Gururaj Gantihole Column: ನವಭಾರತದ ಹೆದ್ದಾರಿಗಳಿಗೆ ಹೊಸ ಭಾಷ್ಯ ಬರೆದ ಎಕ್ಸ್ ಪ್ರೆಸ್ ವೇ ಪಿತಾಮಹ !
ಕರ್ನಾಟಕ, ಕೇರಳದ ರೈತರು ಬೆಳೆದ ಅನಾನಸ್ ಅಥವಾ ಇತರೆ ಬೆಳೆಗಳನ್ನು ದಕ್ಷಿಣಭಾಗದ ಹಳ್ಳಿಗಳಿಂದ ಉತ್ತರದ ದಿಲ್ಲಿಯವರೆಗೆ ಯೋಗ್ಯ ಬೆಲೆ ಇರುವಾಗ, ಸೂಕ್ತಸಮಯದಲ್ಲಿ ಸಮರ್ಪಕ ಸಾಗಾಣಿಕೆ ಮಾಡಬೇಕಿದ್ದರೆ, ಗ್ರಾಮೀಣ ರಸ್ತೆ, ನಗರ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇ ಗಳಿಂದ ಹಿಡಿದು, ಜಲಮಾರ್ಗಗಳಾದ ಬಂದರು, ವಾಯುಮಾರ್ಗಗಳು ಸರ್ವ ಋತು ಗಳಲ್ಲೂ ಸಾರಿಗೆಗೆ ಮುಕ್ತವಾಗಿರಬೇಕು.


ಗಂಟಾಘೋಷ
ಸಾಮಾನ್ಯವಾಗಿ, ಗಡ್ಕರಿಯವರನ್ನು ರೋಡ್ಕರಿ ಎಂದು ಕರೆಯುತ್ತಾರೆ. ಭಾರತದ ರಸ್ತೆಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿದವರು. ವಿಶ್ವಮಾನ್ಯತೆಯ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡವರು. ಮುಂದಿನ ದಿನಗಳಲ್ಲಿ 20 ಲಕ್ಷ ಕೋಟಿವರೆಗಿನ ಬೃಹತ್ ಯೋಜನೆಗಳ ಕನಸು ಕಾಣುತ್ತಿರುವ ಇವರನ್ನು‘ಭಾರತದ ಆಧುನಿಕ ರಸ್ತೆಗಳ ಪಿತಾಮಹ’ ಎಂದೂ ನಾವು ಕರೆಯಬಹುದು.
ಕರ್ನಾಟಕ, ಕೇರಳದ ರೈತರು ಬೆಳೆದ ಅನಾನಸ್ ಅಥವಾ ಇತರೆ ಬೆಳೆಗಳನ್ನು ದಕ್ಷಿಣಭಾಗದ ಹಳ್ಳಿಗಳಿಂದ ಉತ್ತರದ ದಿಲ್ಲಿಯವರೆಗೆ ಯೋಗ್ಯ ಬೆಲೆ ಇರುವಾಗ, ಸೂಕ್ತಸಮಯದಲ್ಲಿ ಸಮರ್ಪಕ ಸಾಗಾಣಿಕೆ ಮಾಡಬೇಕಿದ್ದರೆ, ಗ್ರಾಮೀಣ ರಸ್ತೆ, ನಗರ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇ ಗಳಿಂದ ಹಿಡಿದು, ಜಲಮಾರ್ಗಗಳಾದ ಬಂದರು, ವಾಯುಮಾರ್ಗಗಳು ಸರ್ವ ಋತುಗಳಲ್ಲೂ ಸಾರಿಗೆಗೆ ಮುಕ್ತವಾಗಿರಬೇಕು.
