ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಸ್ತರಣೆ ಆಗಲಿದೆ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ

2029ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮಂತ್ರಿಗಳಾಗಿದ್ದವರು ಸಂಸತ್‌ಗೆ ಕರ್ನಾಟಕ ದಿಂದ ಎಷ್ಟು ಮಂದಿ ಸಂಸದ ರನ್ನು ಗೆಲ್ಲಿಸಿ ಕಳುಹಿಸುವ ಸಾಮರ್ಥ್ಯ ಹೊಂದಿ ರುವವರನ್ನು ಆಯ್ಕೆ ಮಾಡುವ ಮಹತ್ವದ ಕಾರ್ಯ ವಾಗಿದೆ. ಹೀಗಾಗಿ ಈ ಬಾರಿ ಸಂಪುಟ ಸೇರುವವರು ಕನಿಷ್ಟ 3 ರಿಂದ 4 ಮಂದಿ ಶಾಸಕರನ್ನು ತಮ್ಮ ಜಿಲ್ಲೆಯಿಂದ ಆರಿಸಿ ಕಳುಹಿಸಿಕೊಡುವಂಥವರಿಗೆ ಅವಕಾಶ ನೀಡಬೇಕೆನ್ನುವ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆನ್ನುವ ಗಂಭೀರ ಚಿಂತನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನಲಾಗಿದೆ.

ವಿಸ್ತರಣೆ ಆಗಲಿದೆ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ

-

Profile
Ashok Nayak Jul 13, 2026 7:42 AM

ಸಚಿವ ಸ್ಥಾನದಿಂದ ವಂಚಿತರಾದವರಿಂದ ಅಕ್ರೋಶ ಸಾಧ್ಯತೆ, ಪಕ್ಷ, ರಾಜಕಾರಣ ತ್ಯಜಿಸುವವರಿಗೆ ಆದ್ಯತೆ

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಇಡೀ ರಾಜ್ಯವೇ ಎದುರು ನೋಡುತ್ತಿರುವ ಸಚಿವ ಸಂಪುಟ ವಿಸ್ತರಣೆ ಇನ್ನೂ ಕೆಲಕಾಲ ವಿಳಂಬ ವಾಗುವ ಸಾಧ್ಯತೆ ಕಾಣುತ್ತಿದೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ಇನ್ನೂ 20 ಮಂತ್ರಿಗಳ ಸ್ಥಾನ ಖಾಲಿಯಾಗಿದ್ದು, ಆ ಸ್ಥಾನಗಳಿಗೆ 45ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿ ದ್ದಾರೆ.

ಅವರಲ್ಲಿ ಯಾರಿಗೆ ಅವಕಾಶ ನೀಡಬೇಕೆನ್ನುವುದು ಪಕ್ಷದ ನಾಯಕರಿಗೆ ಮತ್ತು ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ. ಈ ಬಾರಿ ಸಂಪುಟ ವಿಸ್ತರಣೆ ಬರೀ ಶಾಸಕರಿಗೆ ಮಂತ್ರಿಗಿರಿ ಹಂಚಿಕೆ ಮಾಡುವ ಕಾರ್ಯ ವಾಗಿರದೆ, ರಾಜ್ಯದ ಮುಂದಿನ ರಾಜಕಾರಣವನ್ನು ನಿರ್ಧರಿಸುವ ಮಹತ್ವದ ಕಾರ್ಯವಾಗಿ ಪರಿಣಿಸಿದೆ ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಹೇಳಿದ್ದಾರೆ. ಈ ಸಂಪುಟ ವಿಸ್ತರಣೆ ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸುಸಜ್ಜಿತ ತಂಡ ರಚಿಸುವ ಪ್ರಕ್ರಿಯೆ ಆಗಿರುತ್ತದೆ.

