ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ರಾಜಕೀಯ ನೆಪಗಳಾಚೆಗಿನ ಇಚ್ಛಾಶಕ್ತಿ ಮಾದರಿಗಳು

ತುರ್ತು ಪರಿಹಾರದ ಜೊತೆಗೆ ಬರಗಾಲಕ್ಕೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಫಡ್ನವೀಸ್ ಅವರು 2014ರ ‘ಜಲಯುಕ್ತ ಶಿವಾರ್’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದ್ದರು. ದೊಡ್ಡ ಅಣೆಕಟ್ಟುಗಳಿಗಿಂತ ವಿಕೇಂದ್ರೀಕೃತ ಸಣ್ಣ ನೀರಾವರಿ ಜಾಲಕ್ಕೆ ಆದ್ಯತೆ ನೀಡಿದ ಈ ಯೋಜನೆ ಯಡಿ, ಪ್ರತಿ ವರ್ಷ 5000 ಹಳ್ಳಿಗಳನ್ನು ಆಯ್ಕೆ ಮಾಡಿ ಸಣ್ಣ ಹಳ್ಳಗಳ ಆಳ ಹೆಚ್ಚಿಸುವುದು, ಚೆಕ್ ಡ್ಯಾಂ ಕಟ್ಟುವುದು ಮತ್ತು ಕೃಷಿ ಹೊಂಡಗಳನ್ನು ತೋಡುವ ಕೆಲಸವನ್ನು ಯುದ್ಧೋಪಾದಿಯಲ್ಲಿ ಮಾಡಲಾಯಿತು.

ರಾಜಕೀಯ ನೆಪಗಳಾಚೆಗಿನ ಇಚ್ಛಾಶಕ್ತಿ ಮಾದರಿಗಳು

-

ಗಂಟಾಘೋಷ

ಕಳೆದ 2-3 ವಾರಗಳಲ್ಲಿ ಕೈ ಕಾಲು ಮುರುಟಿ ಹುಟ್ಟಿ ವಾರಗಳಲ್ಲಿ ಕೈ ಕಾಲು ಮುರುಟಿ ಹುಟ್ಟಿ ವಾರಗಳಲ್ಲಿ ಕೈ ಕಾಲು ಮುರುಟಿ ಹುಟ್ಟಿ ಬರಗಾಲ ಅಥವಾ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳು ಎದುರಾದಾಗ, ಸರಕಾರದ ಕಾರ್ಯವೈಖರಿ ಹೇಗಿದೆ ಎನ್ನುವುದರ ಮೇಲೆ ಆಡಳಿತದ ನೈಜ ಬಣ್ಣ ಬಯಲಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಕೇವಲ ಕೇಂದ್ರದತ್ತ ಬೆರಳು ಮಾಡುವುದು, ಪರಿಹಾರಕ್ಕಾಗಿ ಪತ್ರ ಬರೆದು ಕೈಕಟ್ಟಿ ಕೂರುವುದು ಅಥವಾ ನೆಪಗಳನ್ನು ಹೇಳಿಕೊಂಡು ಜವಾಬ್ದಾರಿ ಯಿಂದ ನುಣುಚಿಕೊಳ್ಳುವುದು ಅತ್ಯಂತ ಸುಲಭದ ದಾರಿ. ಆದರೆ, ನಿಜವಾದ ನಾಯಕತ್ವ ಎಂದರೆ ವಾಸ್ತವಕ್ಕೆ ಇಳಿದು ತುರ್ತು ಪರಿಹಾರ ಒದಗಿಸುವುದು ಹಾಗೂ ಭವಿಷ್ಯದ ಬಿಕ್ಕಟ್ಟುಗಳನ್ನು ತಪ್ಪಿಸಲು ದೂರದೃಷ್ಟಿಯ ಯೋಜನೆಗಳನ್ನು ಸಮರಸೋಪಾದಿಯಲ್ಲಿ ಜಾರಿಗೊಳಿಸುವುದಾಗಿದೆ.