ಸಾಗಾಣಿಕೆ ವಿಳಂಬದಿಂದ ಸರಕುಗಳು ನಿಂತರೆ, ಒಂದು ವಾರ ಅಥವಾ ತಿಂಗಳು ವಿಳಂಬವಾದರೆ, ಅನಾನಸ್ ಅಥವಾ ಯಾವುದೇ ಬೆಳೆ ಬೇಡದ ವಸ್ತುವಾಗಿ ಕಸದ ತೊಟ್ಟಿಗೆ ಸೇರುತ್ತದೆ. ಹಾಗಾಗಿ, ರಸ್ತೆಗಳು, ದೇಶದ ಆರ್ಥಿಕತೆಯ ಜೊತೆಗೆ ಜನರ ಜೀವನಾಡಿಯನ್ನು ನಿರ್ಧರಿಸಬಲ್ಲವು. ಸೂಕ್ತ ಸಮಯ ಮತ್ತು ಸರಾಗ ಸಾಗಾಣಿಕೆಯಿಂದ ಮಾತ್ರ ದೇಶದ ಆರ್ಥಿಕತೆ ವಿಕಸಿತಗೊಳ್ಳುತ್ತ ಸಾಗುತ್ತದೆ. ಅಭಿವೃದ್ಧಿಯ ಅಪ್ರತ್ಯಕ್ಷ ಬೆನ್ನೆಲುಬು ಎಂದೇ ಕರೆಯಬಹುದಾದ ರಸ್ತೆಗಳು ದೇಶದ ಭವಿಷ್ಯತ್ತನ್ನು ನಿಶ್ಚಿತ ದಿಕ್ಕಿನಲ್ಲಿ ನಿರ್ಮಿಸಬಲ್ಲವು.
ಇದನ್ನು ಅರಿತುಕೊಂಡೇ ವಾಜಪೇಯಿ ಸರ್ಕಾರ, 1998ರಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ( NHDP ), ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ( PMGSY )ಗಳನ್ನು ಕೈಗೊಂಡಿತು. ಪ್ರಮುಖವಾದ ಸ್ವರ್ಣ ಚತುರ್ಭುಜ ( Golden Quadrilateral) ಯೋಜನೆಯು ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದರು.
ಇದನ್ನೂ ಓದಿ: Gururaj Gantihole Column: ಇಂಡಿಯನ್ ಮ್ಯಾನ್ ಎಂಬ ನಂಬಿಕೆ ಬೆಸೆಯುವ ಬಸ್ !
ದಿಲ್ಲಿಯಿಂದ ಮುಂಬೈ, ಚೆನ್ನೈ ಕೋಲ್ಕತಾ ಮಾರ್ಗವಾಗಿ ದಿಲ್ಲಿಗೆ ತಲುಪುವ ಒಟ್ಟು 5846 ಕಿಮೀಗಳ ನಾಲ್ಕು ಮತ್ತು ಆರು ಲೇನ್ ಹೆzರಿ ಯೋಜನೆ ಇದಾಗಿತ್ತು. ಜೊತೆಗೆ, 13000 ಕಿಮೀ NHDP ಯಂತಹ Multi- Lane Toll Expressways ಗಳನ್ನು ನಿರ್ಮಿಸಿದರು. ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕಿಸುವ ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಮತ್ತು ಪೂರ್ವದಿಂದ ಸಿಲ್ಚಾರ್ ದಿಂದ ಪೋರ್‌ಬಂದರ್‌ವರೆಗೆ ಸಂಪರ್ಕಿಸುವಂತಹ 7300 ಕಿಮೀ ಉದ್ದದ NS-EW Corridor ಯೋಜನೆಯು ಮತ್ತೊಂದು ಮೈಲುಗಲ್ಲು.
2014ರಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಲ್ಲಿ ಹೆದ್ದಾರಿ ಮತ್ತು ಭೂ ಸಾರಿಗೆ ಮಂತ್ರಿ ಯಾಗಿರುವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಅನೇಕ ಎಕ್ಸ್‌ಪ್ರೆಸ್ ವೇಗಳು ನಿರ್ಮಾಣಗೊಂಡಿದ್ದು, ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆzರಿಯು ಭಾರತದ ಮೊದಲ ಗ್ರೀನ್ ಬೆಲ್ಟ್ ಎಕ್ಸ್‌ಪ್ರೆಸ್ ಹೆದ್ದಾರಿ ಯಾಗಿದೆ. ದೇಶದ ಅತಿದೊಡ್ಡ ಹೈ-ಸ್ಪೀಡ್ ಕಾರಿಡಾರ್ ಎಂದೇ ಗುರುತಿಸಿರುವ ದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್ ಹೆzರಿ ಸೇರಿದಂತೆ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ( Eastern Peripheral), ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿ, ಅಮೃತಸರ-ಜಾಮನಗರ್ ಎಕ್ಸ್‌ಪ್ರೆಸ್ ಹೆದ್ದಾರಿ, ಹೈದರಾಬಾದ್ -ಇಂದೋರ್ ಎಕ್ಸ್‌ಪ್ರೆಸ್ ಹೆದ್ದಾರಿಗಳಂತಹ ಯೋಜನೆಗಳನ್ನು ಲಕ್ಷ ಕೋಟಿ ವೆಚ್ಚಗಳಲ್ಲಿ ಇಂದಿನ ಭಾರತ ಕಾಣುತ್ತಿದೆ.
