ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 10 ದಿನಗಳ ನಾಡಹಬ್ಬ ದಸರಾ ಆರಂಭ

ಅ.11ರ ಭಾನುವಾರ ಬೆಳಗ್ಗೆ 11.50ರಿಂದ 12.13ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ 2026ರ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕೊಪ್ಪಳ ಗವಿಮಠದ ಶ್ರೀಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದಸರಾ ಉದ್ಘಾಟಿಸಲಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 10 ದಿನಗಳ ನಾಡಹಬ್ಬ ದಸರಾ ಆರಂಭ

-

Profile
Ashok Nayak Oct 11, 2026 10:08 AM

ಕೆ.ಜೆ.ಲೋಕೇಶ್ ಬಾಬು ಮೈಸೂರು

ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ಬೆಳಗ್ಗೆ 11.50ರಿಂದ ಮ.12.13ರ ನಡುವಿನ ಧನುರ್ ಲಗ್ನದಲ್ಲಿ ಪೂಜೆ

ನಾಡಹಬ್ಬ ಮೈಸೂರು ದಸರಾ ಭಾನುವಾರದಿಂದ ಆರಂಭವಾಗಲಿದೆ. ಧಾರ್ಮಿಕ ವೈಭವ, ರಾಜಪರಂಪರೆ, ಸಾಹಿತ್ಯ, ಕಲೆ, ಕ್ರೀಡೆ, ಕೃಷಿ, ಗ್ರಾಮೀಣ ಸಂಸ್ಕೃತಿ, ಯುವ ಜನತೆ ಹಾಗೂ ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮಕ್ಕೆ ಮೈಸೂರು ಸಾಕ್ಷಿಯಾಗಲಿದೆ. ಅ.11ರಿಂದ ಆರಂಭವಾಗುವ ದಸರಾ ಸಂಭ್ರಮ ಅ.21ರ ವಿಜಯದಶಮಿಯ ಮಹಾ ಮೆರವಣಿಗೆ ಹಾಗೂ ಪಂಜಿನ ಕವಾಯತಿ ನೊಂದಿಗೆ ವೈಭವದ ಪರಾಕಾಷ್ಠೆ ತಲುಪಲಿದೆ.

ಚಾಮುಂಡಿ ಸನ್ನಿಧಿಯಲ್ಲಿ ಶುಭಾರಂಭ: ಅ.11ರ ಭಾನುವಾರ ಬೆಳಗ್ಗೆ 11.50ರಿಂದ 12.13ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ 2026ರ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕೊಪ್ಪಳ ಗವಿಮಠದ ಶ್ರೀಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದಸರಾ ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ಗಣ್ಯರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Mysuru Dasara vs Mahisha Dasara: ಮಹಿಷಾಸುರ ರಾಕ್ಷಸನೋ, ಬೌದ್ಧ ದೊರೆಯೋ? ದಸರಾ ಸಮೀಪಿಸುತ್ತಿದ್ದಂತೆ ಮತ್ತೆ ಆರಂಭವಾಯ್ತು ಚರ್ಚೆ: ಏನಿದು ವಿವಾದ?

ಉದ್ಘಾಟನಾ ಕಾರ್ಯಕ್ರಮಕ್ಕಾಗಿ ದೇವಾಲಯದ ಹೊರಭಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸ ಲಾಗಿದ್ದು, ವೇದಿಕೆಯ ಮುಂಭಾಗದಲ್ಲಿ ಎರಡು ಸಾವಿರಕ್ಕೂ ಅಧಿಕ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯದ ವಿವಿಧ ಮಠಗಳ ಸುಮಾರು 200ಕ್ಕೂ ಹೆಚ್ಚು ಮಠಾಽಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿರುವುದರಿಂದ, ಅವರಿಗೆ ವಿಶೇಷ ಆಸನ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಮಾಡಿದೆ. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಬೆಟ್ಟದ ಮೇಲೆ ಸುಮಾರು ಎರಡು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ವಿವಿಧ ಮಠಗಳ ಮಠಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಉದ್ಘಾಟನೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

