Rangaswamy Mookanahally Column: ವ್ಯಕ್ತಿಯೊಬ್ಬ ಶಕ್ತಿಶಾಲಿ ಆದಂತೆಲ್ಲಾ ಅದೆಷ್ಟು ಅಶಕ್ತ ?
ವ್ಯಕ್ತಿ ಶಕ್ತಿಶಾಲಿ ಆದಂತೆ ಅದೆಷ್ಟು ಅಶಕ್ತ! ಪ್ರಬಲನಾದಷ್ಟೂ ಅದೆಷ್ಟು ದುರ್ಬಲ! ಇಷ್ಟೆ ಎಚ್ಚರಿಕೆ ತೆಗೆದುಕೊಂಡು ಕೂಡ ಕಿಮ್ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಆತ ಸಾರ್ವ ಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಕಿಮ್ ಇಲ್ ಸುಂಗ್ ಉತ್ತರ ಕೊರಿಯಾದ ಸ್ಥಾಪಕ. ಆತನ ಹುಟ್ಟುಹಬ್ಬ 15 ಏಪ್ರಿಲ್ ಅನ್ನು ದೇಶದ ಬಹುಮುಖ್ಯ ರಜಾದಿನವೆಂದು ಘೋಷಿಸ ಲಾಗಿದೆ. ಈ ದಿನದಲ್ಲಿ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಿಮ್ ಜೊಂಗ್ ಉನ್ ಈ ಬಾರಿ ಕಾಣಿಸಿಕೊಂಡಿಲ್ಲ.


ವಿಶ್ವರಂಗ
ಡೊನಾಲ್ಡ್ ಟ್ರಂಪ್, ಪುಟಿನ್, ಉತ್ತರ ಕೊರಿಯಾದ ಕಿಮ್, ಚೀನಾದ ಜಿನ್‌ಪಿಂಗ್ ಇವರನ್ನೆ ನೋಡಿದ ತಕ್ಷಣ ‘ಇವರು ಜಗತ್ತನ್ನು ತಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲರು’ ಎನ್ನಿಸುವುದು ಸಹಜ. ಆದರೆ ಅವರು ನಿಜಕ್ಕೂ ನಾವಂದುಕೊಂಡಷ್ಟು ಬಲಿಷ್ಠರೇ? ಎನ್ನುವ ಪ್ರಶ್ನೆ ಉದ್ಭವ ವಾದಾಗ, ಬಲಿಷ್ಠ, ಶ್ರೇಷ್ಠ ಇತ್ಯಾದಿಗಳನ್ನು ಪಕ್ಕಕ್ಕಿಡಿ, ಪಾಪ ಅವರಿಗೆ ನಮಗಿರುವಂಥ ಒಂದು ನೆಮ್ಮದಿಯ ಜೀವನ ಕೂಡ ಇಲ್ಲವಲ್ಲ ಎಂದು ಮರುಕ ಹುಟ್ಟದಿದ್ದರೆ ಕೇಳಿ.
ಇರುವುದೊಂದೇ ಜೀವನ. ಎಷ್ಟು ವರ್ಷದ ಜೀವನ ಎನ್ನುವುದು ಕೂಡ ಗ್ಯಾರಂಟಿ ಇಲ್ಲದ ಕಾಲ ಘಟ್ಟದಲ್ಲಿ ನಾವಿದ್ದೇವೆ. ಎಂಟು ವರ್ಷದ ಮಗು ಹೃದಯಾಘಾತದಿಂದ ಮರಣ ಹೊಂದುತ್ತದೆ ಎನ್ನುವ ವಿಷಯ ಇವತ್ತಿನ ದಿನದ ಅಸ್ಥಿರತೆಯನ್ನು ಸಾರುತ್ತಿದೆ. ಹೀಗಾಗಿ ಈ ಒಂದು ಜೀವನದಲ್ಲಿ ಬಾಲ್ಯದ ಹದಿನೈದು ವರ್ಷ ಮತ್ತು ವೃದ್ಧಾಪ್ಯದ ಹತ್ತು ವರ್ಷಗಳನ್ನು ತೆಗೆದು ಬಿಟ್ಟರೆ, ನಮ್ಮದು ಅಂತ ಉಳಿಯುವುದು ಜಾಸ್ತಿ ಅಂದರೂ 30ರಿಂದ 40 ವರ್ಷಅಷ್ಟೇ.