ದಕ್ಷಿಣ ಭಾರತದ ಅತಿದೊಡ್ಡ ಆರು ಲೇನ್ ರಸ್ತೆಯಾಗಿರುವ ಕೇರಳದ ಕುಥಿರಾನ್ ಟನೆಲ್ ನಿರ್ಮಾಣದ ಜೊತೆಗೆ 155 ಸುರಂಗಗಳು ದೇಶಕ್ಕೆ ಅರ್ಪಣೆ ಸೇರಿದಂತೆ ಮುಂದಿನ 74 ಹೊಸ ಸುರಂಗ ಗಳಿಗೆ 1 ಲಕ್ಷ ಕೋಟಿ ರು. ಮೊತ್ತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಯ ಅಡಿಯಲ್ಲಿ 3 ಲಕ್ಷ ಕೋಟಿ ವೆಚ್ಚದ ಯೋಜನೆ ಕೈಗೆತ್ತಿ ಕೊಂಡಿದ್ದು, Zero pollution Road ವ್ಯವಸ್ಥೆ ಇದಾಗಿದೆ. ರಾಜಸ್ಥಾನದಲ್ಲಿ 30000 ಕೋಟಿ ವೆಚ್ಚದ 800 ಕಿಮೀ ಹೊಸರಸ್ತೆಗಳ ಯೋಜನೆಗಳು, ರಸ್ತೆಗಳ ಪಕ್ಕದಲ್ಲಿ ಮರ ನೆಡುವ, ಎಲೆಕ್ಟ್ರಿಕ್ ವಾಹನ ( EV ) ಚಾರ್ಜಿಂಗ್ ಸ್ಟೇಷನ್ಗಳ ನಿರ್ಮಾಣ, ಪ್ಲಾಸ್ಟಿಕ್ ಕಸದಿಂದ ರಸ್ತೆ ನಿರ್ಮಾಣ ಪ್ರಯೋಗದಂತಹ ಪರಿಸರಸ್ನೇಹಿ ಹೆzರಿ ಯೋಜನೆಗಳು ಇವರ ಅಸಾಧಾರಣಾ ಕೊಡುಗೆಗಳಾಗಿವೆ.
ಒಟ್ಟು 7 ಗಂಟೆ ಪ್ರಯಾಣದ ಅವಧಿಯನ್ನು ದಿಲ್ಲಿ-ಡೆಹರಾಡೂನ್ ಎಕ್ಸ್‌ಪ್ರೆಸ್ ಹೆzರಿಯು 2.30 ಗಂಟೆಗೆ ಇಳಿಸಿದೆ. ಇದು, ಸಮಯದ ಜೊತೆಗೆ ಇಂಧನ ಉಳಿತಾಯ, ಪರಿಸರ ರಕ್ಷಣೆ, ಸುರಕ್ಷಿತ ಮತ್ತು ತ್ವರಿತಗತಿಯಲ್ಲಿ ಸರಕು ಸಾಗಾಣಿಕೆ ಸೇರಿದಂತೆ ಬಹುಮುಖ ಲಾಭಗಳನ್ನು ಸಮರ್ಪಕ ರಸ್ತೆಗಳು ಕೊಡಬಲ್ಲವಾಗಿವೆ. ನೈಸ್ ರಸ್ತೆಯನ್ನೇ ಇಲ್ಲಿ ಉದಾಹರಣೆಗೆ ಪರಿಗಣಿಸುವುದಾದರೆ, ಸರ್ಕಾರವು ರೈತರಿಂದ ಭೂಮಿಯನ್ನು ಸೂಕ್ತ ಬೆಲೆ ನೀಡಿ ಖರೀದಿಸಿ, ಖಾಸಗಿ ಕಂಪನಿ/ವ್ಯಕ್ತಿಗೆ ಸಮರ್ಪಕ ರಸ್ತೆ ನಿರ್ಮಿಸಲು ಮತ್ತು ನಿರ್ಮಾಣದ ಬಳಿಕ, ಅವರು ಮಾಡಿದ ವೆಚ್ಚವನ್ನು ಟೋಲ್ ಮೂಲಕ ಸಂಗ್ರಹಿಸುವ ಜೊತಗೆ ಆ ರಸ್ತೆಯನ್ನು ನಿರ್ವಹಿಸುವ ಜವಾಬ್ದಾರಿಗೆ ಪಿಪಿಪಿ ಯೋಜನೆ ಎನ್ನಲಾಗು ತ್ತದೆ.
