Keshava Prasad B Column: ಹಣ ಉಳಿತಾಯ ಒಂದೇ ಸಾಲದು, ಹೂಡಿಕೆ ಮರೆಯದಿರಿ !
ಪ್ರತಿ ತಿಂಗಳೂ ಬ್ಯಾಂಕ್ ಬ್ಯಾಲೆ ಏರಿಕೆಯಾಗುವುದನ್ನು ನೋಡಲು ಖುಷಿಯಾಗಬಹುದು. ಮನಸ್ಸಿಗೆ ಹೆಚ್ಚು ಭದ್ರತೆ ಮತ್ತು ನಿಯಂತ್ರಣದ ಭಾವ ಮೂಡುತ್ತದೆ. ಆದರೂ ಈ ಕಂಫರ್ಟ್‌ನ ಹಿಂದೆ ಸದ್ದಿಲ್ಲದೆ ಅಪಾಯ ಕಾದಿರುತ್ತದೆ. ಹಣದುಬ್ಬರದ ಪರಿಣಾಮವಾಗಿ ನಿಮ್ಮ ಉಳಿತಾಯದ ಹಣದ ಮೌಲ್ಯ ಕಡಿಮೆಯಾಗುತ್ತಿರುತ್ತದೆ. ದಾಖಲೆಯಲ್ಲಿ ಮಾತ್ರ ಉಳಿತಾಯ ಏರುತ್ತಿರುತ್ತದೆ. ಆದರೆ ಅದರ ಮೌಲ್ಯ ಕರಗುತ್ತಿರುತ್ತದೆ.
-
ಮನಿ ಮೈಂಡೆಡ್
ಪ್ರತಿ ತಿಂಗಳು ಬ್ಯಾಂಕಿನ ಸೇವಿಂಗ್ಸ್ ಅಕೌಂಟ್‌ನಲ್ಲಿ 10000 ರುಪಾಯಿಗಳನ್ನು ಹೂಡಿಕೆ ಮಾಡುವುದು ಎಂದರೆ ಒಳ್ಳೆಯ ಸಂಗತಿ ಎಂದು ಭಾವಿಸಬಹುದು. ಇದರಿಂದ ಬೇಗ ಶ್ರೀಮಂತರಾಗಿಬಿಡಬಹುದು ಎಂಬ ಆಲೋಚನೆ ಬರಬಹುದು. ಆದರೆ ಇಂಥ ಉಳಿತಾಯ ಒಂದೇ ಸಾಕಾಗುವುದಿಲ್ಲ. ಅದೊಂದರಿಂದಲೇ ನಿಮ್ಮ ಹಣ ನೀವು ನಿರೀಕ್ಷಿಸಿದ ಮಟ್ಟಕ್ಕೆ ಬೆಳೆಯುವುದಿಲ್ಲ. ಆದರೆ ಇದರ ಬದಲಿಗೆ ಸರಳವಾಗಿ ಒಂದು ಬದಲಾವಣೆ ಮಾಡಿಕೊಂಡರೆ ನೀವು ಅಂದುಕೊಂಡಂತೆ ಶ್ರೀಮಂತರಾಗಬಹುದು!
ಇದಕ್ಕೆ ಉದಾಹರಣೆಯಾಗಿ ರಾಕೇಶ್ ಎಂಬ ೩೦ ವರ್ಷ ವಯಸ್ಸಿನ ಉದ್ಯೋಗಿಯ ಕಥೆ ಕೇಳಿ. ಅವರು ಕಳೆದ ೫ ವರ್ಷಗಳಿಂದ ಪ್ರತಿ ತಿಂಗಳೂ 10000 ರುಪಾಯಿಗಳನ್ನು ಸೇವಿಂU ಅಕೌಂಟ್‌ನಲ್ಲಿ ಉಳಿತಾಯ ಮಾಡುತ್ತಿದ್ದಾರೆ. ಅವರ ಅಕೌಂಟ್‌ನಲ್ಲಿ ೬ ಲಕ್ಷ ರುಪಾಯಿಗಳು ಇವೆ. ಬಹಳ ಆಯಿತು ಎಂದು ಅನೇಕ ಮಂದಿ ಭಾವಿಸಬಹುದು. ತಾವು ಬಯಸಿದ ಒಂದು ಕಾರು ತೆಗೆದುಕೊಳ್ಳಬಹುದು ಎಂದು ರಾಕೇಶ್ ಅಂದಾಜಿಸಿದ್ದರು. ಆದರೆ ಅವರು ಪರಿಶೀಲಿಸಿದಾಗ ಆಘಾತ ಕಾದಿತ್ತು. ಅವರು ಬಯಸಿದ್ದ ಕಾರಿನ ದರ ಈಗ ೧೦ ಲಕ್ಷಕ್ಕೆ ಏರಿತ್ತು. ಹಣದುಬ್ಬರದ ಪರಿಣಾಮ ಅವರು ಉಳಿತಾಯ ಖಾತೆಯಲ್ಲಿ ಇಟ್ಟಿದ್ದ ಹಣದ ಮೌಲ್ಯ ಸವಕಳಿಯಾಗಿತ್ತು.