ಅದರಲ್ಲೂ ಬದುಕನ್ನು ಕಟ್ಟಿಕೊಳ್ಳಲು ಮಾಡುವ ಕಸರತ್ತಿನ ದಿನಗಳು, ಮಧ್ಯದಲ್ಲಿ ಜತೆಯಾಗುವ ಸೋಲುಗಳು ಹೀಗೆ ಎಲ್ಲವನ್ನೂ ಲೆಕ್ಕ ಹಾಕುತ್ತ ಹೋದರೆ ನಮ್ಮ ಖುಷಿಯ ದಿನಗಳು, ಗೆಲುವಿನ ದಿನಗಳು ಎಷ್ಟಿರಬಹುದು? ಇಷ್ಟೆ ಸಂಕಷ್ಟಗಳ ನಡುವೆ ಈ ಮನುಷ್ಯಪ್ರಾಣಿ ‘ನನ್ನ ಬಿಟ್ಟರಿಲ್ಲ’ ಎನ್ನುವ ಅಹಂಕಾರವನ್ನು ಹೇಗೆ ಬೆಳೆಸಿಕೊಳ್ಳುತ್ತಾನೆ.
ಸಾವಿಲ್ಲ ಎಂದಿದ್ದರೆ ಈ ಜಗತ್ತು ಹೇಗಿರುತಿತ್ತು? ಎನ್ನುವುದು ನನಗೆ ಅತ್ಯಂತ ಆಶ್ಚರ್ಯ ತರಿಸುವ ವಿಷಯಗಳಲ್ಲಿ ಒಂದು. ಒಮ್ಮೊಮ್ಮೆ ಅನ್ನಿಸುತ್ತೆ- ಈ ಮನುಷ್ಯಪ್ರಾಣಿಗೆ ಸಾವು ಎನ್ನುವುದು ಇರದಿದ್ದಿದ್ದರೆ ಇನ್ನು ಈ ಬದುಕು ಹೇಗಿರುತ್ತಿತ್ತೋ? ಅಮೆರಿಕದ ಡೊನಾಲ್ಡ್ ಟ್ರಂಪ್ ಇರಬಹುದು, ರಷ್ಯಾದ ಪುಟಿನ್ ಅಥವಾ ಉತ್ತರ ಕೊರಿಯಾದ ಕಿಮ್, ಚೀನಾದ ಜಿನ್‌ಪಿಂಗ್ ಇರಬಹುದು; ಇವರನ್ನೆ ನೋಡಿದ ತಕ್ಷಣ ‘ಇವರು ಅದೆಷ್ಟು ಬಲಿಷ್ಠರು.
ಇದನ್ನೂ ಓದಿ: Rangaswamy Mookanahalli Column: ಅದೇ ಭೂಮಿ, ಆಕಾಶ; ಬದುಕಿನಲ್ಲೆಷ್ಟು ವ್ಯತ್ಯಾಸ !
ದೇಶವನ್ನು, ಜಗತ್ತನ್ನು ತಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲರು’ ಎನ್ನಿಸುವುದು ಸಹಜ. ದರೆ ಅವರು ನಿಜಕ್ಕೂ ನಾವಂದುಕೊಂಡಷ್ಟು ಬಲಿಷ್ಠರೇ? ಎನ್ನುವ ಪ್ರಶ್ನೆ ಉದ್ಭವವಾದಾಗ, ಬಲಿಷ್ಠ, ಶ್ರೇಷ್ಠ ಇತ್ಯಾದಿಗಳನ್ನು ಪಕ್ಕಕ್ಕಿಡಿ, ಪಾಪ ಅವರಿಗೆ ನಮಗಿರುವಂಥ ಒಂದು ನೆಮ್ಮದಿಯ ಜೀವನ ಕೂಡ ಇಲ್ಲವಲ್ಲ ಎಂದು ಮರುಕ ಹುಟ್ಟದಿದ್ದರೆ ಕೇಳಿ.