ಮುಂಜಾನೆಯಿಂದಲೇ ವಿಶೇಷ ಪೂಜೆ: ದಸರಾ ಉದ್ಘಾಟನೆಯ ಅಂಗವಾಗಿ ಭಾನುವಾರ ಮುಂಜಾನೆ 5.30ಕ್ಕೆ ನಾಡ ದೇವತೆ ಚಾಮುಂಡೇಶ್ವರಿಗೆ ಮಹಾರುದ್ರಾಭಿಷೇಕ ಹಾಗೂ ಪಂಚಾಭಿಷೇಕ ನೆರವೇರಲಿದೆ. ಬಳಿಕ ತಾಯಿಗೆ ಹಂಸವಾಹಿನಿ ಅಲಂಕಾರ ಮಾಡಲಾಗುತ್ತದೆ. ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಶುಚಿಗೊಳಿಸುವ ಕಾರ್ಯವೂ ಪೂರ್ಣಗೊಂಡಿದ್ದು, ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷಿತ್, ಶುಭ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನಡೆಯಲಿದ್ದು, ನವರಾತ್ರಿ ಉತ್ಸವದ ಒಂಬತ್ತು ದಿನಗಳ ಕಾಲ ನವದುರ್ಗೆಯರನ್ನು ಆರಾಧಿಸಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಸಪ್ತಮಾತೃಕೆಯರ ಅಲಂಕಾರವೂ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ನಾಡದೇವತೆಯ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯ ಲಿದ್ದು, ನಾಡಿನ ಜನತೆಯ ಒಳಿತು, ಉತ್ತಮ ಮಳೆ-ಬೆಳೆ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ಬಾರಿಯ ದಸರಾ ಸಂಭ್ರಮಕ್ಕೆ ಅಧಿಕೃತ ನಾಂದಿ ಹಾಡಲಾಗುತ್ತದೆ.

ದಿನವಿಡೀ ಕಾರ್ಯಕ್ರಮಗಳ ಸರಮಾಲೆ: ದಸರಾ ಉದ್ಘಾಟನೆಯ ದಿನವೇ ಮೈಸೂರಿನಲ್ಲಿ ಕಾರ್ಯಕ್ರಮ ಗಳ ಸರಮಾಲೆ ಆರಂಭವಾಗಲಿದೆ. ಅ.11ರ ಭಾನುವಾರ ಬೆಳಗ್ಗೆ 11.30ಕ್ಕೆ ಫಲಪುಷ್ಪ ಪ್ರದರ್ಶನ ಕುಪ್ಪಣ್ಣ ಪಾರ್ಕ್ (ನಿಶಾದ್ ಬಾಗ್), 12.30ಕ್ಕೆ ಪುಷ್ಪ ಮೇಳ ಮತ್ತು ಸಸ್ಯ ತೋಟ ಉದ್ಘಾಟನೆಯಾಗಲಿದೆ.

ಮುಂಜಾನೆ ಎಣ್ಣೆಶಾಸ್ತ್ರ, ಪಾದ ಪೂಜೆ, ನಂತರ ಕಂಕಣ ಧಾರಣೆ

ರತ್ನ ಸಿಂಹಾಸನವೇರಿ ಯದುವೀರ್ ದರ್ಬಾರ್: ಮೈಸೂರು ಅರಮನೆಯ ದರ್ಬಾರ್ ಸಭಾಂಗಣ ದಲ್ಲಿ ನಡೆಯುವ ಖಾಸಗಿ ದರ್ಬಾರ್ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ರತ್ನ ಖಚಿತ ಸಿಂಹಾಸನ ದಲ್ಲಿ ವಿರಾಜ ಮಾನರಾಗಿ ರಾಜಪೋಷಾಕು ಧರಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಯದುವೀರ್ ಅವರು 12ನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಪತ್ನಿ ತ್ರಿಷಿಕಾ ಕುಮಾರಿ ಹಾಗೂ ಪುತ್ರರಾದ ಆದ್ಯವೀರ್ ಮತ್ತು ಯುಗಾಧ್ಯರೊಂದಿಗೆ ಕಂಕಣ ಧರಿಸಿ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಪಸ್ಥಿತ ಗಣ್ಯರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ.