ವಿಪತ್ತಿನ ಸಮಯದಲ್ಲಿ ಕೇವಲ ನೆಪ ಹೇಳದೆ, ಈ ಮೇಲಿನ ವೈeನಿಕ ಕ್ರಮಗಳನ್ನೂ ಮೀರಿ ವಾಸ್ತವಕ್ಕೆ ಇಳಿದು ಆಡಳಿತ ನಡೆಸುವ ಮೂಲಕ ಇಡೀ ದೇಶಕ್ಕೆ ‘ಬೆ ಮಾದರಿ’ಗಳನ್ನು ಪರಿಚಯಿಸಿದ ಮುಖ್ಯಮಂತ್ರಿಗಳ ಕೆಲ ಉದಾಹರಣೆಗಳು ಇಲ್ಲಿವೆ: ಯಾವುದೇ ವಿಪತ್ತು ಎದುರಾದಾಗ ಮೊದಲ 24 ಗಂಟೆಗಳ ಕಾರ್ಯಾಚರಣೆ ಅತ್ಯಂತ ನಿರ್ಣಾಯಕವಾಗಿರುತ್ತದೆ ಎಂಬುದಕ್ಕೆ ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್ ಪಟ್ನಾಯಕ್ ಅವರ ಆಡಳಿತ ಸಾಕ್ಷಿಯಾಗಿದೆ.

2013ರ ‘ಫೈಲಿನ್’ ಹಾಗೂ 2019ರ ‘ಫಾನಿ’ ಚಂಡಮಾರುತ ಮತ್ತು ಪ್ರವಾಹ ಒಡಿಶಾಗೆ ಅಪ್ಪಳಿಸಿ ದಾಗ, ಅವರು ಮುಂಜಾಗ್ರತೆಯಾಗಿ ತಮ್ಮದೇ ರಾಜ್ಯದ ಆಡಳಿತ ಯಂತ್ರವನ್ನು ಗರಿಷ್ಠ ಮಟ್ಟದಲ್ಲಿ ಸಜ್ಜುಗೊಳಿಸಿ, ಕೇವಲ 24 ಗಂಟೆಗಳ ಅಂತರದಲ್ಲಿ ಸಮುದ್ರ ತೀರ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿದ್ದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರನ್ನು ಅತ್ಯಂತ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಬೃಹತ್ ಕಾರ್ಯಾಚರಣೆ ಯನ್ನು ಯಶಸ್ವಿಯಾಗಿ ಮುಗಿಸಿದ್ದರು.

ಇದನ್ನೂ ಓದಿ: Gururaj Gantihole Column: ಬರವನ್ನು ಎದುರಿಸುವ ಬಲವಾದ ಇಚ್ಛಾಶಕ್ತಿ ಇದೆಯೇ?

ಈ ತ್ವರಿತ ಮತ್ತು ಅಚ್ಚುಕಟ್ಟಾದ ಸ್ಥಳಾಂತರ ಪ್ರಕ್ರಿಯೆಯಿಂದಾಗಿ ಸಾವಿರಾರು ಜೀವಗಳು ಉಳಿದವು. ವಿಪತ್ತು ನಿರ್ವಹಣೆಯಲ್ಲಿ ‘ಶೂನ್ಯ ಸಾವು’ ಎನ್ನುವ ಕಲ್ಪನೆಯನ್ನು ಹುಟ್ಟು ಹಾಕಿದ ನವೀನ್ ಪಟ್ನಾಯಕ್ ಅವರ ಈ ಮಾದರಿಯನ್ನು ವಿಶ್ವಸಂಸ್ಥೆ (ಖಿಘೆ) ಕೂಡ ಮುಕ್ತಕಂಠದಿಂದ ಶ್ಲಾಘಿಸಿತು. ಇದೇ ರೀತಿಯ ಮತ್ತೊಂದು ಅದ್ಭುತ ನಾಯಕತ್ವ 2018ರಲ್ಲಿ ಕೇರಳ ಕಂಡ ಶತಮಾನದ ಅತಿ ದೊಡ್ಡ ಪ್ರವಾಹದ ಸಂದರ್ಭದಲ್ಲಿ ಇಡೀ ರಾಜ್ಯ ಜಲಾವೃತವಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತ ವಾದಾಗ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇವಲ ಎನ್‌ಡಿಆರ್‌ಎಫ್ ಅಥವಾ ಸೇನಾಪಡೆಗಳ ರಕ್ಷಣಾ ಕಾರ್ಯಾ ಚರಣೆಯನ್ನೇ ನೆಚ್ಚಿಕೊಳ್ಳಲಿಲ್ಲ. ‌

