Gururaj Gantihole Column: ಕೊರಗ ಜನಾಂಗದ ಅಭಿವೃದ್ಧಿಗೆ ಮೋದಿ ಸರಕಾರದ ಕಾಳಜಿ !
ಮಾನವ ಜೀವಸಂಕುಲ ಆರಂಭಗೊಂಡದ್ದು ನಾಗರಿಕತೆಯ ಪೋಷಣೆಯಲ್ಲಿ. ಪ್ರಸ್ತುತ ಜಗತ್ತಿನ ಮೂಲ ನಾಗರಿಕತೆ ಇತಿಹಾಸ ಹೊಂದಿರುವ ಏಳು ದೇಶಗಳು ನಮ್ಮ ಸುತ್ತಮುತ್ತಲಿವೆ. ಇವುಗಳಲ್ಲಿ, ಅತ್ಯಂತ ಪುರಾತನವಾದ ಭಾರತದ ನಾಗರಿಕತೆಯೂ ಒಂದು. ಆದಿಮಾನವನಿಂದ ನಾಗರಿಕ ನಾಗುವತ್ತ ಸಾಗಿದ ಮಾನವನ ಜೀವನಪಯಣದಲ್ಲಿ ಕಾಡುಮೇಡುಗಳಲ್ಲಿ, ಬುಡಕಟ್ಟು ಸಮುದಾಯವಾಗಿ, ವಿವಿಧ ಪಂಗಡಗಳ ಮೂಲಕ, ಸಾವಿರಾರು ವರ್ಷಗಳ ಕಾಲ ಜೀವನ ನಡೆಸುತ್ತ ಇಂದಿನ ಆಧುನಿಕತೆಗೆ ತನ್ನನ್ನು ತೆರೆದುಕೊಂಡಿದ್ದಾನೆನ್ನಬಹುದು


ಗಂಟಾಘೋಷ
ಬಲಾಢ್ಯ ಸಮುದಾಯಗಳಿಗೆ ನೂರಾರು ಕೋಟಿ ಸುರಿಯುವ, ಜಾತಿಗಳ ಅಂಕಿ-ಸಂಖ್ಯೆ ಅರಿಯಲು ಗಣತಿ ನಡೆಸುವ ವಿಭಜನಾ ನೀತಿಗಿಂತ, ಒಂದು ಜನಾಂಗದ ಸಂತತಿಯೇ ಅಳಿದುಹೋಗುತ್ತಿರುವವರನ್ನು ಕೈ ಹಿಡಿದು, ಸಮಾಜಮುಖಿಯಾಗಿಸುವುದು ನಿಜ ಸರಕಾರದ ಕರ್ತವ್ಯ!
ಮಾನವ ಜೀವಸಂಕುಲ ಆರಂಭಗೊಂಡದ್ದು ನಾಗರಿಕತೆಯ ಪೋಷಣೆಯಲ್ಲಿ. ಪ್ರಸ್ತುತ ಜಗತ್ತಿನ ಮೂಲ ನಾಗರಿಕತೆ ಇತಿಹಾಸ ಹೊಂದಿರುವ ಏಳು ದೇಶಗಳು ನಮ್ಮ ಸುತ್ತಮುತ್ತಲಿವೆ. ಇವುಗಳಲ್ಲಿ, ಅತ್ಯಂತ ಪುರಾತನವಾದ ಭಾರತದ ನಾಗರಿಕತೆಯೂ ಒಂದು. ಆದಿಮಾನವನಿಂದ ನಾಗರಿಕ ನಾಗುವತ್ತ ಸಾಗಿದ ಮಾನವನ ಜೀವನಪಯಣದಲ್ಲಿ ಕಾಡುಮೇಡುಗಳಲ್ಲಿ, ಬುಡಕಟ್ಟು ಸಮುದಾಯವಾಗಿ, ವಿವಿಧ ಪಂಗಡಗಳ ಮೂಲಕ, ಸಾವಿರಾರು ವರ್ಷಗಳ ಕಾಲ ಜೀವನ ನಡೆಸುತ್ತ ಇಂದಿನ ಆಧುನಿಕತೆಗೆ ತನ್ನನ್ನು ತೆರೆದುಕೊಂಡಿದ್ದಾನೆನ್ನಬಹುದು.
