ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆ: ಪ್ರತಿಷ್ಠಿತ ಪೋಬ್ಸ್ ಪ್ರಭಾವಿ ಸೆಲೆಬ್ರಿಟಿ ಪಟ್ಟಿಯಲ್ಲಿ ಭಾನು ಮುಷ್ತಾಕ್, ದೀಪಾಭಾಸ್ತಿ, ರಿಷಬ್ ಶೆಟ್ಟಿಗೆ ಸ್ಥಾನ
2025ರ ಜನವರಿಯಿಂದ 2026ರ ಮಾ.31 ರವರೆಗೆ ಭಾರತೀಯರ ಮೇಲೆ ಗಣನೀಯ ಪ್ರಭಾವ ಬೀರಿದ 100 ಮಂದಿಯಲ್ಲಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಕರ್ನಾಟಕದಿಂದ ಮೂವರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಬಾನು ಮುಷ್ತಾಕ್ ಅವರ ಎದೆಯ ಹಣತೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ವಿಶ್ವದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಬೂಕರ್‌ರನ್ನು 2025ನೇ ಸಾಲಿಗೆ ಪಡೆದುಕೊಂಡಿದ್ದ ದೀಪಾಭಾಸ್ತಿ ಈ ಮೂಲಕ ಮತ್ತೊಂದು ಸಾಧನೆಗೆ ಕಾರಣರಾಗಿದ್ದಾರೆ.
-
ಅನಿಲ್ ಹೆಚ್.ಟಿ.
ಮಡಿಕೇರಿ: ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತೀಯರ ಮೇಲೆ ಗಣನೀಯ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರನ್ನು ಪ್ರತಿಷ್ಠಿತ ಪೋರ್ಬ್ಸ್ ಸಂಸ್ಥೆ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕೊಡಗಿನ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತರಾದ ದೀಪಾಭಾಸ್ತಿ(Deepa Bhasti), ಸಾಹಿತಿ ಬಾನು ಮುಷ್ತಾಕ್(Banu Mustaq), ಕಾಂತಾರ ಖ್ಯಾತಿಯ ನಿರ್ದೇಶಕ, ನಟ ರಿಷಬ್ ಶೆಟ್ಟಿ(Rishab Shetty) ಹೆಸರು ಇರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ಸಂಗತಿ.
2025ರ ಜನವರಿಯಿಂದ 2026ರ ಮಾ.31 ರವರೆಗೆ ಭಾರತೀಯರ ಮೇಲೆ ಗಣನೀಯ ಪ್ರಭಾವ ಬೀರಿದ 100 ಮಂದಿಯಲ್ಲಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಕರ್ನಾಟಕದಿಂದ ಮೂವರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಬಾನು ಮುಷ್ತಾಕ್ ಅವರ ಎದೆಯ ಹಣತೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ವಿಶ್ವದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಬೂಕರ್‌ರನ್ನು 2025ನೇ ಸಾಲಿಗೆ ಪಡೆದುಕೊಂಡಿದ್ದ ದೀಪಾಭಾಸ್ತಿ ಈ ಮೂಲಕ ಮತ್ತೊಂದು ಸಾಧನೆಗೆ ಕಾರಣರಾಗಿದ್ದಾರೆ.
ಗಮನಾರ್ಹ ಎಂದರೆ ಕರ್ನಾಟಕದಿಂದ ಆಯ್ಕೆಯಾದ ದೀಪಾ ಬಾಸ್ತಿ ಮತ್ತು ಬಾನು ಮುಷ್ತಾಕ್ ಇಬ್ಬರೂ ಸಾಹಿತಿಗಳೇ. ಇಬ್ಬರಿಗೆ ಸಂದ ಬೂಕರ್ ಪ್ರಶಸ್ತಿ ಮತ್ತು ಆ ಪ್ರಶಸ್ತಿ ಬರಲು ಕಾರಣವಾದ ‘ದಿ ಹಾರ್ಟ್ ಲ್ಯಾಂಪ್’ ಕೃತಿಯಿಂದಾಗಿಯೇ ಈ ಇಬ್ಬರೂ ಸಾಹಿತಿಗಳು ಭಾರತದಲ್ಲಿ ಪ್ರಭಾವಿಗಳಾಗಿರು ವುದು. ಬೂಕರ್ ಪ್ರಶಸ್ತಿಯನ್ನು ಅನುವಾದ ಸಾಹಿತ್ಯ ಕೃತಿಗಾಗಿ ಪಡೆದ ಮೊದಲ ಲೇಖಕಿ ಎಂಬ ಕೀರ್ತಿಯೂ ದೀಪಾಭಾಸ್ತಿಗೆ ಸಂದಿದೆ.
