Gururaj Gantihole Column: ಕಾಂಗ್ರೆಸ್ ನಿಯಂತ್ರಣ ಮೀರಿ ಹಬ್ಬುತ್ತಿದೆ ಬೆಲೆಯೇರಿಕೆ
ಲೀಟರ್ಗೆ 12 ರೂಪಾಯಿ ಏರಿಸಿ, ಅದರಲ್ಲಿ ಕೇವಲ 7 ರೂಪಾಯಿ ಮಾತ್ರ ರೈತರಿಗೆ ಕೊಡುತ್ತೇವೆ ಎನ್ನುವುದಾದರೆ, ಉಳಿದ ಹೆಚ್ಚುವರಿ ಹಣ ಯಾರ ಜೇಬು ಸೇರುತ್ತಿದೆ? ಜನರಿಂದ ಕಿತ್ತುಕೊಳ್ಳುತ್ತಿರುವ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಸರ್ಕಾರದ ಬಳಿ ಯಾವುದೇ ಲೆಕ್ಕವಿಲ್ಲ. ಆದರೆ, ಇಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿರುವ ಸತ್ಯವೊಂದಿದೆ.
-
ಗಂಟಾಘೋಷ
ರಾಜ್ಯದ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಬೆಲೆ ಏರಿಕೆಯ ಬರೆ ಎಳೆಯಲು ಸರ್ಕಾರ ಸಜ್ಜಾಗಿದೆ. ಒಂದೆಡೆ ನಂದಿನಿ ಹಾಲಿನ ದರದಲ್ಲಿ ಭಾರಿ ಏರಿಕೆ, ಮತ್ತೊಂದೆಡೆ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರ, ಈ ಎರಡೂ ಬೆಳವಣಿಗೆಗಳು ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯ ಸಂಪೂರ್ಣ ವೈಫಲ್ಯವನ್ನು ಮತ್ತು ಬಜೆಟ್ ನಿರ್ವಹಣೆಯಲ್ಲಿನ ದಿವಾಳಿತನವನ್ನು ಜಗಜ್ಜಾಹೀರು ಮಾಡಿವೆ.
ತಮ್ಮ ಆರ್ಥಿಕ ಅಶಿಸ್ತನ್ನು ಮುಚ್ಚಿಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡಿಸುತ್ತಿರುವ ವಾದಗಳು ಮತ್ತು ನೀಡುತ್ತಿರುವ ಅಂಕಿ-ಅಂಶಗಳು ನಿಜಕ್ಕೂ ಬಾಲಿಶವಾಗಿವೆ. ಆಡಳಿತಗಾರರ ಮಾತುಗಳಿಗೂ ಹಾಗೂ ಮಾರುಕಟ್ಟೆಯ ನೈಜ ಅಂಕಿ-ಅಂಶಗಳಿಗೂ ಇರುವ ಅಜಗಜಾಂತರವನ್ನು ಅವಲೋಕಿಸಿದರೆ, ಸರ್ಕಾರವು ಜನಸಾಮಾನ್ಯರ ಕಣ್ಣಿಗೆ ಹೇಗೆ ಮಣ್ಣೆರಚು ತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಹಾಲಿನ ದರ ಏರಿಕೆ ಮತ್ತು ಸಬ್ಸಿಡಿ ಕಡಿತದ ಹಿಂದಿನ ಮರ್ಮ: 2023ರಲ್ಲಿ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಾಲಿನ ದರವನ್ನು ನಿರಂತರವಾಗಿ ಏರಿಸಲಾಗುತ್ತಿದೆ. 2023ರ ಜುಲೈನಲ್ಲಿ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲಾಯಿತು. ತದನಂತರ 2024ರ ಜೂನ್ನಲ್ಲಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹೆಚ್ಚುವರಿ ಹಾಲು ಸೇರಿಸುವ ನೆಪವೊಡ್ಡಿ ಮತ್ತೆ 2 ರೂಪಾಯಿ ದರ ಏರಿಸಲಾಯಿತು.
ಏಪ್ರಿಲ್ 2025ರಲ್ಲಿ ಮತ್ತೆ 4 ರೂಪಾಯಿ ಏರಿಕೆ ಮಾಡಲಾಯಿತು. ಇದೀಗ ಮತ್ತೆ ಹಾಲಿನ ದರವನ್ನು ಬರೋಬ್ಬರಿ 8 ರೂಪಾಯಿಗಳಷ್ಟು ಏರಿಸಿದ್ದು, ಉಪಮುಖ್ಯಮಂತ್ರಿಗಳು ಈ 8 ರೂಪಾಯಿ ಏರಿಕೆಯಲ್ಲಿ 7 ರೂಪಾಯಿಗಳು ನೇರವಾಗಿ ರೈತರಿಗೆ ಹೋಗುತ್ತದೆ ಎಂದು ಸಮರ್ಥಿಸಿಕೊಳ್ಳು ತ್ತಿದ್ದಾರೆ. ಇಷ್ಟೇ ಅಲ್ಲದೆ, ನಂದಿನಿಯ ಕೆಲವು ನಿರ್ದಿಷ್ಟ ಮಾದರಿಯ ಹಾಲಿನ ದರಗಳನ್ನಂತೂ ಲೀಟರ್ಗೆ ಬರೋಬ್ಬರಿ 12 ರೂಪಾಯಿಗಳವರೆಗೂ ಏರಿಕೆ ಮಾಡಲಾಗಿದೆ!
ಇದನ್ನೂ ಓದಿ: Gururaj Gantihole Column: ವಿಶೇಷಾಧಿಕಾರ: ಸದನದ ಕವಚವೇ, ಟೀಕೆಯ ವಿರುದ್ಧ ಅಸ್ತ್ರವೇ ?
ಲೀಟರ್ಗೆ 12 ರೂಪಾಯಿ ಏರಿಸಿ, ಅದರಲ್ಲಿ ಕೇವಲ 7 ರೂಪಾಯಿ ಮಾತ್ರ ರೈತರಿಗೆ ಕೊಡುತ್ತೇವೆ ಎನ್ನುವುದಾದರೆ, ಉಳಿದ ಹೆಚ್ಚುವರಿ ಹಣ ಯಾರ ಜೇಬು ಸೇರುತ್ತಿದೆ? ಜನರಿಂದ ಕಿತ್ತುಕೊಳ್ಳುತ್ತಿರುವ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಸರ್ಕಾರದ ಬಳಿ ಯಾವುದೇ ಲೆಕ್ಕವಿಲ್ಲ. ಆದರೆ, ಇಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿರುವ ಸತ್ಯವೊಂದಿದೆ.