ಈ ಕಥೆಯ ಹಿಂದೆ ತಣ್ಣಗಿನ ಸತ್ಯವೊಂದು ಇದೆ. ಅದೇನೆಂದರೆ, ಕೇವಲ ಹಣವನ್ನು ಉಳಿತಾಯ ಮಾಡುವುದರಿಂದ ಶ್ರೀಮಂತರಾಗಲು ಸಾಧ್ಯವಿಲ್ಲ. ಹಣದುಬ್ಬರ, ಕಡಿಮೆ ಬಡ್ಡಿ ದರ, ತಪ್ಪಿದ ಅವಕಾಶಗಳು ನೀವು ಗಳಿಸಿದ ಹಣದ ಮೌಲ್ಯವನ್ನು ತಗ್ಗಿಸುತ್ತವೆ. ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಎನ್ನುವುದು ಸುರಕ್ಷಿತ ಮತ್ತು ಅನುಕೂಲಕರ ಎನ್ನಿಸಬಹುದು.
ಇದನ್ನೂ ಓದಿ: Keshava Prasad B Column: ಚೀನಾದಲ್ಲಿ ಡಿಗ್ರಿ ಇಲ್ಲದಿದ್ದರೆ ದುಡ್ಡಿನ ಬಗ್ಗೆ ರೀಲ್ಸ್ ಮಾಡುವಂತಿಲ್ಲ !
ಪ್ರತಿ ತಿಂಗಳೂ ಬ್ಯಾಂಕ್ ಬ್ಯಾಲೆ ಏರಿಕೆಯಾಗುವುದನ್ನು ನೋಡಲು ಖುಷಿಯಾಗಬಹುದು. ಮನಸ್ಸಿಗೆ ಹೆಚ್ಚು ಭದ್ರತೆ ಮತ್ತು ನಿಯಂತ್ರಣದ ಭಾವ ಮೂಡುತ್ತದೆ. ಆದರೂ ಈ ಕಂಫರ್ಟ್‌ನ ಹಿಂದೆ ಸದ್ದಿಲ್ಲದೆ ಅಪಾಯ ಕಾದಿರುತ್ತದೆ. ಹಣದುಬ್ಬರದ ಪರಿಣಾಮವಾಗಿ ನಿಮ್ಮ ಉಳಿತಾಯದ ಹಣದ ಮೌಲ್ಯ ಕಡಿಮೆಯಾಗುತ್ತಿರುತ್ತದೆ. ದಾಖಲೆಯಲ್ಲಿ ಮಾತ್ರ ಉಳಿತಾಯ ಏರುತ್ತಿರುತ್ತದೆ. ಆದರೆ ಅದರ ಮೌಲ್ಯ ಕರಗುತ್ತಿರುತ್ತದೆ.
ನೀವು ಪ್ರತಿ ತಿಂಗಳು 10000 ರುಪಾಯಿಗಳಂತೆ ೧೦ ವರ್ಷಗಳ ಕಾಲ ಉಳಿತಾಯ ಮಾಡಿದ್ದೀರಿ ಎಂದು ಭಾವಿಸಿ. ೧೦ ವರ್ಷ ಆದಾಗ ನಿಮ್ಮ ಸೇವಿಂಗ್ಸ್ ಅಕೌಂಟ್‌ನಲ್ಲಿ ಉಳಿತಾಯದ ಮೊತ್ತ ೧೨ ಲಕ್ಷ ರುಪಾಯಿ ಆಗಿರುತ್ತದೆ. ಅದು ಆಕರ್ಷಕವಾಗಿ ಕಾಣಿಸುತ್ತದೆ. ಹೀಗಿದ್ದರೂ ಸರಾಸರಿ ೬ ಪರ್ಸೆಂಟ್ ಹಣದುಬ್ಬರದ ಲೆಕ್ಕದಲ್ಲಿ ೧೦ ವರ್ಷದ ಅಂತ್ಯಕ್ಕೆ ೧೨ ಲಕ್ಷ ರುಪಾಯಿಯ ಮೌಲ್ಯವು ೬ ಲಕ್ಷದ ೭೦ ಸಾವಿರ ರುಪಾಯಿಗೆ ಇಳಿದಿರುತ್ತದೆ.
