ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ
ಪಕ್ಷದ ನಾಯಕರ ನಡುವಿನ ತಿಕ್ಕಾಟವಿದ್ದರೂ, ಇದರಲ್ಲಿ ಅತಿಹೆಚ್ಚು ಸಮಸ್ಯೆಗೆ ಒಳಗಾಗಿದ್ದು ಮಾತ್ರ ಸಂಘಟನೆ. ಏಕೆಂದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇತ್ತ ಪಕ್ಷವನ್ನೂ ಬಿಟ್ಟುಕೊಡಲಾಗದೇ, ಅತ್ತ ನಾಯಕರನ್ನೂ ಬಿಟ್ಟುಕೊಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಉದಾಹರಣೆಗೆ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ ಅಥವಾ ಜಿ.ಎಂ.ಸಿದ್ದೇಶ್ವರ ಅವರೊಂದಿಗೆ ದಶಕಗಳ ಕಾಲ ಗುರುತಿಸಿಕೊಂಡಿರುವ ಪಕ್ಷದ ಕಾರ್ಯಕರ್ತರು ಈಗ ರಾಜ್ಯಾಧ್ಯಕ್ಷ ಹಾಗೂ ತಮ್ಮ ನಾಯಕನ ನಡುವೆ ಭಿನ್ನಮತ ಉಂಟಾದ ಮಾತ್ರಕ್ಕೆ ಇತ್ತ ನಾಯಕರನ್ನು ಬಿಡಲಾಗದೇ, ಅತ್ತ ಪಕ್ಷವನ್ನೂ ಬಿಡಲಾಗದ ಸ್ಥಿತಿಗೆ ಬಂದು ನಿಂತಿದ್ದಾರೆ.