ಇಂತಹ ನೂರಾರು ಸುಧಾರಣಾ ನೀತಿಗಳನ್ನು ಸಾರಿಗೆ ಮತ್ತು ಸಂಪರ್ಕದಲ್ಲಿ ತರಲಾಯಿತು. ಫಾಸ್ಟ್ ಟ್ಯಾಗ್ ಪರಿಚಯಿಸುವ ಮೂಲಕ ಟೋಲ್ ಗೇಟ್ ಗಳಲ್ಲಿ 780 ಸೆಕೆಂಡು ಕಾಯುತ್ತಿದ್ದುದನ್ನು 42 ಸೆಕೆಂಡುಗಳಿಗೆ ಇಳಿಸಿದ್ದು ಸುಗಮ ಸಾರಿಗೆಯಲ್ಲಿನ ಸಾಧನೆ. 4 ಸಾವಿರ ಕೋಟಿಯಿಂದ 41 ಸಾವಿರ ಕೋಟಿ ದಾಖಲೆಯ ಟೋಲ್ ಸಂಗ್ರಹ ಏರಿಕೆಯಾಗಿದ್ದು ಯೋಜನೆಗಳು ಜನಪರವಾಗಿರುವ ದ್ಯೋತಕ.
ಸಾಮಾನ್ಯವಾಗಿ, ಗಡ್ಕರಿಯವರನ್ನು ರೋಡ್ಕರಿ ಎಂದು ಕರೆಯುತ್ತಾರೆ. ಭಾರತದ ರಸ್ತೆಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿದವರು. ವಿಶ್ವಮಾನ್ಯತೆಯ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ವರು. World Economic Forum ಇವರನ್ನು ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಶಿಪ್ ಮಾದರಿಯ ಪಿತಾಮಹ ಎಂದು ಹೊಗಳಿದೆ .ಮುಂದಿನ ದಿನಗಳಲ್ಲಿ 20 ಲಕ್ಷಕೋಟಿವರೆಗಿನ ಬೃಹತ್ ಯೋಜನೆ ಗಳ ಕನಸು ಕಾಣುತ್ತಿರುವ ಇವರನ್ನು ‘ಆಧುನಿಕ ಭಾರತದ ರಸ್ತೆಗಳ ಪಿತಾಮಹ’ ಎಂದೂ ನಾವು ಕರೆಯಬಹುದು.
ರಾಷ್ಟ್ರೀಯ ಹೆದ್ದಾರಿ ಜಾಲವು 2014ರಲ್ಲಿ 91,287 ಕಿಮೀನಷ್ಟಿದ್ದರೆ, 2024ರಲ್ಲಿ 1.56 ಲಕ್ಷ ಕಿಮೀ.ವರೆಗೆ ಬೆಳವಣಿಗೆ ಕಾಣುವ ಮೂಲಕ ಶೇ.65ರಷ್ಟು ಹೆಚ್ಚಾಗಿದೆ. 2014ಕ್ಕೂ ಮೊದಲು ದಿನಕ್ಕೆ 8-10 ಕಿಮೀ ನಿರ್ಮಾಣದ ವೇಗವಿದ್ದರೆ, 2014ರಿಂದ 2024ಕ್ಕೆ ಪ್ರತಿದಿನದ ನಿರ್ಮಾಣ ವೇಗ 35 ಕಿಮೀ.ನಷ್ಟು ತಲುಪಿದೆ. ನಾಲ್ಕು ಮತ್ತು ಎಂಟು ಪಥಗಳ ಹೆದ್ದಾರಿಯು 2014ರಲ್ಲಿ 18000 ಕಿಮೀ. ನಷ್ಟಿದ್ದರೆ, 2024ಕ್ಕೆ 46000 ಕಿಮೀ.ಗೂ ಅಧಿಕ ನಿರ್ಮಾಣ ಗುರಿ ತಲುಪಿದೆ.