ಹಿಂದಿನ ಸರ್ಕಾರವು ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಗಳ ಪ್ರೋತ್ಸಾಹಧನವನ್ನು (Subsidy) ನೀಡುತ್ತಿತ್ತು. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಹೊರೆಯನ್ನು ನಿಭಾಯಿಸಲಾಗದೆ ಆ 5 ರೂಪಾಯಿ ಪ್ರೋತ್ಸಾಹಧನವನ್ನು ಕಡಿತ ಗೊಳಿಸಿತು.
ತಮ್ಮದೇ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸಿಕೊಂಡ ಸರ್ಕಾರ, ರೈತರ ಸಬ್ಸಿಡಿಗೆ ಕತ್ತರಿ ಹಾಕಿತು. ಒಂದು ಕಡೆ 5 ರೂಪಾಯಿ ಸಬ್ಸಿಡಿಯನ್ನು ಕಿತ್ತುಕೊಂಡು, ಈಗ ಗ್ರಾಹಕರ ಜೇಬಿನಿಂದ 8 ರಿಂದ 12 ರೂಪಾಯಿವರೆಗೆ ಕಸಿದು, ಅದರಲ್ಲಿ ಬರೀ 7 ರೂಪಾಯಿ ರೈತರಿಗೆ ಕೊಡುತ್ತೇವೆ ಎನ್ನುವುದು ಅಪ್ಪಟ ದ್ವಂದ್ವ ನೀತಿಯಲ್ಲದೆ ಮತ್ತೇನು? ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿ ರೈತರ ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಇದೇ ಅವಧಿಯಲ್ಲಿ, ಪಶು ಆಹಾರದ ಬೆಲೆ ಗಗನಕ್ಕೇರಿದೆ.
2023ರ ಆರಂಭದಲ್ಲಿ 50 ಕೆಜಿಯ ಪಶು ಆಹಾರದ ಚೀಲದ ಬೆಲೆ ಅಂದಾಜು 1050ರಿಂದ 1100 ರೂಪಾಯಿಗಳ ಆಸುಪಾಸಿನಲ್ಲಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಇದರ ಬೆಲೆ ನಿರಂತರವಾಗಿ ಏರಿಕೆಯಾಗಿ, ಶೇಕಡಾ 25ರಿಂದ 30ರಷ್ಟು ದುಬಾರಿಯಾಗಿದೆ. ಹಿಂದೆ ಸಿಗುತ್ತಿದ್ದ 5 ರೂ. ಸಬ್ಸಿಡಿಯೂ ಇಲ್ಲದೆ, ಪಶು ಆಹಾರದ ಬೆಲೆಯೂ ದುಪ್ಪಟ್ಟಾಗಿರುವಾಗ, ಸರ್ಕಾರ ಈಗ ನೀಡಲು ಹೊರಟಿರುವ 7 ರೂಪಾಯಿ ಹೆಚ್ಚಳವು ರೈತನಿಗೆ ಲಾಭ ತಂದುಕೊಡುವ ಬದಲು ಆತನ ನಷ್ಟವನ್ನು ಸರಿದೂಗಿಸ ಲಷ್ಟೇ ಸೀಮಿತವಾಗುತ್ತದೆ. ಗ್ರಾಹಕರಿಗೆ ಮಾತ್ರ ಹಾಲಿನ ದರ ಲೀಟರ್ ಗೆ 8 ರೂ. ದುಬಾರಿ ಯಾಗುತ್ತದೆ. ಇದು ರೈತರ ಹೆಸರಿನಲ್ಲಿ ಸಾಮಾನ್ಯ ವರ್ಗದ ಜನರ ಮೇಲೆ ಹಾಕುತ್ತಿರುವ ಬಜೆಟ್ ನಿರ್ವಹಣೆಯ ಹೊರೆಯೇ ಹೊರತು, ರೈತರ ನೈಜ ಅಭಿವೃದ್ಧಿಯಲ್ಲ.
ಡೀಸೆಲ್ ತೆರಿಗೆ ಮತ್ತು ಬಸ್ ದರ ಏರಿಕೆಯ ಇಬ್ಬಗೆಯ ನೀತಿ: ಇನ್ನು ಬಸ್ ದರ ಏರಿಕೆಯ ವಿಚಾರಕ್ಕೆ ಬಂದರೆ, ಸರ್ಕಾರದ ವಾದಗಳು ಮತ್ತಷ್ಟು ಹಾಸ್ಯಾಸ್ಪದವಾಗಿವೆ. ಬಸ್ ದರ ಏರಿಕೆಯನ್ನು ಸಮರ್ಥಿಸಿ ಕೊಳ್ಳುವ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸರ್ಕಾರ ಡೀಸೆಲ್ ಬೆಲೆ ಇಳಿಸುತ್ತಿಲ್ಲ, ಆದ್ದರಿಂದ ನಾವು ಬಸ್ ದರ ಏರಿಸುವುದು ಅನಿವಾರ್ಯ ಎಂದು ಬೊಟ್ಟು ಮಾಡುತ್ತಿದ್ದಾರೆ. ಆದರೆ, ವಾಸ್ತವದ ತೆರಿಗೆ ಲೆಕ್ಕಾಚಾರಗಳನ್ನು ಗಮನಿಸಿದರೆ ಅಸಲಿ ಸತ್ಯ ಬಯಲಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಅವಲೋಕಿಸಿದರೆ, ಪ್ರಸ್ತುತ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ ಕೇವಲ 10.90 ರೂ. (ಅಂದಾಜು 11 ರೂ.) ಅಬಕಾರಿ ಸುಂಕ ವಿಧಿಸುತ್ತಿದ್ದರೆ, ರಾಜ್ಯ ಸರ್ಕಾರವು ಜನರಿಂದ ಬರೋಬ್ಬರಿ 26 ರಿಂದ 30 ರೂ. ಗಳಷ್ಟು ಮೌಲ್ಯವರ್ಧಿತ ತೆರಿಗೆ ವಸೂಲಿ ಮಾಡುತ್ತಿದೆ!