ಬದಲಾಗಿ, ಕಡಲತೀರದ ಸಾವಿರಾರು ಸ್ಥಳೀಯ ಮೀನುಗಾರರನ್ನು ತಕ್ಷಣವೇ ಸಂಪರ್ಕಿಸಿ, ಅವರನ್ನು ‘ಕೇರಳದ ನೌಕಾಪಡೆ’ ಎಂದು ಘೋಷಿಸಿ ರಕ್ಷಣಾ ಕಾರ್ಯಕ್ಕೆ ಇಳಿಸಿ ದರು. ತಮ್ಮ ಸ್ವಂತ ದೋಣಿಗಳೊಂದಿಗೆ ಪ್ರವಾಹ ಪೀಡಿತ ಒಳನಾಡುಗಳಿಗೆ ನುಗ್ಗಿದ ಈ ಮೀನುಗಾರರು ಬರೋಬ್ಬರಿ 65000ಕ್ಕೂ ಹೆಚ್ಚು ಸಂತ್ರಸ್ತರನ್ನು ರಕ್ಷಿಸಿ ಜೀವದಾನ ಮಾಡಿದರು. ರಕ್ಷಣಾ ಕಾರ್ಯದ ಜೊತೆಗೆ, ಸಂತ್ರಸ್ತರಿಗೆ ಎದುರಾಗಬಹುದಾದ ಹಸಿವಿನ ಸಂಕಟವನ್ನು ನೀಗಿಸಲು ಕೇರಳ ಸರಕಾರ ರಾಜ್ಯದಾ ದ್ಯಂತ ಒಂದೇ ಮಾದರಿಯ ‘ಸಮುದಾಯ ಅಡುಗೆಮನೆ’ಗಳನ್ನು ಅತಿ ವೇಗವಾಗಿ ತೆರೆಯಿತು.

ಇದರ ಮೂಲಕ ಲಕ್ಷಾಂತರ ಜನರಿಗೆ ಮೂರೂ ಹೊತ್ತು ಬಿಸಿ ಊಟ ಒದಗಿಸುವ ವ್ಯವಸ್ಥೆ ಮಾಡಲಾಯಿತು. ಮುಖ್ಯಮಂತ್ರಿಗಳು ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಿ, ಸುಳ್ಳು ಸುದ್ದಿಗಳು ಹರಡದಂತೆ ತಡೆದು ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದರು. 2014ರಲ್ಲಿ ‘ಹುದ್-ಹುದ್’ ಚಂಡಮಾರುತ ಅಪ್ಪಳಿಸಿ ಆಂಧ್ರಪ್ರದೇಶದ ಪ್ರಮುಖ ವಾಣಿಜ್ಯ ನಗರಿ ವಿಶಾಖಪಟ್ಟಣಂ ಅಕ್ಷರಶಃ ನಲುಗಿಹೋಗಿzಗ, ಅಂದಿನ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತೋರಿದ ಆಡಳಿತಾತ್ಮಕ ಬದ್ಧತೆ ಅನನ್ಯವಾದದ್ದು.