ಇದರೊಂದಿಗೆ, ಗ್ರಾಮೀಣ ಸಡಕ್ ಯೋಜನೆ (PMGSY )ಯಲ್ಲಿ 4 ಲಕ್ಷ ಕಿಮೀ.ಗೂ ಅಧಿಕ ಗ್ರಾಮೀಣ ರಸ್ತೆಗಳು ನಿರ್ಮಾಣಗೊಂಡಿವೆ. ಜೊತೆಗೆ, (ಒಟ್ಟು 65 ಲಕ್ಚ ಕಿಮೀ) ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ರಸ್ತೆ ಜಾಲ ಹೊಂದಿರುವ ದಾಖಲೆ ಭಾರತದ್ದಾಗಿದೆ. PM-ಗತಿಶಕ್ತಿ ಯೋಜನೆಯಿಂದ ಇಲಾಖೆಗಳ ಮಧ್ಯೆ ಸಮನ್ವಯ ಉತ್ತಮಗೊಂಡು, ಲಾಜಿಸ್ಟಿಕ್ ವೆಚ್ಚ ಎಈPಯ ಶೇ.14ರಿಂದ ಶೇ.6ಕ್ಕೆ ಇಳಿದಿದೆ.
ಜೊತೆಗೆ, ಮಲ್ಟಿ ಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್(MMLP) ಗಳು ದೇಶಾದ್ಯಂತ ನಿರ್ಮಾಣಗೊಂಡು ಸರಕು ಸಾಗಣೆವೆಚ್ಚದಲ್ಲಿ ಭಾರೀ ಇಳಿಕೆಯಾಗಿರುವುದು ಯೋಜನೆ ಯಶಸ್ಸಿಗೆ ಸಾಕ್ಷಿ. ಮುಂಬರುವ ಬೃಹತ್ ಯೋಜನೆಗಳಾಗಿ ಎರಡು ಲಕ್ಷ ಕೋಟಿಯಷ್ಟು (ಶೇ.500ರಷ್ಟು ಹೆಚ್ಚಳ) ಬಜೆಟ್ ಅನುದಾನ ಸಾರಿಗೆ ವಲಯಕ್ಕೆ ಮೀಸಲಿಡಲಾಗಿದೆ.
ಬಾರ್ಡರ್ ರೋಡ್ಸ್ ಆರ್ಗನೈಜೇಷನ್ (BRO) ಮೂಲಕ, ಭಾರತ-ಚೀನಾ ಭಾಗಗಳಲ್ಲಿ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲಾಗಿದೆ. ಇದಕ್ಕಾಗಿ 16000 ಕೋಟಿ ವೆಚ್ಚದ ಯೋಜನೆ ಗಳನ್ನು BRO Projectಗೆ ನೀಡಲಾಗಿದೆ. ರಸ್ತೆಗಳೇನೋ ದಾಖಲೆ ಮಟ್ಟದಲ್ಲಿ ನಿರ್ಮಾಣವಾದವು. ಆದರೆ, ಈಶಾನ್ಯ ರಾಜ್ಯಗಳಲ್ಲಿ, ಪಹಾಡಿ ಪ್ರದೇಶಗಳಲ್ಲಿ ನಡೆಯುವುದೇ ಕಷ್ಟ.
ಇನ್ನು ರಸ್ತೆಗಳೆಲ್ಲಿ ಎನ್ನುವಂತಿದ್ದ ಕಾಲದಲ್ಲಿ, ವರ್ಷದಲ್ಲಿ 5-6 ತಿಂಗಳು ಮಾತ್ರ ಸಂಪರ್ಕ ಸಾಧ್ಯ. ಉಳಿದ ಸಮಯದಲ್ಲಿ ಹಿಮಪಾತವಾಗುವ ಮೂಲಕ ದೇಶದ ಇತರೆ ಜನರೊಂದಿಗೆ ಈ ಭಾಗದ ಜನರು ಸಂಪರ್ಕವನ್ನೇ ಕಡಿದುಕೊಂಡು ಹಿಮಪಾತದ ಜೀವನ ಸಾಗಿಸುತ್ತಿದ್ದರು.
ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲಪ್ರದೇಶ, ಲಡಾಖ್, ತವಾಂಗ್, ಜಮ್ಮು-ಕಾಶ್ಮೀರ ರಾಜ್ಯ ಗಳಿಗೆ ಜಗತ್ತಿನ ಶ್ರೇಷ್ಠ ಗುಣಮಟ್ಟದ, ವರ್ಷಪೂರ್ತಿ ಬಳಸುವ ( All Weather Tunnels) ಸುರಂಗ ಮಾರ್ಗಗಳನ್ನು ಶಾಶ್ವತವಾಗಿ ರುವಂತೆ ಸಕಲ ಸೌಕರ್ಯಗಳೊಂದಿಗೆ ಅತ್ಯಂತ ಕಡಿಮೆ ಅವಽಯಲ್ಲಿ ನಿರ್ಮಿಸಿ ಈ ಭಾಗದ ಜನರಿಗೆ ಅರ್ಪಿಸಲಾಯಿತು.