ಇದನ್ನೂ ಓದಿ: Rishab Shetty: ನಾನು ನಿಮ್ಮ ಜತೆಗಿದ್ದೇನೆ ಯಶ್ ಸರ್; ʼಟಾಕ್ಸಿಕ್ʼ ಬಗ್ಗೆ ರಿಷಬ್ ಶೆಟ್ಟಿ ಮೆಚ್ಚುಗೆಯ ಪೋಸ್ಟ್
ಉಳಿದಂತ ಸಾಹಿತ್ಯ ಲೋಕದಲ್ಲಿ ಖ್ಯಾತಿವೆತ್ತ ಅರುಂಧತಿ ರಾಯ್, ಕಿರಣ್ ದೇಸಾಯಿ ಸಿನಿಮಾ ರಂಗದಲ್ಲಿ ಶಾರೂಖ್ ಖಾನ್, ರಣವೀರ್ ಕಪೂರ್, ಅಲ್ಲು ಅರ್ಜುನ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಮೋಹನ್ ಲಾಲ್, ಮಮ್ಮೂಟಿ, ಗಾಯಕಿ ಸುನಿಧಿ ಚೌವಾಣ್, ಕ್ರೀಡಾತಾರ ನೀರಜ್ ಛೋಪ್ರಾ, ಸೇರಿದಂತೆ 100 ಮಂದಿಯನ್ನು ವಿವಿಧ ಕ್ಷೇತ್ರಗಳಿಗೆ ಸೇರಿದಂತ ಆಯ್ಕೆ ಮಾಡಿಕೊಳ್ಳ ಲಾಗಿದೆ.
ಪೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಭಾರತೀಯ ಗಣ್ಯರ ಪಾಲಿಗೆ ಪ್ರತಿಷ್ಠೆಯಾಗಿದೆ. ಪರಿಣಿತರ ಆಯ್ಕಾ ಸಮಿತಿ ಪ್ರತಿ ವರ್ಷ ಭಾರತೀಯರ ಮೇಲೆ ಪ್ರಭಾವ ಬೀರಿದವರ ಹೆಸರನ್ನು ಪ್ರಕಟಿಸುತ್ತಾ ಬರುತ್ತಿದೆ.
ನನಗೆ ತೃಪ್ತಿ ಇದೆ: ದೀಪಾ ಭಾಸ್ತಿ ಪ್ರತಿಷ್ಠಿತ ಪೋರ್ಬ್ಸ್ ಪಟ್ಟಿಯಲ್ಲಿ ನನ್ನ ಹೆಸರು ಬಂದಿದ್ದು, ಕನ್ನಡ ಸಾಹಿತ್ಯ ಪ್ತಿಸಾರಸ್ವತ ಲೋಕಕ್ಕೆ ಹೆಮ್ಮೆ. ಸಾಕಷ್ಟು ಪ್ರಭಾವಿಗಳ ನಡುವೇ ನನ್ನ ಹೆಸರನ್ನು ಆಯ್ಕೆ ಮಾಡಿರುವುದು ಮತ್ತಷ್ಟು ಸಂಭ್ರಮಕ್ಕೆ ಕಾರಣವಾಗಿದೆ. ದೊಡ್ಡ ಗೌರವವೂ ಎಂದು ದೀಪಾಭಾಸ್ತಿ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕವನ್ನು ಈ ಮೂಲಕ ಗುರುತಿಸಿರುವುದು ಒಳ್ಳೆಯ ಬೆಳವಣಿಗೆ. ಕನ್ನಡದ ಲೇಖಕಿಯರ ಹೆಸರು ಈ ಪ್ರತಿಷ್ಠಿತ ಪಟ್ಟಿಯಲ್ಲಿದ್ದರೆ ಅದು ಕನ್ನಡಕ್ಕೆ ದೊರೆತೆ ಸೂಕ್ತ ಮಾನ್ಯತೆ ಎಂದೇ ಭಾವಿಸಿದ್ದೇನೆ ಎಂದೂ ದೀಪಾಬಾಸ್ತಿ ವಿಶ್ವವಾಣಿಯೊಂದಿಗೆ ಪ್ರತಿಕ್ರಿಯಿಸಿದರು. ಪ್ರತಿಷ್ಠಿತ ಏಷ್ಯಾ ಕ್ರಿಯೇಟಿವ್ ರೈಟಿಂಗ್ ಪ್ರೋಗ್ರಾಮ್‌ನಲ್ಲಿ ಪಾಲ್ಗೊಳ್ಳಲು ಶೀಘ್ರದಲ್ಲಿ ದೀಪಾ ಭಾಸ್ತಿ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ.