ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಬೋಯಿಂಗ್‌ 777 ಮಾಡಿದ ಕ್ರಾಂತಿ

1990ರ ದಶಕದ ಆರಂಭದಲ್ಲಿ, ವಾಯುಯಾನ ಕ್ಷೇತ್ರವು ಒಂದು ದೊಡ್ಡ ಬದಲಾವಣೆಯನ್ನು ಎದುರು ನೋಡುತ್ತಿತ್ತು. ಆ ಸಮಯದಲ್ಲಿ ಬೋಯಿಂಗ್ ಕಂಪನಿಯ ಬಳಿ ಬೃಹತ್ ಗಾತ್ರದ 747 ಜಂಬೋ ಜೆಟ್ ಮತ್ತು ಚಿಕ್ಕದಾದ 767 ವಿಮಾನಗಳಿದ್ದವು. ಆದರೆ ಇವೆರಡರ ನಡುವೆ ಒಂದು ಮಧ್ಯಮ ಗಾತ್ರದ, ಆದರೆ ದೀರ್ಘದೂರ ಹಾರಬಲ್ಲ ವಿಮಾನದ ಅಗತ್ಯವಿತ್ತು. ಈ ಕೊರತೆಯನ್ನು ನೀಗಿಸಲು ಬೋಯಿಂಗ್ 777 ಅನ್ನು ವಿನ್ಯಾಸಗೊಳಿಸಲಾಯಿತು.

Vishweshwar Bhat Column: ಬೋಯಿಂಗ್‌ 777 ಮಾಡಿದ ಕ್ರಾಂತಿ

-

ಸಂಪಾದಕರ ಸದ್ಯಶೋಧನೆ

ಜಾಗತಿಕ ವಾಯುಯಾನ ಇತಿಹಾಸದಲ್ಲಿ ಕೆಲವು ವಿಮಾನಗಳು ಕೇವಲ ಯಂತ್ರಗಳಾಗಿ ಉಳಿಯದೇ, ಒಂದು ಯುಗದ ಸಂಕೇತಗಳಾಗಿರುವುದು ಗಮನಾರ್ಹ. ಅಂಥ ಅಪರೂಪದ ಸಾಲಿನಲ್ಲಿ ಮುಂಚೂ ಣಿಯಲ್ಲಿ ನಿಲ್ಲುವ ಹೆಸರು ಬೋಯಿಂಗ್ 777. ಇದನ್ನು ಪ್ರೀತಿಯಿಂದ ‘ಟ್ರಿಪಲ್ ಸೆವೆನ್’ ಎಂದೂ ಕರೆಯುತ್ತಾರೆ. ಈ ವಿಮಾನವು ಸೇವೆಗೆ ಸೇರ್ಪಡೆಗೊಂಡು ಬರೋಬ್ಬರಿ 30 ವರ್ಷ ಗಳಾದವು.

ಈ ಮೂರು ದಶಕಗಳಲ್ಲಿ, ಇದು ಸುಮಾರು 400 ಕೋಟಿ ಪ್ರಯಾಣಿಕರನ್ನು ಹೊತ್ತೊಯ್ಯುವ ಮೂಲಕ ವಾಯುಯಾನ ಇತಿಹಾಸದಲ್ಲಿ ಅತಿ ಹೆಚ್ಚು ಮಾರಾಟವಾದ ‘ವೈಡ್-ಬಾಡಿ’ ವಿಮಾನ ಎನಿಸಿಕೊಂಡಿದೆ, ಒಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಬೋಯಿಂಗ್ 777 ಕೇವಲ ಒಂದು ಪ್ರಯಾಣಿಕ ವಿಮಾನವಲ್ಲ; ಇದು ದೀರ್ಘಶ್ರೇಣಿಯ ಹಾರಾಟದ ಆರ್ಥಿಕತೆಯನ್ನು ಸಂಪೂರ್ಣ ವಾಗಿ ಬದಲಿಸಿದ ತಾಂತ್ರಿಕ ಅದ್ಭುತ.

