Bigg Boss Kannada 12: ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡ ರಘು; ಪತ್ನಿ ಹೇಳಿದ್ದೇನು?
Raghu Bigg boss: ಬಿಗ್ ಬಾಸ್ ಕೇವಲ ಟಾಸ್ಕ್‌ಗಷ್ಟೇ ಸಿಮೀತ ಅನ್ನೋದು ಕೆಲವರ ಅಭಿಪ್ರಾಯ. ಎಷ್ಟೋ ಜನರ ವ್ಯಕ್ತಿತ್ವ ಕೂಡ ಬದಲಾವಣೆ ಮಾಡಿದೆ ಅನ್ನೋದಕ್ಕೆ ರಘು ಅವರೇ ಸಾಕ್ಷಿ. ಫ್ಯಾಮಿಲಿ ವೀಕ್ ರೌಂಡ್ ಇದ್ದ ಕಾರಣ, ರಘು ಅವರ ಹೆಂಡತಿ ಹಾಗೂ ಮಗ ಮನೆಗೆ ಎಂಟ್ರಿ ಕೊಟ್ಟಿದ್ದರು. ರಘು ಮನೆಯಲ್ಲಿ ಇದ್ದ ಹಾಗೆ ಇಲ್ಲ ಬದಲಾಗಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಕೇವಲ ಟಾಸ್ಕ್‌ಗಷ್ಟೇ ಸಿಮೀತ ಅನ್ನೋದು ಕೆಲವರ ಅಭಿಪ್ರಾಯ. ಎಷ್ಟೋ ಜನರ ವ್ಯಕ್ತಿತ್ವ ಕೂಡ ಬದಲಾವಣೆ ಮಾಡಿದೆ ಅನ್ನೋದಕ್ಕೆ ರಘು (Raghu) ಅವರೇ ಸಾಕ್ಷಿ. ಫ್ಯಾಮಿಲಿ ವೀಕ್ ರೌಂಡ್ (Family Week) ಇದ್ದ ಕಾರಣ, ರಘು ಅವರ ಹೆಂಡತಿ ಹಾಗೂ ಮಗ ಮನೆಗೆ ಎಂಟ್ರಿ ಕೊಟ್ಟಿದ್ದರು. ರಘು ಮನೆಯಲ್ಲಿ ಇದ್ದ ಹಾಗೆ ಇಲ್ಲ ಬದಲಾಗಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೀಗ ಬಿಗ್ಬಾಸ್ ಸ್ಪರ್ಧಿ ಆಗಿರುವ ರಘು (Raghu) ಅವರೂ ಸಹ ಬಿಗ್ಬಾಸ್ ಮನೆಗೆ ಬಂದು, ಹೊರಗೆ ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಬಿಗ್ ಬಾಸ್ ಸರ್‌ಪ್ರೈಸ್
ರಘು ಅವರ ಪತ್ನಿ ಬರ್ತ್‌ಡೇ ಇದ್ದ ಕಾರಣ ಬಿಗ್ ಬಾಸ್ ಒಂದು ಸರ್‌ಪ್ರೈಸ್ ಕೊಟ್ಟರು. ರಘು ಅವರ ಪತ್ನಿ ಕೇಕ್ ಕಟ್ ಮಾಡಿ ಸೆಲೆಬ್ರೆಟ್ ಮಾಡಿದರು. ಪತ್ನಿ ಬರುತ್ತಿದ್ದಂತೆ ರಘು ಕೂಡ ತುಂಬಾ ಭಾವುಕರಾದರು. ಒಂದು ಕ್ಷಣ ಪತ್ನಿ ಕೂಡ ಶಾಕ್ ಆದರು.
ಇದನ್ನೂ ಓದಿ: Bigg Boss Kannada 12: ಮಕ್ಕಳಿಗೂ ಮಾಳು ಸ್ಟೈಲ್ನಲ್ಲೇ ಹೇರ್ಸ್ಟೈಲ್! ಫ್ಯಾಮಿಲಿ ಸರ್ಪ್ರೈಸ್‌ಗೆ ಕಣ್ಣೀರಾದ ರಘು
ಮನೆಯಲ್ಲಿ ರಘು ಹೇಗೆ ಇರ್ತಾ ಇದ್ರು?