2029ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮಂತ್ರಿಗಳಾಗಿದ್ದವರು ಸಂಸತ್‌ಗೆ ಕರ್ನಾಟಕ ದಿಂದ ಎಷ್ಟು ಮಂದಿ ಸಂಸದ ರನ್ನು ಗೆಲ್ಲಿಸಿ ಕಳುಹಿಸುವ ಸಾಮರ್ಥ್ಯ ಹೊಂದಿ ರುವವರನ್ನು ಆಯ್ಕೆ ಮಾಡುವ ಮಹತ್ವದ ಕಾರ್ಯ ವಾಗಿದೆ. ಹೀಗಾಗಿ ಈ ಬಾರಿ ಸಂಪುಟ ಸೇರುವವರು ಕನಿಷ್ಟ 3 ರಿಂದ 4 ಮಂದಿ ಶಾಸಕರನ್ನು ತಮ್ಮ ಜಿಲ್ಲೆಯಿಂದ ಆರಿಸಿ ಕಳುಹಿಸಿಕೊಡುವಂಥವರಿಗೆ ಅವಕಾಶ ನೀಡಬೇಕೆನ್ನುವ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆನ್ನುವ ಗಂಭೀರ ಚಿಂತನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನಲಾಗಿದೆ.

ಇದನ್ನೂ ಓದಿ: Cabinet expansion: ಮುಂದಿನ ವಾರವೇ ಮಂತ್ರಿಮಂಡಲ ವಿಸ್ತರಣೆ

ಒಂದೊಮ್ಮೆ ಸಂಪುಟ ವಿಸ್ತರಣೆಯನ್ನು ಜಾತಿ, ಜಿಲ್ಲಾವಾರು, ಪ್ರಾದೇಶಿಕವಾರು ಹಾಗೂ ಭಾಷಾ, ಧರ್ಮದ ಲೆಕ್ಕದಲ್ಲಷ್ಟೇ ಮಾಡಿ ಬಿಟ್ಟರೆ ಮಂತ್ರಿಯಾ ದವರು ಇನ್ನೂ ಒಂದೂವರೆ ವರ್ಷಗಳ ಕಾಲ ಸರಕಾರದಲ್ಲಿ ಅಧಿಕಾರ ಅನುಭವಿಸಿ ಕೈ ಚೆಲ್ಲುತ್ತಾರೆ ಎನ್ನುವುದು ಪಕ್ಷದ ಹಿರಿಯರ ದಿಗಿಲು ಎನ್ನಲಾಗಿದೆ.

ಮುಂದಿನ ಐದು ತಿಂಗಳೇ ನಿರ್ಣಾಯಕ: ವಾಸ್ತವದಲ್ಲಿ ಸಂಪುಟ ವಿಸ್ತರಣೆಯಿಂದ ಡಿಕೆಶಿ ನೇತೃತ್ವದ ಸರಕಾರ ಮುಂದಿನ ಐದಾರು ತಿಂಗಳು ತೀರಾ ನಿರ್ಣಾಯಕ ಎನ್ನಲಾಗಿದೆ. ಈ ಅವಧಿ ಯಲ್ಲಿ ಡಿಕೆಶಿ ನೇತೃತ್ವದ ಸರಕಾರ ರಾಜ್ಯವನ್ನು ಹೇಗೆ ಮುನ್ನೆಡೆಸಿ ಕೊಂಡು ಹೋಗುತ್ತದೆ. ಅದರಿಂದ ಮುಂದೆ ಕಾಂಗ್ರೆಸ್‌ಗೆ ಹೇಗೆ ಲಾಭವಾಗಲಿದೆ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಪಕ್ಷದ ಹಿರಿಯರು ವಿಶ್ಲೇಷಿಸುತ್ತಿದ್ದಾರೆ. ಅಂದರೆ ಸಂಪುಟ ವಿಸ್ತರಣೆ ನಂತರ ಕೆಲವು ಅಸಮಾಧಾನ ಗಳು ತಲೆ ಎತ್ತಬ ಹುದು, ಏಕೆಂದರೆ ಸುಮಾರು 15ಕ್ಕೂ ಹೆಚ್ಚು ಶಾಸಕರು ಈ ಬಾರಿ ಮಂತ್ರಿಯಾಗ ದಿದ್ದರೆ ಅವರಲ್ಲಿ ಕೆಲವರು ರಾಜಕೀಯ ನಿವೃತ್ತಿಯಾಗುವ ಸಾಧ್ಯತೆ ಇದೆ.

