ಸಿಗಡಿಯಿಂದ ಸಾಫ್ಟ್ʼವೇರ್ʼಗಿನ ಭಾರತದ ಹೊಸ ವ್ಯಾಪಾರ ಒಪ್ಪಂದ
ಪ್ರಧಾನಿ ಮೋದಿಯವರ ದೃಢ ನಿರ್ಧಾರವು ಆಸ್ಟ್ರೇಲಿಯಾ ಮತ್ತು ಯುಎಇ ಜೊತೆ ಉಭಯ ಲಾಭದಾಯಕ ಒಪ್ಪಂದಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಭಾರತೀಯ ಉದ್ಯಮವು ಇಂದು ಜಾಗತಿಕ ರಂಗವನ್ನು ಗೆಲ್ಲುವ ಆತ್ಮವಿಶ್ವಾಸದಿಂದ ಬೀಗುತ್ತಾ, ದೃಢವಾಗಿ ನಿಂತಿದೆ, ತೀವ್ರ ಸ್ಪರ್ಧೆಯ ನಡುವೆಯೂ ಸಮೃದ್ಧವಾಗಿ ಬೆಳೆಯುತ್ತಿದೆ.
 
                                -
 Ashok Nayak
                            
                                Oct 25, 2025 11:42 AM
                                
                                Ashok Nayak
                            
                                Oct 25, 2025 11:42 AM
                            ಪ್ರಸ್ತುತ
ಪಿಯೂಷ್ ಗೋಯೆಲ್
ಒಂದು ಲಕ್ಷ ಡಾಲರ್‌ಗಿಂತ ಹೆಚ್ಚು ತಲಾ ಆದಾಯ ಹೊಂದಿರುವ ಶ್ರೀಮಂತ ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ ದೊಂದಿಗೆ ಒಂದು ನವೀನ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಭಾರತವು ಸಮೃದ್ಧಿಯ ಮತ್ತೊಂದು ಹೆಬ್ಬಾಗಿಲನ್ನು ತೆರೆದಿದೆ. ಇದು ಭಾರತೀಯ ರೈತರು, ಮೀನುಗಾರರು ಮತ್ತು ಎಂಎಸ್ ಎಂಇಗಳಿಗೆ ಲಾಭದಾಯಕ ಮಾರುಕಟ್ಟೆಯನ್ನು ತೆರೆಯುತ್ತದೆ ಮತ್ತು ಪ್ರಧಾನಿ ಮೋದಿಯವರ ‘ವಿಕಸಿತ ಭಾರತ 2047’ ಧ್ಯೇಯಕ್ಕೆ ಹೊಸ ವೇಗ ನೀಡುತ್ತದೆ.
ಸ್ವಿಟ್ಜರ್‌ಲ್ಯಾಂಡ್, ನಾರ್ವೆ, ಐಸ್‌ಲ್ಯಾಂಡ್ ಮತ್ತು ಲೀಚ್ಟೆನ್ ಸ್ಪೈನ್ ದೇಶಗಳನ್ನು ಒಳಗೊಂಡಿರುವ ಯುರೋಪಿಯನ್ ಮುಕ್ತ ವ್ಯಾಪಾರ ಒಕ್ಕೂಟ ದೊಂದಿಗಿನ ‘ವ್ಯಾಪಾರ ಮತ್ತು ಆರ್ಥಿಕ ಪಾಲು ದಾರಿಕೆ ಒಪ್ಪಂದ, ಶುಭ ನವರಾತ್ರಿಯ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ ೧ರಿಂದ ಜಾರಿಗೆ ಬಂದಿದ್ದು, ಇದು ನಿಜಕ್ಕೂ ಐತಿಹಾಸಿಕ ಹೆಜ್ಜೆಯಾಗಿದೆ.
EFTA ರಾಷ್ಟ್ರಗಳು ೧೫ ವರ್ಷಗಳಲ್ಲಿ ೧೦೦ ಬಿಲಿಯನ್ ಹೂಡಿಕೆ ಮಾಡುವ ಭರವಸೆ ನೀಡಿವೆ, ಇದು ಕನಿಷ್ಠ ಹತ್ತು ಲಕ್ಷ (ಒಂದು ಮಿಲಿಯನ್) ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ಪ್ರಧಾನಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಉತ್ತೇಜನ ನೀಡುತ್ತವೆ.