ರಷ್ಯಾದ ಅಧ್ಯಕ್ಷ ಪುಟಿನ್ ಅವರು ಕೆಲವು ದಿನಗಳ ಹಿಂದೆ ಅಮೆರಿಕ ದೇಶಕ್ಕೆ ಭೇಟಿ ನೀಡಿದ್ದರು. ನಿಮಗೆ ಗೊತ್ತಿರುವಂತೆ ಜಗತ್ತು ಇಂದು ಹೊಸ ವ್ಯವಸ್ಥೆಗೆ ಮಗ್ಗುಲು ಬದಲಾಯಿಸಲು ಸಜ್ಜಾಗುತ್ತಿದೆ. ಇಂದಲ್ಲ ನಾಳೆ ಬೇರೆ ಶಕ್ತಿಗಳು ಈ ಜಗತ್ತಿನ ಚುಕ್ಕಾಣಿ ಹಿಡಿಯುತ್ತವೆ. ಅಮೆರಿಕ ಕುಸಿಯುತ್ತಿದೆ. ಆದರೆ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡಲು ಅಮೆರಿಕ ಸಿದ್ಧವಿಲ್ಲ. ಅದರ ಅಧ್ಯಕ್ಷ ಟ್ರಂಪ್ ಜಗತ್ತಿನ ಚುಕ್ಕಾಣಿಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವುದು ಮತ್ತು ಆ ಸಂಬಂಧ ಇಂದಿನ ದಿನಗಳಲ್ಲಿ ಮುಕ್ಕಾಲು ಪಾಲು ವೇಳೆಯನ್ನು ಮೀಟಿಂಗ್‌ಗಳಲ್ಲಿ ಕಳೆಯುತ್ತಿರುವುದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರ.
ಈ ನಿಟ್ಟಿನಲ್ಲಿ ಪುಟಿನ್ ಕೂಡ ಮಾತುಕತೆ ಸಲುವಾಗಿ ಅಮೆರಿಕಕ್ಕೆ ಹೋಗಿದ್ದರು. ಇಬ್ಬರೂ ಬಾಗದ ವ್ಯಕ್ತಿತ್ವ ಹೊಂದಿದವರು. ಹೀಗಾಗಿ ಅವರ ಮಾತುಕತೆಯ ಫಲಿತಾಂಶ ಶೂನ್ಯ ಎನ್ನುವುದು ಬೇರೆ ವಿಚಾರ. ಸುದ್ದಿಯಾದ ಆದರೆ ಹೆಚ್ಚು ಸುದ್ದಿಯಾಗದ ವಿಚಾರ ಪುಟಿನ್ ಅಮೆರಿಕದಲ್ಲಿ ಕತ್ತರಿಸಿ ಕೊಂಡ ಉಗುರು, ಸ್ನಾನ ಮಾಡಿದಾಗ ಬಿದ್ದು ಹೋಗಬಹುದಾದ ಕೂದಲು, ಆತ ವಿಸರ್ಜಿಸಿದ ಮಲ, ಹೀಗೆ ಆತನ ನಿತ್ಯ ಬದುಕಿನಲ್ಲಿ ಅತಿಸಾಮಾನ್ಯ ಎನ್ನುವಂಥ ಅಂಶಗಳನ್ನು ಕೂಡ ಅಮೆರಿಕದ ನೆಲದಲ್ಲಿ ಬಿಡುವುದಿಲ್ಲ.
ಎಲ್ಲವನ್ನೂ ಸಂಗ್ರಹಿಸಿ ವಾಪಸ್ಸು ರಷ್ಯಾಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ನಾಶಪಡಿಸು ತ್ತಾರೆ. ಇನ್ನು ಇವರು ಕುಡಿಯುವ ನೀರು, ತಿನ್ನುವ ಆಹಾರದ ತಪಾಸಣೆ ಇನ್ನೆಷ್ಟು ಜಟಿಲವಾಗಿರ ಬಹುದು? ಅಮೆರಿಕದಲ್ಲಿದ್ದರೂ ಅಥವಾ ರಷ್ಯಾದಲ್ಲಿದ್ದರೂ ಇವರ ನಿತ್ಯಕರ್ಮಗಳನ್ನು ಕೂಡ ಮಾನಿಟರ್ ಮಾಡುವ ತಂಡ ಇದ್ದೇ ಇರುತ್ತದೆ. ಜಾಗತಿಕ ರಾಜಕೀಯದ ಅತ್ಯಂತ ಪ್ರಬಲ ಪುಟಿನ್ ಅದೆಷ್ಟು ದುರ್ಬಲ ಎನ್ನಿಸಿಬಿಡುತ್ತದೆ.