ರತ್ನಸಿಂಹಾಸನವೇರಿ ಮಹಾರಾಜ ಯದುವೀರ್ ಖಾಸಗಿ ದರ್ಬಾರ್

ಬೆಳಗ್ಗೆ 11.45ರಿಂದ 12ರೊಳಗೆ ಸಿಂಹಾಸನಾರೋಹಣ ಮೈಸೂರು ಅರಮನೆಯ ದರ್ಬಾರ್ ಸಭಾಂಗಣದಲ್ಲಿ ನಡೆಯುವ ಖಾಸಗಿ ದರ್ಬಾರ್ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ರತ್ನಖಚಿತ ಸಿಂಹಾಸನದಲ್ಲಿ ವಿರಾಜಮಾನರಾಗಿ ರಾಜಪೋಷಾಕು ಧರಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಯದುವೀರ್ ಅವರು 12ನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಲಿದ್ದು, ಸಂಸದರಾದ ಬಳಿಕ ಇದು ಅವರ ಮೂರನೇ ದರ್ಬಾರ್. ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಪುತ್ರರಾದ ಆದ್ಯವೀರ್ ಮತ್ತು ಯುಗಾಧ್ಯ? ಒಡೆಯರ್ ಅವರೊಂದಿಗೆ ಸಂಪ್ರದಾಯದಂತೆ ಕಂಕಣ ಧರಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳ ಲಿದ್ದಾರೆ.

ಶುಭ ಮುಹೂರ್ತದಲ್ಲಿ ಸಿಂಹಾಸನಾರೋಹಣ: ದಸರಾ ಖಾಸಗಿ ದರ್ಬಾರ್‌ನ ಧಾರ್ಮಿಕ ವಿಧಿವಿಧಾನಗಳು ಬೆಳಗಿನ ಜಾವವೇ ಆರಂಭವಾಗಲಿವೆ. ಎಣ್ಣೆ ಶಾಸದ ಬಳಿಕ ಬೆಳಗ್ಗೆ 6ರಿಂದ 7.12ರ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಸಿಂಹಗಳನ್ನು ಜೋಡಿಸಲಾಗುತ್ತದೆ. ಬೆಳಗ್ಗೆ 8.35ರಿಂದ 9.05ರ ಅವಧಿಯಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಮತ್ತು ತ್ರಿಷಿಕಾಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ನಡೆಯಲಿದೆ. ಬಳಿಕ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಕಡೆಯಿಂದ ಪಟ್ಟದ ಆನೆ, ಕುದುರೆ ಹಾಗೂ ಹಸುವಿನೊಂದಿಗೆ ಕಳಸ ಹೊತ್ತ ಸುಮಂಗಲಿಯರು ಮೆರವಣಿಗೆಯಲ್ಲಿ ಆಗಮಿಸಲಿದ್ದಾರೆ. ಮಂಗಳವಾದ್ಯಗಳ ನಾದದ ನಡುವೆ ಸವಾರಿ ತೊಟ್ಟಿಯ ಬಳಿ ಪೂಜಾ ಕೈಂಕರ್ಯಗಳು ನೆರವೇರಲಿ.

ಏನೇನು ನಡೆಯುತ್ತದೆ?

ಅಕ್ಟೋಬರ್ 11ರಿಂದ ಆರಂಭವಾಗುವ ದಸರಾ ಸಂಭ್ರಮ ಅ.21ರ ವಿಜಯದಶಮಿ ಮೆರವಣಿಗೆ ಯೊಂದಿಗೆ ಮುಕ್ತಾಯ

ಉದ್ಘಾಟನಾ ಕಾರ್ಯಕ್ರಮಕ್ಕೆ ದೇವಾಲಯದ ಹೊರಭಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣ, 2000 ಮಂದಿಗೆ ಆಸನ ರಾಜ್ಯದ ವಿವಿಧ ಮಠಗಳ ಸುಮಾರು 200ಕ್ಕೂ ಅಧಿಕ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ

ದಸರಾ ಉದ್ಘಾಟನೆಯ ಅಂಗವಾಗಿ ಭಾನುವಾರ ಮುಂಜಾನೆ 5.30ಕ್ಕೆ ಚಾಮುಂಡೇಶ್ವರಿ ದೇವಿಗೆ ಮಹಾರುದ್ರಾಭಿಷೇಕ ಶುರು

ಪಂಚಾಭಿಷೇಕದ ಬಳಿಕ ತಾಯಿಗೆ ಹಂಸವಾಹಿನಿ ಅಲಂಕಾರ, ಬಳಿಕ ನವದುರ್ಗೆಯರು, ಸಪ್ತಮಾತೃಕಾ ದೇವಿಯರ ಆರಾಧನೆ