ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ministry for U T Khader: ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕ್ಷೇತ್ರದ ಶಾಸಕರಾಗಿ ಸತತ ಐದು ಬಾರಿ ಆಯ್ಕೆಯಾಗಿ, ಪ್ರಸ್ತುತ ಸಚಿವ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿರುವ ಯು.ಟಿ.ಖಾದರ್ ಅವರು ಅತ್ಯಂತ ಪ್ರಭಾವಶಾಲಿ ಹಾಗೂ ಜನಪ್ರಿಯ ನಾಯಕರಲ್ಲಿ ಒಬ್ಬರು. ಕಾನೂನು ಪದವೀಧರರಾದ ಇವರು, ಸೇಂಟ್ ಅಲೋಶಿಯಸ್ ಮತ್ತು ಎಸ್‌ಡಿ ಎಂ ಕಾಲೇಜುಗಳಲ್ಲಿ ಶಿಕ್ಷಣ ಮುಗಿಸಿದರು. ವಿದ್ಯಾರ್ಥಿ ದಿಸೆಯಿಂದಲೇ ಎನ್‌ಎಸ್‌ಯುಐ ಸಂಘಟನೆ ಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಹಂತಹಂತವಾಗಿ ಬೆಳೆದರು.

ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

-

Profile
Ashok Nayak Jun 4, 2026 11:22 AM

ಜಿತೇಂದ್ರ ಕುಂದೇಶ್ವರ, ಮಂಗಳೂರು

ಶಾಸಕರಾಗಿ ಸತತ ಐದು ಬಾರಿ ಆಯ್ಕೆ

ಸ್ಪೀಕರ್ ಕುರ್ಚಿಗೆ ಗುಡ್ ಬೈ

ನೂತನ ಸಚಿವ ಸಂಪುಟಕ್ಕೆ ಸೇರ್ಪಡೆ

ಕ್ಷೇತ್ರದ ಶಾಸಕರಾಗಿ ಸತತ ಐದು ಬಾರಿ ಆಯ್ಕೆಯಾಗಿ, ಪ್ರಸ್ತುತ ಸಚಿವ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿರುವ ಯು.ಟಿ.ಖಾದರ್ (U.T.Khader) ಅವರು ಅತ್ಯಂತ ಪ್ರಭಾವಶಾಲಿ ಹಾಗೂ ಜನಪ್ರಿಯ ನಾಯಕರಲ್ಲಿ ಒಬ್ಬರು.

ಕಾನೂನು ಪದವೀಧರರಾದ ಇವರು, ಸೇಂಟ್ ಅಲೋಶಿಯಸ್ ಮತ್ತು ಎಸ್‌ಡಿಎಂ ಕಾಲೇಜುಗಳಲ್ಲಿ ಶಿಕ್ಷಣ ಮುಗಿಸಿದರು. ವಿದ್ಯಾರ್ಥಿ ದಿಸೆಯಿಂದಲೇ ಎನ್‌ಎಸ್‌ಯುಐ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಹಂತಹಂತವಾಗಿ ಬೆಳೆದರು.

ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ, ಸೇವಾದಳದ ಹೆಚ್ಚುವರಿ ಮುಖ್ಯ ಸಲಹೆಗಾರರಾಗಿ ಮತ್ತು ಕೆಪಿಸಿಸಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. 2008ರಲ್ಲಿ ತಂದೆ ಯವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದ ಇವರು, ಅಂದಿನಿಂದ ಇಂದಿನವರೆಗೆ 2013, 2018 ಹಾಗೂ 2023ರ ಚುನಾವಣೆಗಳಲ್ಲೂ ಸತತವಾಗಿ ಜಯಭೇರಿ ಬಾರಿಸಿ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿದ್ದಾರೆ.