ಆದರೆ, ಬ್ಯಾಂಕ್ ಉಳಿತಾಯ ಖಾತೆಯ ಬದಲಿಗೆ ಇದೇ ಹಣವನ್ನು ೧೨ ಪರ್ಸೆಂಟ್ ರಿಟರ್ನ್ ನೀಡುವ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿರುತ್ತಿದ್ದರೆ ೨೨ ಲಕ್ಷ ರುಪಾಯಿಗೆ ಬೆಳೆದಿರುತ್ತಿತ್ತು. ಈಗ ನಿಮಗೆ ಕೇವಲ ಉಳಿತಾಯ ನಿಜಕ್ಕೂ ಸೇಫ್ ಮತ್ತು ಸ್ಮಾರ್ಟ್ ಹೂಡಿಕೆ ಅಲ್ಲ ಎಂಬುದು ಮನವರಿಕೆ ಆಗಬಹುದು.
ಆದ್ದರಿಂದಲೇ ಶ್ರೀಮಂತ ಹೂಡಿಕೆದಾರರು ಕೇವಲ ಉಳಿತಾಯಕ್ಕೆ ಸೀಮಿತರಾಗುವುದಿಲ್ಲ. ಅವರು ಹೂಡಿಕೆಯ ಮೌಲ್ಯ ಹೆಚ್ಚಳವಾಗುವಂತೆ ನೋಡಿಕೊಳ್ಳುತ್ತಾರೆ. ಅವರು ಹಣವನ್ನು ತಮಗೋಸ್ಕರ ದುಡಿಯುವಂತೆ ಇನ್ವೆ ಮಾಡುತ್ತಾರೆ. ನಿಶಾ ಮತ್ತು ಮೀರಾ ಸ್ನೇಹಿತೆಯರು. ಇಬ್ಬರೂ ಮಾಸಿಕ 60000 ರುಪಾಯಿ ಸಂಬಳ ಪಡೆಯುತ್ತಾರೆ.
ನಿಶಾ ಅವರು ಪ್ರತಿ ತಿಂಗಳು 2500 ರುಪಾಯಿಗಳನ್ನು ಸೇವಿಂಗ್ಸ್ ಖಾತೆಯಲ್ಲಿ ಉಳಿತಾಯ ಮಾಡುತ್ತಿದ್ದರು. ಮೀರಾ ಮ್ಯೂಚುವಲ್ ಫಂಡ್ ‘ಸಿಪ್’ನಲ್ಲಿ ಪ್ರತಿ ತಿಂಗಳೂ 2500 ರುಪಾಯಿ ಹೂಡಿಕೆ ಮಾಡುತ್ತಿದ್ದರು. ಅದು ವಾರ್ಷಿಕ ೧೨ ಪರ್ಸೆಂಟ್ ರಿಟರ್ನ್ ಕೊಡುತ್ತಿತ್ತು. ೧೦ ವರ್ಷಗಳ ಬಳಿಕ ಆಶಾ ೧೩ ಲಕ್ಷ ರುಪಾಯಿ ಸಂಪಾದಿಸಿದರೆ, ಮೀರಾ ಅವರು ೨೫ ಲಕ್ಷ ರುಪಾಯಿ ಗಳಿಸಿದ್ದರು. ಮೀರಾ ಅವರು ಕೇವಲ ಉಳಿತಾಯ ಮಾಡದೆ, ಸರಿಯಾಗಿ ಹೂಡಿಕೆ ಮಾಡಿರುವುದೇ ಇದಕ್ಕೆ ಕಾರಣವಾಗಿತ್ತು. ಆದ್ದರಿಂದ ಸೇವಿಂಗ್ಸ್ ಅಕೌಂಟ್‌ನಲ್ಲಿ ತೀರಾ ಅಗತ್ಯಕ್ಕೆ ಬೇಕಾದಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬೇಕು.