1990ರ ದಶಕದ ಆರಂಭದಲ್ಲಿ, ವಾಯುಯಾನ ಕ್ಷೇತ್ರವು ಒಂದು ದೊಡ್ಡ ಬದಲಾವಣೆಯನ್ನು ಎದುರು ನೋಡುತ್ತಿತ್ತು. ಆ ಸಮಯದಲ್ಲಿ ಬೋಯಿಂಗ್ ಕಂಪನಿಯ ಬಳಿ ಬೃಹತ್ ಗಾತ್ರದ 747 ಜಂಬೋ ಜೆಟ್ ಮತ್ತು ಚಿಕ್ಕದಾದ 767 ವಿಮಾನಗಳಿದ್ದವು. ಆದರೆ ಇವೆರಡರ ನಡುವೆ ಒಂದು ಮಧ್ಯಮ ಗಾತ್ರದ, ಆದರೆ ದೀರ್ಘದೂರ ಹಾರಬಲ್ಲ ವಿಮಾನದ ಅಗತ್ಯವಿತ್ತು. ಈ ಕೊರತೆಯನ್ನು ನೀಗಿಸಲು ಬೋಯಿಂಗ್ 777 ಅನ್ನು ವಿನ್ಯಾಸಗೊಳಿಸಲಾಯಿತು.

ಇದನ್ನೂ ಓದಿ: Vishweshwar Bhat Column: ರೆಕ್ಕೆಗಳಲ್ಲೇಕೆ ಇಂಧನ ?

1995ರಲ್ಲಿ ಯುನೈಟೆಡ್ ಏರ್‌ಲೈನ್ಸ್ ಸಂಸ್ಥೆಯ, ಲಂಡನ್ ಮತ್ತು ವಾಷಿಂಗ್ಟನ್ ನಡುವೆ ಮೊದಲ ಬಾರಿಗೆ ಈ ವಿಮಾನವನ್ನು ಹಾರಿಸಿತು. ಅಂದಿನಿಂದ ಇಂದಿನವರೆಗೂ, ಈ ವಿಮಾನವು ಆಕಾಶದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಕಾಯ್ದುಕೊಂಡಿದೆ. ‌

ಬೋಯಿಂಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ವರ್ಕಿಂಗ್ ಟುಗೆದರ್’ ಎಂಬ ತತ್ವದ ಅಡಿ ಯಲ್ಲಿ, ಪ್ರಮುಖ ವಿಮಾನಯಾನ ಸಂಸ್ಥೆಗಳ ಸಲಹೆಗಳನ್ನು ಪಡೆದು ಈ ವಿಮಾನವನ್ನು ವಿನ್ಯಾಸ ಗೊಳಿಸಲಾಗಿತ್ತು. ಇದು ಈ ವಿಮಾನದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.

ಬೋಯಿಂಗ್ 777 ಬರುವ ಮುನ್ನ, ಖಂಡಾಂತರ ಅಥವಾ ದೀರ್ಘಶ್ರೇಣಿಯ ಹಾರಾಟಗಳಿಗೆ ನಾಲ್ಕು ಎಂಜಿನ್ʼಗಳಿರುವ ವಿಮಾನಗಳನ್ನು (ಉದಾಹರಣೆಗೆ ಬೋಯಿಂಗ್ 747 ಅಥವಾ ಏರ್‌ಬಸ್ ಎ-340) ಬಳಸುವುದು ಅನಿವಾರ್ಯ ಎಂದು ನಂಬಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಸಾಗರಗಳ ಮೇಲೆ ಹಾರಲು ನಾಲ್ಕು ಎಂಜಿನ್‌ಗಳೇ ಬೇಕು ಎಂಬುದು ಅಂದಿನ ನಿಯಮವಾಗಿತ್ತು.

ಆದರೆ,777 ಈ ನಂಬಿಕೆಯನ್ನು ಹುಸಿಗೊಳಿಸಿತು. ಇದು ಕೇವಲ ಎರಡು ಬಲಿಷ್ಠ ಎಂಜಿನ್‌ಗಳನ್ನು ಹೊಂದಿದ್ದರೂ, ನಾಲ್ಕು ಎಂಜಿನ್‌ಗಳ ವಿಮಾನದಷ್ಟೇ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಪ್ರದರ್ಶಿ ಸಿತು. ನಾಲ್ಕು ಎಂಜಿನ್‌ಗಳ ಬದಲಿಗೆ ಎರಡೇ ಎಂಜಿನ್‌ಗಳನ್ನು ಬಳಸುವುದರಿಂದ ಇಂಧನ ಉಳಿತಾಯವಾಯಿತು ಮತ್ತು ನಿರ್ವಹಣಾ ವೆಚ್ಚ ಗಣನೀಯವಾಗಿ ತಗ್ಗಿತ್ತು.

