ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಜೇಷ್ಠ ಗೌರಿ ಹಾಗೂ ಕನಿಷ್ಠ ಗೌರಿಯ ಕಥೆ

‘ಭಾದ್ರಪದ ತಿಂಗಳಿನಲ್ಲಿ ಕೆರೆಯ ದಂಡೆಗೆ ಹೋಗಿ ಎರಡು ಕಲ್ಲುಗಳನ್ನು ಮನೆಗೆ ತಂದು ಅವುಗಳನ್ನು ಬಿಸಿನೀರಿನಿಂದ ತೊಳೆಯಬೇಕು. ಜ್ಯೇಷ್ಠ ಗೌರಿ ಮತ್ತು ಕನಿಷ್ಠ ಗೌರಿ ಎಂದು ಅವುಗಳನ್ನು ಸ್ಥಾಪಿಸಿ ಪೂಜೆ ಮಾಡಬೇಕು. ಎರಡನೆಯ ದಿನ ಹೋಳಿಗೆ ಮತ್ತು ಮೂರನೆ ದಿನ ಪಾಯಸದ ನೈವೇದ್ಯವನ್ನು ಅರ್ಪಿಸ ಬೇಕು.

Roopa Gururaj Column: ಜೇಷ್ಠ ಗೌರಿ ಹಾಗೂ ಕನಿಷ್ಠ ಗೌರಿಯ ಕಥೆ

ಒಂದೊಳ್ಳೆ ಮಾತು

rgururaj628@gmail.com

ಒಬ್ಬ ಬ್ರಾಹ್ಮಣನ ಮನೆ, ಬಡತನ ಅವರನ್ನು ಕಿತ್ತು ತಿನ್ನುತ್ತಿತ್ತು. ಊರೆಲ್ಲ ಹಬ್ಬ ಮಾಡುತ್ತಿದ್ದರು. ಮನೆಯ ಮಕ್ಕಳು ಕೂಡ ಹಬ್ಬದ ಊಟಕ್ಕಾಗಿ ಅವನನ್ನು ಕೇಳಿಕೊಂಡರು. ಬ್ರಾಹ್ಮಣ ಮತ್ತೆ ಅವನ ಹೆಂಡತಿಗೆ ಬಹಳ ಬೇಸರವಾಯಿತು. ಏನಾದರೂ ಮಾಡುವೆ ಎಂದು ಮನೆ ಬಿಟ್ಟು ಹೊರಟ ಅವನಿಗೆ ದಿಕ್ಕೇ ತೋಚಲಿಲ್ಲ.

ಸಂಜೆಯಾಗುತ್ತಾ ಬಂದಿತ್ತು, ಖಾಲಿ ಕೈಯಲ್ಲಿ ಮನೆಗೆ ಹೋಗಲು ಮನಸ್ಸಿರಲಿಲ್ಲ. ಎದುರಿಗೆ ಹಣ್ಣು ಹಣ್ಣು ಮುದುಕಿಯೊಬ್ಬಳು ಕಂಡಳು. ಬೇರೆ ದಾರಿ ಕಾಣದೆ ಅವಳ ಬಳಿ ಎಲ್ಲ ದುಃಖವನ್ನು ಹೇಳಿಕೊಂಡ. ಅವಳು ನನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು ಎಂದಳು.

ಬ್ರಾಹ್ಮಣನು ಮುದುಕಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಬ್ರಾಹ್ಮಣನ ಹೆಂಡತಿಯು ದೀಪವನ್ನು ಹಚ್ಚಿ ‘ಇವರು ಯಾರು’ ಎಂದು ಕೇಳಿದಳು ಆಗ ಬ್ರಾಹ್ಮಣನು ‘ಅಜ್ಜಿ’ ಎಂದು ಉತ್ತರಿಸಿ ದನು. ಹೆಂಡತಿಯು ಮನೆಯ ಒಳಗೆ ಹೋಗಿ ಗಂಜಿ ಮಾಡಲು ನುಚ್ಚನ್ನು ನೋಡಿದಳು.