ಇಂಥ ಒಂದು ಜೀವನಪದ್ಧತಿಯ ಕೊಂಡಿಯಾಗಿ ಇಂದಿಗೂ ನಮ್ಮ ಸುತ್ತ ಕೆಲ ಸಮುದಾಯಗಳು, ಬುಡಕಟ್ಟು ಪಂಗಡಗಳು ಎಲೆಮರೆಕಾಯಿಯಾಗಿಯೇ ಮೂಲಭೂತ ಸೌಕರ್ಯಗಳಲ್ಲಿಲ್ಲದೇ ಬದುಕು ಸಾಗಿಸುತ್ತ, ಇಡೀ ಸಮುದಾಯವೇ ಅಳಿವಿನಂಚಿಗೆ ಬಂದು ತಲುಪಿದೆ. ಇಂಥವುಗಳಲ್ಲಿ ನಮ್ಮದೇ ರಾಜ್ಯದ ಕೊರಗ ಸಮುದಾಯವೂ ಸೇರಿದೆ ಎಂಬುದು ಕಳವಳ ಪಡುವ ಸಂಗತಿಯಾಗಿದೆ.
ವಿವಿಧ ಕಾರ್ಯಗಳ ನಿಮಿತ್ತ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರ ಜತೆಗೆ, ಸಹಜ ಚರ್ಚೆ ಮಾಡುತ್ತ ಬರುತ್ತಿರಬೇಕಾದರೆ, ಇಂದಿನ ಸರಕಾರಿ ಯೋಜನೆಗಳಿಗೆ ಎಷ್ಟೆಲ್ಲ ಅರ್ಜಿ ಹಾಕಿ ಕಚೇರಿಗೆ ಅಲೆದರೂ, ಸಂಬಂಧಿಸಿದ ಇಲಾಖೆಯವರನ್ನು ಗೋಗರೆದರೂ ಸಮಯಕ್ಕೆ ಕೆಲಸವಾಗುವ ಮಾತಿರಲಿ, ಅದಕ್ಕೆ ಸಂಬಂಧಿಸಿದ ಹಣವೇ ಬಿಡುಗಡೆಯಾಗುವುದಿಲ್ಲ.
ಅಂಥದ್ದರಲ್ಲಿ, ನಾವಾಗಲಿ, ಕೊರಗ ಜನರಾಗಲಿ, PVTG ಗುಂಪುಗಳಾಗಲಿ ಯಾವ ಅರ್ಜಿ ಹಾಕದಿ ದ್ದರೂ ಕೇಂದ್ರ ಸರಕಾರದ ಯೋಜನೆ ಮೂಲಕ, ಮೋದಿಯವರು ಕೊರಗ ಸಮುದಾಯಕ್ಕೆ ಕೋಟಿ ಲೆಕ್ಕದಲ್ಲಿ, ಮುಖ್ಯವಾಹಿನಿಗೆ ಸಂಪರ್ಕಿಸುವ ರಸ್ತೆ, ಕುಡಿಯುವ ನೀರು, ಇತರೆ ಮೂಲ ಸೌಕರ್ಯ ಪಡೆಯಲು ಹಣ/ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಆ ಅಧಿಕಾರಿ ಮಾತಿನ ಸಹಜ ಚರ್ಚೆ ಯಲ್ಲಿ ಹೇಳಿದ್ದು ನನ್ನ ಕುತೂಹಲಕ್ಕೆ ಎಡೆಮಾಡಿಕೊಟ್ಟಿತು.