ವ್ಯಾಪಾರ ತಂತ್ರಗಾರಿಕೆ: ಮೋದಿ ಸರಕಾರವು ಗತ ಕಾಲದ ಸಂಕೋಚಗಳನ್ನು ಸಂಪೂರ್ಣವಾಗಿ ಬದಿಗೊತ್ತಿದೆ. ನಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ಉನ್ನತ, ಅಭಿವೃದ್ಧಿ ಹೊಂದಿದ ಮಾರುಕಟ್ಟೆ ಗಳಲ್ಲಿ ನೇರ ಪ್ರವೇಶ ಕಲ್ಪಿಸುವ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಅದು ಮುಕ್ತವಾಗಿ ಒಪ್ಪಿ ಕೊಂಡಿದೆ.
ಇದನ್ನೂ ಓದಿ: Janamejaya Umarji Column: ಸಿದ್ಧಾಂತದ ಹೇರಿಕೆಗೆ ಸರಕಾರಿ ಯಂತ್ರದ ದುರ್ಬಳಕೆ
ಈ ಒಪ್ಪಂದಗಳು ಕೇವಲ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಮಾತ್ರವಲ್ಲ, ಉದ್ಯಮಗಳಿಗೆ ಚುರುಕು ಮುಟ್ಟಿಸಿ, ನಮ್ಮನ್ನು ಮುನ್ನಡೆಸಬಲ್ಲ ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟವನ್ನು ಅವು ಗಳಲ್ಲಿ ತುಂಬುತ್ತವೆ. ಜುಲೈ 2025ರಲ್ಲಿ, ಭಾರತವು ಇಂಗ್ಲೆಂಡ್‌ನೊಂದಿಗೆ ಒಂದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿತಲ್ಲದೇ, ಯುರೋಪಿಯನ್ ಯೂನಿಯನ್ ಜತೆಗಿನ ಮಾತುಕತೆಗಳೂ ಉತ್ತಮ ಪ್ರಗತಿ ಸಾಧಿಸಿವೆ.
ಇದಕ್ಕೂ ಮುನ್ನ, ಪ್ರಧಾನಿ ಮೋದಿಯವರ ದೃಢ ನಿರ್ಧಾರವು ಆಸ್ಟ್ರೇಲಿಯಾ ಮತ್ತು ಯುಎಇ ಜೊತೆ ಉಭಯ ಲಾಭದಾಯಕ ಒಪ್ಪಂದಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಭಾರತೀಯ ಉದ್ಯಮವು ಇಂದು ಜಾಗತಿಕ ರಂಗವನ್ನು ಗೆಲ್ಲುವ ಆತ್ಮವಿಶ್ವಾಸದಿಂದ ಬೀಗುತ್ತಾ, ದೃಢವಾಗಿ ನಿಂತಿದೆ, ತೀವ್ರ ಸ್ಪರ್ಧೆಯ ನಡುವೆಯೂ ಸಮೃದ್ಧವಾಗಿ ಬೆಳೆಯುತ್ತಿದೆ.
ವಿಸ್ತೃತ ಸಮಾಲೋಚನೆಗಳ ಮೂಲಕ ರಚಿಸಲಾದ ಮೋದಿ ಯುಗದ ಪ್ರತಿಯೊಂದು ಎಫ್.ಟಿ.ಎ. ಯನ್ನೂ ಎಲ್ಲಾ ಪಾಲುದಾರರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತವನ್ನು ಆಕರ್ಷಣೀಯ ವನ್ನಾಗಿಸುವ ಪರಿವರ್ತನೆಯ ಪಯಣ 11 ವರ್ಷಗಳ ಹಿಂದೆ ಆರಂಭವಾಯಿತು. ಪ್ರಧಾನಿ ಮೋದಿ ಯವರು ನಮ್ಮ ದುರ್ಬಲ ಆರ್ಥಿಕತೆಯ ಹಣೆಪಟ್ಟಿಯಿಂದ ಪಾರು ಮಾಡಿ, ಅದನ್ನು ವ್ಯಾಪಾರ ಮತ್ತು ಬಂಡವಾಳವನ್ನು ಆಕರ್ಷಿಸುವ ಪ್ರಬಲ ಆಯಸ್ಕಾಂತವಾಗಿ ಪರಿವರ್ತಿಸಿದರು.
ಆಳವಾದ ಸುಧಾರಣೆಗಳ ಮೂಲಕ, ಅನುವಂಶಿಕ ವಾಗಿ ಬಂದ ಸಂಕಷ್ಟಗಳಾದ ಆರ್ಥಿಕ ನಿಶ್ಚಲತೆ, ತೀವ್ರ ಹಣದುಬ್ಬರ, ಭ್ರಷ್ಟಾಚಾರ ಮತ್ತು ಅಸಮರ್ಥತೆಗಳನ್ನು ನಿರ್ಮೂಲನೆ ಮಾಡಿತು. ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆಯೊಂದೇ ಮಾರ್ಚ್ ೨೦೨೫ ರ ವೇಳೆಗೆ ೧.೭೬ ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸಿದ್ದು, ೧೨ ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿದೆ.
