Mohan Vishwa Column: ಇಸ್ರೇಲ್ ನಡೆಸಿದ್ದ ಆಪರೇಷನ್ ಸೂಪರ್ ಗನ್
ಸುಮಾರು 128 ಕಿಲೋಮೀಟರು ದೂರ ಕ್ರಮಿಸಬಲ್ಲ ಸಾಮರ್ಥ್ಯದ ಫಿರಂಗಿಯಲ್ಲಿ ಬಳಸು ತ್ತಿದ್ದ ಬಾಂಬ್ ಶೆಲ್ʼಗಳು ಮೂರು ಅಡಿಯಷ್ಟು ಉದ್ದವಿದ್ದವು, 12 ಅಡಿ ಆಳದಷ್ಟು ‘ಗನ್ ಪೌಡರ್’ ತುಂಬಿಸಿಕೊಳ್ಳಬಲ್ಲ ಸಾಮರ್ಥ್ಯ ಅವುಗಳಲ್ಲಿತ್ತು. ಆಗಸಕ್ಕೆ ಬಾಂಬುಗಳನ್ನು ಸುಮಾರು 42 ಕಿಲೋಮೀಟರುಗಳಷ್ಟು ಎತ್ತರಕ್ಕೆ ಚಿಮ್ಮಿಸುವ ಸಾಮರ್ಥ್ಯವಿತ್ತು.
-
ವೀಕೆಂಡ್ ವಿತ್ ಮೋಹನ್
ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಪ್ಯಾರಿಸ್ ನಗರದ ಚರ್ಚ್ ಒಂದರ ಮೇಲೆ ‘ಬಾಂಬ್ ಶೆಲ್’ ದಾಳಿಯಾಗಿತ್ತು. ಆ ಸ್ಫೋಟದಲ್ಲಿ 91 ಜನ ಮೃತಪಟ್ಟಿದ್ದರು. ಅಂದು ಇಡೀ ನಗರದಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿತ್ತು. ಫ್ರೆಂಚ್ ಸೈನಿಕರು ಎಷ್ಟೇ ಹುಡುಕಿ ದರೂ ದಾಳಿಯ ಯಾವ ಸಾಕ್ಷಿಯೂ ಸಿಗಲಿಲ್ಲ.
ಅಂದಿನ ಕಾಲದಲ್ಲಿ ಅಷ್ಟೊಂದು ದೂರದಿಂದ ಬಾಂಬ್ ಎಸೆಯಬಲ್ಲ ಫಿರಂಗಿಗಳ ಬಗ್ಗೆ ಫ್ರೆಂಚರು ಕೇಳಿರಲಿಲ್ಲ. ಸ್ಫೋಟದ ಹಿಂದಿನ ‘ಶಸ್ತ್ರಾಸ್ತ್ರ-ಯೋಜನೆ’ ನಿಗೂಢವಾಗಿಯೇ ಉಳಿಯಿತು. ಮೊದಲನೇ ವಿಶ್ವಯುದ್ಧ ಕೊನೆಗೊಂಡಿತ್ತು, ಜರ್ಮನಿ ತಣ್ಣಗಾಗಿತ್ತು. ಆದರೆ ಪ್ಯಾರಿಸ್ ನಗರದ ಮೇಲೆ ನಡೆದ ದಾಳಿಯ ಶಸ್ತ್ರಾಸ್ತ್ರದ ಮೂಲ ಮಾತ್ರ ನಿಗೂಢವಾಗಿತ್ತು. ಕೆಲ ವರ್ಷಗಳ ನಂತರ, ಆ ಫಿರಂಗಿಯನ್ನು ತಯಾರಿಸಿದ್ದು ಜರ್ಮನಿಯ ’KRUPP INDUSTRIES’ ಎಂದು ತಿಳಿಯಿತು.