Screenshot_1 ಒಕ

ಇಂತಹ ಭಾರಿ ವಿಕೋಪ ನಡೆದಾಗ ರಾಜಧಾನಿ ಹೈದರಾಬಾದ್‌ನ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಆದೇಶಗಳನ್ನು ನೀಡುವ ಬದಲು, ಅವರು ನೇರವಾಗಿ ವಿಶಾಖಪಟ್ಟಣಂಗೆ ಧಾವಿಸಿದರು. ಕೇವಲ ಭೇಟಿ ನೀಡಿ ವಾಪಸ್ಸಾಗದೆ, ಸತತ ಒಂದು ವಾರಗಳ ಕಾಲ ಒಂದು ‘ಬಸ್’ ಅನ್ನೇ ತಮ್ಮ ಅಧಿಕೃತ ಕಚೇರಿಯನ್ನಾಗಿ ಪರಿವರ್ತಿಸಿಕೊಂಡು ಬೀಡುಬಿಟ್ಟರು. ಹಗಲಿರುಳು ಆ ಬಸ್‌ನ ಇದ್ದುಕೊಂಡು, ರಸ್ತೆ ತೆರವು, ವಿದ್ಯುತ್ ಸಂಪರ್ಕ ಮರುಸ್ಥಾಪನೆ, ಕುಡಿಯುವ ನೀರು ಪೂರೈಕೆ ಮತ್ತು ಪರಿಹಾರ ಸಾಮಗ್ರಿಗಳ ವಿತರಣೆಯನ್ನು ಸ್ಥಳದ ನಿಂತು ನಿರ್ವಹಿಸಿದರು.

ಹಿರಿಯ ಅಧಿಕಾರಿಗಳನ್ನು ತಮ್ಮ ಜೊತೆಯ ಇರಿಸಿಕೊಂಡು ಕ್ಷಣಕ್ಷಣದ ವರದಿ ಪಡೆಯುತ್ತಾ, ಕೆಳಹಂತದ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು. ಬರಗಾಲವನ್ನು ಎದುರಿಸುವಲ್ಲಿ ತಾತ್ಕಾಲಿಕ ಮತ್ತು ದೀರ್ಘಕಾಲೀನ ಯೋಜನೆಗಳೆರಡನ್ನೂ ಸಮರ್ಥವಾಗಿ ಬಳಸಿಕೊಂಡ ಕೀರ್ತಿ ಮಹಾ ರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸಲ್ಲುತ್ತದೆ. 2014ರಲ್ಲಿ ಮರಾಠ ವಾಡ ಭಾಗದ ಲಾತೂರ್ ಜಿಯಲ್ಲಿ ಬರಗಾಲ ಬಂದು ಕುಡಿಯುವ ನೀರಿಗೂ ಭಾರಿ ಹಾಹಾಕಾರ ಎzಗ ಅವರು ಕೇವಲ ಟ್ಯಾಂಕರ್ ಮಾಫಿಯಾಗೆ ಅವಕಾಶ ನೀಡಲಿಲ್ಲ.

ತಕ್ಷಣವೇ ಕೇಂದ್ರ ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, 340 ಕಿ.ಮೀ ದೂರದ ಸಾಂಗ್ಲಿಯ ಮೀರಜ್‌ನಿಂದ ಕೃಷ್ಣಾ ನದಿಯ ನೀರನ್ನು ‘ಜಲದೂತ್ ಎಕ್ಸ್‌ಪ್ರೆಸ್’ ಎಂಬ ವಿಶೇಷ ರೈಲುಗಳ ಮೂಲಕ ಸಾಗಿಸುವ ತುರ್ತು ವ್ಯವಸ್ಥೆ ಮಾಡಿದರು. ಪ್ರತಿದಿನ ಲಕ್ಷಾಂತರ ಲೀಟರ್ ನೀರನ್ನು ರೈಲಿನಲ್ಲಿ ಸರಬರಾಜು ಮಾಡುವ ಮೂಲಕ ದೊಡ್ಡದೊಂದು ಮಾನವೀಯ ಬಿಕ್ಕಟ್ಟನ್ನು ಅಂದು ಯಶಸ್ವಿಯಾಗಿ ತಪ್ಪಿಸಲಾಯಿತು.