ಅವಳಿಗೆ ನುಚ್ಚಿನ ಮಡಕೆಯು ತುಂಬಿರುವುದನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅವಳು ಈ ವಿಷಯವನ್ನು ತನ್ನ ಗಂಡನಿಗೆ ಹೇಳಿದಳು. ಅವನಿಗೆ ಬಹಳ ಆನಂದವಾಯಿತು. ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುವಷ್ಟು ಗಂಜಿಯನ್ನು ತಯಾರಿಸಿ, ಉಂಡು, ಆನಂದದಿಂದ ಮಲಗಿದರು.

ಇದನ್ನೂ ಓದಿ: Roopa Gururaj Column: ತನ್ನ ಜೀವನವನ್ನೇ ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳ

ಮರುದಿನ ಅಜ್ಜಿ ಎದ್ದು ಬ್ರಾಹ್ಮಣನನ್ನು ಕರೆದು ನಿನ್ನ ಹೆಂಡತಿಗೆ ನನಗೆ ಅಭ್ಯಂಜನ ಮಾಡಿಸಲು ಹೇಳು ಹಾಗೆಯೇ ದೇವರಿಗಾಗಿ ಹಬ್ಬದ ಅಡಿಗೆ ಮಾಡಿ. ಇಲ್ಲ ಎನ್ನಬೇಡ ಎಲ್ಲವೂ ನಿನಗೆ ಒದಗುತ್ತದೆ ಎಂದಳು. ಬ್ರಾಹ್ಮಣ ಹೋಗಿ ಬಂದಾಗ ಬೇಕಾದಷ್ಟು ಬೆಲ್ಲ ಹಾಗೂ ಉಳಿದ ಸಾಮಾನುಗಳೂ ದೊರೆತವು. ಸಂತೋಷದಿಂದ ಬ್ರಾಹ್ಮಣನ ಮನೆಯವರು ಅಜ್ಜಿ ಎಲ್ಲರೂ ಸೇರಿ ಹೊಟ್ಟೆ ತುಂಬಾ ಊಟ ಮಾಡಿದರು.

ಮುದುಕಿಯು ಬ್ರಾಹ್ಮಣನನ್ನು ಕರೆದು ಮರುದಿನದ ಅಡುಗೆಗೆ ಪಾಯಸ ಮಾಡಲು ಹೇಳಿದಳು. ಬ್ರಾಹ್ಮಣನು ಅಜ್ಜಿ, ಹಾಲನ್ನು ಎಲ್ಲಿಂದ ತರಲಿ? ಎಂದು ಕೇಳಿದನು. ಆಗ ಮುದುಕಿಯು ನೀನು ಏನೂ ಚಿಂತೆ ಮಾಡಬೇಡ, ಈಗಲೇ ಎದ್ದು ನಿನಗೆ ಎಷ್ಟು ಎಮ್ಮೆ ಮತ್ತು ದನ ಬೇಕೊ ಅಷ್ಟು ಕಂಬ ವನ್ನು ನೆಟ್ಟು ಅವೆಲ್ಲದಕ್ಕೂ ಹಗ್ಗ ಕಟ್ಟಿಡು. ಸಾಯಂಕಾಲ ಗೋಧೂಳಿ ಮೂಹೂರ್ತದಲ್ಲಿ ದನ-ಎಮ್ಮೆಗಳಿಗೆ ಅವುಗಳ ಹೆಸರಿನಿಂದ ಕೂಗಿದರೆ ಅವು ಬರುವುವು ಮತ್ತು ನಿನ್ನ ಕೊಟ್ಟಿಗೆಯು ತುಂಬು ವುದು. ಅವುಗಳ ಹಾಲನ್ನು ಕರೆ ಎಂದು ಹೇಳಿದಳು ಹಾಗೆಯೇ ಆಯಿತು.

ಮರುದಿನ ಪಾಯಿಸ ಮಾಡಿದರು. ಮುದುಕಿಯು ಸಂಜೆಯಾದ ತಕ್ಷಣ ಬ್ರಾಹ್ಮಣನಿಗೆ ಮಗ, ನನಗೆ ಈಗ ಕಳಿಸಿಕೊಡು ಎಂದು ಹೇಳಿದಳು. ಬ್ರಾಹ್ಮಣನು ಅಜ್ಜಿ, ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ದೊರೆಯಿತು ಈಗ ನಾನು ನಿಮ್ಮನ್ನು ಹೇಗೆ ಕಳಿಸಿಕೊಡಲಿ? ನೀವು ಹೋದರೆ ಎಲ್ಲವೂ ಇಲ್ಲದಂತಾಗುವುದು ಎಂದು ಹೇಳಿದನು.

