ದಲಿತ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ
ಸಮಾಧಿ ಅಗೆಯಲು ನಿರಾಕರಿಸಿದ ದಲಿತ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಖಾಪುರ ಎಸ್.ಎಚ್.ಗ್ರಾಮದಲ್ಲಿ ನಡೆದಿದೆ. ಕುಣಿ (ಸಮಾಧಿ) ಅಗೆಯಲು ನಿರಾಕರಿಸಿದ ದಲಿತ ಕುಟುಂಬ ದವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಸವರ್ಣೀಯರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
-
ವೀರೇಶ್ ಕೆಂಬಾವಿ, ಯಾದಗಿರಿ
ಕುಣಿ ಅಗೆಯಲು ನಿರಾಕರಿಸಿದ ದಲಿತರ ಮೇಲೆ ಹಲ್ಲೆ
17 ಮಂದಿ ವಿರುದ್ಧ ಪ್ರಕರಣ ದಾಖಲು
ಸಮಾಧಿ ಅಗೆಯಲು ನಿರಾಕರಿಸಿದ ದಲಿತ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಖಾಪುರ ಎಸ್.ಎಚ್.ಗ್ರಾಮದಲ್ಲಿ ನಡೆದಿದೆ. ಕುಣಿ (ಸಮಾಧಿ) ಅಗೆಯಲು ನಿರಾಕರಿಸಿದ ದಲಿತ ಕುಟುಂಬ ದವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಸವರ್ಣೀಯರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸುರಪುರ ಠಾಣೆಯಲ್ಲಿ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?: ಗ್ರಾಮದಲ್ಲಿ ಮೃತಪಟ್ಟಿದ್ದರು ಅಂತ್ಯಕ್ರಿಯೆಗೆ ಸಂಪ್ರದಾಯದಂತೆ ಕುಣಿ ಅಗೆಯುವಂತೆ ದಲಿತ ಸಮುದಾಯದ ವರನ್ನು ಕೇಳಲಾಗಿದೆ. ಆದರೆ, ಅವರು ನಿರಾಕರಿಸಿದ್ದಾರೆ. ಇದನ್ನೇ ಕಾರಣವಾಗಿಸಿ ಆಕ್ರೋಶ ಗೊಂಡ ಕೆಲವರು ದೇವಪ್ಪ, ಲಲಿತಾ, ಸಿದ್ದಮ್ಮ ಹಾಗೂ ಗಂಗಮ್ಮ ಅವರ ಮೇಲೆ ಕಲ್ಲು ಮತ್ತು ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸ ಲಾಗಿದೆ.
ಇದನ್ನೂ ಓದಿ: Yadgir Breaking: ಯಾದಗಿರಿ: ಬಾಡಿಯಾಳ–ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಗಾಯಗೊಂಡ ನಾಲ್ವರಿಗೆ ಚಿಕಿತ್ಸೆ ನೀಡಲಾಗಿದೆ. ಜತೆಗೆ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದು, ಊರು ಬಿಟ್ಟು ಹೋಗುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಹಾಗೂ ಬೋರ್‌ವೆಲ್‌ಗೆ ತೆರಳಿ ದಾಗಲೂ ತೊಂದರೆ ನೀಡುವುದು, ಹೋಟೆಲ್‌ಗಳಲ್ಲಿ ಸೇವೆ ನಿರಾಕರಿಸುವುದು, ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸುವುದು ಹಾಗೂ ಜಮೀನಿಗೆ ಹೋಗುವ ದಾರಿಯನ್ನು ತಡೆಯುವ ಪ್ರಯತ್ನ ನಡೆದಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ನಮಗೆ ಬಹಳ ದಿನಗಳಿಂದ ನಿರಂತರವಾಗಿ ತೊಂದರೆ ನೀಡಲಾಗುತ್ತಿದೆ. ಅವರು ಹೇಳಿದಂತೆ ನಾವು ಕೇಳದಿದ್ದರೆ ದೌರ್ಜನ್ಯ ನಡೆಸುತ್ತಾರೆ. ನಮ್ಮ ಮಹಿಳೆಯರನ್ನು ಅಶ್ಲೀಲ ಪದಗಳಿಂದ ನಿಂದಿಸುತ್ತಾರೆ. ಕುಡಿಯುವ ನೀರಿಗಾಗಿ ಬಾವಿ ಅಥವಾ ಬೋರ್‌ವೆಲ್‌ಗೆ ಹೋದಾಗಲೂ ಅವಮಾನಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ದಲಿತ ಕುಟುಂಬದ ವ್ಯಕ್ತಿ ಗೋಪಾಲ ದೊಡ್ಡಮನಿ ಬೇಸರ ವ್ಯಕ್ತಪಡಿಸಿ ದರು.