ತುರ್ತು ಪರಿಹಾರದ ಜೊತೆಗೆ ಬರಗಾಲಕ್ಕೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಫಡ್ನವೀಸ್ ಅವರು 2014ರ ‘ಜಲಯುಕ್ತ ಶಿವಾರ್’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದ್ದರು. ದೊಡ್ಡ ಅಣೆಕಟ್ಟುಗಳಿಗಿಂತ ವಿಕೇಂದ್ರೀಕೃತ ಸಣ್ಣ ನೀರಾವರಿ ಜಾಲಕ್ಕೆ ಆದ್ಯತೆ ನೀಡಿದ ಈ ಯೋಜನೆಯಡಿ, ಪ್ರತಿ ವರ್ಷ 5000 ಹಳ್ಳಿಗಳನ್ನು ಆಯ್ಕೆ ಮಾಡಿ ಸಣ್ಣ ಹಳ್ಳಗಳ ಆಳ ಹೆಚ್ಚಿಸು ವುದು, ಚೆಕ್ ಡ್ಯಾಂ ಕಟ್ಟುವುದು ಮತ್ತು ಕೃಷಿ ಹೊಂಡಗಳನ್ನು ತೋಡುವ ಕೆಲಸವನ್ನು ಯುದ್ಧೋಪಾದಿಯಲ್ಲಿ ಮಾಡಲಾಯಿತು.

ಇದರಿಂದ ಕೇವಲ 4-5 ವರ್ಷಗಳಲ್ಲಿ ಸಾವಿರಾರು ಹಳ್ಳಿಗಳು ಕುಡಿಯುವ ನೀರಿಗಾಗಿ ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗುವುದು ತಪ್ಪಿ, ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಯಿತು. ಗುಜರಾತ್ ಮುಖ್ಯಮಂತ್ರಿಯಾಗಿzಗ ಮೋದಿಯವರು ವಿಪತ್ತನ್ನು ಕೇವಲ ಸಮಸ್ಯೆಯಾಗಿ ನೋಡದೆ, ಅದನ್ನು ಬೃಹತ್ ಮೂಲಸೌಕರ್ಯ ನಿರ್ಮಾಣದ ಅವಕಾಶವನ್ನಾಗಿ ಪರಿವರ್ತಿಸಿದ ರೀತಿ ದೇಶದ ಜಲ ನಿರ್ವಹಣಾ ಇತಿಹಾಸದ ಅತ್ಯಂತ ವಿಶಿಷ್ಟವಾದದ್ದು. ಮಳೆಗಾಲದಲ್ಲಿ ನರ್ಮದಾ ನದಿಯು ಉಕ್ಕಿ ಹರಿದು ಭಾರಿ ಪ್ರವಾಹ ಸೃಷ್ಟಿಸುತ್ತಿದ್ದರೆ, ಅದೇ ಸಮಯದಲ್ಲಿ ಸೌರಾಷ್ಟ್ರ ಭಾಗವು (11 ಜಿಲ್ಲೆಗಳು) ಬರಗಾಲ ಎದುರಿಸು ತ್ತಿತ್ತು. ಈ ಉಭಯ ಬಿಕ್ಕಟ್ಟನ್ನು ಏಕಕಾಲದಲ್ಲಿ ಬಗೆಹರಿಸಲು ಅವರು 2012ರಲ್ಲಿ ‘ಸೌನಿ ಯೋಜನೆ’ಯನ್ನು ಜಾರಿಗೆ ತಂದರು.

ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಬಾರದು ಮತ್ತು ನೀರು ಆವಿಯಾಗಬಾರದು ಎಂಬ ಕಾರಣಕ್ಕೆ ತೆರೆದ ಕಾಲುವೆಗಳ ಬದಲು 1125 ಕಿ.ಮೀ ಉದ್ದದ ಬೃಹತ್ ಭೂಗತ ಪೈಪ್‌ಲೈನ್ ಜಾಲವನ್ನು ನಿರ್ಮಿಸಿ, ನರ್ಮದಾ ನದಿಯ ಪ್ರವಾಹದ ನೀರನ್ನು ಸೌರಾಷ್ಟ್ರದ ಬರಪೀಡಿತ 115 ಅಣೆಕಟ್ಟುಗಳಿಗೆ ಹರಿಸಿದರು. 2003-04ರ ಬರಗಾಲದಲ್ಲಿ ಅಂತರ್ಜಲ 1000 ಅಡಿಗಿಂತ ಕೆಳಗೆ ಕುಸಿದಿದ್ದಾಗ ‘ಸುಜಲಾಂ ಸುಫಲಾಂ’ ಯೋಜನೆಯಡಿ ನದಿ ಜೋಡಣೆ ಹಾಗೂ ‘ಭಗೀರಥ ಅಭಿಯಾನ’ದಡಿ ಜನರ ಸಹಭಾಗಿತ್ವದಲ್ಲಿ ಲಕ್ಷಾಂತರ ಚೆಕ್ ಡ್ಯಾಂಗಳನ್ನು ನಿರ್ಮಿಸಿದರು.

ಮಳೆಯ ಪ್ರತಿ ಹನಿಯನ್ನೂ ಇಂಗಿಸುವ ಈ ಪ್ರೊ-ಆಕ್ಟಿವ್ ಕಾರ್ಯತಂತ್ರದಿಂದಾಗಿ, ಸದಾ ಬರಗಾಲ ದಿಂದ ತತ್ತರಿಸುತ್ತಿದ್ದ ಗುಜರಾತ್ ಕೃಷಿ ಕ್ಷೇತ್ರದಲ್ಲಿ ಸತತವಾಗಿ ಎರಡಂಕಿ ಅಭಿವೃದ್ಧಿ ದರವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.

ಬರ ನಿರ್ವಹಣೆಯ ವೈಜ್ಞಾನಿಕ ವಿಧಾನ

ಮಳೆ ಕೊರತೆಯ ಮುನ್ಸೂಚನೆ ಅಥವಾ ವರದಿ ಬಂದ ನಂತರ ಸರಕಾರ ಕೈಕಟ್ಟಿ ಕೂರುವಂತಿಲ್ಲ. ಬರವನ್ನು ಸಮರ್ಥವಾಗಿ ಎದುರಿಸಲು ಕೆಲವು ನಿರ್ದಿಷ್ಟ ‘ವೈಜ್ಞಾನಿಕ ಹಂತ’ಗಳಿವೆ. ಪ್ರಸ್ತುತ ಆಡಳಿತ ವ್ಯವಸ್ಥೆ ಈ ಹಂತಗಳನ್ನು ತಳಮಟ್ಟದಲ್ಲಿ ಜಾರಿ ಮಾಡುತ್ತಿದೆಯೇ ಎಂಬುದನ್ನು ಪ್ರಜ್ಞಾ ವಂತ ನಾಗರಿಕರು ಈ ಕೆಳಗಿನ ಅಂಶಗಳ ಮೂಲಕ ಪರಾಮರ್ಶಿಸಿ ಪ್ರಶ್ನಿಸಬೇಕಿದೆ:

24*7 ವಾರ್ ರೂಮ್ ಮತ್ತು ಕ್ಷಿಪ್ರ ಸ್ಪಂದನಾ ಪಡೆ: ಕೇವಲ ವಿಧಾನಸೌಧದಲ್ಲಿ ಮಾತ್ರವಲ್ಲದೆ, ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಂದಾಯ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಮನ್ವಯ ದೊಂದಿಗೆ 247 ಕಾರ್ಯನಿರ್ವಹಿಸುವ ‘ಬರ ನಿರ್ವಹಣಾ ವಾರ್ ರೂಮ್’‌ ಗಳನ್ನು ತೆರೆಯಬೇಕು. ರೈತರು ಕುಡಿಯುವ ನೀರು, ಮೇವು ಅಥವಾ ಬೆಳೆ ನಷ್ಟದ ಬಗ್ಗೆ ದೂರು ನೀಡಿದ 48 ಗಂಟೆಗಳ ಒಳಗೆ ಸ್ಥಳದ ಪರಿಹಾರ ಒದಗಿಸುವ ಕಟ್ಟುನಿಟ್ಟಾದ ವ್ಯವಸ್ಥೆ ಜಾರಿಯಾಗ ಬೇಕು.