ಇದನ್ನೂ ಓದಿ: Gururaj Gantihole Column: ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಮೋದಿಯವರು ಈ ಒಂದು PVTG ಸಮುದಾಯ ಕ್ಕೆಂದೇ ವಿಶೇಷ ಕಾರ್ಯಕ್ರಮ ಹುಟ್ಟು ಹಾಕಿದರು. ವಿಶೇಷ ಮುತುವರ್ಜಿ ವಹಿಸಿ, ಹಲವು ಕಾರ್ಯ ಕ್ರಮಗಳನ್ನು ಮೊದಲ ಬಾರಿಗೆ ಪ್ರಾರಂಭಿಸಿದರೆಂಬುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರವಾಗಿದೆ. ಯಾವೊಂದು ಲಕ್ಷಲಕ್ಷ ಮತಗಳ ಬೆಂಬಲವಿಲ್ಲದ, ರಾಜಕೀಯ ಪ್ರತಿನಿಧಿಗಳಿಲ್ಲದ, ನಿಶ್ಚಿತ ಆದಾಯ ಮೂಲವಿಲ್ಲದ ಇಂಥ ಅಳಿವಿನಂಚಿಗೆ ಬಂದ ಪಂಗಡಗಳನ್ನು ಇಂದಿನ ಜಾತಿ ಆಧಾರಿತ, ಸಂಖ್ಯಾ ಬಲದ ರಾಜಕೀಯ ಕಾಲಘಟ್ಟದಲ್ಲಿ ಗುರುತಿಸಿ, ಮುನ್ನೆಲೆಗೆ ತರುವ ಇಂಥದೊಂದು ಪ್ರಯತ್ನ ದೇಶದ ಪ್ರಧಾನಿಯವರಿಂದಲೇ ಆಗುತ್ತಿರುವುದು ಮಾತ್ರ ಸಂತಸದ ವಿಚಾರವೇ ಸರಿ ಕುತೂಹಲ ಹುಟ್ಟಿಸಿದ PVTG ವಿಚಾರವನ್ನು ನಾವು ಗಮನಿಸುತ್ತ ಹೋದಾಗ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು PZಠಿಜ್ಚ್ಠ್ಝಿZqs ಛ್ಟಿZಚ್ಝಿಛಿ SಜಿಚಿZ ಎಟ್ಠmo (PSಎ) ಭಾರತದಲ್ಲಿನ ಪರಿಶಿಷ್ಟ ಪಂಗಡಗಳ ಉಪವಿಭಾಗವಾಗಿದ್ದು, ಸಾಮಾಜಿಕ-ಆರ್ಥಿಕ ದುರ್ಬಲತೆಯ ಆಧಾರದ ಮೇಲೆ ಇವುಗಳನ್ನು ಗುರುತಿಸಲಾಗಿದೆ.
ಪ್ರಸ್ತುತ, 17 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಇಂಥ ಒಟ್ಟು 75 ಗುಂಪುಗಳಿವೆ ಎಂದು ಅಂಕಿ-ಅಂಶಗಳ ಮೂಲಕ ತಿಳಿದುಬರುತ್ತದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಸಂಬಂಧಿತ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ, ಅ) ಪುರಾತನ ಕಾಲದ ಆದಾಯ ಪದ್ಧತಿ, ಆ) ಕಡಿಮೆ ಮಟ್ಟದ ಸಾಕ್ಷರತೆ, ಇ) ಆರ್ಥಿಕವಾಗಿ ಹಿಂದುಳಿದಿರುವಿಕೆ, ಈ) ಕ್ಷೀಣಿಸುತ್ತಿರುವ ಜನಸಂಖ್ಯೆ ಸೇರಿದಂತೆ ಈ ಮಾನದಂಡಗಳ ಆಧಾರದ ಮೇಲೆ PVTG ಗಳನ್ನು ಗುರುತಿಸುತ್ತದೆ. ಈ ಮಾನದಂಡಗಳು ಸಾಂಸ್ಕೃತಿಕ ಅಳಿವಿನ, ಹೆಚ್ಚಿನ ಅಪಾಯದಲ್ಲಿರುವ ಮತ್ತು ಉದ್ದೇಶಿತ ಮಧ್ಯಸ್ಥಿಕೆಗಳ ಅಗತ್ಯವಿರುವ ಗುಂಪುಗಳನ್ನು ಗುರುತಿಸಿ, ಮುಖ್ಯವಾಹಿನಿಗೆ ಬರುವಂತೆ ಮಾಡುವ ಗುರಿಯನ್ನು ಹೊಂದಿವೆ.
