ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

No support price for flowers: ದಸರಾ ಹಬ್ಬದಲ್ಲೂ ಹೂವಿಗೆ ಬೆಂಬಲ ಬೆಲೆಯಿಲ್ಲ: ಕಂಗಾಲಾದ ರೈತರು

ದಸರಾ(Dasara) ಹಬ್ಬವೆಂದರೆ ಹೂವಿನ ಬೆಳೆಗಾರರಿಗೆ ಉತ್ತಮ ಆದಾಯದ ನಿರೀಕ್ಷೆ ಮೂಡುವ ಸಮಯ. ಹಬ್ಬ ಹರಿದಿನಗಳಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂಬ ನಂಬಿಕೆ ಯಿಂದ ರೈತರು ಅಲ್ಪಸ್ವಲ್ಪ ಜಮೀನಿನಲ್ಲಿ ಹೂವಿನ ಬೆಳೆ ಬೆಳೆದು ಆದಾಯದ ನಿರೀಕ್ಷೆಯಲ್ಲಿರು ತ್ತಾರೆ. ಆದರೆ ಈ ಬಾರಿ ದಸರಾ ಹಬ್ಬ ರೈತರ ಪಾಲಿಗೆ ನಿರಾಸೆ ತಂದಿದ್ದು, ಹೂವಿನ ದರದಲ್ಲಿ ಕುಂಠಿತ ಕಂಡುಬಂದಿರುವು ದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಸರಾ ಹಬ್ಬದಲ್ಲೂ ಹೂವಿಗೆ ಬೆಂಬಲ ಬೆಲೆಯಿಲ್ಲ: ಕಂಗಾಲಾದ ರೈತರು

-

Profile
Ashok Nayak Oct 19, 2026 9:39 AM

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಪಾವಗಡ: ದಸರಾ(Dasara) ಹಬ್ಬವೆಂದರೆ ಹೂವಿನ ಬೆಳೆಗಾರರಿಗೆ ಉತ್ತಮ ಆದಾಯದ ನಿರೀಕ್ಷೆ ಮೂಡುವ ಸಮಯ. ಹಬ್ಬ ಹರಿದಿನಗಳಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂಬ ನಂಬಿಕೆ ಯಿಂದ ರೈತರು ಅಲ್ಪಸ್ವಲ್ಪ ಜಮೀನಿನಲ್ಲಿ ಹೂವಿನ ಬೆಳೆ ಬೆಳೆದು ಆದಾಯದ ನಿರೀಕ್ಷೆಯಲ್ಲಿರು ತ್ತಾರೆ. ಆದರೆ ಈ ಬಾರಿ ದಸರಾ ಹಬ್ಬ ರೈತರ ಪಾಲಿಗೆ ನಿರಾಸೆ ತಂದಿದ್ದು, ಹೂವಿನ ದರದಲ್ಲಿ ಕುಂಠಿತ ಕಂಡುಬಂದಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಕಷ್ಟಪಟ್ಟು ಬೆಳೆದ ಹೂವಿಗೆ ನಿರೀಕ್ಷಿತ ಬೆಲೆ ಸಿಗದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೂವಿನ ಬೆಳೆಗಾಗಿ ಬೀಜ, ಗೊಬ್ಬರ, ಔಷಧಿ, ನೀರು ಹಾಗೂ ಕೂಲಿ ಕಾರ್ಮಿಕ ರಿಗೆ ಹಣ ಖರ್ಚು ಮಾಡಿರುವ ರೈತರಿಗೆ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬೆಲೆಯಿಂದ ಹಾಕಿದ ಬಂಡವಾಳವನ್ನೇ ಮರಳಿ ಪಡೆಯುವುದು ಕಷ್ಟವಾಗಿದೆ.