ಉಳಿದ ಮೊತ್ತವನ್ನು ಹೂಡಿಕೆ ಮಾಡಬೇಕು. ಮ್ಯೂಚುವಲ್ ಫಂಡ್, ಚಿನ್ನ-ಬೆಳ್ಳಿ, ಇಟಿಎಫ್, ಬಾಂಡ್, ಷೇರು, ರಿಯಲ್ ಎಸ್ಟೇಟ್ ಆಯ್ಕೆ ಮಾಡಿಕೊಳ್ಳಬಹುದು. ಒಂದೇ ಅಸೆಟ್ ನಲ್ಲೂ ಹೂಡಿಕೆಯ ಎಲ್ಲ ಹಣವನ್ನು ಇಡಬೇಕು, ಜಾಣ್ಮೆಯಿಂದ ಇನ್ವೆಸ್ಟ್ ಮಾಡಬೇಕು.
ಪ್ರತಿ ತಿಂಗಳು ನೀವು ಮಾಡುವ ಹೂಡಿಕೆಗೆ ಕಂಪೌಂಡ್ ಇಂಟರೆ ಸಿಗುವಂತಿರಬೇಕು. ಆಗ ಸಂಪತ್ತು ಸೃಷ್ಟಿಸಲು ಹಾದಿ ಸುಗಮವಾಗುತ್ತದೆ. ಕಂಪೌಂಡ್ ಇಂಟರೆ ಬಗ್ಗೆ ತಿಳಿಯಲು ಒಂದು ಉದಾಹರಣೆ ನೋಡೋಣ. ನೀವು ಪ್ರತಿ ತಿಂಗಳು 10000 ರುಪಾಯಿಗಳನ್ನು ಹೂಡಿಕೆ ಮಾಡುತ್ತೀರಿ ಮತ್ತು ೧೨ ಪರ್ಸೆಂಟ್ ಬಡ್ಡಿ ಇದೆ ಎಂದು ಭಾವಿಸಿ. ೨೦ ವರ್ಷಗಳ ಬಳಿಕ ನೀವು ೧ ಕೋಟಿ ಸಂಪಾದಿಸುತ್ತೀರಿ. ನೀವು ೧೦ ವರ್ಷ ಮೊದಲೇ ೧೦,೦೦೦ ‘ಸಿಪ್’ ಆರಂಭಿಸಿದ್ದೀರಿ ಎಂದು ಇಟ್ಟುಕೊಳ್ಳಿ. ನೀವು ೩೦ ವರ್ಷಗಳಲ್ಲಿ ೩ ಕೋಟಿ ೫೦ ಲಕ್ಷ ರುಪಾಯಿ ಗಳಿಸುತ್ತೀರಿ. ಈ ವ್ಯತ್ಯಾಸಕ್ಕೆ ಕಾರಣ ಕಂಪೌಂಡಿಂಗ್ ಇಂಟರೆ ಅಥವಾ ಚಕ್ರಬಡ್ಡಿಯಾಗಿರುತ್ತದೆ.
ಬಹಳಷ್ಟು ಮಂದಿ ಹೂಡಿಕೆಯ ಪಯಣವನ್ನು ತಡವಾಗಿ ಆರಂಭಿಸುತ್ತಾರೆ. ಏಕೆಂದರೆ ಇನ್ವೆ ಮಾಡಲು ತುಂಬ ದುಡ್ಡು ಬೇಕೆಂದು ಅವರು ಭಾವಿಸುತ್ತಾರೆ. ಆದರೆ ಪ್ರತಿ ತಿಂಗಳೂ 5000 ರುಪಾಯಿಗಳಿಂದ 10000 ರುಪಾಯಿಗಳ ಮಟ್ಟದಲ್ಲಿ ಕೂಡ ಹೂಡಿಕೆ ಆರಂಭಿಸ ಬಹುದು.