ಅವುಗಳಲ್ಲಿ, ಹಿಮಾಚಲಪ್ರದೇಶದಲ್ಲಿ ಬರುವ ಮನಾಲಿಯಿಂದ ಲೇಹ್ವರೆಗೆ ನಿರಂತರವಾಗಿ ಪ್ರಯಾಣಿಸುವಂತಹ 9 ಕಿಮೀ ಉದ್ದದ, ವಿಶ್ವದ ಅತ್ಯಂತ ಎತ್ತರ ಪ್ರದೇಶದಲ್ಲಿ ನಿರ್ಮಿತವಾದ ‘ಅಟಲ್ ಸುರಂಗಮಾರ್ಗ’ ಪ್ರಮುಖವಾದುದು. ತವಾಂಗ್ ಸೇನಾ ನೆಲೆಗಳಿಗೆ ದುರ್ಗಮ ಹವಾಮಾನ ವೈಪರಿತ್ಯಗಳಿದ್ದಾಗ್ಯೂ ಸೇನೆಗಳು ಪರಸ್ಪರ ಸಂಪರ್ಕಿಸುವಂತಹ ‘ಸೆಲಾ ಸುರಂಗಮಾರ್ಗ’ ಕೂಡ ಒಂದಾಗಿದೆ.
ಉಳಿದಂತೆ, ಜಮ್ಮು-ಕಾಶ್ಮೀರದಿಂದ ಲಡಾಖ್‌ಗೆ ದುರ್ಗಮ ಚಳಿಗಾಲದಲ್ಲೂ ಸಂಪರ್ಕಿಸಬಲ್ಲ 6.5 ಕಿಮೀ ಉದ್ದದ ಸೋನ್ ಮಾರ್ಗ್ ಸುರಂಗಮಾರ್ಗವು ಹಿಮಪಾತದಿಂದ ಸಂಪೂರ್ಣ ಮುಕ್ತಗೊಂಡು ವರ್ಷಪೂರ್ತಿ ಬಳಕೆಗೆ ಬರುವಂತಹ 14.2 ಕಿಮೀ ಉದ್ದದ ಜೋಜಿಲಾ ಸುರಂಗಮಾರ್ಗವು ಜಮ್ಮುವಿ ನಿಂದ ಲಡಾಖ್ ಗೆ ಸಂಪರ್ಕ ಕಲ್ಪಿಸುತ್ತದೆ. ಶಿಂಕುಲಾ ಸುರಂಗವು ಲಡಾಖ್‌ನಿಂದ ಝಾನ್ಸ್ಕರ್‌ವರೆಗೆ 4 ಕಿ.ಮೀ ಉದ್ದದ ವಿಶ್ವದ ಅತ್ಯುನ್ನತ ರಸ್ತೆಯ ಸುರಂಗವೆಂದೇ ಖ್ಯಾತವಾಗಿದ್ದು, 15855 ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ.
ನೆಚಿಪು ಸುರಂಗವು ಯುದ್ಧಕಾಲದ, ಚಳಿಗಾಲದ ಸಂಪರ್ಕಕ್ಕಾಗಿ 500 ಮೀಟರ್ ಉದ್ದದಷ್ಟು ಬಲಿಪಾರ-ಚಾರ್ದ್ವಾ-ತವಾಂಗ್ ಮಧ್ಯೆ ನಿರ್ಮಿಸಲಾಗಿದೆ. ಇದಲ್ಲದೆ, BRO ಸಂಸ್ಥೆಯು 2014ರ ನಂತರ 55 ಸಾವಿರ ಕಿಮೀನಷ್ಟು ಗಡಿ ರಸ್ತೆಗಳನ್ನು, 900ಕ್ಕೂ ಅಧಿಕ ಸೇನಾ ಸೇತುವೆಗಳನ್ನು, 25ಕ್ಕೂ ಹೆಚ್ಚು ಏರ್ ಸ್ಟ್ರಿಪ್‌ಗಳನ್ನು ನಿರ್ಮಾಣ ಮಾಡಿದೆ.