ಇದನ್ನೂ ಓದಿ: Lalbagh flower show: ತೇಜಸ್ವಿ ವಿಸ್ಮಯ ಫ್ಲವರ್‌ ಶೋಗೆ ತೆರೆ, 8.10 ಕೋಟಿ ಜನ ಭೇಟಿ, ದಾಖಲೆ 2.46 ಕೋಟಿ ರೂ. ಸಂಗ್ರಹ

ಹೂವಿನ ದರದ ವಿವರ

ಪ್ರಸ್ತುತ ಮಾರುಕಟ್ಟೆಯಲ್ಲಿ ರೈತರು ತಿಳಿಸಿರುವಂತೆ ವಿವಿಧ ಹೂವುಗಳ ದರ ಹೀಗಿದೆ:

ಚೆಂಡು ಹೂವು: ₹30ರಿಂದ ₹80ರವರೆಗೆ

ಚಾಮಂತಿ ಹೂವು: ಒಂದು ಮಾರಿಗೆ ₹200ರಿಂದ ₹300ರವರೆಗೆ

ಕನಕಾಂಬರ ಹೂವು: ₹500

ಮಲ್ಲಿಗೆ ಹೂವು: ಒಂದು ಕೆ.ಜಿಗೆ ₹300ರಿಂದ ₹400ರವರೆಗೆ

ಕಾಕಡ ಹೂವು: ಒಂದು ಬಾರಿಗೆ ₹200

ಗುಲಾಬಿ ಹೂವು: ಒಂದು ಕೆ.ಜಿಗೆ ₹400

Flower 2

ಹೂವಿನ ಬೆಲೆಗಳು ಮಾರುಕಟ್ಟೆ, ಗುಣಮಟ್ಟ ಹಾಗೂ ಅಳತೆಯ ಆಧಾರದ ಮೇಲೆ ವ್ಯತ್ಯಾಸವಾಗಬಹುದು.

ಹಬ್ಬದ ಸಂದರ್ಭದಲ್ಲಿ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಯಾಗಿದ್ದು, ಹೂವುಗಳನ್ನು ಬೆಳೆಸಲು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬ ಅಳಲು ಕೇಳಿಬರುತ್ತಿದೆ. ಹೂವಿನ ಬೆಳೆ ಬೇಗನೆ ಹಾಳಾಗುವ ಸ್ವಭಾವ ಹೊಂದಿರುವುದರಿಂದ, ಸೂಕ್ತ ಬೆಲೆ ಸಿಗದಿದ್ದರೂ ರೈತರು ಅನಿವಾರ್ಯವಾಗಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಬೆಂಬಲ ಬೆಲೆಗೆ ರೈತರ ಒತ್ತಾಯ

ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೂವಿನ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿ ದರ ಕುಸಿತ ಕಂಡುಬಂದಾಗ ರೈತರಿಗೆ ನಷ್ಟವಾಗದಂತೆ ಬೆಲೆ ಬೆಂಬಲ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಹೂವಿನ ಮಾರುಕಟ್ಟೆ ವ್ಯವಸ್ಥೆ ಯನ್ನು ಸುಧಾರಿಸಿ, ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಸಂಬಂಧಪಟ್ಟ ಅಧಿಕಾರಿ ಗಳು ಗಮನಹರಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ಒಟ್ಟಿನಲ್ಲಿ, ಮಳೆ ಕೊರತೆ ಹಾಗೂ ಹೂವಿನ ಬೆಲೆ ಕುಸಿತದಿಂದ ಪಾವಗಡ ಭಾಗದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ದಸರಾ ಹಬ್ಬದ ಸಂಭ್ರಮದ ನಡುವೆಯೂ ಬೆಳೆಗಾರರ ಬದುಕಿನಲ್ಲಿ ನಿರಾಸೆ ಆವರಿಸಿದೆ.

image

ಲಾಭದ ಆಸೆಗೂ ನಿರಾಸೆ ಎಂಬಂತಿದೆ ಅಲ್ಪಸ್ವಲ್ಪ ಜಾಮೀನಲ್ಲಿ ಹೂವು ಬೆಳೆದು ಕುಟುಂಬದ ನಿರ್ವಹಣೆ ಮಾಡುವ ನಮ್ಮಗೆ ಹೂವಿನ ಬೆಳೆ ಬೆಳೆದು ಅವುಗಳಿಗೆ ಬಳಸುವ ಔಷಧೀಯ ಬಳಸಿ ನಂತರ ಕೂಲಿಗಾರರ ವೆಚ್ಚ ಸಹ ಸಿಗದ ಪರಿಸ್ಥಿತಿ.

ಕೃಷ್ಣಗಿರಿ ಗ್ರಾಮದ ರೈತ ಬೋರೈಯ್ಯ, ಪಾವಗಡ