ಪಿಎಂ ಗತಿ ಶಕ್ತಿ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ವೆಚ್ಚಗಳನ್ನು ಗಣನೀಯವಾಗಿ ಕಡಿತ ಗೊಳಿಸಿ, ಮೂಲಸೌಕರ್ಯ ವನ್ನು ಸುವ್ಯವಸ್ಥಿತಗೊಳಿಸಿವೆ. ನಮ್ಮ ಡಿಜಿಟಲ್ ಬೆನ್ನೆಲುಬಾದ ಜನ್‌ಧನ್, ಯುಪಿಐ, ಮತ್ತು ಟ್ರೇಡ್ ಕನೆಕ್ಟ್ ಅವಕಾಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸಿದೆ.
ಇದು ಆರು ವರ್ಷಗಳಲ್ಲಿ 12000 ಲಕ್ಷ ಕೋಟಿ ಮೌಲ್ಯದ 65000 ಕೋಟಿ ವಹಿವಾಟುಗಳಿಗೆ ಶಕ್ತಿ ನೀಡಿ, ಸೌಲಭ್ಯ ವಂಚಿತರನ್ನು ಆರ್ಥಿಕ ಮುಖ್ಯ ವಾಹಿನಿಗೆ ತಂದಿದೆ.
ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ: ಇದೀಗ ಯುರೋಪಿಯನ್ ಮುಕ್ತ ವ್ಯಾಪಾರ ಸಂಘದಿಂದ ೧೦೦ ಬಿಲಿಯನ್ ಯುಎಸ್ ಡಾಲರ್‌ಗಳ ಬಂಡವಾಳ ಹರಿವು ಹರಿದು ಬರುತ್ತಿದ್ದು, ಇದು ಒಂದು ಮಿಲಿಯನ್ ನೇರ ಹಾಗೂ ಅಸಂಖ್ಯಾತ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ಮೂಡಿಸಿದೆ. ಕಳೆದ ೨೫ ವರ್ಷಗಳಲ್ಲಿ ಈ ರಾಷ್ಟ್ರಗಳಿಂದ ಬಂದ ಒಟ್ಟು ಎಫ್.ಡಿ.ಐ ಕೇವಲ 11.9 ಬಿಲಿಯನ್ ಯುಎಸ್ ಡಾಲರ್‌ಗಳಾಗಿತ್ತು. ಅದಕ್ಕೆ ಹೋಲಿಸಿದರೆ, ಈ ಹೂಡಿಕೆಯ ಬದ್ಧತೆಯು ಒಂದು ಬೃಹತ್ ಜಿಗಿತವೇ ಸರಿ. ೨೦೨೪-೨೫ರಲ್ಲಿ ಭಾರತದ ಒಟ್ಟು ಎಫ್.ಡಿ.ಐ ೧೪%ರಷ್ಟು ಏರಿಕೆ ಕಂಡು ೮೧ ಬಿಲಿಯನ್ ಯು.ಎಸ್ ಡಾಲರ್‌ಗಳನ್ನು ತಲುಪಿದೆ. 
ಈ ಹಿನ್ನೆಲೆಯಲ್ಲಿ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಲ್ಲಿನ ಅಪಾರ ಅವಕಾಶಗಳು ಮತ್ತು ಪರಿಣಾಮಕಾರಿಯಾಗಿ ಜಾರಿಗೊಂಡಿರುವ ಸುಭದ್ರ ಬೌದ್ಧಿಕ ಆಸ್ತಿ ಹಕ್ಕು ಕಾನೂನುಗಳ ಬಲದಿಂದಾಗಿ, ಈ ವಾಸ್ತವಿಕ ಹೂಡಿಕೆಯ ಹರಿವು ಬದ್ಧತೆಯನ್ನೂ ಮೀರುವ ಸಾಧ್ಯತೆ ದಟ್ಟವಾಗಿದೆ.