ಸುಮಾರು 128 ಕಿಲೋಮೀಟರು ದೂರ ಕ್ರಮಿಸಬಲ್ಲ ಸಾಮರ್ಥ್ಯದ ಫಿರಂಗಿಯಲ್ಲಿ ಬಳಸು ತ್ತಿದ್ದ ಬಾಂಬ್ ಶೆಲಗಳು ಮೂರು ಅಡಿಯಷ್ಟು ಉದ್ದವಿದ್ದವು, 12 ಅಡಿ ಆಳದಷ್ಟು ‘ಗನ್ ಪೌಡರ್’ ತುಂಬಿಸಿಕೊಳ್ಳಬಲ್ಲ ಸಾಮರ್ಥ್ಯ ಅವುಗಳಲ್ಲಿತ್ತು. ಆಗಸಕ್ಕೆ ಬಾಂಬುಗಳನ್ನು ಸುಮಾರು 42 ಕಿಲೋಮೀಟರುಗಳಷ್ಟು ಎತ್ತರಕ್ಕೆ ಚಿಮ್ಮಿಸುವ ಸಾಮರ್ಥ್ಯವಿತ್ತು.
ತಂತ್ರಜ್ಞಾನ ಬೆಳೆದಂತೆ ಆ ಫಿರಂಗಿಯನ್ನೂ ಮೀರಿಸುವ ಸಾಮರ್ಥ್ಯದ ’ V2 ROCKET ’ಗಳನ್ನು ಜರ್ಮನಿ ಎರಡನೇ ವಿಶ್ವಯುದ್ಧದಲ್ಲಿ ಬಳಸಿತ್ತು. ಇದನ್ನು ಸಹ ’ KRUPP INDUSTRIES’ ಅಭಿವೃದ್ಧಿಪಡಿಸಿತ್ತು. ಎರಡನೇ ಮಹಾಯುದ್ಧದ ಕೊನೆಯಲ್ಲಿ ಬ್ರಿಟಿಷರು ಆ ಫಿರಂಗಿ ಮತ್ತು ರಾಕೆಟ್‌ಗಳನ್ನು ಯುದ್ಧ ವಿಮಾನಗಳ ಮೂಲಕ ಹುಡುಕಿ ನಾಶ ಮಾಡಿ ದ್ದರು. ಆದರೆ ಆ SUPER GUN ತಯಾರಿಸುವ ತಂತ್ರಜ್ಞಾನ ಮಾತ್ರ ಯಾರ ಕೈಗೂ ಸಿಗಲಿಲ್ಲ.
ಇದನ್ನೂ ಓದಿ: Mohan Vishwa Column: ನಟೋರಿಯಸ್ ಡ್ರಗ್ಸ್ ಪ್ರದೇಶ: ಗೋಲ್ಡನ್ ಕ್ರೆಸೆಂಟ್
1965ರಲ್ಲಿ ಜರ್ಮನಿಯ ಹಿರಿಯ ಮಹಿಳೆಯೊಬ್ಬರು ಕೆನಡಾ ದೇಶಕ್ಕೆ 37 ವರ್ಷದ ವಿಜ್ಞಾನಿಯೊಬ್ಬನನ್ನು ಭೇಟಿಯಾಗಲು ಬಂದರು. ಆತನ ಹೆಸರು ಡಾ.ಗೆರಾಲ್ಡ್ ಬುಲ್. ಆತ ಅತಿ ಎತ್ತರದ ಪರ್ವತ ಶ್ರೇಣಿಗಳ ಮೇಲೆ ಸಂಶೋಧನೆ ನಡೆಸುವ ವಿಶ್ವವಿದ್ಯಾಲಯದ ಮುಖ್ಯಸ್ಥನಾಗಿದ್ದ. ಆ ಮಹಿಳೆ ಜರ್ಮನಿಯ ‘KRUPP INDUSTRIES’ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದವರ ಸಂಬಂಧಿಯಾಗಿದ್ದಳು.