ಗಡಿಯಿಂದ ವಿಡಿಯೊ ಮಾಡಿ ಸೈನಿಕ ಅಳಲು ದಲಿತ ಕುಟುಂಬದ ಸದಸ್ಯ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಗಡಿಯಿಂದಲೇ ವಿಡಿಯೊ ಮಾಡಿ ಘಟನೆ ಸಂಬಂಧ ಅಳಲು ತೋಡಿ ಕೊಂಡಿದ್ದರು. ಕುಣಿ ಅಗೆಯುವುದಿಲ್ಲ ಎಂದ ನಮ್ಮ ಕುಟುಂಬಸ್ಥರನ್ನು ಗ್ರಾಮದಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ದೇಗುಲ, ಹೋಟೆಲ್, ಕುಡಿಯುವ ನೀರಿಗೂ ತೊಂದರೆ ಮಾಡಿದ್ದಾರೆ. ಜಾತಿ ಬೇಧ ವಿಲ್ಲದೆ ನಾವು ಗಡಿಯಲ್ಲೂ ಸೇವೆ ಸಲ್ಲಿಸುತ್ತೇವೆ. ಗ್ರಾಮದಲ್ಲೇಕೆ ಜಾತಿ ತಾರಮ್ಯ. ನಮ್ಮವರಿಗೆ ಏನಾದರೂ ಆದರೆ, ಸಂಬಂಧಪಟ್ಟ ಅಧಿಕಾರಿಗಳೇ ಇದಕ್ಕೆ ಹೊಣೆ ಎಂದು ಹೇಳಿದ್ದಾರೆ. ವಿಡಿಯೊ ವೈರಲ್ ಬೆನ್ನಲ್ಲೇ ಗ್ರಾಮಕ್ಕೆ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ
ಆಗಿದ್ದೇನು?
ಯಾದಗಿರಿ ಜಿಲ್ಲೆಯ ಶಖಾಪುರದಲ್ಲೊಬ್ಬ ಸಾವು ?
ಸಮಾಧಿಗೆ ಕುಣಿ ಅಗೆಯಲು ದಲಿತರು ನಿರಾಕರಣೆ ?
ದಲಿತರ ಜಾತಿ ನಿಂದಿಸಿ, ಗ್ರಾಮಸ್ಥರಿಂದ ಹಲ್ಲೆ ?
ದಲಿತ ಕುಟುಂಬಗಳಿಗೆ ಗ್ರಾಮದಿಂದ ಬಹಿಷ್ಕಾರ ಬೆದರಿಕೆ ?
ದೌರ್ಜನ್ಯದ ಕುರಿತು ಗಡಿಯಿಂದ ಸೈನಿಕ ವಿಡಿಯೊ ?
ಕುಟುಂಬಸ್ಥರಿಗೆ ರಕ್ಷಣೆ ನೀಡಲು ಅಧಿಕಾರಿಗಳಿಗೆ ಮನವಿ
![]()
ಜಾತಿ ನಿಂದನೆ, ಸಾಮಾಜಿಕ ಬಹಿಷ್ಕಾರ ಅಥವಾ ಯಾವುದೇ ಕಾನೂನುಬಾಹಿರ ಕೃತ್ಯವನ್ನು ಸಹಿಸಲಾಗುವುದಿಲ್ಲ. ಪ್ರಕರಣ ದಾಖಲಿಸಿಲಾ ಗಿದೆ. ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು.
-ಪೃಥ್ವಿಕ್ ಶಂಕರ್, ಎಸ್‌ಪಿ ಯಾದಗಿರಿ