ಅದೇ ರೀತಿ ಡೀಸೆಲ್ ಮೇಲೆ ಕೇಂದ್ರದ ತೆರಿಗೆ ಕೇವಲ 7.80ರೂ. ಇದ್ದರೆ, ರಾಜ್ಯ ಸರ್ಕಾರವು ಪ್ರತಿ ಲೀಟರ್ ಗೆ 21.17 ರೂ.ಗಳಷ್ಟು ಭಾರಿ ತೆರಿಗೆಯನ್ನು ಜನರಿಂದ ಕಿತ್ತುಕೊಳ್ಳುತ್ತಿದೆ. ಕೇಂದ್ರಕ್ಕಿಂತ ದುಪ್ಪಟ್ಟು ತೆರಿಗೆಯನ್ನು ತಾನೇ ವಸೂಲಿ ಮಾಡುತ್ತಿದ್ದರೂ, ರಾಜ್ಯ ಸರ್ಕಾರವು ಗೂಬೆಯನ್ನು ಮಾತ್ರ ಕೇಂದ್ರದ ಮೇಲೆ ಕೂರಿಸುತ್ತಿದೆ. 2024ರ ಜೂನ್ ತಿಂಗಳಲ್ಲಿ ಇದೇ ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 14.3ರಿಂದ 18.44ಕ್ಕೆ ಹಾಗೂ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇಕಡಾ 25.92ರಿಂದ 29.84ಕ್ಕೆ ದಿಢೀರನೆ ಏರಿಕೆ ಮಾಡಿತು.
ಇದರಿಂದಾಗಿ ರಾಜ್ಯದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 3.02 ರೂ.ಗಳಷ್ಟು ದುಬಾರಿಯಾಯಿತು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಈ ತೆರಿಗೆ ಹೆಚ್ಚಳದಿಂದ ರಾಜ್ಯ ಸರ್ಕಾರವು ವಾರ್ಷಿಕ ಸುಮಾರು 2500ರಿಂದ 3000 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ರಾಜಸ್ವವನ್ನು ಸಂಗ್ರಹಿಸು ತ್ತಿದೆ.
ಒಂದು ವೇಳೆ ಉಪಮುಖ್ಯಮಂತ್ರಿಗಳಿಗೆ ಜನಸಾಮಾನ್ಯರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಒಟ್ಟು 13 ರೂ. ಹಾಗೂ 16 ರೂ.ನಷ್ಟು ಕಡಿತಗೊಳಿಸಿದ ಸಂದರ್ಭದಲ್ಲಿ, ರಾಜ್ಯ ಸರ್ಕಾರವೂ ತನ್ನ ತೆರಿಗೆಯನ್ನು ಕಡಿತಗೊಳಿಸಿ ಇಂಧನ ಬೆಲೆಯನ್ನು ಸಮತೋಲನಕ್ಕೆ ತರುತ್ತಿತ್ತು. ಆದರೆ, ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ತೆರಿಗೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿದ ರಾಜ್ಯ ಸರ್ಕಾರ, ಈಗ ಸಾರಿಗೆ ನಿಗಮಗಳ ನಷ್ಟಕ್ಕೆ ಕೇಂದ್ರದ ಕಡೆ ಬೆರಳು ತೋರಿಸುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಪ್ಪಟ ತಂತ್ರವಾಗಿದೆ.
ಶೇಕಡಾವಾರು ಏರಿಕೆಯ ವ್ಯತ್ಯಾಸ ಮತ್ತು ಸರ್ಕಾರದ ಸುಳ್ಳುಗಳು: 2023ರಿಂದ ಇಂದಿನವರೆಗೆ ಡೀಸೆಲ್ ಬೆಲೆಯಲ್ಲಿ ಆಗಿರುವ ಶೇಕಡಾವಾರು ಏರಿಕೆಗೂ, ಇದೀಗ ಸರ್ಕಾರ ಪ್ರಸ್ತಾಪಿಸುತ್ತಿರುವ ಬಸ್ ದರದ ಶೇಕಡಾವಾರು ಏರಿಕೆಗೂ ಯಾವುದೇ ತಾಳೆಯಾಗುತ್ತಿಲ್ಲ. 2023ರಿಂದ ಡೀಸೆಲ್ ಬೆಲೆಯಲ್ಲಿ ರಾಜ್ಯದ ತೆರಿಗೆ ಹೆಚ್ಚಳವನ್ನೂ ಸೇರಿಸಿ ನೋಡಿದರೂ ಇಂಧನ ವೆಚ್ಚ ಕೇವಲ ಶೇಕಡಾ 4 ರಿಂದ 5ರಷ್ಟು ಮಾತ್ರ ಏರಿಕೆಯಾಗಿದೆ. ಆದರೆ, 2026ರ ನವೆಂಬರ್ನಲ್ಲಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಬಸ್ ಪ್ರಯಾಣ ದರವನ್ನು ಸರಾಸರಿ ಶೇಕಡಾ 23ರಷ್ಟು ಹಾಗೂ ಬಿಎಂಟಿಸಿ (BMTC) ದರವನ್ನು ಶೇಕಡಾ 33ರಿಂದ 35ರಷ್ಟು ಭಾರಿ ಪ್ರಮಾಣದಲ್ಲಿ ಏರಿಸಿದೆ.
ಇಂಧನ ವೆಚ್ಚ ಕೇವಲ ಶೇ. 5ರಷ್ಟು ಹೆಚ್ಚಾದಾಗ, ಟಿಕೆಟ್ ದರವನ್ನು ಶೇ. 23ರಿಂದ 35ರಷ್ಟು ಹೆಚ್ಚಿಸುವ ತರ್ಕದ ಹಿಂದೆ ಅಡಗಿರುವುದು ಸಾರಿಗೆ ಸಂಸ್ಥೆಗಳ ಆರ್ಥಿಕ ದಿವಾಳಿತನ. ನಾಲ್ಕು ಸಾರಿಗೆ ನಿಗಮಗಳು ಒಟ್ಟಾಗಿ ವಾರ್ಷಿಕ 2000 ಕೋಟಿ ರೂ. ಕೊರತೆ ಹಾಗೂ ಒಟ್ಟು 9000 ಕೋಟಿ ರೂ. ಸಂಚಿತ ನಷ್ಟವನ್ನು ಎದುರಿಸುತ್ತಿವೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ ಕಾಲಕಾಲಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡದ ಕಾರಣ, ಆ ನಷ್ಟವನ್ನು ನೇರವಾಗಿ ಟಿಕೆಟ್ ಖರೀದಿಸುವ ಪ್ರಯಾಣಿಕರ ತಲೆಯ ಮೇಲೆ ಕಟ್ಟಲಾಗುತ್ತಿದೆ.
ಆಸ್ಪತ್ರೆ, ಇ.ವಿ ವಾಹನ ಸೇರಿ ಪ್ರತಿಯೊಂದರ ದರವೂ ಗಗನಕ್ಕೆ!: ಸರ್ಕಾರದ ಈ ಆರ್ಥಿಕ ದಿವಾಳಿತನದ ಹೊರೆ ಕೇವಲ ಹಾಲು ಮತ್ತು ಬಸ್ ದರಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಳೆದ ಒಂದೆರಡು ವರ್ಷಗಳಲ್ಲಿ ಸರ್ಕಾರವು ಪ್ರತಿಯೊಂದು ವಲಯದಲ್ಲೂ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ವಿಶೇಷವಾಗಿ ಬಡವರ ಪಾಲಿನ ಸಂಜೀವಿನಿಯಾದ ಸರ್ಕಾರಿ ಆಸ್ಪತ್ರೆಗಳೂ ಸರ್ಕಾರದ ಈ ‘ತೆರಿಗೆ ದಾಳಿ’ಯಿಂದ ಹೊರತಾಗಿಲ್ಲ. 2024ರ ಆರಂಭದಲ್ಲಿ ವಿಕ್ಟೋರಿಯಾ, ಬೌರಿಂಗ್ನಂತಹ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ (BMCRI ಅಡಿ ಬರುವ ಆಸ್ಪತ್ರೆಗಳು) ರೋಗಿಗಳ ಬಳಕೆದಾರರ ಶುಲ್ಕವನ್ನು ಶೇ.10ರಿಂದ 20ರಷ್ಟು ಹೆಚ್ಚಿಸಲಾಯಿತು.
ಕೆಲವು ನಿರ್ದಿಷ್ಟ ಲ್ಯಾಬ್ ಪರೀಕ್ಷೆಗಳು ಮತ್ತು ವಾರ್ಡ್ ಶುಲ್ಕಗಳನ್ನಂತೂ ದುಪ್ಪಟ್ಟುಗೊಳಿಸಿ ಬಡವರ ಮೇಲೆ ಬರೆ ಎಳೆಯಲಾಯಿತು. ಇನ್ನೊಂದೆಡೆ, ಭವಿಷ್ಯದ ದೃಷ್ಟಿಯಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವ ಬದಲು, ಸರ್ಕಾರ ಅವುಗಳ ಮೇಲೂ ಕಣ್ಣು ಹಾಕಿದೆ. 2024ರ ಮೋಟಾರು ವಾಹನ ತೆರಿಗೆ ತಿದ್ದುಪಡಿ ಕಾಯ್ದೆಯಡಿ, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜೀವಿತಾವಧಿ ತೆರಿಗೆಯನ್ನು (Lifetime tax) ಮತ್ತು 25 ಲಕ್ಷ ರೂ. ಮೇಲ್ಪಟ್ಟ ಪ್ರೀಮಿಯಂ ವಾಹನ ಗಳ ತೆರಿಗೆಯನ್ನು ಪರಿಷ್ಕರಿಸಿ ಹೆಚ್ಚಿಸಲಾಗಿದೆ. ಜೊತೆಗೆ ಸಾರಿಗೆ ವಾಹನಗಳ ಮೇಲೂ ಶೇ. 3ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
ಇಷ್ಟೇ ಅಲ್ಲದೆ, 2023ರ ಅಕ್ಟೋಬರ್ನಲ್ಲಿ ಆಸ್ತಿಗಳ ಮಾರ್ಗಸೂಚಿ ದರವನ್ನು (Guidance value) ಶೇ. 15ರಿಂದ 30ರಷ್ಟು ಹೆಚ್ಚಿಸಿ ಜನಸಾಮಾನ್ಯರ ಸ್ವಂತ ಮನೆಯ ಕನಸನ್ನು ದುಬಾರಿಗೊಳಿಸ ಲಾಗಿದೆ. 2024ರ ಫೆಬ್ರವರಿಯಲ್ಲಿ ಸ್ಟ್ಯಾಂಪ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ. ಬಿಬಿಎಂಪಿ ಆಸ್ತಿ ತೆರಿಗೆಯನ್ನು ಶೇ. 20ರವರೆಗೆ ಏರಿಸಲಾಗಿದೆ.
ಇನ್ನು ಬೆಂಗಳೂರು ಜಲಮಂಡಳಿಯು (BWSSB) ನೀರಿನ ದರವನ್ನು ಶೇ. 20ರಿಂದ 30ರಷ್ಟು ಹೆಚ್ಚಿಸಲು ತುದಿಗಾಲಲ್ಲಿ ನಿಂತಿದೆ. ರಾಜ್ಯದ ಬೊಕ್ಕಸ ತುಂಬಿಸುವ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನೂ (AED) 2023ರ ಜುಲೈನ ಶೇ.20ರಷ್ಟು ಹೆಚ್ಚಿಸಲಾಗಿದೆ. ಇವೆಲ್ಲವೂ ಸರ್ಕಾರಿ ಖಜಾನೆಯ ತಳಕಂಡಿರುವುದಕ್ಕೆ ಮತ್ತು ಆರ್ಥಿಕ ಅಶಿಸ್ತಿಗೆ ಹಿಡಿದ ಕನ್ನಡಿಯಾಗಿವೆ.
ಬಜೆಟ್ ನಿರ್ವಹಣೆಯ ಸಂಪೂರ್ಣ ವೈಫಲ್ಯ: ಒಟ್ಟಾರೆಯಾಗಿ ಹೇಳಬೇಕೆಂದರೆ, ಬೆಲೆ ಏರಿಕೆ ಯೆಂಬುದು ಈಗ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ನಿಯಂತ್ರಣ ತಪ್ಪಿದೆ. ಪರಿಸ್ಥಿತಿ ಎಷ್ಟು ಕೈಮೀರಿದೆ ಎಂದರೆ, ಈಗ ಸರ್ಕಾರವು ಈ ಏರಿಕೆಯನ್ನು ತಡೆಯಲು ಇಚ್ಛಿಸಿದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗದಂತಹ ಅಸಹಾಯಕ ಸ್ಥಿತಿಗೆ ತಲುಪಿದೆ. ಇದಕ್ಕೆ ಮೂಲ ಕಾರಣ ಅವರು ಸೃಷ್ಟಿಸಿಕೊಂಡಿರುವ ಸ್ವಯಂಕೃತ ಆರ್ಥಿಕ ಅವ್ಯವಸ್ಥೆ.
