Gold found in Lakkundi : ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ಬೆಲೆ ರೂ.8 ಕೋಟಿ
ಎರಡು ತಿಂಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿ ಸಕತ್ ಸದ್ದು ಮಾಡಿತ್ತು. ಇಲ್ಲಿ ಪ್ರಜ್ವಲ್ ರಿತ್ತಿ ಅವರ ಮನೆ ನಿರ್ಮಾಣ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಚಿನ್ನದ ನಿಧಿ ಸಿಕ್ಕಿತ್ತು. ಅಂದಿನಿಂದ ಲಕ್ಕುಂಡಿ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದ ಹೊರಗೂ ಸಕತ್ ಸೌಂಡ್ ಮಾಡುತ್ತಲೇ ಇದೆ. ಈಗಲೂ ಲಕ್ಕುಂಡಿಗೆ ಬೇರೆ ಬೇರೆ ಭಾಗಗಳಿಂದ ಜನರು ಬರುತ್ತಲೇ ಇದ್ದಾರೆ.
-
ಸಿಕ್ಕ ಚಿನ್ನದಲ್ಲಿ ಒಂದು ಭಾಗ ನಮಗೆ ಬೇಕು ಎಂದು ಬೇಡಿಕೆಯಿಟ್ಟ ಕುಟುಂಬ
ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿದ್ದ ಚಿನ್ನದ ನಿಧಿಯ ಮೌಲ್ಯ 8 ಕೋಟಿ ರು. ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಾಮಾಣಿಕವಾಗಿ ನಿಧಿಯನ್ನು ಸರಕಾರಕ್ಕೆ ಒಪ್ಪಿಸಿದ್ದ ರಿತ್ತಿ ಕುಟುಂಬ, ಇದೀಗ ಕಾನೂನಿನ ಪ್ರಕಾರ ಹೊಸ ಬೇಡಿಕೆ ಇಟ್ಟಿದ್ದಾರೆ.
ಎರಡು ತಿಂಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿ ಸಕತ್ ಸದ್ದು ಮಾಡಿತ್ತು. ಇಲ್ಲಿ ಪ್ರಜ್ವಲ್ ರಿತ್ತಿ ಅವರ ಮನೆ ನಿರ್ಮಾಣ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಚಿನ್ನದ ನಿಧಿ ಸಿಕ್ಕಿತ್ತು. ಅಂದಿನಿಂದ ಲಕ್ಕುಂಡಿ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದ ಹೊರಗೂ ಸಕತ್ ಸೌಂಡ್ ಮಾಡುತ್ತಲೇ ಇದೆ. ಈಗಲೂ ಲಕ್ಕುಂಡಿಗೆ ಬೇರೆ ಬೇರೆ ಭಾಗಗಳಿಂದ ಜನರು ಬರುತ್ತಲೇ ಇದ್ದಾರೆ. ಎರಡು ತಿಂಗಳಿನಿಂದ ತುಂಬಾ ಸದ್ದು ಮಾಡಿದ್ದ ಲಕ್ಕುಂಡಿ ಸದ್ಯ ಮೌನವಾಗಿತ್ತು. ಆದರೆ ಇದೀಗ ಮತ್ತೆ ಪುಟಿದೆದ್ದಿದೆ.
ಇದನ್ನೂ ಓದಿ: Gadag News: ಮೇಲಧಿಕಾರಿಗಳ ಕಿರುಕುಳ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ
ಸಿಕ್ಕಿದ್ದೆಷ್ಟು?:
ಇಲ್ಲಿ ಸಿಕ್ಕಿರುವ ಚಿನ್ನಾಭರಣಗಳು ಮತ್ತು ಇತರ ಸಾಮಗ್ರಿಗಳ ಬೆಲೆಯನ್ನು ಕಂಡು ಹಿಡಿಯಲು ನೇಮಕ ಮಾಡಿರುವ ತಜ್ಞರು ಇದು ಸುಮಾರು 8 ಕೋಟಿ ಬೆಲೆ ಬಾಳುವಂಥದ್ದು ಎಂದು ವರದಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಅದರ ನಿಖರ ಬೆಲೆ ತಿಳಿದಿರಲಿಲ್ಲ. ಅಷ್ಟಕ್ಕೂ ರಿತ್ತಿ ಕುಟುಂಬಕ್ಕೆ ಸಿಕ್ಕಿದ್ದು ಸುಮಾರು 466 ಗ್ರಾಂ ತೂಕದ ಪುರಾತನ ಚಿನ್ನದ ಆಭರಣಗಳು ಮತ್ತು ಇತರ 22 ವಸ್ತುಗಳು. ಅವುಗಳನ್ನು ಸಂಪೂರ್ಣವಾಗಿ ಸರಕಾರದ ವಶಕ್ಕೆ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದರು. ಅದರ ಬಳಿಕ ಲಕ್ಕುಂಡಿ ಗ್ರಾಮದ ಇತಿಹಾಸದ ಬಗ್ಗೆ ಸಂಶೋ ಧನೆಗಳೇ ನಡೆದವು. ಆ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿದಾಗ, ಅವು ಸುಮಾರು 500-600 ವರ್ಷಗಳಷ್ಟು ಹಳೆಯದ್ದು ಎಂದು ಕಂಡು ಹಿಡಿಯಲಾಗಿದೆ. ಇದು ವಿಜಯನಗರ ಅಥವಾ ಚಾಲುಕ್ಯ ಕಾಲದ್ದು ಎನ್ನುವುದು ತಿಳಿದುಬಂದಿದೆ.
