ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಗಾರು ಬೆಳೆಗೆ ಭದ್ರೆ ಹರಿದು ಬರುವಳೇ?

ಭತ್ತದ ಬೆಳೆಗೆ ನೀರು ಕೊಟ್ಟರೆ ಬೇಸಿಗೆಗೆ ತೊಂದರೆಯಾಗುತ್ತದೆ. ಅಲ್ಲದೆ, ಈಗಾಗಲೇ ನಾಟಿ ಮಾಡುವ ಸಮಯದಲ್ಲಿ ವಿಳಂಬವಾಗಿದೆ. ಹಾಗಾಗಿ, ನೀರು ಹರಿಸುವುದು ಬೇಡ. ಜತೆಗೆ, ಮಳೆಯ ಕೊರತೆ ಮುಂದುವರಿದು, ಜಲಾಶಯಕ್ಕೆ ಸಾಕಷ್ಟು ಒಳ ಹರಿವು ಬರದೇ ಇದ್ದರೆ ಬೇಸಿಗೆಗೆ ಹನಿ ನೀರಿಗೂ ತಾತ್ವರ ವಾಗಲಿದೆ. ಆದ್ದರಿಂದ ನೀರು ಹರಿಸಬಾರದು ಎಂದು ಕೆಲ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಮುಂಗಾರು ಬೆಳೆಗೆ ಭದ್ರೆ ಹರಿದು ಬರುವಳೇ?

-

Profile
Ashok Nayak Aug 15, 2026 1:57 PM

ಗಣೇಶ್ ಕಮ್ಲಾಪುರ, ದಾವಣಗೆರೆ

ಭದ್ರಾ ಅಚ್ಚುಕಟ್ಟು ರೈತರ ಸಂದಿಗ್ದತೆ

ರೈತ ಮುಖಂಡರಲ್ಲೂ ಭಿನ್ನಾಭಿಪ್ರಾಯ

ನೀರು ಬಿಡದಿದ್ದರೆ 16ರಂದು ದಾವಣಗೆರೆ ಬಂದ್

ಜಲಾಶಯದ ನೀರು ಕುಡಿವ ನೀರು ಪೂರೈಕೆಗೆ ಮಾತ್ರ. ಹಾಗಾಗಿ, ಡ್ಯಾಂ ತುಂಬಿದರಷ್ಟೇ ಕೃಷಿಗೆ ನೀರು ಎಂಬ ಸರಕಾರದ ನಿರ್ಧಾರದಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ನಾಲೆಗೆ ನೀರು ಹರಿಸುತ್ತಾರೋ? ಇಲ್ಲವೋ? ಎಂಬ ಸಂದಿಗ್ದತೆಯಲ್ಲಿ ದಿನ ದೂಡುತ್ತಿದ್ದಾರೆ. ಅಂದುಕೊಂಡಷ್ಟು ಪ್ರಮಾಣದಲ್ಲಿ ಭದ್ರಾ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಜಲಾಶಯದ ನೀರು ಕೃಷಿಗೆ ಬಳಸಬೇಕೋ? ಬೇಡವೋ? ಎಂಬ ವಿಚಾರದಲ್ಲಿ ಭದ್ರಾ ಅಚ್ಚುಕಟ್ಟು ರೈತರು ಹಾಗೂ ರೈತ ಮುಖಂಡರ ನಡುವೆಯೂ ಭಿನ್ನಾಭಿಪ್ರಾಯ, ಗೊಂದಲ ಸೃಷ್ಟಿಯಾಗಿದೆ.