ರೈತರು ಮತ್ತು ಮೀನುಗಾರರು ಕೇವಲ ವಿದೇಶಿ ನೇರ ಬಂಡವಾಳ ಅಷ್ಟೇ ಅಲ್ಲದೆ, ಜವಳಿ ಮತ್ತು ರತ್ನಾಭರಣಗಳಂತಹ ಕಾರ್ಮಿಕ ಕೇಂದ್ರಿತ ರ- ಕ್ಷೇತ್ರಗಳು ಭಾರಿ ಏರಿಕೆ ಕಾಣಲಿವೆ. ಇದು ಉದ್ಯೋಗದ ಬೃಹತ್ ಅಲೆಗಳನ್ನೇ ಸೃಷ್ಟಿಸಲಿದೆ. ಯುರೋಪಿಯನ್ ಮುಕ್ತ ವ್ಯಾಪಾರ ಸಂಘದ ಶ್ರೀಮಂತ ಗ್ರಾಹಕರು ನಮ್ಮ ಕೃಷಿ ಉತ್ಪನ್ನಗಳು, ಚಹಾ ಮತ್ತು ಕಾಫಿಗಾಗಿ ಹಾತೊರೆಯುತ್ತಿದ್ದಾರೆ. ಭಾರತವು ಹೈನುಗಾರಿಕೆಯಂತಹ ತನ್ನ ಸೂಕ್ಷ್ಮ ವಲಯಗಳನ್ನು ರಕ್ಷಿಸಿಕೊಂಡಿದ್ದು, ಅದೇ ಸಮಯ ದಲ್ಲಿ ಅಕ್ಕಿ, ಬೇಳೆಕಾಳುಗಳು, ದ್ರಾಕ್ಷಿ, ಮಾವು, ತರಕಾರಿಗಳು, ಸಿರಿಧಾನ್ಯಗಳು ಮತ್ತು ಗೋಡಂಬಿಗಳ ರಫ್ತಿಗೆ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದೆ.
ಬಿಸ್ಕತ್ತುಗಳು, ಮಿಠಾಯಿಗಳು, ಚಾಕೊಲೇಟ್ ಮತ್ತು ಸಾಸ್ ಗಳಂತಹ ಸಂಸ್ಕರಿಸಿದ ಆಹಾರ ಪದಾರ್ಥಗಳ ಮೇಲಿನ ಸುಂಕ ಕಡಿತವು ಈ ಒಪ್ಪಂದವನ್ನು ಇನ್ನಷ್ಟು ಸಿಹಿಗೊಳಿಸಿದೆ. ಇದಲ್ಲದೆ, ಗುಣಮಟ್ಟದ ಮಾನದಂಡಗಳ ಕುರಿತಾದ ಸುಗಮ ಸಹಕಾರದ ಮೂಲಕ, ಹೆಪ್ಪುಗಟ್ಟಿದ ಸೀಗಡಿ ಮತ್ತು ಸ್ಕ್ವಿಡ್ ಮೀನುಗಳ ರಫ್ತು ಭಾರಿ ಪ್ರಮಾಣ ದಲ್ಲಿ ಹೆಚ್ಚಾಗಲಿದ್ದು, ಇದು ಮೀನುಗಾರರಲ್ಲಿ ಸಂತಸ ತಂದಿದೆ.
ಈ ಒಪ್ಪಂದಗಳು ತಯಾರಕರಲ್ಲಿ, ಸೇವಾ ಪೂರೈಕೆದಾರರಲ್ಲಿ ಮತ್ತು ಸಾಮಾನ್ಯ ನಾಗರಿಕರಲ್ಲಿ ಹೊಸ ಉತ್ಸಾಹವನ್ನು ಹುಟ್ಟುಹಾಕುತ್ತವೆ. ಭಾರತದ ಭವಿಷ್ಯವು ಪ್ರತ್ಯೇಕವಾಗಿ ಉಳಿಯುವುದರ ಲ್ಲಿಲ್ಲ, ಬದಲಿಗೆ ಸಕ್ರಿಯವಾಗಿ ಪಾಲ್ಗೊಳ್ಳುವುದರಲ್ಲಿದೆ. ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುವುದು, ಶಿಕ್ಷಣ ಮತ್ತು ಡಿಜಿಟಲ್ ಕ್ರಾಂತಿಯ ಮೂಲಕ ಸಬಲೀಕರಣಗೊಳಿಸುವುದು ಹಾಗೂ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ.
ವ್ಯಾಪಾರ ಮತ್ತು ತಂತ್ರಜ್ಞಾನಗಳು ಮಾನವಕುಲದ ಸೇವೆ ಗೈಯುವ ಹಾಗೂ ನಾವೀನ್ಯತೆ ಮತ್ತು ಸರ್ವರನ್ನೂ ಒಳಗೊಳ್ಳುವಿಕೆಯು ಜೊತೆಜೊತೆಯಾಗಿ ಸಾಗುವ ವಾಣಿಜ್ಯ ಜಗತ್ತಿನಲ್ಲಿ, ಭಾರತದ ನಾಯಕನ ಸ್ಥಾನ ವನ್ನು ನಾವೆಲ್ಲರೂ ಒಟ್ಟಾಗಿ ಪುನಃಸ್ಥಾಪಿಸೋಣ.
(ಲೇಖಕರು: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು)
 
            