ಇಷ್ಟೆಲ್ಲ ಸಾಧನೆ ಸಾಕಾರಗೊಳ್ಳಲು ಕಾರಣವಾಗಿದ್ದು, PM-GatiShakt ಯೋಜನೆ. ಇದನ್ನು National Masterpaln for Multi2Model Connectivity (ಬಹುಮಾಧ್ಯಮ ಸಂಪರ್ಕಕ್ಕಾಗಿ ರಾಷ್ಟ್ರೀಯ ಯೋಜನೆ) ಎಂದೇ ಗುರುತಿಸಲಾಗಿದೆ. Key Objective ಗಳಾದ, Multi-model Connectivity: ರಸ್ತೆ, ರೈಲು, ವಿಮಾನ, ನದಿಮಾರ್ಗ, ಪೈಪ್ ಲೈನ್ ನಡುವಿನ ಸಮನ್ವಯ, Integrated Planning: ಇಲಾಖೆಗಳ ಯೋಜನೆಗಳು ಒಂದೇ ಪ್ಲಾಟ್ ಫಾರ್ಮ್‌ನಲ್ಲಿ ಸಂಯೋಜನೆ, Project Tracking: ಎಲ್ಲಾ ಯೋಜನೆಗಳ ಉನ್ನತ ಮಟ್ಟದ ಮೌಲಿಕ ಮೇಲ್ವಿಚಾರಣೆ ಮತ್ತು ಅನುಷ್ಠಾನ, Logistics Cost : ಸಾಗಣೆಯ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುವುದು, Ease of Doing Business : ಉದ್ಯಮ ಗೆಲುವಿಗೆ ಸಹಾಯ ಮಾಡುವ ಮೂಲಸೌಕರ್ಯ ನಿರ್ಮಾಣ ಗಳನ್ನು ಇಟ್ಟುಕೊಳ್ಳುವುದು ಸೇರಿವೆ.
ಕೆಳಗಿನ Six Core Sectors ಇದರಲ್ಲಿ ಯೋಜನೆಯಲ್ಲಿ ತರಲಾಗಿದ್ದು, ರಸ್ತೆ ಮತ್ತು ಹೆದ್ದಾರಿ ಇಲಾಖೆ ( MoRTH), ರೈಲ್ವೆ ಇಲಾಖೆ, ವಿಮಾನಯಾನ (Civil Aviation), ಸಾಗರ ಸಾರಿಗೆ ಮತ್ತು ನದಿ ಮಾರ್ಗ ಗಳು, ಉರ್ಜಾ ( Energy ) ಮತ್ತು ದೂರಸಂಪರ್ಕ ಮತ್ತು ಐಟಿ ( Telecom IT) ವಲಯಗಳು ಇದರಲ್ಲಿವೆ.
ಅಮೇರಿಕಾದ ಒಟ್ಟು GDP ಯು 29 ಟ್ರಿಲಿಯನ್ ಡಾಲರ್ ನಷ್ಟಿದ್ದು, ಕೇವಲ ರಸ್ತೆ, ಸಂಪರ್ಕ ಸಾರಿಗೆಗಾಗಿ ‘ಫೆಡರಲ್ -ರಾಜ್ಯ-ಸ್ಥಳೀಯ ಸಂಸ್ಥೆ’ ಗಳ ಒಟ್ಟು ಹೂಡಿಕೆಯೊಂದಿಗೆ 250 ಬಿಲಿಯನ್ ಡಾಲರ್(ಶೇ.09)ನಷ್ಟು ಮೀಸಲಿರಿಸಿದೆ. ಚೀನಾದ 19 ಟ್ರಿಲಿಯನ್ ಡಾಲರ್ GDP ನಲ್ಲಿ ಶೇ.3ರಷ್ಟು ಮತ್ತು 4 ಟ್ರಿಲಿಯನ್ ಡಾಲರ್ GDP ಹೊಂದಿರುವ ಭಾರತವು ರಸ್ತೆ ಸಾರಿಗೆ ಅಭಿವೃದ್ಧಿಗೆ ಶೇ.17 ರಷ್ಟು ಬಳಸುತ್ತಿವೆ.