ಅನೇಕರು ಚುನಾವಣೆಯಲ್ಲಿ ಸ್ಪರ್ಧಿಸಲಾಗದ ಸ್ಥಿತಿಗೆ ಹೋಗುವ ಸಾಧ್ಯತೆ ಇದೆ. ಇನ್ನೂ ಕೆಲವರು ಪಕ್ಷವನ್ನೇ ತ್ಯಜಿಸುವ ಹಂತಕ್ಕೂ ಬೆದರಿಕೆ ಹಾಕ ಬಹುದು ಎನ್ನುತ್ತವೆ ಮೂಲಗಳು. ಇದೆಲ್ಲವನ್ನೂ ಹೊಸ ಸಂಪುಟದಲ್ಲಿರುವವರು ಸರಿಪಡಿಸಿ, ಆಕ್ರೋಶಗಳನ್ನು ಸಹಿಸಿಕೊಂಡು ಹೋಗಿ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊಡೆತದಲ್ಲಿ ಯಶಸ್ವಿಯಾಗಬೇಕಾದ ಸವಾಲುಗಳು ಎದುರಿಸಬೇಕಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಹಾಗಾದರೆ ವಿಸ್ತರಣೆ ಪರಿಸ್ಥಿತಿ ಹೇಗಿದೆ?

ಈ ಬಾರಿ ಸಂಪುಟ ವಿಸ್ತರಣೆ ಆಷಾಡ ಮಾಸದಲ್ಲೇ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಅನೇಕ ಹಿರಿಯ ಶಾಸಕರು ಮತ್ತು ಪ್ರಬಲ ಆಕಾಂಕ್ಷಿಗಳು ಮಂತ್ರಿಸ್ಥಾನ ವಂಚಿತವಾಗಿ ಪಕ್ಷದ ಹಾಗೂ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುವ ಸಾಧ್ಯತೆಗಳು ದಟ್ಟವಾಗಿದೆ. ಕೆಲವು ಪ್ರಬಲ ಆಕಾಂಕ್ಷಿಗಳು ಮುಂದಿನ ಚುನಾವಣೆ ವೇಳೆಗೆ ಪಕ್ಷ ತ್ಯಜಿಸಿದರೂ ಅಚ್ಚರಿ ಇಲ್ಲ ಎನ್ನುವ ಹಂತಕ್ಕೆ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಮಂತ್ರಿಸ್ಥಾನ ಹಂಚಿಕೆ ವಿಚಾರ ದಲ್ಲಿ ಅಲ್ಪ ಸಂಖ್ಯಾತರಲ್ಲಿ ಬೆಂಗಳೂರಿನ ಶಾಸಕ ಜಮೀರ್ ಅಹಮ್ಮದ್ ಖಾನ್, ಕಲಬುರ್ಗಿಯ ಕನಿಜಾ ಫಾತೀಮಾ ಅವರ ಬದಲು ದಕ್ಷಿಣ ಭಾಗದಲ್ಲಿ ಮೈಸೂರಿನ ತನ್ವೀರ್ ಸೇಠ್ ಹಾಗೂ ಉತ್ತರ ಕರ್ನಾ ಟಕದಲ್ಲಿ ಹಾವೇರಿಯ ಸಲೀಂ ಅಹಮ್ಮದ್ ಅವರಿಗೆ ಅವಕಾಶ ನೀಡ ಬೇಕೆನ್ನುವ ಚಿಂತನೆಯಲ್ಲಿದೆ ಎನ್ನಲಾಗಿದೆ.

ಹಾಗೆಯೇ ಪರಿಶಿಷ್ಟ ಪಂಗಡದಲ್ಲಿ ಬಳ್ಳಾರಿಯಿಂದ ನಾಗೇಂದ್ರ ಬದಲು ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅಥವಾ ಚಿತ್ರದುರ್ಗದಲ್ಲಿ ರಘುಮೂರ್ತಿ ಅವರಿಗೆ ಅವಕಾಶ ನೀಡಬೇಕೆನ್ನುವ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ಉಳಿದಂತೆ ಪ್ರಬಲ ಆಕಾಂಕ್ಷಿಗಳಾಗಿರುವ ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ಗೋಪಾಲಕೃಷ್ಣ ಬೇಳೂರು, ನಾಗೇಂದ್ರ, ಗುಬ್ಬಿ ವಾಸು, ನಂಜೇಗೌಡ, ವೈ.ಎಸ್. ನಾರಾಯಣ ಸ್ವಾಮಿ, ಜಮೀರ್ ಅಹಮ್ಮದ್ ಖಾನ್, ರಮೇಶ್ ಬಂಡಿಸಿದ್ದೇ ಗೌಡ ಅವರು ಸಂಪುಟದಲ್ಲಿ ಅವಕಾಶ ಲಭಿಸದೇ ಇದ್ದರೆ ತೀವ್ರ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.