ಸ್ಥಳೀಯ ಸಂಪನ್ಮೂಲಗಳ ಸಕ್ರಿಯ ಬಳಕೆ ಮತ್ತು ತುರ್ತು ಆಹಾರ ಭದ್ರತೆ: ರಕ್ಷಣಾ ಕಾರ್ಯ ಗಳಿಗಾಗಿ ಕೇವಲ ಸೇನಾಪಡೆಗಳನ್ನು ನೆಚ್ಚಿಕೊಳ್ಳುವ ಬದಲು ಸ್ಥಳೀಯ ಸಮುದಾಯ ವನ್ನು ಬಳಸಿ ಕೊಳ್ಳುವುದು ಹಾಗೂ ಯಾರೂ ಹಸಿವಿನಿಂದ ಇರದಂತೆ ತ್ವರಿತವಾಗಿ ‘ಸಮುದಾಯ ಅಡುಗೆಮನೆ’ ಗಳನ್ನು ತೆರೆಯುವುದು.

ಕ್ಷಿಪ್ರ ಸಂಪರ್ಕ ಮರುಸ್ಥಾಪನೆ ಮತ್ತು ಪರ್ಯಾಯ ಜಲ ಪೂರೈಕೆ: ನಾಯಕರು ಕಚೇರಿ ಬಿಟ್ಟು ನೇರವಾಗಿ ವಾಸ್ತವಕ್ಕೆ ಇಳಿದು ರಸ್ತೆ ಮತ್ತು ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಮರುಸ್ಥಾಪಿಸು ವುದು ಹಾಗೂ ಕುಡಿಯುವ ನೀರಿನ ತೀವ್ರ ಅಭಾವವಿದ್ದಾಗ ಲಭ್ಯವಿರುವ ಪರ್ಯಾಯ ಸಾರಿಗೆಗಳ ಮೂಲಕ ಕುಡಿಯುವ ನೀರು ಪೂರೈಸುವುದು.

ಡಿಸ್ಟ್ರೆಸ್ ಮಾರಾಟ ತಡೆಗೆ ಮಾರುಕಟ್ಟೆ ಮಧ್ಯಸ್ಥಿಕೆ: ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ರೈತರು ತಾವು ಬೆಳೆದ ಅಲ್ಪಸ್ವಲ್ಪ ಬೆಳೆಗಳನ್ನು ಹಾಗೂ ನಿರ್ವಹಣೆ ಮಾಡಲಾಗದೆ ತಮ್ಮ ಜಾನುವಾರು ಗಳನ್ನು ದಳಿಗಳಿಗೆ, ಕಟುಕರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಬೇಕು. ಇದಕ್ಕಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮಧ್ಯಸ್ಥಿಕೆ ನಿಧಿಯನ್ನು ಸರಕಾರವೇ ಸೃಷ್ಟಿಸಬೇಕು.

ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ಲಸಿಕೀಕರಣ: ಕೇವಲ ಮೇವು ಮತ್ತು ನೀರು ಒದಗಿಸುವುದಷ್ಟೇ ಅಲ್ಲ, ಬರಗಾಲದಲ್ಲಿ ಜಾನುವಾರುಗಳ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಸಾಂಕ್ರಾಮಿಕ ರೋಗಗಳು ಭಾರಿ ವೇಗದಲ್ಲಿ ಹರಡುತ್ತವೆ. ಹೀಗಾಗಿ ಗೋಶಾಲೆಗಳಲ್ಲಿ ಮತ್ತು ಹಳ್ಳಿ ಗಳಲ್ಲಿ ಪಶುಸಂಗೋಪನಾ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಲಸಿಕೀಕರಣ ಶಿಬಿರಗಳನ್ನು ಕಡ್ಡಾಯವಾಗಿ ನಡೆಸಬೇಕು.