ಆಗ ಮುದುಕಿಯು ನೀನೇನೂ ಹೆದರಬೇಡ ನನ್ನ ಆಶೀರ್ವಾದದಿಂದ ನಿನಗೆ ಏನೂ ಕಡಿಮೆ ಯಾಗುವುದಿಲ್ಲ. ಜ್ಯೇಷ್ಠ ಗೌರಿ ಎಂದರೆ ನಾನೇ! ಈಗ ನನ್ನನ್ನು ಕಳಿಸಿ ಕೊಡು ಎಂದು ಹೇಳಿದಳು. ಬ್ರಾಹ್ಮಣನು ನೀನು ಕೊಟ್ಟಿರುವುದು ಹೀಗೇ ವೃದ್ಧಿಯಾಗಲು ಏನಾದರೂ ಉಪಾಯ ಹೇಳು ಎಂದು ಹೇಳಿದನು.

ಗೌರಿಯು, ನೀನು ಬರುವಾಗ ಮರಳು ಕೊಡುತ್ತೇನೆ. ಅದನ್ನು ನೀನು ಮನೆಯಲ್ಲಿ, ಹಂಡೆಯ ಮೇಲೆ, ಕೊಟ್ಟಿಗೆಯಲ್ಲಿ ಬೀಸು. ಹೀಗೆ ಮಾಡಿದ ನಂತರ ನಿನಗೆ ಯಾವುದರ ಕೊರತೆಯೂ ಆಗುವುದಿಲ್ಲ ಎಂದಳು. ಬ್ರಾಹ್ಮಣನು ಅದಕ್ಕೆ ಒಪ್ಪಿ ಅವಳ ಪೂಜೆ ಮಾಡಿದನು. ಗೌರಿಯು ಪ್ರಸನ್ನಳಾದಳು. ಅವಳು ತನ್ನ ವ್ರತವನ್ನು ಹೇಳಿದಳು.

‘ಭಾದ್ರಪದ ತಿಂಗಳಿನಲ್ಲಿ ಕೆರೆಯ ದಂಡೆಗೆ ಹೋಗಿ ಎರಡು ಕಲ್ಲುಗಳನ್ನು ಮನೆಗೆ ತಂದು ಅವು ಗಳನ್ನು ಬಿಸಿನೀರಿನಿಂದ ತೊಳೆಯಬೇಕು. ಜ್ಯೇಷ್ಠ ಗೌರಿ ಮತ್ತು ಕನಿಷ್ಠ ಗೌರಿ ಎಂದು ಅವುಗಳನ್ನು ಸ್ಥಾಪಿಸಿ ಪೂಜೆ ಮಾಡಬೇಕು. ಎರಡನೆಯ ದಿನ ಹೋಳಿಗೆ ಮತ್ತು ಮೂರನೆ ದಿನ ಪಾಯಸದ ನೈವೇದ್ಯವನ್ನು ಅರ್ಪಿಸಬೇಕು.

ಸುಮಂಗಲೆಯರ ಉಡಿ ತುಂಬಬೇಕು. ಊಟ ಹಾಕಿಸಬೇಕು. ಸಂಜೆ ಅರಿಶಿನ ಕುಂಕುಮ ಇಟ್ಟು ದೇವರನ್ನು ಆಹ್ವಾನಿಸಿದರೆ ಅವರಿಗೆ ಅಕ್ಷಯ ಸುಖ ಸಿಗುವುದು, ಸಂತತಿಯಾಗುವುದು’ ಎಂದಳು. ಆದಷ್ಟು ದಾನ ಧರ್ಮಗಳನ್ನು ಮಾಡುತ್ತಾ ನಾವು ಕೂಡ ಗೌರಿಯ ಕೃಪೆಗೆ ಪಾತ್ರರಾಗೋಣ. ಗೌರಿ ಹಬ್ಬದ ಶುಭಾಶಯಗಳು.