಿ ಬಂದಿರುವ ಆರೋಪ.


ನಾರದ ಸಂಚಾರ
naadigru@gmail.com
ರಾಜಕೀಯ ಕ್ಷೇತ್ರ ನಿಜಕ್ಕೂ ಒಂಥರಾ ವಿಚಿತ್ರ ಕಣ್ರೀ. ಇಲ್ಲಿ ಅಧಿಕಾರದ ಗದ್ದುಗೆಯನ್ನು ಏರುವು ದಕ್ಕೆ ಒಬ್ಬೊಬ್ಬರು ಒಂದೊಂದು ಮಾರ್ಗವನ್ನು ಆಯ್ದುಕೊಳ್ಳುವುದುಂಟು. Slow and steady wins the race ಎಂಬ ಜಾಣನುಡಿಯಂತೆ ಕೆಲವರು ಪಕ್ಷದ ಕಾರ್ಯಕರ್ತರ ಹಂತದಿಂದ ಶುರುಹಚ್ಚಿ ಕೊಂಡು, ಹಗಲು-ರಾತ್ರಿ ಎನ್ನದೆ ಪಕ್ಷಕ್ಕಾಗಿ ದುಡಿದು (ಕೆಲವೊಮ್ಮೆ ಎದುರಾಳಿ ಪಕ್ಷದ ಕಾರ್ಯಕರ್ತ ರೊಡನೆ ಹೊಡೆದಾಡಿ!), ಚುನಾವಣಾ ಸಮಯದಲ್ಲಿ ಸಿಕ್ಕ ಸಿಕ್ಕ ಗೋಡೆಗಳ ಮೇಲೆ ತಮ್ಮ ಪಕ್ಷದ ಅಭ್ಯರ್ಥಿಗಳ ಪೋಸ್ಟರ್‌ಗಳನ್ನು ಅಂಟಿಸಿ, ನಂತರ ಪಕ್ಷದಲ್ಲಿ ಯಾವುದಾದರೂ ಪದಾಧಿಕಾರಿಯ ಹುದ್ದೆಯನ್ನು ಗಿಟ್ಟಿಸಿಕೊಂಡು, ‘ಒಂದು ಲೆವೆಲ್ಲಿನ ನಾಯಕ’ ಎನಿಸಿಕೊಂಡು, ನಂತರ ಎಂಎಲ್‌ಎ ಅಥವಾ ಎಂಪಿ ಸ್ಥಾನಕ್ಕೆ ಸ್ಪರ್ಧಿಸುವುದುಂಟು. ಅದೃಷ್ಟ ನೆಟ್ಟಗಿದ್ದರೆ ಗೆಲ್ಲುವುದುಂಟು, ‘ಮಂತ್ರಿ- ಮಹೋದಯ’ ಎನಿಸಿಕೊಳ್ಳುವುದೂ ಉಂಟು!
ಇನ್ನು ಕೆಲವರು ‘ಷಾರ್ಟ್-ಕಟ್’ ಮಾದರಿಯನ್ನು ಅನುಸರಿಸುವುದಿದೆ. ಆಯಕಟ್ಟಿನ ಸ್ಥಾನ ದಲ್ಲಿರುವ ನಾಯಕರಿಗೆ ‘ಬೇಕಾದವರು’ ಎನಿಸಿಕೊಂಡು ಅಥವಾ ಹಣದ ಥೈಲಿ ಇರುವವರು ಎಂದು ಬಿಂಬಿಸಿಕೊಂಡು ಮಹತ್ವದ ಸ್ಥಾನಗಳನ್ನು ದಕ್ಕಿಸಿಕೊಳ್ಳುವುದಿದೆ. ಆದರೆ ಮಹಾರಾಷ್ಟ್ರದಿಂದ ಬಂದಿರುವ ಸುದ್ದಿಯೊಂದು ಇನ್ನೂ ವಿಚಿತ್ರವಾಗಿದೆ. ಅಧಿಕಾರವನ್ನು ಬೆನ್ನತ್ತುವ ಪರಿಪಾಠವು ವ್ಯಕ್ತಿಯೊಬ್ಬನನ್ನು ಹೇಗೆಲ್ಲಾ ಪ್ರಲೋಭಿಸುತ್ತದೆ, ಯಾವೆಲ್ಲಾ ವಿಚಿತ್ರವಾದ ‘ಕತ್ತಲ ಹಾದಿ’ಗಳಲ್ಲಿ ಕರೆದೊಯ್ಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಅಲ್ಲಿನ ರಾಯಗಢ ಜಿಲ್ಲೆಯ ಉಸ್ತುವಾರಿ ಸಚಿವರ ಹುದ್ದೆಯನ್ನು ದಕ್ಕಿಸಿಕೊಳ್ಳಲು ಶಿವಸೇನೆಯ (ಏಕನಾಥ್ ಶಿಂದೆ ಬಣದ) ಸಚಿವ ಭರತ್ ಗೋಗವಾಲೆ ಅವರು ‘ಅಘೋರಿ ಆಚರಣೆಗಳಿಗೆ’ ಮುಂದಾಗಿದ್ದಾರೆ ಎಂಬುದು ಈಗ ಕೇಳಿ ಬಂದಿರುವ ಆರೋಪ.
ಇದನ್ನೂ ಓದಿ: Narada Sanchara: ಎಲ್ಲಾ ಇದ್ದೂ ಏನೂ ಆಗ್ಲಿಲ್ಲ..!
ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ‘ಮಹಾಯುತಿ’ ಮೈತ್ರಿಕೂಟದ ಮಿತ್ರಪಕ್ಷ ಎನಿಸಿಕೊಂಡಿರುವ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ’ಯ (ಎನ್ ಸಿಪಿ) ವಕ್ತಾರರಾದ ಸೂರಜ್ ಚವಾಣ್ ಅವರು ಈ ಸಂಬಂಧವಾಗಿ ವಿಡಿಯೋ ವೊಂದನ್ನು ಹಂಚಿಕೊಂಡಿದ್ದಾರಂತೆ. ಸಚಿವ ಭರತ್ ಗೋಗವಾಲೆ ಅವರು ಅಘೋರಿ ಸಾಧುಗಳ ಜತೆಯಲ್ಲಿರುವುದನ್ನು ಈ ವಿಡಿಯೋ ಬಿಂಬಿಸುತ್ತಂತೆ. ಈ ಹುದ್ದೆ ಯನ್ನು ದಕ್ಕಿಸಿಕೊಳ್ಳಲೆಂದು ಶಿವಸೇನೆಯ ಗೋಗವಾಲೆ ಮತ್ತು ಎನ್‌ಸಿಪಿಯ ಅದಿತಿ ತಟ್ಕರೆ ಅವರ ನಡುವೆ ತೀವ್ರ ಪೈಪೋಟಿ ಇದೆ ಎಂಬುದೇ ಈ ಕಸರತ್ತಿಗೆ ಕಾರಣ ಎನ್ನಲಾಗುತ್ತಿದೆ. ಈ ಮಧ್ಯೆ, ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಭಾಸ್ಕರ್ ಜಾಧವ್ ಹಾಗೂ ಶಿಂದೆ ಬಣದ ರಾಮದಾಸ್ ಕದಮ್ ಕೂಡ, ಪರಸ್ಪರರ ಮೇಲೆ ಮಾಟಮಂತ್ರದ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಒಟ್ಟಿನಲ್ಲಿ, ಮುಂಬೈ ಮಹಾ ನಗರಿಯ ಮೇಲೆ ಸುಳಿದಾಡುತ್ತಿರುವ ಕರಾಳ ಮೋಡಗಳು, ಅಲ್ಲಿನ ನೇತಾರರ ಮೇಲೂ ಪರಿಣಾಮ ಬೀರುತ್ತಿವೆ ಎಂಬ ‘ಭರತವಾಕ್ಯ’ವನ್ನು ನುಡಿಯಲು ಇದು ಸಕಾಲ ಎನ್ನಬಹುದು!
ನಾರಾಯಣ ನಾರಾಯಣ!
ತಮಿಳುನಾಡು, ಆಂಧ್ರಪ್ರದೇಶ ಮುಂತಾದ ಪಕ್ಕದ ರಾಜ್ಯಗಳಲ್ಲಿ ಠಳಾಯಿಸುತ್ತಿರುವ ಬೀದಿನಾಯಿ ಗಳು ಕರ್ನಾಟಕಕ್ಕೆ, ಅದರಲ್ಲೂ ನಿರ್ದಿಷ್ಟವಾಗಿ ಮಹಾನಗರಿ ಬೆಂಗಳೂರಿಗೆ ವಲಸೆ ಬರಲು ತೀರ್ಮಾ ನಿಸಿವೆಯಂತೆ. ಬೆಂಗಳೂರಿನ ಬೀದಿನಾಯಿಗಳಿಗೆ ‘ಬಾಡೂಟದ ಭಾಗ್ಯ’ವನ್ನು ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ತವಕಿಸುತ್ತಿದೆ, ಇದಕ್ಕಾಗಿ ಟೆಂಡರ್ ಕರೆದಿದೆ ಎಂಬ ಸುದ್ದಿಯು ಅದು ಹೇಗೋ ಪಕ್ಕದ ರಾಜ್ಯಗಳ ಆ ಬೀದಿನಾಯಿಗಳ ಕಿವಿಗೆ ಅಪ್ಪಳಿಸಿ ಬಿಟ್ಟಿರು ವುದೇ ಈ ತೀರ್ಮಾನಕ್ಕೆ ಕಾರಣವಂತೆ!
ಜತೆಗೆ, “ಬೀದಿನಾಯಿಗಳಿಗೆ ಹೀಗೆ ನಿತ್ಯವೂ ಮಾಂಸಾಹಾರವನ್ನು ನೀಡುವುದರಿಂದ ಅವು ಮತ್ತಷ್ಟು ಉಗ್ರವಾಗುವ ಸಾಧ್ಯತೆಯರುತ್ತದೆ; ಹೀಗಾಗಿ ಬಿಬಿಎಂಪಿ ಈ ನಿರ್ಧಾರದಿಂದ ಹಿಂದೆ ಸರಿಯಬೇಕು" ಎಂದು ಆಗ್ರಹಿಸುತ್ತಿರುವವರ ವಿರುದ್ಧ ಪರರಾಜ್ಯದ ಆ ಬೀದಿನಾಯಿಗಳು ತಾವಿದ್ದ ಜಾಗದಿಂದಲೇ ‘ಬೌ ಬೌ’ ಎನ್ನುವ ಮೂಲಕ ಆಪ್ಷೇಪವನ್ನು ಎತ್ತಿವೆಯಂತೆ.