ಆರೋಗ್ಯ ಮತ್ತು ಆಹಾರ ಭದ್ರತೆ : ಶುದ್ಧ ಕುಡಿಯುವ ನೀರಿನ ಅಭಾವದಿಂದ ಕಾಲರಾ, ಡೆಂಗ್ಯೂ ಮುಂತಾದ ಜಲಜನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಭಾಗದಲ್ಲಿ ತುರ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಹಾಗೆಯೇ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಹೆಚ್ಚುವರಿ ಪೌಷ್ಟಿಕ ಆಹಾರ ಧಾನ್ಯಗಳನ್ನು ವಿತರಿಸಬೇಕು.

ಭವಿಷ್ಯದ ಭದ್ರತೆ: ಭವಿಷ್ಯದ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಸರಕಾರ ವು ಕೇವಲ ತಾತ್ಕಾಲಿಕ ಪರಿಹಾರಗಳ ಮೊರೆಹೋಗುವ ಬದಲು, ದೀರ್ಘಕಾಲೀನ ಜಲ-ಮೂಲ ಸೌಕರ್ಯಗಳ ಮೇಲಿನ ‘ಬಂಡವಾಳ ವೆಚ್ಚ’ವನ್ನು ಗಣನೀಯವಾಗಿ ಹೆಚ್ಚಿಸುವತ್ತ ಗಮನಹರಿಸ ಬೇಕು. ಮಳೆಗಾಲಕ್ಕೂ ಮುನ್ನವೇ ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂಗಳ ನಿರ್ಮಾಣ ಹಾಗೂ ಅಂತರ್ಜಲ ಮರುಪೂರಣದಂತಹ ವಿಕೇಂದ್ರೀಕೃತ ಯೋಜನೆಗಳಿಗೆ ಬಜೆಟ್‌ನಲ್ಲಿ ಶಾಶ್ವತ ಅನುದಾನ ಮೀಸಲಿಡಬೇಕು.

ಮೇಲಿನ ಉದಾಹರಣೆಗಳು ಕಲಿಸುವ ಪಾಠ ಒಂದೇ; ಬಿಕ್ಕಟ್ಟು ಎದುರಾದಾಗ ತಾತ್ಕಾಲಿಕ ಪರಿಹಾರ ಘೋಷಿಸಿ ಕೈ ತೊಳೆದು ಕೊಳ್ಳುವುದು ನೈಜ ಆಡಳಿತವಲ್ಲ. ವೈeನಿಕ ವಿಧಾನದ ಮೂಲಕ ಮೂಲ ಸೌಕರ್ಯ ಸಿದ್ಧಪಡಿಸುವುದು, ವಿಕೇಂದ್ರೀಕೃತ ಜಲ ಸಂಗ್ರಹಣೆಗೆ ಒತ್ತು ನೀಡುವುದು, ವಿಪತ್ತಿನ ಸಮಯದಲ್ಲಿ ನೆಪಗಳನ್ನು ಹೇಳದೆ ತಳಮಟ್ಟದಲ್ಲಿ ಜನರನ್ನು ಹಾಗೂ ಆಡಳಿತ ಯಂತ್ರವನ್ನು ಸಕ್ರಿಯಗೊಳಿಸುವುದು ಹಾಗೂ ಮುಂದೆ ಇಂತಹ ಪರಿಸ್ಥಿತಿ ಎದುರಾಗದಂತೆ ಸಿದ್ಧತೆ ಮಾಡಿಕೊಳ್ಳು ವುದು ನಿಜವಾದ ರಾಜಕೀಯ ಇಚ್ಛಾಶಕ್ತಿ. ನಮ್ಮ ಆಡಳಿತಗಾರರು ಇಂತಹ ನಾಯಕರ ಹೆಜ್ಜೆ ಗುರುತುಗಳನ್ನು ಅನುಸರಿಸಿದಾಗ ಮಾತ್ರ ರಾಜ್ಯದ ರೈತರಿಗೆ ಮತ್ತು ಜನಸಾಮಾನ್ಯರಿಗೆ ನೈಜ ಭದ್ರತೆ ಒದಗಿಸಲು ಸಾಧ್ಯ.