ತಮ್ಮ ಅವೈಜ್ಞಾನಿಕ ಯೋಜನೆಗಳಿಗೆ ಹಣ ಹೊಂದಿಸಲು ಬಜೆಟ್ ಅನ್ನು ಸಂಪೂರ್ಣವಾಗಿ ಅಸ್ತವ್ಯಸ್ತ ಗೊಳಿಸಿರುವ ಸರ್ಕಾರ, ರಾಜ್ಯದ ಆರ್ಥಿಕತೆಯ ಮೇಲಿನ ಹಿಡಿತವನ್ನೇ ಕಳೆದುಕೊಂಡಿದೆ. ಹಾಲು ಮತ್ತು ಬಸ್ ದರ ಏರಿಕೆಯ ವಿಚಾರದಲ್ಲಿ ಉಪಮುಖ್ಯಮಂತ್ರಿಗಳು ನೀಡುತ್ತಿರುವ ಸಮರ್ಥನೆಗಳು ಅವರ ಹತಾಶೆಯನ್ನು ಮತ್ತು ಸರ್ಕಾರದ ದಿವಾಳಿತನವನ್ನು ತೋರಿಸುತ್ತವೆಯೇ ಹೊರತು ಮೂಲಭೂತ ಗಣಿತಕ್ಕೆ ತಾಳೆಯಾಗುವುದಿಲ್ಲ.
ರೈತರ ಹೆಸರಿನಲ್ಲಿ ಹಾಲಿನ ದರ ಏರಿಸಿ ಸಬ್ಸಿಡಿ ಕಡಿತಗೊಳಿಸುವುದು, ಹಾಗೂ ಕೇಂದ್ರಕ್ಕಿಂತ ಹೆಚ್ಚು ತೆರಿಗೆಯನ್ನು ತಾನೇ ವಿಧಿಸಿ ಬಸ್ ದರ ಏರಿಕೆಗೆ ಕೇಂದ್ರದತ್ತ ಬೆರಳು ಮಾಡುವುದು-ಇವೆಲ್ಲವೂ ಕೈಮೀರಿ ಹೋಗಿರುವ ಆರ್ಥಿಕ ದುರಾಡಳಿತವನ್ನು ಮುಚ್ಚಿಡುವ ವಿಫಲ ಪ್ರಯತ್ನಗಳಾಗಿವೆ.
ರಾಜ್ಯದ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಬೆಲೆ ಏರಿಕೆಯ ಬರೆ ಎಳೆಯಲು ಸರ್ಕಾರ ಸಜ್ಜಾಗಿದೆ. ಒಂದೆಡೆ ನಂದಿನಿ ಹಾಲಿನ ದರದಲ್ಲಿ ಭಾರಿ ಏರಿಕೆ, ಮತ್ತೊಂದೆಡೆ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರ, ಈ ಎರಡೂ ಬೆಳವಣಿಗೆಗಳು ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯ ಸಂಪೂರ್ಣ ವೈಫಲ್ಯವನ್ನು ಮತ್ತು ಬಜೆಟ್ ನಿರ್ವಹಣೆಯಲ್ಲಿನ ದಿವಾಳಿತನವನ್ನು ಜಗಜ್ಜಾಹೀರು ಮಾಡಿವೆ.
ತಮ್ಮ ಆರ್ಥಿಕ ಅಶಿಸ್ತನ್ನು ಮುಚ್ಚಿಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡಿಸುತ್ತಿರುವ ವಾದಗಳು ಮತ್ತು ನೀಡುತ್ತಿರುವ ಅಂಕಿ-ಅಂಶಗಳು ನಿಜಕ್ಕೂ ಬಾಲಿಶವಾಗಿವೆ. ಆಡಳಿತಗಾರರ ಮಾತುಗಳಿಗೂ ಹಾಗೂ ಮಾರುಕಟ್ಟೆಯ ನೈಜ ಅಂಕಿ-ಅಂಶಗಳಿಗೂ ಇರುವ ಅಜಗಜಾಂತರವನ್ನು ಅವಲೋಕಿಸಿದರೆ, ಸರ್ಕಾರವು ಜನಸಾಮಾನ್ಯರ ಕಣ್ಣಿಗೆ ಹೇಗೆ ಮಣ್ಣೆರಚು ತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಹಾಲಿನ ದರ ಏರಿಕೆ ಮತ್ತು ಸಬ್ಸಿಡಿ ಕಡಿತದ ಹಿಂದಿನ ಮರ್ಮ: 2023ರಲ್ಲಿ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಾಲಿನ ದರವನ್ನು ನಿರಂತರವಾಗಿ ಏರಿಸಲಾಗುತ್ತಿದೆ. 2023ರ ಜುಲೈನಲ್ಲಿ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲಾಯಿತು. ತದನಂತರ 2024ರ ಜೂನ್ನಲ್ಲಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹೆಚ್ಚುವರಿ ಹಾಲು ಸೇರಿಸುವ ನೆಪವೊಡ್ಡಿ ಮತ್ತೆ 2 ರೂಪಾಯಿ ದರ ಏರಿಸಲಾಯಿತು.
ಏಪ್ರಿಲ್ 2025ರಲ್ಲಿ ಮತ್ತೆ 4 ರೂಪಾಯಿ ಏರಿಕೆ ಮಾಡಲಾಯಿತು. ಇದೀಗ ಮತ್ತೆ ಹಾಲಿನ ದರವನ್ನು ಬರೋಬ್ಬರಿ 8 ರೂಪಾಯಿಗಳಷ್ಟು ಏರಿಸಿದ್ದು, ಉಪಮುಖ್ಯಮಂತ್ರಿಗಳು ಈ 8 ರೂಪಾಯಿ ಏರಿಕೆಯಲ್ಲಿ 7 ರೂಪಾಯಿಗಳು ನೇರವಾಗಿ ರೈತರಿಗೆ ಹೋಗುತ್ತದೆ ಎಂದು ಸಮರ್ಥಿಸಿಕೊಳ್ಳು ತ್ತಿದ್ದಾರೆ. ಇಷ್ಟೇ ಅಲ್ಲದೆ, ನಂದಿನಿಯ ಕೆಲವು ನಿರ್ದಿಷ್ಟ ಮಾದರಿಯ ಹಾಲಿನ ದರಗಳನ್ನಂತೂ ಲೀಟರ್ಗೆ ಬರೋಬ್ಬರಿ 12 ರೂಪಾಯಿಗಳವರೆಗೂ ಏರಿಕೆ ಮಾಡಲಾಗಿದೆ!