ಒಂದೇ ಎಂಜಿನ್‌ನಲ್ಲಿ ಸತತವಾಗಿ 3 ಗಂಟೆಗಳಿಗೂ ಹೆಚ್ಚು ಕಾಲ ಹಾರಬಲ್ಲ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿತು. ಈ ಬದಲಾವಣೆಯು ವಿಮಾನಯಾನ ಸಂಸ್ಥೆಗಳಿಗೆ ದೀರ್ಘ ಮಾರ್ಗಗಳಲ್ಲಿ ಕಡಿಮೆ ವೆಚ್ಚದಲ್ಲಿ ವಿಮಾನ ಹಾರಿಸಲು ದಾರಿ ಮಾಡಿಕೊಟ್ಟಿತು. ಬೋಯಿಂಗ್ 777ರ ಪ್ರವೇಶವು ಜಾಗತಿಕ ಪ್ರಯಾಣದ ಚಿತ್ರಣವನ್ನೇ ಬದಲಿಸಿತು.

ಲಂಡನ್-ವಾಷಿಂಗ್ಟನ್, ದುಬೈ-ಲಾಸ್ ಏಂಜಲೀಸ್ ಅಥವಾ ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೋ ನಂಥ ನೇರ ವಿಮಾನ ಮಾರ್ಗಗಳು ಲಾಭದಾಯಕವಾಗಲು 777ರ ದಕ್ಷತೆಯೇ ಕಾರಣ. ಇಂದು ಗತ್ತಿನಾದ್ಯಂತ ಪ್ರತಿದಿನ ಸುಮಾರು 1800ಕ್ಕೂ ಹೆಚ್ಚು 777 ವಿಮಾನಗಳು ಹಾರಾಟ ನಡೆಸುತ್ತಿವೆ. 30 ವರ್ಷ ಹಳೆಯ ವಿನ್ಯಾಸವೊಂದು ಇಂದಿಗೂ ಇಷ್ಟು ಪ್ರಸ್ತುತವಾಗಿರುವುದು ತಂತ್ರಜ್ಞಾನ ಲೋಕ ದಲ್ಲಿ ಒಂದು ವಿಸ್ಮಯವೇ ಸರಿ.

ಬೋಯಿಂಗ್ ಪ್ರಕಾರ, ಈ ವಿಮಾನಗಳು ಒಟ್ಟು 49 ಬಿಲಿಯನ್ (4900 ಕೋಟಿ) ಮೈಲಿಗಳಷ್ಟು ಹಾರಾಟ ನಡೆಸಿವೆ. ಇದು ಸ್ಮಾರ್ಟ್ ವಿನ್ಯಾಸವೊಂದು ಹೇಗೆ ದಶಕಗಳ ಕಾಲ ಬಾಳಿಕೆ ಬರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬೋಯಿಂಗ್ 777 ಒಂದೇ ವಿಮಾನವಲ್ಲ, ಇದೊಂದು ಕುಟುಂಬ. ಕಾಲಕ್ಕೆ ತಕ್ಕಂತೆ ಇದರ ಅನೇಕ ಮಾದರಿಗಳು ಬಂದಿವೆ. 777-200: ಇದು ಮೂಲ ಮಾದರಿ.

ಅಮೆರಿಕದ ಒಳನಾಡು ಮತ್ತು ಅಟ್ಲಾಂಟಿಕ್ ಸಾಗರದ ಮೇಲಿನ ಹಾರಾಟಕ್ಕೆ ಇದನ್ನು ಮೊದಲು ಬಳಸಲಾಯಿತು. 777-300 ER (Extended Range) ) ಈ ಕುಟುಂಬದ ಅತ್ಯಂತ ಯಶಸ್ವಿ ಮಾದರಿ. ಜಗತ್ತಿನ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಎಮಿರೇಟ್ಸ್, ಕತಾರ್ ಏರ್ವೇಸ್, ಏರ್ ಇಂಡಿಯಾ ಮುಂತಾದವುಗಳಿಗೆ ಇದು ಬೆನ್ನೆಲುಬಾಗಿದೆ. ಇದು ಹೆಚ್ಚು ಪ್ರಯಾಣಿಕರನ್ನು ಅತಿ ಹೆಚ್ಚು ದೂರಕ್ಕೆ ಕೊಂಡೊಯ್ಯಬಲ್ಲದು. 777 F (Freighter ) ಸರಕು ಸಾಗಣೆಯಲ್ಲಿ ಅಗ್ರಗಣ್ಯ.