ಆಕೆ ತನ್ನ ಮನೆಯಲ್ಲಿ ಸಿಕ್ಕ, ಫಿರಂಗಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಡಾ. ಗೆರಾಲ್ಡ್ ಬುಲ್ʼಗೆ ನೀಡಲು ಬಂದಿದ್ದಳು. 23ನೇ ವಯಸ್ಸಿನಲ್ಲಿ Phd ಪಡೆದಿದ್ದ ಡಾ.ಗೆರಾಲ್ಡ್ ಬುಲ್ʼಗೆ ಆಕೆ ನೀಡಿದ್ದ ದಾಖಲೆಗಳನ್ನು ಓದಿದ ಮೇಲೆ ಸಾವಿರಾರು ಕಿಲೋಮೀಟರುಗಳ ದೂರ ಬಾಂಬ್ ಶೆಲ್ಸ್ ಹೊತ್ತೊಯ್ಯಬಲ್ಲ ’ SUPER GUN’ ತಯಾರಿಸಬೇಕೆಂಬ ಆಸೆಯಾ ಯಿತು.
ಆತನ ಆಸೆಗೆ ತಕ್ಕಂತೆ ಅಮೆರಿಕ ಹಾಗೂ ಕೆನಡಾ ಸರಕಾರಗಳು ಶಸ್ತ್ರಾಸ್ತ್ರವನ್ನು ಅಭಿವೃದ್ಧಿ ಪಡಿಸಲು ಬೇಕಾದ ಧನಸಹಾಯ ಮಾಡಿದ್ದವು. ’ SUPER GUN’ ಮಾದರಿ ಯೊಂದನ್ನು ತಯಾರಿಸಿದ ಡಾ.ಗೆರಾಲ್ಡ್ ಬುಲ್, ಬಾರ್ಬಡೋಸ್‌ನಲ್ಲಿ ಪರೀಕ್ಷೆ ಮಾಡಲು ನಿರ್ಧರಿಸಿದ್ದ.
ಸುಮಾರು 36 ಮೀಟರ್ ಉದ್ದದ ಜಗತ್ತಿನ ದೊಡ್ಡ ‘SUPER GUN’ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಎರಡೂ ಸರಕಾರಗಳು ಆತನ ಸಾಧನೆಯನ್ನು ಕೊಂಡಾಡಿದ್ದವು. ಆತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘SUPER GUN’ಗೆ ಕ್ಷಿಪಣಿಗಳನ್ನು ಕಟ್ಟಿದರೆ ಸುಮಾರು 4000 ಕಿಲೋಮೀಟರುಗಳ ದೂರದವರೆಗೂ ಉಡಾಯಿಸಬಹುದೆಂಬುದನ್ನು ಹೇಳಿದ.
ಅಮೆರಿಕ ಹಾಗೂ ಕೆನಡಾ ದೇಶಗಳು ಆತನ ಬಗ್ಗೆ ಮತ್ತಷ್ಟು ಪ್ರಶಂಸೆಯನ್ನು ವ್ಯಕ್ತಪಡಿಸಿ ದ್ದವು. ಆದರೆ ಯಾವುದೋ ಒಂದು ಕಾರಣಕ್ಕಾಗಿ ಆತನ ಯೋಜನೆಯನ್ನು ಅರ್ಧದಲ್ಲಿ ಕೈಬಿಡುವಂತೆ ಸೂಚಿಸಿದವು. ಯೋಜನೆ ಕೈಬಿಟ್ಟು ಬಾರ್ಬಡೋಸ್ ದೇಶವನ್ನು ಬಿಡುವಂತೆ ಸೂಚಿಸಿ, ಅಮೆರಿಕ ದೇಶದ ಪೌರತ್ವ ನೀಡಿ ದೇಶ ಬಿಡದಂತೆ ಹೇಳಿದ್ದವು. ಆದರೆ ಬುಲ್ ನ ಮನಸಿನಲ್ಲಿ ಮಾತ್ರ ತನ್ನ ಮಹತ್ವಾಕಾಂಕ್ಷೆಯ ಯೋಜನೆ ಅಪೂರ್ಣಗೊಂಡಿದ್ದರ ಬಗ್ಗೆ ಬೇಜಾರಿತ್ತು.
ತನ್ನ ಯೋಜನೆಯನ್ನು ಮುಂದುವರಿಸಲು ಯಾವ ಮಟ್ಟಕ್ಕೆ ಹೋಗುವುದಕ್ಕೂ ಬುಲ ತಯಾರಿದ್ದ. ದಕ್ಷಿಣ ಆಫ್ರಿಕಾಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬಾರದೆಂದು ವಿಶ್ವ ಸಂಸ್ಥೆ ನಿರ್ಬಂಧ ಹೇರಿದ್ದರೂ ‘ GC-45 ಗನ್‌ಗಳನ್ನು ಆತ ಅಕ್ರಮವಾಗಿ ಮಾರಾಟ ಮಾಡಿದ್ದ.
ಪ್ರತಿನಿತ್ಯ ಅಧಿಕಾರಿಗಳನ್ನು ನಿಂದಿಸುತ್ತಾ, ತನ್ನ ‘ SUPER GUN’ ತಯಾರಿಸುವ ಗುರಿಯನ್ನೇ ಜಪಿಸುತ್ತಿದ್ದ ಬುಲ್. ಅಕ್ರಮ ಶಸ್ತ್ರಾಸ್ತ್ರ ಮಾರಾಟದಡಿಯಲ್ಲಿ 6 ತಿಂಗಳು ಜೈಲಿಗೆ ಹೋಗಿ ಬಂದ ನಂತರ, 55000 ಅಮೆರಿಕನ್ ಡಾಲರ್ ದಂಡವನ್ನೂ ಕಟ್ಟಿದ. ಇದರಿಂದ ಕುಪಿತ ನಾದ ಬುಲ ತನ್ನ ದೇಶಬಿಟ್ಟು ಬೆಲ್ಜಿಯಂ ದೇಶಕ್ಕೆ ಬಂದು ನೆಲೆಸಿ, ನೂತನ ಶಸ್ತ್ರಾಸ್ತ್ರ ಕಂಪನಿಯನ್ನು ಪ್ರಾರಂಭಿಸಿದ್ದ.
‘SUPER GUN’ ತಯಾರಿಸಿ ಮಾರಾಟ ಮಾಡಲು, ತನ್ನ ಇಡೀ ಜೀವನವನ್ನೇ ಮುಡಿ ಪಾಗಿಡಲು ನಿರ್ಧರಿಸಿದ್ದವನಿಗೆ ಸಿಕ್ಕವನು ಸರ್ವಾಧಿಕಾರಿ ಸದ್ಧಾಂ ಹುಸೇನ್. ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಪಕ್ಕದ ಇರಾನ್ ದೇಶದ ಮೇಲೆ ದಾಳಿ ಮಾಡುತ್ತಿದ್ದ ಸದ್ಧಾಂ ಹುಸೇನ್‌ಗೆ ಅತ್ಯಾಧುನಿಕ ಶಸ್ತ್ರಾಸ್ತ್ರವೊಂದರ ಅಗತ್ಯವಿತ್ತು. ಇಸ್ರೇಲ್ ದೇಶದ ಪರಮಾಣು ಬಾಂಬ್ ತಯಾರಿಕಾ ಘಟಕಗಳ ಮೇಲೆ ನಿರಂತರ ದಾಳಿ ನಡೆಸಿ, ಪರಮಾಣು ಬಾಂಬ ಹೊಂದಿರುವ ಜಗತ್ತಿನ ರಾಷ್ಟ್ರವಾಗಬೇಕೆಂದು ಕನಸು ಕಂಡಿದ್ದ ಸದ್ಧಾಂ ಹುಸೇನ್. ಈ ಕನಸಿಗೆ ಇಸ್ರೇಲ್ ನೀರೆರಚಿತ್ತು. ಇದರಿಂದ ಕುಪಿತಗೊಂಡಿದ್ದ ಸದ್ಧಾಂ ಹುಸೇನ್‌ಗೆ ಇಸ್ರೇಲ್ ಮೇಲೆ ದಾಳಿ ನಡೆಸಲು ಪ್ರಮುಖ ಅಸವೊಂದು ಬೇಕಿತ್ತು.
ಜಗತ್ತಿನ ಅತ್ಯಂತ ಉದ್ದದ ಹಾಗೂ ಸಾವಿರಾರು ಕಿಲೋಮೀಟರುಗಳ ದೂರದವರೆಗೆ ಕ್ಷಿಪಣಿಗಳನ್ನು ತಲುಪಿಸುವ ಸಾಮರ್ಥ್ಯದ ’ SUPER GUN’ ತಯಾರಿಸಿ ಕೊಡುವುದಾಗಿ ಡಾ.ಬುಲ್ ಮಹಾಶಯ ಸದ್ಧಾಂ ಹುಸೇನ್‌ಗೆ ಹೇಳಿದ್ದ. ಆತನ ಭರವಸೆಯಿಂದ ಖುಷಿ ಯಾದ ಸದ್ಧಾಂ ಹುಸೇನ್, ಇಸ್ರೇಲ್ ದೇಶದ ಜನನಿಬಿಡ ಪ್ರದೇಶಗಳ ಮೇಲೆ ದಾಳಿ ಮಾಡಲು ತಯಾರಿ ನಡೆಸಿಕೊಂಡ. ಇಬ್ಬರೂ ಸೇರಿ ಈ ಯೋಜನೆಯನ್ನು ‘PROJECT BABYLON ’ ಎಂದು ಕರೆದರು.
ಸುಮಾರು 150 ಮೀಟರ್ ಉದ್ದ, 2100 ಕೆಜಿ ತೂಕದ ಬೃಹತ್ ‘SUPER GUN’ ತಯಾರಿಸುವ ಯೋಜನೆಯ ನೀಲಿನಕ್ಷೆಯನ್ನು ಸಿದ್ಧಪಡಿಸಲಾಯಿತು. ಪ್ರಾಯೋಗಿಕವಾಗಿ ‘SUPER GUN ’ನ ಸಣ್ಣದಾದ ಮಾದರಿಯನ್ನು ತಯಾರಿಸಲು ನಿರ್ಧರಿಸಲಾಯಿತು.
ಇದಕ್ಕೆ ‘ BABY BABYLON’ ಎಂದು ಹೆಸರಿಡಲಾಯಿತು. ಸುಮಾರು 45 ಮೀಟರ್ ಉದ್ದದ ಮಾದರಿ ‘ SUPER GUN’ ತಯಾರಾಗಿತ್ತು. ಇದರ ಕಾರ್ಯಕ್ಷಮತೆಯನ್ನು ಕಂಡು ಸದ್ಧಾಂ ಹುಸೇನ್‌ನ ಸೈನಿಕರು ಖುಷಿ ಪಟ್ಟರು. ನಂತರ ಇರಾಕಿನ ಮರುಭೂಮಿಯಲ್ಲಿ ಬೆಟ್ಟ ವೊಂದರ ಮೇಲೆ ಇಳಿಜಾರಿನೆಡೆಗೆ ಮುಖ ಮಾಡಿಸಿ ‘ SUPER GUN’ ತಯಾರಿಸುವ ಕೆಲಸ ಪ್ರಾರಂಭವಾಯಿತು.
ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಯುರೋಪಿನ ಹಲವು ದೇಶಗಳಿಂದ ಜೋರ್ಡನ್ ಮೂಲಕ ಆಮದು ಮಾಡಿಕೊಳ್ಳಲಾಯಿತು. ಮುಖ್ಯವಾಗಿ ಬೇಕಿದ್ದ ಬೃಹತ್ ಕೊಳವೆಗಳನ್ನು ಕಟ್ಟಡ ಕಾಮಗಾರಿಗಳಿಗೆ ಆಮದು ಮಾಡಿಕೊಳ್ಳಲಾಗುತ್ತಿದೆಯೆಂದು ಸುಳ್ಳು ಹೇಳಿ ಇತರ ದೇಶಗಳ ಕಣ್ಣು ತಪ್ಪಿಸಿ ದೇಶದೊಳಗೆ ತರಲಾಗಿತ್ತು.
ಸದ್ಧಾಂ ಹುಸೇನ್‌ನ ಅವಧಿಯಲ್ಲಿ ಇರಾಕ್ ದೇಶದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ನಿರ್ಬಂಧಗಳಿದ್ದವು. ಆತ ಒಂದು ಸಣ್ಣ ವಸ್ತುವನ್ನು ಆಮದು ಮಾಡಿ ಕೊಂಡರೂ ಜಗತ್ತಿನ ಇತರ ದೇಶಗಳು ಹದ್ದಿನ ಕಣ್ಣಿನಿಂದ ನೋಡುತ್ತಿದ್ದವು. ಡಾ.ಬುಲ್ ತನ್ನ ಖಾಸಗಿ ತಂತ್ರಜ್ಞರ ಸಹಾಯದಿಂದ ಬೃಹತ್ ‘ PIPELINE’ಗಳನ್ನು ಬಳಸಿಕೊಂಡು ಗನ್ ತಯಾರಿಕೆಯಲ್ಲಿ ತೊಡಗಿದ್ದ. ಅದರ ಜತೆಗೆ ಮತ್ತೆರಡು ನೂತನ ಫಿರಂಗಿಗಳನ್ನು ತಯಾರಿಸಿ ಇರಾಕಿ ಸೈನ್ಯಕ್ಕೆ ನೀಡಿದ್ದ.
‘SUPER GUN’ ತಯಾರಿಕೆಯಲ್ಲಿ ಸಹಾಯ ಮಾಡುತ್ತಿದ್ದ ಕಚ್ಚಾವಸ್ತುಗಳ ಮಾರಾಟ ಗಾರರಿಗೆ ವಿಷಯ ತಿಳಿದಿದ್ದರೂ ಯಾರಿಗೂ ತಿಳಿಯದಂತೆ ರಹಸ್ಯವನ್ನು ಕಾಪಾಡಿಕೊಂಡಿ ದ್ದರು. ಆದರೆ ರಹಸ್ಯ ಬಹಳ ದಿನ ಉಳಿಯಲಿಲ್ಲ. ಸದ್ಧಾಂನಿಗೆ ಡಾ.ಬುಲ್ ಸಹಾಯ ಮಾಡುತ್ತಿರುವ ವಿಷಯ ಇಸ್ರೇಲಿನ ಮೊಸ್ಸಾದ್ ಗುಪ್ತಚರ ವ್ಯವಸ್ಥೆಯ ಕಿವಿಗೆ ಬಿತ್ತು.
ಮೊದಲಿಗೆ ಇಸ್ರೇಲ್ ಡಾ.ಬುಲ್ʼಗೆ ಎಚ್ಚರಿಕೆ ನೀಡಿತು, ಆದರೆ ಬುಲ್ ತಲೆ ಕೆಡಿಸಿಕೊಳ್ಳ ಲಿಲ್ಲ. ಆತನ ಅಪಾಯಕಾರಿ ಯೋಜನೆಯ ಬಗ್ಗೆ ಇರಾನ್ ಕೂಡ ಕಳವಳ ವ್ಯಕ್ತಪಡಿಸಿತ್ತು. ಅಮೆರಿಕದ ಗೂಢಚರ ಸಂಸ್ಥೆಯಾಗಿರುವ ‘CIA’ ಕೂಡ ಕಳವಳ ವ್ಯಕ್ತಪಡಿಸಿತ್ತು. ಇರಾಕಿನ ಸರ್ವಾಧಿಕಾರಿಯಾಗಿದ್ದ ಸದ್ಧಾಂ ಹುಸೇನ್‌ಗೆ ಆ ಶಸ್ತ್ರಾಸ್ತ್ರ ಸಿಕ್ಕಿಬಿಟ್ಟು, ಆತನ ಸೈನ್ಯ ಮತ್ತಷ್ಟು ಬಲಗೊಂಡರೆ, ಪುನಃ ಪರಮಾಣು ಬಾಂಬ್ ತಯಾರಿಕೆಯಲ್ಲಿ ತೊಡಗುತ್ತಾನೆಂಬ ಭಯ ಎಲ್ಲರನ್ನೂ ಕಾಡುತ್ತಿತ್ತು.