ಲೀಟರ್ಗೆ 12 ರೂಪಾಯಿ ಏರಿಸಿ, ಅದರಲ್ಲಿ ಕೇವಲ 7 ರೂಪಾಯಿ ಮಾತ್ರ ರೈತರಿಗೆ ಕೊಡುತ್ತೇವೆ ಎನ್ನುವುದಾದರೆ, ಉಳಿದ ಹೆಚ್ಚುವರಿ ಹಣ ಯಾರ ಜೇಬು ಸೇರುತ್ತಿದೆ? ಜನರಿಂದ ಕಿತ್ತುಕೊಳ್ಳುತ್ತಿರುವ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಸರ್ಕಾರದ ಬಳಿ ಯಾವುದೇ ಲೆಕ್ಕವಿಲ್ಲ. ಆದರೆ, ಇಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿರುವ ಸತ್ಯವೊಂದಿದೆ.
ಹಿಂದಿನ ಸರ್ಕಾರವು ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಗಳ ಪ್ರೋತ್ಸಾಹಧನವನ್ನು (Subsidy) ನೀಡುತ್ತಿತ್ತು. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಹೊರೆಯನ್ನು ನಿಭಾಯಿಸಲಾಗದೆ ಆ 5 ರೂಪಾಯಿ ಪ್ರೋತ್ಸಾಹಧನವನ್ನು ಕಡಿತ ಗೊಳಿಸಿತು.
ತಮ್ಮದೇ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸಿಕೊಂಡ ಸರ್ಕಾರ, ರೈತರ ಸಬ್ಸಿಡಿಗೆ ಕತ್ತರಿ ಹಾಕಿತು. ಒಂದು ಕಡೆ 5 ರೂಪಾಯಿ ಸಬ್ಸಿಡಿಯನ್ನು ಕಿತ್ತು ಕೊಂಡು, ಈಗ ಗ್ರಾಹಕರ ಜೇಬಿನಿಂದ 8 ರಿಂದ 12 ರೂಪಾಯಿವರೆಗೆ ಕಸಿದು, ಅದರಲ್ಲಿ ಬರೀ 7 ರೂಪಾಯಿ ರೈತರಿಗೆ ಕೊಡುತ್ತೇವೆ ಎನ್ನುವುದು ಅಪ್ಪಟ ದ್ವಂದ್ವ ನೀತಿಯಲ್ಲದೆ ಮತ್ತೇನು? ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿ ರೈತರ ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಇದೇ ಅವಧಿಯಲ್ಲಿ, ಪಶು ಆಹಾರದ ಬೆಲೆ ಗಗನಕ್ಕೇರಿದೆ.
2023ರ ಆರಂಭದಲ್ಲಿ 50 ಕೆಜಿಯ ಪಶು ಆಹಾರದ ಚೀಲದ ಬೆಲೆ ಅಂದಾಜು 1050ರಿಂದ 1100 ರೂಪಾಯಿಗಳ ಆಸುಪಾಸಿನಲ್ಲಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಇದರ ಬೆಲೆ ನಿರಂತರವಾಗಿ ಏರಿಕೆಯಾಗಿ, ಶೇಕಡಾ 25ರಿಂದ 30ರಷ್ಟು ದುಬಾರಿಯಾಗಿದೆ. ಹಿಂದೆ ಸಿಗುತ್ತಿದ್ದ 5 ರೂ. ಸಬ್ಸಿಡಿಯೂ ಇಲ್ಲದೆ, ಪಶು ಆಹಾರದ ಬೆಲೆಯೂ ದುಪ್ಪಟ್ಟಾಗಿರುವಾಗ, ಸರ್ಕಾರ ಈಗ ನೀಡಲು ಹೊರಟಿರುವ 7 ರೂಪಾಯಿ ಹೆಚ್ಚಳವು ರೈತನಿಗೆ ಲಾಭ ತಂದುಕೊಡುವ ಬದಲು ಆತನ ನಷ್ಟವನ್ನು ಸರಿದೂಗಿಸ ಲಷ್ಟೇ ಸೀಮಿತವಾಗುತ್ತದೆ. ಗ್ರಾಹಕರಿಗೆ ಮಾತ್ರ ಹಾಲಿನ ದರ ಲೀಟರ್ ಗೆ 8 ರೂ. ದುಬಾರಿಯಾಗು ತ್ತದೆ. ಇದು ರೈತರ ಹೆಸರಿನಲ್ಲಿ ಸಾಮಾನ್ಯ ವರ್ಗದ ಜನರ ಮೇಲೆ ಹಾಕುತ್ತಿರುವ ಬಜೆಟ್ ನಿರ್ವಹಣೆಯ ಹೊರೆಯೇ ಹೊರತು, ರೈತರ ನೈಜ ಅಭಿವೃದ್ಧಿಯಲ್ಲ.
ಡೀಸೆಲ್ ತೆರಿಗೆ ಮತ್ತು ಬಸ್ ದರ ಏರಿಕೆಯ ಇಬ್ಬಗೆಯ ನೀತಿ: ಇನ್ನು ಬಸ್ ದರ ಏರಿಕೆಯ ವಿಚಾರಕ್ಕೆ ಬಂದರೆ, ಸರ್ಕಾರದ ವಾದಗಳು ಮತ್ತಷ್ಟು ಹಾಸ್ಯಾಸ್ಪದವಾಗಿವೆ. ಬಸ್ ದರ ಏರಿಕೆಯನ್ನು ಸಮರ್ಥಿಸಿ ಕೊಳ್ಳುವ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸರ್ಕಾರ ಡೀಸೆಲ್ ಬೆಲೆ ಇಳಿಸುತ್ತಿಲ್ಲ, ಆದ್ದರಿಂದ ನಾವು ಬಸ್ ದರ ಏರಿಸುವುದು ಅನಿವಾರ್ಯ ಎಂದು ಬೊಟ್ಟು ಮಾಡುತ್ತಿದ್ದಾರೆ. ಆದರೆ, ವಾಸ್ತವದ ತೆರಿಗೆ ಲೆಕ್ಕಾಚಾರಗಳನ್ನು ಗಮನಿಸಿದರೆ ಅಸಲಿ ಸತ್ಯ ಬಯಲಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಅವಲೋಕಿಸಿದರೆ, ಪ್ರಸ್ತುತ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ ಕೇವಲ 10.90 ರೂ. (ಅಂದಾಜು 11 ರೂ.) ಅಬಕಾರಿ ಸುಂಕ ವಿಧಿಸುತ್ತಿದ್ದರೆ, ರಾಜ್ಯ ಸರ್ಕಾರವು ಜನರಿಂದ ಬರೋಬ್ಬರಿ 26 ರಿಂದ 30 ರೂ. ಗಳಷ್ಟು ಮೌಲ್ಯವರ್ಧಿತ ತೆರಿಗೆ ವಸೂಲಿ ಮಾಡುತ್ತಿದೆ!