ಇಂಥ ಕೆಲ ಬುಡಕಟ್ಟು ಗುಂಪುಗಳು ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿದ್ದು, ಅವುಗಳ ಸಂಖ್ಯಾವಾರು ವಿವರಗಳನ್ನು ಗಮನಿಸಿದಾಗ, ಒಡಿಶಾ: 13 ಗುಂಪುಗಳು, ಆಂಧ್ರಪ್ರದೇಶ ಮತ್ತು ತೆಲಂಗಾಣ: 12, ಬಿಹಾರ ಮತ್ತು ಜಾರ್ಖಂಡ್: 9, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ: 7, ತಮಿಳುನಾಡು: 6, ಕೇರಳ ಮತ್ತು ಗುಜರಾತ್: ತಲಾ 5, ಮಹಾರಾಷ್ಟ್ರ: 3, ಪಶ್ಚಿಮ ಬಂಗಾಳ: 3, ಕರ್ನಾಟಕ: 2, ಉತ್ತರಾಖಂಡ: 2, ರಾಜಸ್ಥಾನ, ತ್ರಿಪುರ, ಮಣಿಪುರ: ತಲಾ 1, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: 4 ಗುಂಪುಗಳು ದೇಶದಲ್ಲಿವೆ ಎಂದು ತಿಳಿದುಬರುತ್ತದೆ.
ಇವುಗಳಲ್ಲಿ, ಒಡಿಶಾ ಅತಿ ಹೆಚ್ಚು PVTG ಗಳನ್ನು ಹೊಂದಿದ್ದು, ಜನಸಂಖ್ಯೆ ಕುರಿತು ಅವಲೋಕಿಸಿ ದಾಗ, ಸಹರಿಯಾಗಳು (ಮಧ್ಯಪ್ರದೇಶ ಮತ್ತು ರಾಜಸ್ಥಾನ) 4 ಲಕ್ಷಕ್ಕಿಂತ ಹೆಚ್ಚಾಗಿದ್ದು, ಡೊಂಗ್ರಿಯಾ ಖೊಂಡ್ (ಒಡಿಶಾ) ಸರಿಸುಮಾರು 1.5 ಲಕ್ಷಗಳಷ್ಟಿದ್ದರೆ, ಸೆಂಟಿನೆಲೀಸ್ (ಅಂಡಮಾನ್ ದ್ವೀಪಗಳು) ೫೦ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿವೆ. ಅನೇಕ PVTGಗಳು 10 ಸಾವಿರಕ್ಕಿಂತಲೂ ಕಡಿಮೆ ಇರುವ ಮೂಲಕ, ಭಾರತದಲ್ಲಿ ಅತ್ಯಂತ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳೆಂದು ಪರಿಗಣಿಸಲ್ಪಟ್ಟಿವೆ.
ಅಲ್ಪಮಟ್ಟದ ಜನಸಂಖ್ಯೆಗಳೊಂದಿಗೆ ಜೀವನ ಸಾಗುತ್ತಿರುವ ಈ ಸಮುದಾಯಗಳು ಸಾಮಾನ್ಯವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುತ್ತವೆ, ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳಂಥ ಮೂಲ ಭೂತ ಸೇವೆಗಳಿಗೆ ಪ್ರವೇಶವನ್ನು ಮಾಡುವುದು ಗಮನಾರ್ಹ ಸವಾಲಾಗಿದೆ. ಇನ್ನು, ಕರ್ನಾಟಕದ ವಿಚಾರವಾಗಿ ನಾವು ಗಮನಿಸಿದಾಗ, ಹಿಂದೆ ಹೇಳಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ, ಕರ್ನಾಟಕವು ಜೇನು ಕುರುಬ ಮತ್ತು ಕೊರಗ ಎಂಬ ಎರಡು ಪಿವಿಟಿಜಿಗಳಿಗೆ ನೆಲೆಯಾಗಿದೆ. ಜೇನು ಕುರುಬ ಸಮುದಾಯವು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಗಡಿ ಕಾಡುಗಳಲ್ಲಿ ವಾಸಿಸುತ್ತಿದೆ.