ಆ ಬಳಿಕ ಒಂದೊಂದೆ ರಘು ಅವರ ಕುರಿತು ಮಾತನಾಡಿದರು ಪತ್ನಿ. ಮನೆಯಲ್ಲಿ ರಘು ಅವರು ಸಿಕ್ಕಾಪಟ್ಟೆ ಸಿಡುಕು ಮಾಡಿಕೊಂಡೇ ಇರ್ತಾರೆ. ಯಾವಾಗಲೂ ತಾವು ಆಯ್ತು ತಮ್ಮ ಮೊಬೈಲ್ ಆಯ್ತು ಅನ್ನುತ್ತಾರೆ. ಅವರು ಬೈಕ್ ನಿಲ್ಲಿಸಿದರೆ ಸಾಕು ನಮಗೆ ಭಯ ಶುರು ಆಗುತ್ತೆ. ಫ್ಯಾನ್ ಆನ್ ಮಾಡಲು ಸಹಿತ ಕರೆದು ಫ್ಯಾನ್ ಆನ್ ಮಾಡಲು ಹೇಳುತ್ತಾರೆ.
Raghu's wife is stunningly beautiful 🤌🏻😍
— loveyourself 4u (@lov_eyourself4u) December 26, 2025
totally overshadowing the Bigg Boss girls 🙌🏻✨
Raghu and his son dance was adorable 🥰🤗
Hope Raghu's change is genuine not just for the show Raghu's wife and son seems very happy What a lovely family 💫#BBK12 pic.twitter.com/dhX0XBgcmQ
ತಾವಾಗೇ ಎದ್ದು ಮಾಡೋರಲ್ಲ. ನಮ್ಮೊಂದಿಗೆ ಸರಿಯಾಗಿ ಮಾತನಾಡುವುದು ಸಹ ಇಲ್ಲ. ಎಲ್ಲದಕ್ಕೂ ರೇಗುತ್ತಿರುತ್ತಾರೆ. ಮಾತನಾಡಲು ಬಂದರೆ ಸರಿಯಾಗಿ ಮಾತನಾಡುವುದಿಲ್ಲ, ಮಗ ಆಟ ಆಡಲು ಕರೆದರೂ ಹೋಗುವುದಿಲ್ಲ. ಆದರೆ ಇಲ್ಲಿ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದಿದ್ದಾರೆ. ಮನೆಯಲ್ಲಿ ನೋಡಿದ ರಘುಗೂ ಇಲ್ಲಿ ನೋಡುತ್ತಿರುವ ರಘುಗೂ ತುಂಬಾ ವ್ಯತ್ಯಾಸ ಇದೆ.
ಆದರೆ ಇಲ್ಲಿ ಎಲ್ಲರ ಜೊತೆ ಹೊಂದಿಕೊಂಡು ಹೋಗ್ತಾರೆ. ಅಡುಗೆ ಮಾಡ್ತಾರೆ. ಇನ್ನು ಗಿಲ್ಲಿ ಅವರು ಅಷ್ಟು ಕ್ಲೋಸ್ ಕೂಡ ನನ್ನ ಮಗನ ಜೊತೆ ಇದುವರೆಗೆ ಆಗಿಲ್ಲ. ಅಚರು ಎಷ್ಟೇ ಕಾಟ ಕೊಟ್ಟರು ತಡೆದುಕೊಂಡು ಹಾಗೇ ಸುಮ್ಮನೆ ಇರ್ತಾರೆ ಎಂದರು.
ಇದನ್ನೂ ಓದಿ: Bigg Boss Kannada: ಮೂಲ ನಿಯಮ ಉಲ್ಲಂಘನೆ; ಕಾವ್ಯ ಫ್ಯಾಮಿಲಿಯನ್ನ ಮನೆಯಿಂದ ಆಚೆ ಕಳುಹಿಸಿದ ಬಿಗ್ ಬಾಸ್
ರಘು ಕೂಡ ಆ ಬಳಿಕ ಅಶ್ವಿನಿ ಬಳಿ. ನಾನು ಮನೆಯವರೊಟ್ಟಿಗೆ ಸರಿಯಾಗಿ ವರ್ತಿಸಲಿಲ್ಲ. ಮಗನೊಟ್ಟಿಗೆ ಆಟ ಸಹ ಆಡಲಿಲ್ಲ ಆದರೆ ನಾನು ಎಂಥಹ ತಪ್ಪು ಮಾಡಿದೆ ಎಂದು ನನಗೆ ಅರ್ಥ ಆಗಿದೆ’ ಎಂದು ಹೇಳಿಕೊಂಡಿದ್ದಾರೆ. ರಘು ಅವರು ಬಿಗ್ಬಾಸ್ ಮನೆಯಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ಗಿಲ್ಲಿ ಅವರು ಕ್ಯಾಪ್ಟನ್ ಆಯ್ಕೆ ಬಗ್ಗೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.