ಅದೇ ರೀತಿ ಡೀಸೆಲ್ ಮೇಲೆ ಕೇಂದ್ರದ ತೆರಿಗೆ ಕೇವಲ 7.80ರೂ. ಇದ್ದರೆ, ರಾಜ್ಯ ಸರ್ಕಾರವು ಪ್ರತಿ ಲೀಟರ್ ಗೆ 21.17 ರೂ.ಗಳಷ್ಟು ಭಾರಿ ತೆರಿಗೆಯನ್ನು ಜನರಿಂದ ಕಿತ್ತುಕೊಳ್ಳುತ್ತಿದೆ. ಕೇಂದ್ರಕ್ಕಿಂತ ದುಪ್ಪಟ್ಟು ತೆರಿಗೆಯನ್ನು ತಾನೇ ವಸೂಲಿ ಮಾಡುತ್ತಿದ್ದರೂ, ರಾಜ್ಯ ಸರ್ಕಾರವು ಗೂಬೆಯನ್ನು ಮಾತ್ರ ಕೇಂದ್ರದ ಮೇಲೆ ಕೂರಿಸುತ್ತಿದೆ. 2024ರ ಜೂನ್ ತಿಂಗಳಲ್ಲಿ ಇದೇ ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 14.3ರಿಂದ 18.44ಕ್ಕೆ ಹಾಗೂ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇಕಡಾ 25.92ರಿಂದ 29.84ಕ್ಕೆ ದಿಢೀರನೆ ಏರಿಕೆ ಮಾಡಿತು.
ಇದರಿಂದಾಗಿ ರಾಜ್ಯದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 3.02 ರೂ.ಗಳಷ್ಟು ದುಬಾರಿಯಾಯಿತು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಈ ತೆರಿಗೆ ಹೆಚ್ಚಳದಿಂದ ರಾಜ್ಯ ಸರ್ಕಾರವು ವಾರ್ಷಿಕ ಸುಮಾರು 2500ರಿಂದ 3000 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ರಾಜಸ್ವವನ್ನು ಸಂಗ್ರಹಿಸು ತ್ತಿದೆ.
ಒಂದು ವೇಳೆ ಉಪಮುಖ್ಯಮಂತ್ರಿಗಳಿಗೆ ಜನಸಾಮಾನ್ಯರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಒಟ್ಟು 13 ರೂ. ಹಾಗೂ 16 ರೂ.ನಷ್ಟು ಕಡಿತಗೊಳಿಸಿದ ಸಂದರ್ಭದಲ್ಲಿ, ರಾಜ್ಯ ಸರ್ಕಾರವೂ ತನ್ನ ತೆರಿಗೆಯನ್ನು ಕಡಿತಗೊಳಿಸಿ ಇಂಧನ ಬೆಲೆಯನ್ನು ಸಮತೋಲನಕ್ಕೆ ತರುತ್ತಿತ್ತು. ಆದರೆ, ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ತೆರಿಗೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿದ ರಾಜ್ಯ ಸರ್ಕಾರ, ಈಗ ಸಾರಿಗೆ ನಿಗಮಗಳ ನಷ್ಟಕ್ಕೆ ಕೇಂದ್ರದ ಕಡೆ ಬೆರಳು ತೋರಿಸುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಪ್ಪಟ ತಂತ್ರವಾಗಿದೆ.
ಶೇಕಡಾವಾರು ಏರಿಕೆಯ ವ್ಯತ್ಯಾಸ ಮತ್ತು ಸರ್ಕಾರದ ಸುಳ್ಳುಗಳು: 2023ರಿಂದ ಇಂದಿನವರೆಗೆ ಡೀಸೆಲ್ ಬೆಲೆಯಲ್ಲಿ ಆಗಿರುವ ಶೇಕಡಾವಾರು ಏರಿಕೆಗೂ, ಇದೀಗ ಸರ್ಕಾರ ಪ್ರಸ್ತಾಪಿಸುತ್ತಿರುವ ಬಸ್ ದರದ ಶೇಕಡಾವಾರು ಏರಿಕೆಗೂ ಯಾವುದೇ ತಾಳೆಯಾಗುತ್ತಿಲ್ಲ. 2023ರಿಂದ ಡೀಸೆಲ್ ಬೆಲೆಯಲ್ಲಿ ರಾಜ್ಯದ ತೆರಿಗೆ ಹೆಚ್ಚಳವನ್ನೂ ಸೇರಿಸಿ ನೋಡಿದರೂ ಇಂಧನ ವೆಚ್ಚ ಕೇವಲ ಶೇಕಡಾ 4 ರಿಂದ 5ರಷ್ಟು ಮಾತ್ರ ಏರಿಕೆಯಾಗಿದೆ. ಆದರೆ, 2026ರ ನವೆಂಬರ್ನಲ್ಲಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಬಸ್ ಪ್ರಯಾಣ ದರವನ್ನು ಸರಾಸರಿ ಶೇಕಡಾ 23ರಷ್ಟು ಹಾಗೂ ಬಿಎಂಟಿಸಿ (BMTC) ದರವನ್ನು ಶೇಕಡಾ 33ರಿಂದ 35ರಷ್ಟು ಭಾರಿ ಪ್ರಮಾಣದಲ್ಲಿ ಏರಿಸಿದೆ.
ಇಂಧನ ವೆಚ್ಚ ಕೇವಲ ಶೇ. 5ರಷ್ಟು ಹೆಚ್ಚಾದಾಗ, ಟಿಕೆಟ್ ದರವನ್ನು ಶೇ. 23ರಿಂದ 35ರಷ್ಟು ಹೆಚ್ಚಿಸುವ ತರ್ಕದ ಹಿಂದೆ ಅಡಗಿರುವುದು ಸಾರಿಗೆ ಸಂಸ್ಥೆಗಳ ಆರ್ಥಿಕ ದಿವಾಳಿತನ. ನಾಲ್ಕು ಸಾರಿಗೆ ನಿಗಮಗಳು ಒಟ್ಟಾಗಿ ವಾರ್ಷಿಕ 2000 ಕೋಟಿ ರೂ. ಕೊರತೆ ಹಾಗೂ ಒಟ್ಟು 9000 ಕೋಟಿ ರೂ. ಸಂಚಿತ ನಷ್ಟವನ್ನು ಎದುರಿಸುತ್ತಿವೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ ಕಾಲಕಾಲಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡದ ಕಾರಣ, ಆ ನಷ್ಟವನ್ನು ನೇರವಾಗಿ ಟಿಕೆಟ್ ಖರೀದಿಸುವ ಪ್ರಯಾಣಿಕರ ತಲೆಯ ಮೇಲೆ ಕಟ್ಟಲಾಗುತ್ತಿದೆ.