ಹಲವು ಯೋಜನೆ ಹರಿಕಾರ: 2008ರಿಂದ 2013ರ ಅವಧಿಯ ಇವರ ಅತ್ಯುತ್ತಮ ಕಾರ್ಯ ವೈಖರಿಗೆ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಪ್ರಶಸ್ತಿಗಳು ಒಲಿದಿವೆ. ಯು.ಟಿ.ಖಾದರ್‌ ಅವರ ವ್ಯಕ್ತಿತ್ವದ ಅತ್ಯಂತ ಆಕರ್ಷಕ ದ.ಕ.ಗುಣವೆಂದರೆ ಅವರ ಜನಸ್ನೇಹಿ ಗುಣ ಮತ್ತು ಆಡಳಿತಾತ್ಮಕ ದೂರದರ್ಶಿತ್ವ. 2013ರ ಸಿದ್ದರಾಮಯ್ಯನವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದಾಗ ಅವರು ಜಾರಿಗೆ ತಂದ "ಬೈಕ್ ಆಂಬುಲೆನ್ಸ್", "108 ಸೇವೆ", "ಆರೋಗ್ಯಶ್ರೀ", "ದಂತ ಭಾಗ್ಯ" ಹಾಗೂ ಗುಟ್ಕಾ ನಿಷೇಧದಂತಹ ಕ್ರಾಂತಿಕಾರಿ ಯೋಜನೆಗಳು ಇಡೀ ದೇಶದ ಗಮನ ಸೆಳೆದಿದ್ದವು. ಇದಕ್ಕಾಗಿ ಕೇಂದ್ರ ದಿಂದ "ಅತ್ಯುತ್ತಮ ಆರೋಗ್ಯ ಸಚಿವ" ಪ್ರಶಸ್ತಿಯೂ ಲಭಿಸಿತ್ತು.

ವಿವಿಧ ಖಾತೆಗಳ ಹೊಣೆ: ನಂತರ ಆಹಾರ ಸಚಿವರಾಗಿ ಪಡಿತರ ಚೀಟಿಗಾಗಿ ಇದ್ದ ದಾಖಲೆಗಳ ಸುದೀರ್ಘ ಪ್ರಕ್ರಿಯೆಯನ್ನು ಕಡಿತಗೊಳಿಸಿ, ಕೇವಲ ಆಧಾರ್‌ಕಾರ್ಡ್ ಮೂಲಕ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಐತಿಹಾಸಿಕ ಬದಲಾವಣೆ ತಂದರು. ಬಿಪಿಎಲ್ ಕಾರ್ಡ್ಗಳ ಆದಾಯ ಮಿತಿಯನ್ನು ಸರಳಗೊಳಿಸಿ ಲಕ್ಷಾಂತರ ಬಡ ಕುಟುಂಬಗಳಿಗೆ ನೆರವಾದರು.

2018ರಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿಯೂ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ, ವಸತಿ ನಿಗಮ, ರಾಜೀವ್ ಗಾಂಧಿ ಗೃಹಮಂಡಳಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿದರು. 2021ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿದ್ದರು, ನಂತರ ಗೌರವಾನ್ವಿತ "ವಿಧಾನಸಭೆ ಸಭಾಧ್ಯಕ್ಷ" ಸ್ಥಾನ ಅಲಂಕರಿಸಿ ಸದನದ ಘನತೆ ಹೆಚ್ಚಿಸಿದ್ದರು.