ಪುಟಿನ್ ಕೇವಲ ಒಬ್ಬ ವ್ಯಕ್ತಿ. ಇವತ್ತಿಗೆ ಸುದ್ದಿಗೆ ಬಂದ ಕಾರಣ ಆತನನ್ನು ಮೊದಲು ಉದಾಹರಣೆ ಯನ್ನಾಗಿ ತೆಗೆದುಕೊಂಡೆ. ಉಳಿದಂತೆ ಇಂಥ ಬದುಕನ್ನು ಬದುಕುತ್ತಿರುವ ಜಾಗತಿಕ ನಾಯಕರ ಸಂಖ್ಯೆಗೇನೂ ಕೊರತೆಯಿಲ್ಲ.
ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್ 65 ವರ್ಷಗಳ ನಂತರ ಮೊದಲ ಬಾರಿಗೆ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರನ್ನ ಕೂಡ ಭೇಟಿ ಮಾಡುತ್ತಾರೆ. ಚೀನಾಗೆ ಪ್ರಯಾಣ ಮಾಡಿ ಅಲ್ಲಿನ ಅಧ್ಯಕ್ಷರನ್ನ ಕೂಡ ಸಂಧಿಸುತ್ತಾರೆ. “ಅಮೆರಿಕನ್ ಪ್ರೆಸಿಡೆಂಟ್ ಟ್ರಂಪ್ ಅವರೊಂದಿಗೆ ನನ್ನದು ವಿಶೇಷ ಸಂಬಂಧ" ಎಂದು ಹೇಳಿಕೆ ಕೂಡ ಕೊಡುತ್ತಾರೆ.
ಇಷ್ಟೆ ಹೇಳಲು ಕಾರಣ ಉತ್ತರ ಕೊರಿಯಾದ ಹಿಂದಿನ ಅಧ್ಯಕ್ಷರು, ಇಂದಿನ ಅಧ್ಯಕ್ಷರ ರೀತಿ ಪ್ರಯಾಣ ಮಾಡಿದ್ದು ಕಡಿಮೆ. ಇವರದು ಅತ್ಯಂತ ಅನುಮಾನದ ಸ್ವಭಾವ. ಸ್ವಲ್ಪ ಅಪನಂಬಿಕೆ ಬಂದರೆ ಸಾಕು ಸ್ವತಃ ಚಿಕಪ್ಪನನ್ನ ಕೂಡ ಕೊಲ್ಲಲು ಆಜ್ಞೆ ಹೊರಡಿಸುತ್ತಾರೆ.
‘ಆಫೀಸ್ 39’ನ ಸದ್ಯದ ಮುಖ್ಯಸ್ಥ ಕಿಮ್‌ನ ಸಹಪಾಠಿ-ಕಂ-ಕ್ಲೋಸ್ ಫ್ರೆಂಡ್. ಎಲ್ಲಿಯವರೆಗೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ. ವಿಚಿತ್ರ ಅನ್ನಿಸುತ್ತೆ, ಆದರೆ ನೋಡಿ ಈತ ತಿನ್ನುವ ಆಹಾರ ತಪಾಸಣೆಯಾಗುತ್ತದೆ. ಸಾಲದಕ್ಕೆ ಒಂದಿಬ್ಬರು ಆಪ್ತದಳದವರು ಅದನ್ನ ತಿಂದು ಎರಡು ತಾಸಾದ ಮೇಲೆ ಆ ಆಹಾರವನ್ನು ಕಿಮ್‌ಗೆ ನೀಡಲಾಗುತ್ತದೆ.
ಆತ ಹಾಕುವ ಚಪ್ಪಲಿ ಇರಬಹದು ಅಥವಾ ಶೂಸ್ ಇರಬಹುದು, ಅವುಗಳನ್ನ ತಪಾಸಣೆ ಮಾಡ ಲಾಗುತ್ತದೆ. ಆತನ ಕಾಲುಚೀಲವನ್ನು ಕೂಡ ಯಾರಾದರೊಬ್ಬರು ಮೊದಲು ಧರಿಸಿ ನಂತರ ಕಿಮ್‌ಗೆ ನೀಡುತ್ತಾರೆ. ನಿತ್ಯ ಸ್ನಾನದ ನಂತರ ಆತನ ಕೂದಲುಗಳ ಸಂಗ್ರಹಣೆ ಮಾಡುತ್ತಾರೆ. ಉಗುರು ಕಟ್ ಮಾಡಿದರೆ ಅದರ ಒಂದು ಸಣ್ಣ ತುಂಡು ಕೂಡ ಕೆಳಗೆ ಬೀಳದಂತೆ, ಬೇರೆಯವರಿಗೆ ಸಿಗದಂತೆ ನೋಡಿಕೊಳ್ಳಲಾಗುತ್ತದೆ.