2011ರ ಗಣತಿಯಂತೆ, 36,076 ಜನಸಂಖ್ಯೆಯನ್ನು ಹೊಂದಿದ್ದು, ಸಾಂಪ್ರದಾಯಿಕವಾಗಿ ಇವರು ತಮ್ಮ ಜೀವನೋಪಾಯಕ್ಕಾಗಿ ಜೇನು ಸಂಗ್ರಹಣೆ ಮತ್ತು ಇತರ ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ನಾಗರಹೊಳೆ ಮತ್ತು ಬಂಡೀಪುರದಂಥ ಹುಲಿ ಮೀಸಲು ಪ್ರದೇಶಗಳಲ್ಲಿನ ಸಂರಕ್ಷಣಾ ಕ್ರಮಗಳ ಕಾರಣದಿಂದ 1970ರ ದಶಕದಲ್ಲಿಯೇ ಇವರನ್ನು ಹೊರ ಹಾಕಲಾಯಿತು. ಈ ಸಮುದಾಯವು ಮೀಸಲು ಅರಣ್ಯಗಳಲ್ಲಿ ವಾಸಿಸಲು ತಮ್ಮ ಹಕ್ಕುಗಳನ್ನು ಸಕ್ರಿಯವಾಗಿ ಕೋರಿದೆ.
ಪ್ರಧಾನವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಕೊಡಗು ಜಿಗಳಲ್ಲಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಕಂಡುಬರುವ ಕೊರಗ ಸಮುದಾಯವು 2011ರ ಜನಗಣತಿಯ ಪ್ರಕಾರ ಸುಮಾರು 16000 ಜನಸಂಖ್ಯೆಯನ್ನು ಹೊಂದಿದೆ. ಇವರು ತುಳು, ಕನ್ನಡ ಮತ್ತು ಮಲಯಾಳಂನಿಂದ ಪ್ರಭಾವಿತವಾದ ತಮ್ಮದೇ ಭಾಷೆಯನ್ನು ಮಾತನಾಡುತ್ತಾರೆ.
ಸಾಂಸ್ಕೃತಿಕವಾಗಿ, ಡೋಲುವಾದ್ಯದ ಜತೆಗೆ ಕೊಳಲು ಊದುವ ವಿಶಿಷ್ಟ ಅಭ್ಯಾಸಕ್ಕೆ ಹೆಸರುವಾಸಿ ಯಾಗಿರುವ ಈ ಸಮುದಾಯವು ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದು, ರಾಜ್ಯ ಸರರ್ಕಾರ ಇವರನ್ನು ಒಳಗೊಂಡು ಯೋಜನೆಗಳನ್ನು ರೂಪಿಸಬೇಕಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಇವರು ಮಾತನಾಡುವ ಭಾಷೆ ಕೂಡ ಅಳಿವಿನಂಚಿನಲ್ಲಿದೆ. ಈ ಸಮುದಾಯದ ಹೊಸ ತಲೆಮಾರಿಗೆ ಆ ಭಾಷೆಯೇ ಗೊತ್ತಿಲ್ಲ. ತಲೆಮಾರು ಕಳೆದಂತೆ, ಅವರ ಮೂಲ ಪರಂಪರೆ, ಗೊತ್ತಿರುವ ವೈದ್ಯವಿದ್ಯೆ, ಭಾಷೆ ಮತ್ತು ಸಂಸ್ಕೃತಿ ಕೂಡ ನಾಶವಾಗಿಬಿಡುವ ಸಾಧ್ಯತೆಯೇ ಹೆಚ್ಚು.
ಜಿಲ್ಲಾಮಟ್ಟದ ಆಡಳಿತದಿಂದಲೇ ಇವರಿಗಾಗಿ ಆಹಾರಭದ್ರತೆ, ಸ್ವಾವಲಂಬಿ ಬದುಕಿಗೆ ಉಪಕ್ರಮ ಗಳು ಸೇರಿದಂತೆ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡು, ಆದ್ಯತೆ ಮೇರೆಗೆ, ಸಮಯದ ಗಡಿ ನಿಗದಿಪಡಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಬೇಕಿದೆ. PVTG ಅನ್ನು ಆರಂಭದಲ್ಲಿ 1973ರಲ್ಲಿ ಧೇಬರ್ ಆಯೋಗ ಗುರುತಿಸಿತು. ಆದರೂ, ಸಮರ್ಪಕ ಯೋಜನೆಗಳು ಇವರ ಅಭಿವೃದ್ಧಿಗೆ ಜಾರಿಯಾಗಲಿಲ್ಲ.