ಬೈಕು, ಕಾರ್‌ರೇಸ್ ಕ್ರೇಜ್: ಕೇವಲ ರಾಜಕೀಯ ಮಾತ್ರವಲ್ಲದೆ ಬೈಕ್ ಮತ್ತು ಕಾರ್‌ ರೇಸ್‌ʼಗಳಲ್ಲಿ ಸಕ್ರಿಯ ಆಸಕ್ತಿ ಹೊಂದಿದ್ದು, ರಾಷ್ಟ್ರಮಟ್ಟದ ಮೋಟೋ ರೇಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಕ್ರಿಡಾಸ್ನೇಹಿಯೂ ಹೌದು. ಕ್ರಿಕೆಟ್, ಫುಟ್ಬಾಲ್ ಆಟಗಾರರೂ ಆಗಿರುವ ಇವರ ಬಹುಮುಖ ವ್ಯಕ್ತಿತ್ವ, ಜಾತಿ-ಧರ್ಮಗಳ ಭೇದವಿಲ್ಲದೆ ಸದಾ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಅಜಾತಶತ್ರು ಗುಣ ಮತ್ತು ಅಪಾರ ಆಡಳಿತಾತ್ಮಕ ಅನುಭವ ರಾಜ್ಯದ ಪ್ರಗತಿಗೆ ಹೊಸ ವೇಗ ನೀಡಲಿದೆ.

ಜನಮನ ಗೆದ್ದ ಜನಪ್ರತಿನಿಧಿ: ಜನಪ್ರತಿನಿಧಿಯಾಗಿ ಜನರ ಕೆಲಸ ಮಾಡಿ ಕೊಡುವ ಸೇವಾ ಗುಣ ಮೈಗೂಡಿಸಿಕೊಂಡವರು. ಆರೋಗ್ಯ ಸಚಿವರಾದಾಗ ಇವರ ಸುತ್ತಮುತ್ತ ಜನ ಅರ್ಜಿಗಳನ್ನು ಕೊಡು ವವರ ಸಂಖ್ಯೆ ನೋಡಿದರೆ ಅಚ್ಚರಿಪಡಬೇಕು. ಉಸ್ತುವಾರಿ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಅಕ್ರಮ ಚಟುವಟಿಕೆ, ದೋ ನಂಬರ್, ಅನಧಿಕೃತ ವ್ಯವಹಾರ ತಡೆಗಟ್ಟಿದ ಕೀರ್ತಿ ಇವರಿಗೆ ಸಲ್ಲಬೇಕು.

ಮಂಗಳೂರನ್ನು ಕಾಡುತ್ತಿರುವ ಮಾದಕ ದ್ರವ್ಯ ಪಿಡುಗಿನ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಜಾರಿಗೆ ಪ್ರಯತ್ನಿಸಿದವರು. ಈ ಜಾಲದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡವರು. ದ.ಕ.ಜಿಲ್ಲೆಗೆ ದಕ್ಕಿದ ಸ್ಥಳೀಯ ಉಸ್ತುವಾರಿ ಸಚಿವರು ಇದೀಗ ಮಂಗಳೂರು ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಕೂಡ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಕೂಡ ಸ್ಪೀಕರ್‌ಆಗಿದ್ದ ವೇಳೆ ಖಾದರ್‌ಅವರು ಇವರಿಗೆ ಪರೋಕ್ಷ ಬೆಂಬಲ ನೀಡಿದ್ದು ಆಡಳಿತ ವೈಖರಿಗೆ ಕಾರಣವಾಯಿತು. ಈಗ ಮತ್ತೆ ಸಚಿವರಾಗಿದ್ದಾರೆ ಉಸ್ತುವಾರಿ ಸಚಿವರು ಅವರೇ ಆಗುತ್ತಾರೆ. ಕಳೆದ ಒಂದು ವರ್ಷದಿಂದ ಶಾಂತಿಯಿಂದ ಇರುವ ಈ ಜಿಲ್ಲೆಗೆ ಇನ್ನೆರಡು ವರ್ಷಗಳ ಕಾಲ ನೆಮ್ಮದಿ ಉಳಿಸಿಕೊಳ್ಳಬೇಕಾಗಿದೆ. ಲಾಬಿಗಳಿಗೆ ಮಣಿಯದಿದ್ದರೆ ಖಂಡಿತ ಖಾದರ್‌ ಉಸ್ತುವಾರಿಯಲ್ಲಿ ಇದು ಸಾಧ್ಯವಾಗಬಹುದು.