ಈತನ ಉಗುಳು, ಮಲ, ಹೀಗೆ ಎಲ್ಲವನ್ನೂ ಸಂಗ್ರಹಿಸಿ ನಾಶಮಾಡಲಾಗುತ್ತದೆ. ಸರಿ, ಅವನ ಮನೆ ಯಲ್ಲಿ ಜನರನ್ನ ಈ ಕಾರ್ಯಕ್ಕೆ ಇಟ್ಟಿದ್ದಾನೆ ಎಂದುಕೊಂಡರೆ, ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ಕಿಮ್ ಜೊಂಗ್ ಉನ್ ಪ್ರವಾಸ ಮಾಡಿದ ಕಡೆಯೆಲ್ಲ ಇದೇ ಪ್ರೋಟೋಕಾಲ್ ಮುಂದುವರಿಯುತ್ತದೆ. ದಕ್ಷಿಣ ಕೊರಿಯಾದಲ್ಲಿ ಆತ ವಿಸರ್ಜನೆ ಮಾಡಿದರೂ ಅದನ್ನ ಸಂಗ್ರಹಿಸಿ ತಂದು ಉತ್ತರ ಕೊರಿಯಾ ದಲ್ಲಿ ನಾಶಮಾಡಲಾಗುತ್ತದೆ.
ನಮಗೆ ಇವೆಲ್ಲವೂ ‘ತಿಕ್ಕಲುತನ’ ಎನ್ನಿಸುತ್ತದೆ. ಆದರೆ ಅದು ಅವರಿಗೆ ಜೀವನ್ಮರಣದ ಪ್ರಶ್ನೆ. ಸಣ್ಣ ಕೂದಲು ಸಿಕ್ಕರೂ ಸಾಕು ಕಿಮ್‌ನ ದೈಹಿಕ, ಮಾನಸಿಕ ಆರೋಗ್ಯವನ್ನುಜಾಲಾಡಿ ಆತನನ್ನು ಹೇಗೆ ಮಣಿಸಬೇಕು ಎನ್ನುವ ‘ಡೀಟೇಲ್ಡ್ ಪ್ಲಾನ್’ ಸಿದ್ಧಮಾಡುವ ಖದೀಮರ ತಂಡ ಸದಾ ಸನ್ನದ್ಧ ವಾಗಿರುತ್ತದೆ. ದಕ್ಷಿಣ ಅಮೆರಿಕದ ಬಹಳಷ್ಟು ಆರೋಗ್ಯವಂತ ಪ್ರೆಸಿಡೆಂಟುಗಳು ಇದ್ದಕ್ಕಿದ್ದಂತೆ ಆರೋಗ್ಯ ಕೆಟ್ಟು ಕಡಿಮೆ ಸಮಯದಲ್ಲಿ ಮರಣ ಹೊಂದಿದ್ದ ಉದಾಹರಣೆ ನಮ್ಮ ಮುಂದಿದೆ. ವೆನಿಜುವೆಲಾದ ಅತ್ಯಂತ ಪ್ರಸಿದ್ಧ ಅಧ್ಯಕ್ಷರಾಗಿದ್ದ ಹುಗೊ ಚಾವೇಸ್ ಅವರು ಇದಕ್ಕೆ ದೊಡ್ಡ ಉದಾಹರಣೆ.