ಕೋಟ್ಯಧಿಪತಿಯಾಗಬಹುದು. ಉದಾಹರಣೆಗೆ ನಿಮ್ಮ ವಯಸ್ಸು ೨೫ ವರ್ಷ ಎಂದು ಭಾವಿಸಿ. ಪ್ರತಿ ತಿಂಗಳು 10000 ‘ಸಿಪ್’ ಅನ್ನು ವಾರ್ಷಿಕ ೧೨ ಪರ್ಸೆಂಟ್ ರಿಟರ್ನ್ ಸಹಿತ ಹೂಡಿಕೆ ಮಾಡುತ್ತಿದ್ದರೆ, ೫೫ನೇ ವಯಸ್ಸಿಗೆ ೩ ಕೋಟಿ ೫೦ ಲಕ್ಷ ರುಪಾಯಿ ಗಳಿಸಬಹುದು. ಆದರೆ ೧೦ ವರ್ಷ ತಡ ಮಾಡಿ, ೩೫ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ ನೀವು ಸುಮಾರು ೧ ಕೋಟಿ ಗಳಿಸಬಹುದು. ಅಂದರೆ ೧೦ ವರ್ಷದ ವಿಳಂಬಕ್ಕೆ ನೀವು, ೨.೫ ಕೋಟಿ ಬೆಲೆ ತೆರಬೇಕಾಗಬಹುದು.
ಏಕೆಂದರೆ ಹೂಡಿಕೆಯ ಆರಂಭಿಕ ವರ್ಷಗಳಲ್ಲಿ ಹೆಚ್ಚು ರಿಟರ್ನ್ ಸಿಗುವುದಿಲ್ಲ. ಹೀಗಾಗಿ ಪ್ರತಿ ತಿಂಗಳು 10000 ರುಪಾಯಿ ಉಳಿತಾಯ ಚೆನ್ನಾಗಿ ಕಾಣುತ್ತದೆ. ಆದರೆ ಅಷ್ಟಕ್ಕೇ ಸೀಮಿತ ರಾಗಬಾರದು; ಸಂಪತ್ತಿನ ಸೃಷ್ಟಿಗೆ ಅದನ್ನು ಹೂಡಿಕೆ ಮಾಡಲೇಬೇಕು.
ಇತ್ತೀಚಿನ ವರ್ಷಗಳಲ್ಲಿ ಬಂಗಾರದ ದರ ಭಾರಿ ಏರಿಕೆಯಾಗುತ್ತಿದೆ. ಆದ್ದರಿಂದ ಅದರ ಹೂಡಿಕೆ ಮಾಡಿದರೆ ಲಾಭದಾಯಕವಲ್ಲವೇ ಎಂಬ ಆಲೋಚನೆ ನಿಮ್ಮಲ್ಲಿರಬಹುದು. ಈಗಂತೂ ಚಿನ್ನದಲ್ಲಿನ ಹೂಡಿಕೆಗೆ ಭೌತಿಕ ಬಂಗಾರವನ್ನೇ ಖರೀದಿಸಬೇಕೆಂದೇನಿಲ್ಲ. ಬಂಗಾರದ ಇಟಿಎಫ್, ಮ್ಯೂಚುವಲ್ ಫಂಡ್‌ಗಳು ಇವೆ. ಆದ್ದರಿಂದ ಇದೂ ಆಕರ್ಷಿಸುತ್ತಿದೆ.
ಆದರೆ ನೀವು ಗಮನಿಸಬಹುದು. ಬಹುತೇಕ ಹಣಕಾಸು ಸಲಹೆಗಾರರು, ನಿಮ್ಮ ಒಟ್ಟು ಹೂಡಿಕೆಯ ೫-೧೦ ಪರ್ಸೆಂಟ್ ಹಣವನ್ನು ಬಂಗಾರದಲ್ಲಿ ಇನ್ವೆ ಮಾಡಿರಿ ಎನ್ನುತ್ತಾರೆಯೇ ಹೊರತು, ದೊಡ್ಡ ಮೊತ್ತದ ಹೂಡಿಕೆಗೆ ಶಿಫಾರಸು ಮಾಡುವುದಿಲ್ಲ!
ಅಮೆರಿಕದ ವಿಶ್ವ ವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರು ಈಗಲೂ ಬಂಗಾರ ದಲ್ಲಿ ಮಾಡುವ ಹೂಡಿಕೆಯನ್ನು ಒಪ್ಪುವುದಿಲ್ಲ! ಸ್ವರ್ಣ ಒಂದು ಅನುತ್ಪಾದಕ ಆಸ್ತಿ ಯಾಗಿದ್ದು, ಅದರಲ್ಲಿ ಇನ್ವೆ ಮಾಡಬಾರದು ಎಂದು ಬಫೆಟ್ ಎಚ್ಚರಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಂಗಾರವು ರಿಟರ್ನ್ ವಿಚಾರದಲ್ಲಿ ಷೇರು ಮಾರುಕಟ್ಟೆಯನ್ನೂ ಹಿಂದಿಕ್ಕಿದೆ.
ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು, ವಾಣಿಜ್ಯ ಸಂಘರ್ಷಗಳು, ನಾನಾ ದೇಶಗಳ ನಡುವಣ ಯುದ್ಧಗಳು, ನಿರ್ಬಂಧಗಳ ನಡುವೆ ಷೇರು ಮಾರುಕಟ್ಟೆಗಳೂ ಕುಸಿದಾಗ, ಚಿನ್ನವು ಹೂಡಿಕೆದಾರಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿದೆ.
ಈಗ ಬಂಗಾರ ಮತ್ತು ನಿಫ್ಟಿ ೫೦ರ ಕಳೆದ ೧೫ ವರ್ಷಗಳ ರಿಟರ್ನ್ ಬಗ್ಗೆ ನೋಡೋಣ. ಕಳೆದ ೧ ವರ್ಷದಲ್ಲಿ ಚಿನ್ನವು ೫೦ ಪರ್ಸೆಂಟ್ ಆದಾಯ ನೀಡಿದೆ. ನಿಫ್ಟಿ ೫೦ ಕೇವಲ ೬ ಪರ್ಸೆಂಟ್ ಕೊಟ್ಟಿದೆ. ೫ ವರ್ಷಗಳಲ್ಲಿ ಬಂಗಾರವು 143 ಪರ್ಸೆಂಟ್‌ನಷ್ಟು ರಿಟರ್ನ್ ನೀಡಿದ್ದರೆ, ೧೦೯ ಪರ್ಸೆಂಟ್ ರಿಟರ್ನ್ ಅನ್ನು ನಿಫ್ಟಿ ೫೦ ನೀಡಿದೆ.
೧೦ ವರ್ಷಗಳಲ್ಲಿ ಚಿನ್ನವು- 355 ಪರ್ಸೆಂಟ್ ಮತ್ತು ನಿಫ್ಟಿ ೫೦- 222 ಪರ್ಸೆಂಟ್ ರಿಟರ್ನ್ ನೀಡಿವೆ. ೧೫ ವರ್ಷಗಳಲ್ಲಿ ಇವು ಕ್ರಮವಾಗಿ 550 ಮತ್ತು 313 ಪರ್ಸೆಂಟ್ ಆದಾಯ ನೀಡಿರುವುದು ಗಮನಾರ್ಹ. ಅಂದರೆ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಚಿನ್ನ ಉತ್ತಮ ರಿಟರ್ನ್ ಕೊಟ್ಟಿದೆ. ಅದು ಕೇವಲ ಸುರಕ್ಷಿತ ಹೂಡಿಕೆಯ ಸಾಧನವಾಗಿರದೆ, ಹೆಚ್ಚಿನ ಲಾಭವನ್ನೂ ಕೊಟ್ಟಿದೆ.
ಆದರೆ ಬಫೆಟ್ ಪ್ರಕಾರ ನಿಜವಾದ ಸಂಪತ್ತು ಉತ್ಪಾದಕ ಆಸ್ತಿಗಳಲ್ಲಿ ಹೂಡಿಕೆ ಮಾಡುವುದರಿಂದ ಬರುತ್ತದೆ. ಚಿನ್ನದ ದರ ಏರಿಕೆಯಿಂದ ಹೂಡಿಕೆದಾರರಿಗೆ ಲಾಭ ವಾಗುತ್ತದೆಯೇ ಹೊರತು, ಚಿನ್ನವೇ ಏನನ್ನೂ ಉತ್ಪಾದಿಸುವುದಿಲ್ಲ. ಬಡ್ಡಿಯನ್ನೂ ಕೊಡುವುದಿಲ್ಲ. ಆದ್ದರಿಂದ ಅದು ಅನುತ್ಪಾದಕ ಆಸ್ತಿ ಎನ್ನುತ್ತಾರೆ ವಾರೆನ್ ಬಫೆಟ್. “ನೋಡಿ, ಆಸ್ತಿ ಎಂದರೆ ಅದು ಏನನ್ನಾದರೂ ಉತ್ಪಾದಿಸಬೇಕು.