ಆಸ್ಪತ್ರೆ, ಇ.ವಿ ವಾಹನ ಸೇರಿ ಪ್ರತಿಯೊಂದರ ದರವೂ ಗಗನಕ್ಕೆ!: ಸರ್ಕಾರದ ಈ ಆರ್ಥಿಕ ದಿವಾಳಿತನದ ಹೊರೆ ಕೇವಲ ಹಾಲು ಮತ್ತು ಬಸ್ ದರಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಳೆದ ಒಂದೆರಡು ವರ್ಷಗಳಲ್ಲಿ ಸರ್ಕಾರವು ಪ್ರತಿಯೊಂದು ವಲಯದಲ್ಲೂ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ವಿಶೇಷವಾಗಿ ಬಡವರ ಪಾಲಿನ ಸಂಜೀವಿನಿಯಾದ ಸರ್ಕಾರಿ ಆಸ್ಪತ್ರೆಗಳೂ ಸರ್ಕಾರದ ಈ ‘ತೆರಿಗೆ ದಾಳಿ’ಯಿಂದ ಹೊರತಾಗಿಲ್ಲ. 2024ರ ಆರಂಭದಲ್ಲಿ ವಿಕ್ಟೋರಿಯಾ, ಬೌರಿಂಗ್ನಂತಹ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ (BMCRI ಅಡಿ ಬರುವ ಆಸ್ಪತ್ರೆಗಳು) ರೋಗಿಗಳ ಬಳಕೆದಾರರ ಶುಲ್ಕವನ್ನು ಶೇ.10ರಿಂದ 20ರಷ್ಟು ಹೆಚ್ಚಿಸಲಾಯಿತು.
ಕೆಲವು ನಿರ್ದಿಷ್ಟ ಲ್ಯಾಬ್ ಪರೀಕ್ಷೆಗಳು ಮತ್ತು ವಾರ್ಡ್ ಶುಲ್ಕಗಳನ್ನಂತೂ ದುಪ್ಪಟ್ಟುಗೊಳಿಸಿ ಬಡವರ ಮೇಲೆ ಬರೆ ಎಳೆಯಲಾಯಿತು. ಇನ್ನೊಂದೆಡೆ, ಭವಿಷ್ಯದ ದೃಷ್ಟಿಯಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವ ಬದಲು, ಸರ್ಕಾರ ಅವುಗಳ ಮೇಲೂ ಕಣ್ಣು ಹಾಕಿದೆ. 2024ರ ಮೋಟಾರು ವಾಹನ ತೆರಿಗೆ ತಿದ್ದುಪಡಿ ಕಾಯ್ದೆಯಡಿ, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜೀವಿತಾವಧಿ ತೆರಿಗೆಯನ್ನು (Lifetime tax) ಮತ್ತು 25 ಲಕ್ಷ ರೂ. ಮೇಲ್ಪಟ್ಟ ಪ್ರೀಮಿಯಂ ವಾಹನಗಳ ತೆರಿಗೆಯನ್ನು ಪರಿಷ್ಕರಿಸಿ ಹೆಚ್ಚಿಸಲಾಗಿದೆ. ಜೊತೆಗೆ ಸಾರಿಗೆ ವಾಹನಗಳ ಮೇಲೂ ಶೇ. 3ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
ಇಷ್ಟೇ ಅಲ್ಲದೆ, 2023ರ ಅಕ್ಟೋಬರ್ನಲ್ಲಿ ಆಸ್ತಿಗಳ ಮಾರ್ಗಸೂಚಿ ದರವನ್ನು (Guidance value) ಶೇ. 15ರಿಂದ 30ರಷ್ಟು ಹೆಚ್ಚಿಸಿ ಜನಸಾಮಾನ್ಯರ ಸ್ವಂತ ಮನೆಯ ಕನಸನ್ನು ದುಬಾರಿಗೊಳಿಸ ಲಾಗಿದೆ. 2024ರ ಫೆಬ್ರವರಿಯಲ್ಲಿ ಸ್ಟ್ಯಾಂಪ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ. ಬಿಬಿಎಂಪಿ ಆಸ್ತಿ ತೆರಿಗೆಯನ್ನು ಶೇ. 20ರವರೆಗೆ ಏರಿಸಲಾಗಿದೆ.
ಇನ್ನು ಬೆಂಗಳೂರು ಜಲಮಂಡಳಿಯು (BWSSB) ನೀರಿನ ದರವನ್ನು ಶೇ. 20ರಿಂದ 30ರಷ್ಟು ಹೆಚ್ಚಿಸಲು ತುದಿಗಾಲಲ್ಲಿ ನಿಂತಿದೆ. ರಾಜ್ಯದ ಬೊಕ್ಕಸ ತುಂಬಿಸುವ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನೂ (AED) 2023ರ ಜುಲೈನ ಶೇ.20ರಷ್ಟು ಹೆಚ್ಚಿಸಲಾಗಿದೆ. ಇವೆಲ್ಲವೂ ಸರ್ಕಾರಿ ಖಜಾನೆಯ ತಳಕಂಡಿರುವುದಕ್ಕೆ ಮತ್ತು ಆರ್ಥಿಕ ಅಶಿಸ್ತಿಗೆ ಹಿಡಿದ ಕನ್ನಡಿಯಾಗಿವೆ.
ಬಜೆಟ್ ನಿರ್ವಹಣೆಯ ಸಂಪೂರ್ಣ ವೈಫಲ್ಯ: ಒಟ್ಟಾರೆಯಾಗಿ ಹೇಳಬೇಕೆಂದರೆ, ಬೆಲೆ ಏರಿಕೆಯೆಂಬುದು ಈಗ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ನಿಯಂತ್ರಣ ತಪ್ಪಿದೆ. ಪರಿಸ್ಥಿತಿ ಎಷ್ಟು ಕೈಮೀರಿದೆ ಎಂದರೆ, ಈಗ ಸರ್ಕಾರವು ಈ ಏರಿಕೆಯನ್ನು ತಡೆಯಲು ಇಚ್ಛಿಸಿದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗದಂತಹ ಅಸಹಾಯಕ ಸ್ಥಿತಿಗೆ ತಲುಪಿದೆ. ಇದಕ್ಕೆ ಮೂಲ ಕಾರಣ ಅವರು ಸೃಷ್ಟಿಸಿಕೊಂಡಿರುವ ಸ್ವಯಂಕೃತ ಆರ್ಥಿಕ ಅವ್ಯವಸ್ಥೆ.