ಇಂಥ ಪ್ರೋಟೋಕಾಲ್‌ಗಳು ಕಿಮ್‌ಗೆ ಮಾತ್ರವಷ್ಟೇ ಅಂತ ಅಂದುಕೊಂಡಿದ್ದರೆ ಅದು ತಪ್ಪು. ಬ್ರಿಟನ್ ಮಹಾರಾಣಿ ಎಲಿಜಬೆತ್-2 ಕೂಡ ಮುಕ್ಕಾಲು ಪಾಲು ಇಂಥ ಕಟ್ಟುಪಾಡುಗಳ ಬಂಧಿ ಯಾಗಿದ್ದರು. ಈಕೆ ಆರೋಗ್ಯವಾಗಿzಗ ರಕ್ತವನ್ನ ತೆಗೆದು ಕಾಪಿಟ್ಟಿದ್ದಾರಂತೆ! ಈಕೆಗೆ ಅನಾರೋಗ್ಯ ಉಂಟಾದರೆ, ರಕ್ತದ ಅವಶ್ಯಕತೆ ಬಂದರೆ ಈಕೆಯ ರಕ್ತವನ್ನೇ ಉಪಯೋಗಿಸುತ್ತಾರಂತೆ! ಜತೆಗೆ ಮೇಲೆ ವಿವರಿಸಿದಂತೆ ಪುಟಿನ್ ಮತ್ತು ಕಿಮ್ ಶೈಲಿಯ ಬದುಕೇ ಎಲಿಜಬೆತ್ ಅವರದ್ದೂ ಆಗಿತ್ತು.
ಯಾವ ದೇಶಕ್ಕೆ ಹೋದರೂ ಆಕೆ ತಿಂದು ಉಳಿಸಿದ ಆಹಾರದಿಂದ ಮೊದಲ್ಗೊಂಡು, ವಿಸರ್ಜಿಸಿದ ಮಲದವರೆಗೆ ಎಲ್ಲವನ್ನೂ ಸಂಗ್ರಹಿಸಿ ಅದನ್ನು ಬ್ರಿಟಿಷ್ ನೆಲಕ್ಕೆ ತಂದು ಅಲ್ಲಿ ಅವುಗಳನ್ನು ನಾಶ ಪಡಿಸಲಾಗುತ್ತಿತ್ತು. ಆಚಾರ್ಯ ಚಾಣಕ್ಯರ ಕಾಲದಿಂದಲೂ ಇದು ನಡೆದು ಬಂದಿದೆ. ಇವತ್ತಿನಷ್ಟು ಜಟಿಲವಲ್ಲದಿದ್ದರೂ, ತಿನ್ನುವ ಆಹಾರದ ತಪಾಸಣೆ ಆಗದೆ, ಬೇರೊಬ್ಬರು ಆ ಆಹಾರವನ್ನು ತಿಂದು ಒಂದೆರಡು ತಾಸು ಬದುಕುಳಿದ ಮೇಲಷ್ಟೇ ಅದನ್ನು ರಾಜರು ಸೇವಿಸುತ್ತಿದ್ದರು.
ವ್ಯಕ್ತಿ ಶಕ್ತಿಶಾಲಿ ಆದಂತೆ ಅದೆಷ್ಟು ಅಶಕ್ತ! ಪ್ರಬಲನಾದಷ್ಟೂ ಅದೆಷ್ಟು ದುರ್ಬಲ! ಇಷ್ಟೆ ಎಚ್ಚರಿಕೆ ತೆಗೆದುಕೊಂಡು ಕೂಡ ಕಿಮ್ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಆತ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಕಿಮ್ ಇಲ್ ಸುಂಗ್ ಉತ್ತರ ಕೊರಿಯಾದ ಸ್ಥಾಪಕ. ಆತನ ಹುಟ್ಟುಹಬ್ಬ 15 ಏಪ್ರಿಲ್ ಅನ್ನು ದೇಶದ ಬಹುಮುಖ್ಯ ರಜಾದಿನವೆಂದು ಘೋಷಿಸ ಲಾಗಿದೆ. ಈ ದಿನದಲ್ಲಿ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಿಮ್ ಜೊಂಗ್ ಉನ್ ಈ ಬಾರಿ ಕಾಣಿಸಿಕೊಂಡಿಲ್ಲ.