ರಸ್ತೆ, ಸಾರಿಗೆ ಸಂಪರ್ಕ ನಿರ್ಮಾಣದ ಅತಿ ಹೆಚ್ಚು ಬೇಡಿಕೆ ಭಾರತದಲ್ಲಿದೆ. 64 ಲಕ್ಷ ಕಿಮೀ. ಉದ್ದದ ವಿಶ್ವದ 2ನೇ ಅತಿದೊಡ್ಡ ರಸ್ತೆ ಜಾಲವಿದ್ದರೂ, ಕೇವಲ 2.7%ರಷ್ಟು ರಾಷ್ಟ್ರೀಯ ಹೆದ್ದಾರಿಗಳಿವೆ ಮತ್ತು ಶೇ.40ಕ್ಕೂ ಹೆಚ್ಚು ವಾಹನಗಳು ಇವುಗಳನ್ನೇ ನಂಬಿಕೊಂಡಿವೆ. ಎಲ್ಲ ಋತುಮಾನದ ರಸ್ತೆಗಳು ಗ್ರಾಮೀಣ ಭಾಗಕ್ಕೆ ಮೊದಲ ಆದ್ಯತೆಯಾಗಿ ಬರಬೇಕಿದ್ದು, ಇಂತಹ ಯಾವೊಂದು ಯೋಜನೆಗಳು ಇನ್ನೂ ಜಾರಿಯಾಗದಿರುವುದು ಗ್ರಾಮೀಣಾಭಿವೃದ್ಧಿಗೆ ದೊಡ್ಡ ಕೊರತೆ.
ಪ್ರತಿವರ್ಷ ಲಕ್ಷ ಲಕ್ಷ ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತಿವೆ. ಇದಕ್ಕೆ ತಕ್ಕಂತೆ ದೃಢವಾದ ರಸ್ತೆಗಳಿರದೆ, ತೀವ್ರ ಸಂಚಾರ ಸಮಸ್ಯೆ, ಅಪಘಾತ ಸಮಸ್ಯೆ ಮತ್ತು ವಾಹನ ದಟ್ಟಣೆ, ಹವಾಮಾಲಿನ್ಯ ವಿಪರೀತ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ 151000 ಕಿ.ಮೀ(2.19%), ರಾಜ್ಯ ಹೆದ್ದಾರಿ 186524 ಕಿಮೀ(3.0%), ಜಿಲ್ಲಾ ರಸ್ತೆ 6,32,154 ಕಿಮೀ(10.17%), ಗ್ರಾಮೀಣ ರಸ್ತೆ 45,35,511 ಕಿಮೀ (72.67) ನಷ್ಟಿದ್ದರೆ, ನಗರಪಾಲಿಕೆಯ ಎಲ್ಲ ಪುರಸಭೆಗಳ ರಸ್ತೆ 5,44,683 ಕಿಮೀ(8.76%)ನಷ್ಟಿವೆ ಮತ್ತು SAIL, NMDC, BRO ನಂತಹ ವಿವಿಧ ಯೋಜನಾ ರಸ್ತೆಗಳು 3,54,921ಕಿಮೀ (5.70%)ನಷ್ಟಿವೆ.
2014ರಲ್ಲಿ 91,285 ಕಿಮೀ.ನಷ್ಟು ಉದ್ದ ರಾಷ್ಟ್ರೀಯ ಹೆದ್ದಾರಿ ಇದ್ದದ್ದು, 2024ಕ್ಕೆ 1,46,15 ಕಿಮೀ. ತಲುಪಿದ್ದು, ಶೇ.60ರಷ್ಟು ಏರಿಕೆಯಾಗಿದೆ. ಇಷ್ಟಿದ್ದರೂ, ಪ್ರತಿ ಗ್ರಾಮವನ್ನು ಪಕ್ಕಾ ರಸ್ತೆಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವಂತೆ ಯೋಜನೆ ಸಮಗ್ರವಾಗಿ ಜಾರಿಯಾಗಬೇಕಿದೆ. ಇನ್ನೂ, 2 ಲಕ್ಷ ಕಿಮೀ.ಗಳ ರಸ್ತೆ ನಿರ್ಮಾಣಗುರಿ ಹೊಂದಿರುವ, Smart Road, Ai Sensor, Solar Based Road ಯೋಜನೆಗಳು ಬೇಗ ಸಾಕಾರವಾಗಬೇಕಿದ್ದು, ಅಭಿವೃದ್ಧಿ ಎಂಬುದು ಒಂದು ನಿರಂತರ ಪ್ರಕ್ರಿಯೆ ಎಂಬುದನ್ನೂ ನಾವು ಮನಗಾಣಬೇಕು.
ಆಧುನಿಕ ಜಗತ್ತಿನಲ್ಲಿ ಸಮಗ್ರ ಸಾರಿಗೆ ಸಂಪರ್ಕ ಹೊಂದಿರುವ ದೇಶವು ಸಂಪೂರ್ಣ ಆರ್ಥಿಕ ಹಿಡಿತ ಹೊಂದಿರುವ ಮೂಲಕ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಇಂದಿನ ಭಾರತವೇ ಸಾಕ್ಷಿ.