ಉದಾಹರಣೆಗೆ ಕಾರ್ಖಾನೆಯೊಂದು ಉತ್ಪನ್ನಗಳನ್ನು ತಯಾರಿಸುತ್ತದೆ, ಲಾಭ ಗಳಿಸುತ್ತದೆ, ಕಾಲಕ್ರಮೇಣ ಬೆಳೆಯುತ್ತದೆ. ಅದು ಉತ್ಪಾದಕತೆ. ನಿಜವಾದ ಸಂಪತ್ತು. ಆದರೆ ಚಿನ್ನದಂಥ ಲೋಹ ಯಾವುದನ್ನೂ ಉತ್ಪಾದಿಸುವುದಿಲ್ಲ" ಎನ್ನುತ್ತಾರೆ ವಾರೆನ್ ಬಫೆಟ್.
ಹೀಗಿದ್ದರೂ, ಇವತ್ತು ಚಿನ್ನ ಎಂದರೆ ಕೇವಲ ಅಭರಣಗಳ ರೂಪದಲ್ಲಿ ಬಳಕೆಗೆ ಸೀಮಿತವಾಗಿಲ್ಲ. ನಾನಾ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳೂ ಟನ್ನುಗಟ್ಟಲೆ ಚಿನ್ನವನ್ನು ಖರೀದಿಸುತ್ತಿವೆ. ಡಾಲರ್ ಸೇರಿದಂತೆ ಜಾಗತಿಕ ಕರೆನ್ಸಿಗಳು ಕಿಮ್ಮತ್ತು ಕಳೆದುಕೊಳ್ಳುತ್ತಿವೆ. ಹೀಗಾಗಿ ದೇಶಗಳೇ ಬಂಗಾರವನ್ನು ಆಪದ್ಧನವಾಗಿ ಬಳಸುತ್ತಿವೆ.
ಚಿನ್ನದ ಸ್ಟೋರೇಜ್ ವಾಲ್ಯೂ ಇದಕ್ಕೆ ಕಾರಣ. ಭಾರತದಲ್ಲಂತೂ ಬಂಗಾರ ಎಂದರೆ ಕೇವಲಲೋಹವಲ್ಲ, ಅದೊಂದು ಅಮೂಲ್ಯ ಭಾವನೆ. ಧಾರ್ಮಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಆರಾಧನೆಯ ಮಹತ್ವವನ್ನು ಪಡೆದಿರುವಂಥದ್ದು, ಭದ್ರತೆ ಮತ್ತು ಪ್ರೆಸ್ಟೀಜ್ ಮೂಡಿಸುವಂಥದ್ದೇ ಈ ಹಳದಿ ಲೋಹ.
ಭಾರತೀಯರು ಸಾಮಾನ್ಯವಾಗಿ ಬಂಗಾರವನ್ನು ಖರೀದಿಸಿದರೆ ಅದನ್ನು ತೀರಾ ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿದಂತೆ, ಯಾವತ್ತೂ ಮಾರಾಟ ಮಾಡು ವುದಿಲ್ಲ. ಅದೇ ರೀತಿಯ ಬದ್ಧತೆ, ಶಿಸ್ತು ದೀರ್ಘಾವಧಿಯ ಹೂಡಿಕೆಯಲ್ಲಿ ಕೂಡ ಇರಬೇಕು. ಆಗ ಮಾತ್ರ ಸಂಪತ್ತನ್ನು ಸೃಷ್ಟಿಸಬಹುದು.
ಅದು ಬಿಟ್ಟು, ಪ್ರತಿ ತಿಂಗಳು ಗಳಿಸಿದ್ದನ್ನು ಅದೇ ತಿಂಗಳು ಸಂಪೂರ್ಣ ಖರ್ಚು ಮಾಡುತ್ತಿದ್ದರೆ, ಹೂಡಿಕೆಯಿಂದ ಸಿಗುವ ಸಂಪತ್ತನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಎಷ್ಟೇ ಕಷ್ಟವಾದರೂ, ತಾಳ್ಮೆ ಬೇಕಾದರೂ, ಬಂಗಾರ ಮತ್ತು ಮ್ಯೂಚುವಲ್ ಫಂಡ್, ಇಟಿಎಫ್ ನಂಥ ಸಾಧನಗಳಲ್ಲಿ ದೀರ್ಘಾವಽಯ ಹೂಡಿಕೆಯನ್ನು ತಪ್ಪದೆ ಮಾಡಿರಿ ಎನ್ನುತ್ತಾರೆ ಹಲವಾರು ತಜ್ಞರು