ಜಗತ್ತಿನ ಸರ್ವಾಧಿಕಾರಿಗಳನ್ನ ನೋಡಿದಾಗ ಈ ರೀತಿಯ ಮುಚ್ಚಿಡುವಿಕೆ ಅವರ ತೀವ್ರ ಅನಾ ರೋಗ್ಯದ ಸಂಕೇತ ಎನ್ನುವುದು ತಿಳಿದುಬರುತ್ತದೆ. ಮನುಷ್ಯ ಪ್ರಬಲನಾದಷ್ಟೂ ಅದೆಷ್ಟು ದುರ್ಬಲ ಎನ್ನುವುದನ್ನು ಸರ್ವಾಧಿಕಾರಿಗಳ ಕೊನೆಯ ದಿನಗಳು ಹೇಳುತ್ತವೆ. ಅಧಿಕಾರ, ಅಧಿಕಾರಿ, ಸಂಪತ್ತು ಎಲ್ಲವನ್ನೂ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ ಮತ್ತು ತಮ್ಮ ದಿನಗಳಲ್ಲಿ ಎಲ್ಲರಿಗೂ ಸಿಂಹಸ್ವಪ್ನವಾಗಿದ್ದ ಸರ್ವಾಧಿಕಾರಿಗಳು ಆಂತರ್ಯದಲ್ಲಿ ಬಹಳಷ್ಟು ದುರ್ಬಲರಾಗಿ ದ್ದರು ಎನ್ನುವುದು ನಮಗೀಗ ಗೊತ್ತಾಗಿದೆ.
ತಮ್ಮಲ್ಲಿರುವ ಕೀಳರಿಮೆಯನ್ನು ಮುಚ್ಚಿಡಲು ತಾವು ಎಲ್ಲರಿಗಿಂತ ಶ್ರೇಷ್ಠ ಎಂದು ತೋರಿಸಿಕೊಳ್ಳುವ ಉಮೇದು ಅವರಿಂದ ಎಷ್ಟೆ ನಾಟಕ ಮಾಡಿಸಿದೆ ಎನ್ನುವುದೇ ಅಚ್ಚರಿ. ಇವೆಲ್ಲಕ್ಕಿಂತ ನನ್ನನ್ನು ಹೆಚ್ಚು ಚಿಂತೆಗೀಡುಮಾಡುವುದು ಇಂಥ ಕೆಲವು ವ್ಯಕ್ತಿಗಳು ತೆಗೆದುಕೊಳ್ಳುವ ನಿರ್ಧಾರಗಳು ಜಗತ್ತಿನ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದು.
ಒಬ್ಬ ವ್ಯಕ್ತಿ ಬೇರೆಯವರ ಮಾತುಗಳನ್ನು ಕೇಳದೆ ನನಗೆ ಅನ್ನಿಸಿದ್ದೇ ಸತ್ಯ ಎನ್ನುವ ಧೋರಣೆ ತಳೆಯುವುದರಿಂದ ಜಗತ್ತಿನ ಕೋಟ್ಯಂತರ ಜನರ ಬದುಕಿನ ಮೇಲೆ ಅದು ಬೀರುವ ಪರಿಣಾಮ, ಉಂಟಾಗುವ ಸಾವು-ನೋವುಗಳನ್ನು ನೆನೆದರೆ ಬೇಸರವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್ ಜಗತ್ತಿಗೆ ಕಂಟಕ. ಆತನ ಬಳಿ ಸೇವೆ ಸಲ್ಲಿಸಿದ ಸಲಹೆಗಾರರೇ, “ಆತ ಯಾರ ಮಾತನ್ನೂ ಕೇಳುವು ದಿಲ್ಲ, ನಾವು ನೀಡುವ ಬರಹಗಳನ್ನು, ಮಾಹಿತಿಗಳನ್ನು ಆತ ಕಣ್ಣೆತ್ತಿಯೂ ನೋಡುವುದಿಲ್ಲ.
ಆತನಿಗೆ ಆ ಸಮಯಕ್ಕೆ ಸರಿ ಎನ್ನಿಸಿದ್ದು ಮಾತ್ರ ಮಾಡುತ್ತಾನೆ" ಎನ್ನುವ ಹೇಳಿಕೆಯನ್ನು ನೀಡಿ ದ್ದಾರೆ. ಯಾರೋ ಒಬ್ಬ ವ್ಯಕ್ತಿ ನಮ್ಮೆಲ್ಲರ ಹಣೆಬರಹವನ್ನು ಬದಲಿಸುವ ಶಕ್ತಿ ಹೊಂದುವ ವ್ಯವಸ್ಥೆ ಯನ್ನು ನಾವೇಕೆ ಕಟ್ಟಿದ್ದೇವೆ? ನಾವೇಕೆ ಒಪ್ಪಿಕೊಂಡಿದ್ದೇವೆ? ಇದ್ಯಾವ ಸೀಮೆ ಅಭಿವೃದ್ಧಿ? ಆರ್ಥಿಕ ಕುಸಿತವಾಗುತ್ತದೆ ಎನ್ನುವ ಕಾರಣಕ್ಕೆ ನಾವು ಇಂಥ ವ್ಯಕ್ತಿಯನ್ನು ಒಪ್ಪಿಕೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಒಪ್ಪಿಕೊಳ್ಳಲೂಬಾರದು. ಈ ನಿಟ್ಟಿನಲ್ಲಿ ನೋಡಿದಾಗ ಭಾರತವು ಟ್ರಂಪ್‌ಗೆ ಸರಿಯಾದ ಉತ್ತರವನ್ನು ನೀಡುತ್ತಿದೆ.