ಇರಾನ್ ಹಾಗೂ ಇರಾಕ್ ನಡುವೆ ನಡೆದ ಯುದ್ಧದಲ್ಲಿ ಬುಲ್ ತಯಾರಿಸಿ ಇರಾಕಿ ಸೈನ್ಯಕ್ಕೆ ನೀಡಿದ್ದ ಎರಡು ಫಿರಂಗಿಗಳನ್ನು ಸದ್ಧಾಂ ಬಳಕೆ ಮಾಡಿದ್ದ. ಅವುಗಳು ಎಷ್ಟು ಅಪಾಯ ಕಾರಿಯಾಗಿದ್ದವೆಂಬುದರ ಅರಿವು ಇಸ್ರೇಲ್ ಮತ್ತು ಅಮೆರಿಕ ದೇಶಗಳಿಗೆ ಇತ್ತು.
ಡಾ.ಬುಲ್ ‘ SUPER GUN ’ ಯೋಜನೆಯನ್ನು ಸಂಪೂರ್ಣಗೊಳಿಸಿದರೆ ಆಗಬಹುದಾದ ಅನಾಹುತದ ಭೀಕರತೆ ಎಲ್ಲರನ್ನೂ ಕಾಡುತ್ತಿತ್ತು. ಇಸ್ರೇಲ್ ಎಷ್ಟೇ ಎಚ್ಚರಿಕೆ ನೀಡಿದರೂ ಬುಲ ಬಗ್ಗದಿದ್ದಾಗ ಮೊಸ್ಸಾದ್‌ನ ವಿದೇಶಿ ಏಜೆಂಟ್‌ಗಳು ಕಣಕ್ಕಿಳಿದರು. ದೂರದ ಬೆಲ್ಜಿಯಂ ದೇಶದಲ್ಲಿ ಕುಳಿತು ಯೋಜನೆಯನ್ನು ನಿರ್ವಹಿಸುತ್ತಿದ್ದ ಬುಲ್ʼನ ಮನೆಗೆ ನುಗ್ಗಿ ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಆತ ಎಲ್ಲೇ ಅಡಗಿದ್ದರೂ ಸುಮ್ಮನೆ ಬಿಡುವುದಿಲ್ಲವೆಂಬ ಮತ್ತೊಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.
ಮತ್ತೆ ಮತ್ತೆ ಎಚ್ಚರಿಕೆ ನೀಡಿದ್ದರೂ ಡಾ.ಬುಲ್ ಸುಮ್ಮನೆ ಕೂರಲಿಲ್ಲ. ಆತನ ತಲೆಯಲ್ಲಿ ತನ್ನ ಕನಸಿನ ‘ SUPER GUN’ ತಯಾರಿಕೆಯೊಂದೇ ತುಂಬಿ ಹೋಗಿತ್ತು. ತಾನು ತಯಾರಿಸಿದ ‘ SUPER GUN’ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾದರೂಪರವಾಗಿಲ್ಲ, ಆದರೆ ಯೋಜನೆ ಮಾತ್ರ ಯಶಸ್ವಿಯಾಗಬೇಕೆಂಬುದು ಆತನ ಹಠವಾಗಿತ್ತು. 1990ರ ಮಾರ್ಚ್ 22ರಂದು ಬುಲ ಎಂದಿನಂತೆ ತನ್ನ ಅಪಾರ್ಟ್‌ಮೆಂಟ್ ಬಾಗಿಲಿನ ಮುಂದೆ ನಿಂತು ಜೇಬಿನಲ್ಲಿ ಕೀ ಹುಡುಕಬೇಕಾದರೆ, ಎದುರಿಗೆ ಬಂದ ಅನಾಮಿಕ ವ್ಯಕ್ತಿಯೊಬ್ಬ ಬುಲ್ʼನ ತಲೆಗೆ 5 ಗುಂಡುಗಳನ್ನು ಹಾರಿಸಿದ್ದ.