2014ರ ನಂತರ ಮೋದಿ ಸರಕಾರವು ಹಿಂದುಳಿದ, ಬುಡಕಟ್ಟು ಸಮುದಾಯಗಳಿಗೆ ಅತ್ಯಂತ ಹೆಚ್ಚಿನ ಆದ್ಯತೆ, ಸೌಕರ್ಯ ಒದಗಿಸಲು PVTG ಗಳು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಗುರುತಿಸಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದು, 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ, ಪ್ರಧಾನಿ ಮೋದಿಯವರು ಎಲ್ಲಾ 22,544 PVTG ಗ್ರಾಮಗಳನ್ನು ಸಂವಹನ, ವಿದ್ಯುತ್, ಸಾರ್ವಜನಿಕ ಶಿಕ್ಷಣ, ಆರೋಗ್ಯ, ನೀರು ಸರಬರಾಜು ಮತ್ತು ಸಂಪರ್ಕದಂಥ ಅಗತ್ಯ ಸೇವೆಗಳಿಗೆ ಸಂಪರ್ಕಿಸಲು 15000 ಕೋಟಿ ರು.ಗಳನ್ನು ನಿಗದಿಪಡಿಸಿ, PM-PVTG ಅಭಿವೃದ್ಧಿ ಮಿಷನ್ ಎಂಬ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಜತೆಗೆ, ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ( PM-JANMAN) ಎಂಬ ಯೋಜನೆಯನ್ನು ನವೆಂಬರ್ 29, 2023ರಂದು ಪ್ರಾರಂಭಿಸಿದ್ದು, PVTG ಮನೆಗಳಿಗೆ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣಕ್ಕೆ ಸುಧಾರಿತ ಪ್ರವೇಶ, ಆರೋಗ್ಯ ಮತ್ತು ಪೋಷಣೆ, ರಸ್ತೆ ಮತ್ತು ದೂರಸಂಪರ್ಕ ಸೌಲಭ್ಯ ಮತ್ತು ಸುಸ್ಥಿರ ಜೀವನೋ ಪಾಯದ ಅವಕಾಶಗಳಂಥ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
PM JANMAN ನ ಒಟ್ಟು ಅಂದಾಜು ವೆಚ್ಚ ಸುಮಾರು 24000 ಕೋಟಿ ರು. ಗಳಾಗಿದ್ದು, ಕೇಂದ್ರದ ಈ ಮಹತ್ತರ ಯೋಜನೆಗೆ ಸಂಬಂಧಿತ ರಾಜ್ಯ ಸರಕಾರಗಳ ಸಹಭಾಗಿತ್ವವೂ ಇರಲಿದೆ. ಇನ್ನು ಕೆಲವು ರಾಜ್ಯಗಳು ತಮ್ಮ ಜವಾಬ್ದಾರಿಗಳನ್ನು ಹೆಚ್ಚಾಗಿಯೇ ತೋರಿಸಿವೆ. ಛತ್ತೀಸ್‌ಗಢ ಸರಕಾರವು ಅಕ್ಟೋಬರ್ 2023ರಲ್ಲಿ ತನ್ನ ಬೈಗಾ PVTG ಗೆ ಆವಾಸ ಸ್ಥಾನ ಹಕ್ಕುಗಳನ್ನು ನೀಡುವ ಮೂಲಕ, ಈ ಸಮುದಾಯವು ಜೀವನೋಪಾಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಉದ್ದೇಶ ಗಳಿಗಾಗಿ ತಮ್ಮ ಭೂಮಿಯ ಮೇಲೆ ಕಾನೂನುಬದ್ಧ ಹಕ್ಕುಗಳನ್ನು ಹೊಂದಲು ಅನುವು ಮಾಡಿಕೊಟ್ಟಿತು.
ಇದು ಸಂಬಂಧಿತ ಇತರ ರಾಜ್ಯಗಳಿಗೆ ಒಂದು ಮಾದರಿ ನಡೆಯಾಗಿದೆ. ಜತೆಗೆ, FRA (ಅರಣ್ಯ ಹಕ್ಕುಗಳ ಕಾಯ್ದೆ), PVTG ಅಭಿವೃದ್ಧಿ ಮಿಷನ್‌ಗಳು ಮತ್ತು ವಸತಿ ಯೋಜನೆಗಳ (ಉದಾ: ಆಶ್ರಯ) ಮೂಲಕ ಫಲಾನುಭವಿಗಳಾಗಿರುವುದು, ಕೆಲವು ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಪಡಿತರ ಸರಬರಾಜು ಗಳಿಗೆ ಸುಧಾರಿತ ಜಾಗಗಳನ್ನು ಒದಗಿಸಲಾಗಿದೆ, ವಿವಿಧ NGO ಮತ್ತು ಸರಕಾರಿ ಕಾರ್ಯಕ್ರಮ ಗಳಿಂದ ಬುಡಕಟ್ಟು ಹಕ್ಕುಗಳು ಮತ್ತು ಸಂಸ್ಕೃತಿ ಸಂರಕ್ಷಣೆಯಬಗ್ಗೆ ಹೆಚ್ಚಿದ ಅರಿವು, ಜೇನು ಕುರುಬ ನೃತ್ಯ ಮತ್ತು ಸಂಪ್ರದಾಯಗಳು ಸಾಂಸ್ಕೃತಿಕ ಉತ್ಸವಗಳಲ್ಲಿ ಮನ್ನಣೆ ಪಡೆಯುತ್ತಿವೆ ಯಲ್ಲದೆ, ಕೆಲವೆಡೆ ಪುನರ್ವಸತಿ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ.
ಇಷ್ಟಾಗಿಯೂ, ಶಿಕ್ಷಣ, ನಿಗದಿತ ಪ್ರದೇಶಗಳಲ್ಲಿ ಕಾಯಂವಾಸ, ಆರೋಗ್ಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯಂಥ ಹಲವು ವಿಚಾರದಲ್ಲಿ ಇನ್ನೂ ಸವಾಲುಗಳನ್ನು ಈ ಸಮುದಾಯಗಳು ಎದುರಿಸುತ್ತಿವೆ. ಅವುಗಳೆಂದರೆ: 1) ಕಳಪೆ ಆರೋಗ್ಯ, ಅಪೌಷ್ಟಿಕತೆ ಮತ್ತು ಮೂಲಭೂತ ಸೇವೆಗಳಿಗೆ ಪ್ರವೇಶದ ಕೊರತೆಯಂಥ ಅಂಶಗಳಿಂದಾಗಿ ಕ್ಷೀಣಿಸುತ್ತಿರುವ ಜನಸಂಖ್ಯೆ ಹೊಂದಿರುವುದು. 2) ಆಧುನಿಕತೆಯ ಅತಿಕ್ರಮಣ ಮತ್ತು ಸಾಂಪ್ರದಾಯಿಕ ಜೀವನೋಪಾಯಗಳ ನಷ್ಟವು ಈ ಸಮು ದಾಯಗಳ ಸಾಂಸ್ಕೃತಿಕ ಪರಂಪರೆಗೆ ಬೆದರಿಕೆಯಾಗಿದ್ದು, ಪಂಗಡಗಳ ಸಂಸ್ಕೃತಿ ನಶಿಸುತ್ತಿದೆ. 3) ಭೂ ಹಕ್ಕುಗಳ ಸಮಸ್ಯೆಗಳಿಂದ ಅರಣ್ಯ ಪ್ರದೇಶಗಳಿಂದ ಹೊರಹಾಕುವಿಕೆ ಮತ್ತು ಭೂಹಕ್ಕುಗಳ ಕಾನೂನು ಮಾನ್ಯತೆಯ ಕೊರತೆಯು ಅನೇಕ PVTG ಗಳಿಗೆ ಸ್ಥಳಾಂತರ ಮತ್ತು ಜೀವನೋಪಾಯದ ನಷ್ಟಕ್ಕೆ ಕಾರಣವಾಗಿದೆ.