8 ಕೋಟಿಯ ಅಂದಾಜು: ಇದೀಗ ಅದರ ಮೌಲ್ಯಮಾಪನ ಮಾಡಿದಾಗ ಈ ಆಂಟಿಕ್ ಆಭರಣಗಳು ಸುಮಾರು 8 ಕೋಟಿ ರುಪಾಯಿ ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಇದೀಗ ರಿತ್ತಿ ಕುಟುಂಬವು ತಜ್ಞರು ವ್ಯಕ್ತಪಡಿಸಿದ ಬೆಲೆಯಲ್ಲಿ ನಮಗೆ ಒಂದು ಭಾಗ ಬೇಕು ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ ಕಾನೂನಿನ ಅಡಿಯಲ್ಲಿಯೂ ಕೆಲವೊಂದು ಅವಕಾಶಗಳು ಇವೆ. ನಿಧಿಯ ಬಗ್ಗೆ ಕೆಲವೊಂದು ನಿಯಮಗಳು ಇದ್ದು, ಕೆಲವು ಸಂದರ್ಭ ಗಳಲ್ಲಿ ಸಂಪೂರ್ಣ ಚಿನ್ನಾಭರಣ ಯಾರಿಗೆ ಸಿಕ್ಕಿದೆಯೋ ಅವರ ಪಾಲಾಗುತ್ತದೆ ಎಂದು ಇದ್ದರೆ, ಕೆಲವು ಸಂದರ್ಭಗಳಲ್ಲಿ ಇಷ್ಟು ಪಾಲನ್ನು ಅವರಿಗೆ ನೀಡಬೇಕು ಎಂದು ಇದೆ.
47 ದಿನಗಳ ಉತ್ಖನನ ಕಾರ್ಯ ಮುಕ್ತಾಯ
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ 47 ದಿನಗಳಿಂದ ನಡೆದಿದ್ದ ಉತ್ಖನನ ಕಾರ್ಯ ಬುಧವಾರ ಮುಕ್ತಾಯಗೊಂಡಿತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಉತ್ಖನನ ಕಾರ್ಯ ನಡೆದಿತ್ತು. ಬುಧವಾರ ಸಂಜೆ ಪುರಾತತ್ವ ಇಲಾಖೆಯ ನಿಯಮದಂತೆ 14 ಅಡಿ ಆಳ ತೆಗೆದ ಉತ್ಖನನ ಸ್ಥಳವನ್ನು ಪ್ಲಾಸ್ಟಿಕ್ ತಾಡಪತ್ರಿ ಹಾಕಿ, ಉತ್ಖನನದ ವೇಳೆ ತೆಗೆದ ಮಣ್ಣನ್ನೇ ಹಾಕಿ ಮುಚ್ಚುವ ಕಾರ್ಯ ಕೈಗೊಳ್ಳಲಾಯಿತು.
![]()
10X10 ಮೀಟರ್ ಜಾಗದಲ್ಲಿ 4 ಬಾಕ್ಸ್‌ಗಳನ್ನು ರಚಿಸಿ, 30 ರಿಂದ 35 ಕಾರ್ಮಿಕರು 47 ದಿನ ಉತ್ಖನನ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಪ್ರಾಚ್ಯ ಅವಶೇಷಗಳು ಸಿಕ್ಕವು. ಇತಿಹಾಸ ತಜ್ಞರ ಸ್ಥಳ ಪರಿಶೀಲನೆ ಬಳಿಕ ಉತ್ಖನನಕ್ಕೆ ಪೂರ್ಣ ವಿರಾಮ ಹಾಕಲಾಗಿದೆ.
- ಶರಣು ಗೋಗೇರಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ
![]()
ಮಾರ್ಚ್ 30ರಂದು ನಡೆಯುವ ವೀರಭದ್ರೇಶ್ವರ ಜಾತ್ರೆಯ ಧಾರ್ಮಿಕ ಕಾರ್ಯಗಳಿಗೆ ಅನುಕೂಲ ಮಾಡಿಕೊಡಲು ಉತ್ಖನನ ಮಾಡಿದ ಸ್ಥಳ ಮುಚ್ಚಲಾಗುತ್ತಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅನುಮತಿಯೊಂದಿಗೆ ಗ್ರಾಮದ ಇತರೆ ಸ್ಥಳದಲ್ಲಿ ಉತ್ಖನನ ಮಾಡುವ ಉದ್ದೇಶವಿದೆ.
- ಸಿದ್ದು ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