‘SUPER GUN’ನ ಪಿತಾಮಹ ಸ್ಥಳದ ಕುಸಿದು ಸಾವನ್ನಪ್ಪಿದ್ದ. ಆತನನ್ನು ಸಾಯಿಸಿದ್ದು ಯಾರೆಂಬುದು ರಹಸ್ಯವಾಗಿಯೇ ಉಳಿಯಿತು. ಕೆಲವರು, ಅಮೆರಿಕದ CIA ಗೂಢಚಾರಿ ಗಳಿರಬಹುದೆಂದರು, ಮತ್ತೆ ಕೆಲವರು ಇರಾನಿಗಳಿರಬಹುದೆಂದರು; ಆದರೆ ಬಹುತೇಕರು ಕೈ ತೋರಿಸಿದ್ದು ಇಸ್ರೇಲಿನ ಮೊಸ್ಸಾದ್ ಕಡೆಗೆ. ಬುಲ್ ಸತ್ತ ನಂತರ ‘ SUPER GUN ಕೆಲಸ ನಿಂತುಹೋಯಿತು.
ಆತನ ರಹಸ್ಯ ಎಂಜಿನಿಯರ್‌ಗಳು ಜಗತ್ತಿನೆಡೆ ಚೆಪಿಲ್ಲಿಯಾಗಿ ಹೋದರು. ಸದ್ದಾಂ ಹುಸೇನ್‌ನ ‘ BABYLON’ ಯೋಜನೆ ನಿಂತುಹೋಯಿತು. 2003ರಲ್ಲಿ ಅಮೆರಿಕದ ಸೈನ್ಯ ಇರಾಕ್ ದೇಶಕ್ಕೆ ನುಗ್ಗಿದಾಗ ಅದರ ರಾಜಧಾನಿ ಬಾಗ್ದಾದ್‌ನಿಂದ ಸುಮಾರು 30 ಕಿಲೋ ಮೀಟರು ದೂರವಿರುವ ಗುಜರಿಯಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ಬೃಹತ್ ‘ PIPELINE ’ಗಳು ಸಿಕ್ಕವು. ಬುಲನ ಹತ್ಯೆಯ ನಂತರ ಮೊಸ್ಸಾದ್ ಕಾರ್ಯನಿರ್ವಹಿಸುವ ಪ್ರಕ್ರಿಯೆ ಕೊಂಚ ಬದಲಾಯಿತು.
‘BLACK SEPTEMBERʼ ಕಾರ್ಯಾಚರಣೆಯಲ್ಲಿ ಒಬ್ಬೊಬ್ಬ ಉಗ್ರಗಾಮಿಗಳನ್ನು ಗುರಿಯಾಗಿಸಿ ಕೊಂಡು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೊಂದು ಸೇಡು ತೀರಿಸಿಕೊಳ್ಳುವ ರೀತಿಯ ಬದಲು, ಒಂದು ಇಡೀ ಯೋಜನೆಯನ್ನು ಸ್ಥಗಿತಗೊಳಿಸುವ ಕಾರ್ಯಾಚರಣೆಗಳ ಬಗ್ಗೆ ಹೆಚ್ಚು ಗಮನ ಹರಿಸಲಾಯಿತು.