ಇವುಗಳೊಂದಿಗೆ, ಸಾಮಾನ್ಯ ಸಮಸ್ಯೆಗಳಾದ ಜೇನು ಸಂಗ್ರಹಣೆ ಮತ್ತು ಅರಣ್ಯ ಆಧಾರಿತ ಜೀವನಾ ಧಾರ ಆರ್ಥಿಕತೆಗೆ ಹಾನಿ, ಮಹಿಳೆಯರಲ್ಲಿ ಸಾಕ್ಷರತೆ ಇಲ್ಲದಿರುವುದು ಮತ್ತು ಸಾಮಾಜಿಕ ಹೊರ ಗಿಡುವಿಕೆ, ಕಳಪೆ ರಸ್ತೆ ಸಂಪರ್ಕ, ಪ್ರವೇಶಿಸಲಾಗದ ಪ್ರದೇಶಗಳಲ್ಲಿ ವಾಸದಂಥ ಅನಾನುಕೂಲಗಳೇ ಹೆಚ್ಚಾಗಿವೆ.
ಇನ್ನಾದರೂ, ಕರ್ನಾಟಕ ರಾಜ್ಯ ಸರಕಾರವು ಉಳಿದಿರುವ ಕೇವಲ ಎರಡು ಸಮುದಾಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ. ಜೇನುಕುರುಬ ಮತ್ತು ಕೊರಗ ಎರಡೂ ಸಮುದಾಯ ಗಳನ್ನು ಒಟ್ಟಿಗೆ ಸೇರಿಸಿದರೂ 30 ಸಾವಿರ ದಾಟದು; ಈ ಪಂಗಡಗಳ ಅಭಿವೃದ್ಧಿ ಕೈಗೊಳ್ಳಲು ರಾಜ್ಯಮಟ್ಟದ ಒಂದುಆಡಳಿತಯಂತ್ರಕ್ಕೆ ಕಷ್ಟವಾದೀತೇ ಎಂಬುದನ್ನು ಆತ್ಮವಿಮರ್ಶೆ ಮಾಡಿ ಕೊಳ್ಳಬೇಕಾಗಿದೆ.
ಮೊದಲು ಇವುಗಳ ಕುರಿತು, ಸೂಕ್ತ ಜನಗಣತಿ, ಆರ್ಥಿಕ ಗಣತಿ ಆಗಬೇಕಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಗಣತಿ ಕೈಗೊಂಡು, ಅವುಗಳ ಸಂತತಿ ವೃದ್ಧಿಗೆ ಜಗತ್ತಿನ ಯಾವ ಮೂಲೆಯಿಂದಲಾದರೂ ಬೇಕಾದ ಉಪಕ್ರಮಗಳನ್ನು ಕೈಗೊಳ್ಳುವ ಸರಕಾರಗಳು, ಮಾನವಜನಾಂಗದ ಕೆಲ ಕೊಂಡಿಗಳಾಗಿ ಶತಶತಮಾನಗಳ ಕಾಲ ಬಾಳಿ ಬದುಕುತ್ತ ಬಂದಿರುವ ಕೆಲವು ಪಂಗಡಗಳು, ಗುಂಪುಗಳು ಆಧುನಿಕತೆ ಯ ಹೊಡೆತಕ್ಕೆ ಸಿಕ್ಕು, ಅಭಿವೃದ್ಧಿ ಕಾಣದೆ ಅಳಿದುಹೋಗುವಂತಾಗುವುದಕ್ಕೆ ಆಸ್ಪದ ನೀಡಬಾ ರದು.
ಇಂಥ ನಿಜವಾದ ಜನಕಲ್ಯಾಣ ಮಾಡುವುದರಲ್ಲಿ ರಾಜ್ಯ ಸರಕಾರಗಳು ಅನುವಾಗಬೇಕೆ ಹೊರತು, ಒಡೆದಾಳುವ ನೀತಿ ಜಾರಿಗೆ ತರುವುದರಲ್ಲಿ ಅಲ್ಲ ಎಂಬುದನ್ನು ಅವಲೋಕಿಸಿದರೆ ಒಳಿತಲ್ಲವೇ!