ಭೂಮಿಗೆ ಬಂದ ದಿನದಿಂದ ಸಾವಿಗೆ ‘ಕೌಂಟ್ ಡೌನ್’ ಶುರುವಾಗಿರುತ್ತೆ. ಪ್ರತಿ ದಿನವೂ ನಾವು ಸಾವಿಗೆ ಇನ್ನೊಂದು ಹೆಜ್ಜೆ ಹತ್ತಿರವಾದಂತೆಯೇ ಅಲ್ಲವೇ? ಸರಿಯಾದ ರೀತಿಯಲ್ಲಿ ನಡೆದುಕೊಂಡರೆ ಹೀಗೆ ಅನ್ನ ತಿನ್ನುವ ಮುನ್ನ ಯೋಚಿಸುವ, ತಿಂದ ಅನ್ನವನ್ನ ಜೀರ್ಣಿಸಿಕೊಂಡು ನಂತರ ವಿಸರ್ಜಿಸಿದಾಗ ಅದನ್ನ ಕೂಡ ಪ್ಯಾಕ್ ಮಾಡಿ ತನ್ನ ದೇಶಕ್ಕೆ ತೆಗೆದುಕೊಂಡು ಹೋಗುವ ‘ಕರ್ಮ’ ಇರುತ್ತಿರಲಿಲ್ಲ.
ಆದರೆ ಕೆಲವೇ ಕೆಲವು ಮನುಷ್ಯರ ಮಹತ್ವಾಕಾಂಕ್ಷೆಯು ವಿವೇಚನೆಯನ್ನು ಮೂಲೆಗುಂಪು ಮಾಡು ತ್ತದೆ. ಒಬ್ಬನ ತಪ್ಪಿಗೆ ಜಗತ್ತು ಬೆಲೆ ತರುವ ಮಟ್ಟಕ್ಕೆ ಹೋಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಕಟ್ಟಿಕೊಂಡಿರುವ ವ್ಯವಸ್ಥೆ ಅದೆಷ್ಟು ದುರ್ಬಲ ಎನ್ನುವುದನ್ನು ಇಂದಿನ ಸನ್ನಿವೇಶ ಜಗತ್ತಿಗೆ ಸಾರಿ ಹೇಳುತ್ತಿದೆ. ಕೇಳುವ ವ್ಯವಧಾನ ಮತ್ತು ಅದನ್ನು ಬದಲಿಸಿಕೊಳ್ಳುವ ಜಾಣ್ಮೆ, ನೈತಿಕತೆ ಮತ್ತು ಸಂಯಮ ನಮಗಿದೆಯೇ ಎನ್ನುವುದನ್ನು ಪ್ರತಿ ದೇಶವೂ ವಿಮರ್ಶಿಸಿಕೊಳ್ಳಬೇಕು.
ಇಂದಿನ ‘ಖೊಟ್ಟಿ ವ್ಯವಸ್ಥೆ’ ಬದಲಾಗಿ ಹೊಸ ‘ವಿಶ್ವ ವ್ಯವಸ್ಥೆ’ ಜಾರಿಗೆ ಬರಬೇಕು. ಕೇವಲ ‘ಅಧಿಕಾರ’ ಬದಲಾಗಿ ‘ವ್ಯವಸ್ಥೆ’ ಹಾಗೇ ಉಳಿದುಕೊಂಡರೆ ಅದರಿಂದ ಯಾವ ಪ್ರಯೋಜನವೂ ಇಲ್ಲ...