ಭತ್ತದ ಬೆಳೆಗೆ ನೀರು ಕೊಟ್ಟರೆ ಬೇಸಿಗೆಗೆ ತೊಂದರೆಯಾಗುತ್ತದೆ. ಅಲ್ಲದೆ, ಈಗಾಗಲೇ ನಾಟಿ ಮಾಡುವ ಸಮಯದಲ್ಲಿ ವಿಳಂಬವಾಗಿದೆ. ಹಾಗಾಗಿ, ನೀರು ಹರಿಸುವುದು ಬೇಡ. ಜತೆಗೆ, ಮಳೆಯ ಕೊರತೆ ಮುಂದುವರಿದು, ಜಲಾಶಯಕ್ಕೆ ಸಾಕಷ್ಟು ಒಳ ಹರಿವು ಬರದೇ ಇದ್ದರೆ ಬೇಸಿಗೆಗೆ ಹನಿ ನೀರಿಗೂ ತಾತ್ವರವಾಗಲಿದೆ. ಆದ್ದರಿಂದ ನೀರು ಹರಿಸಬಾರದು ಎಂದು ಕೆಲ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಈ ಹಿಂದೆ 145 ಅಡಿ ಇದ್ದಾಗಲೂ ನಾಲೆಗೆ ನೀರು ಹರಿಸಿರುವ ಉದಾಹರಣೆಗಳಿವೆ. ಈ ಬಾರಿ ಇನ್ನೂ ಮಳೆಗಾಲವಿದೆ. ಒಳಹರಿವಿನ ಪ್ರಮಾಣವೂ ಹೆಚ್ಚಿದೆ. ಜತೆಗೆ, ಈಗಾಗಲೇ 172.5 ಅಡಿ ನೀರು ಇದೆ. ಹಾಗಾಗಿ, ನೀರು ಬಿಡುವುದರಲ್ಲಿ ತಪ್ಪಿಲ್ಲ ಎಂಬುದು ಕೆಲ ರೈತ ಮುಖಂಡರು ವಾದವಾಗಿದೆ. ಮಳೆಗಾಲದಲ್ಲೇ ನೀರು ಕೊಡದವರು ಬೇಸಿಗೆ ಬೆಳೆಗೆ ನೀರು ಕೊಡುತ್ತಾರಾ? ಎಂಬ ಪ್ರಶ್ನೆಯೂ ಕೆಲ ರೈತರನ್ನು ಕಾಡುತ್ತಿದೆ. ಹೀಗಾಗಿ, ಏನಾದರೂ ಆಗಲಿ ಎಂದು ಕೆಲವರು ಸರ್ಕಾರ ಸ್ಪಷ್ಟನೆ ಉಲ್ಲಂಘಿಸಿ ನಾಟಿ ಸಸಿ ಚೆಲ್ಲಿದ್ದರೆ, ಕೆಲವರು ಪಂಪ್ಸೆಟ್, ಕೆರೆ, ಹಳ್ಳ ಮತ್ತಿತರ ಮೂಲಗಳಿಂದ ನೀರು ಬಳಸಿ ಈಗಾಗಲೇ ನಾಟಿ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ.

ಇದನ್ನೂ ಓದಿ: Davanagere South By-Election Results: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು

ಮುಂಗಾರಿಗೂ ನೀರು ಕೊಡಿ, ಬೇಸಿಗೆಗೂ ನೀರುಕೊಡಿ ಎಂದು ರೈತರು ಅಲವತ್ತುಕೊಳ್ಳುತ್ತಿದ್ದು, ಜಿಲ್ಲೆಯ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಕೆ.ಎಸ್.ಬಸವಂತಪ್ಪ ನೂತನ ಸಚಿವರಾದ ಆರಂಭ ದಲ್ಲೇ ರೈತರ ಕೂಗು ನೂತನ ಸಚಿವರಿಗೆ ತಲೆನೋವಾಗಿ ಪರಿಣಮಿಸಿದೆ.

ಬಿತ್ತನೆ ಬೀಜ ತಂದಿಟ್ಟುಕೊಂಡ ರೈತರು: ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಭತ್ತ ನಾಟಿ ಮಾಡುತ್ತಿದ್ದು, ಪ್ರತಿ ಬಾರಿ ಈ ವೇಳೆಗಾಗಲೇ ನಾಟಿ ಕಾರ್ಯ ಮುಗಿಯುತ್ತಾ ಹಂತಕ್ಕೆ ಬಂದಿರುತ್ತಿತ್ತು. ಸದ್ಯ ನಿರೀಕ್ಷಿತ ಮಟ್ಟದಲ್ಲಿ ಡ್ಯಾಂ ತುಂಬದಿರುವ ಕಾರಣ ಅಷ್ಟೂ ಜನ ನಾಟಿ ಮಾಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಕೆಲ ರೈತರು ಮಡಿ ಮಾಡಲು ಸಾವಿರಾರೂ ರೂ. ಖರ್ಚು ಮಾಡಿ ಬಿತ್ತನೆ ಬೀಜ ತಂದಿಟ್ಟುಕೊಂಡು ನೀರಿಗಾಗಿ ಕಾಯುತ್ತಿದ್ದಾರೆ.

ಉಗ್ರ ಪ್ರತಿಭಟನೆ ಎಚ್ಚರಿಕೆ ಈ ಕುರಿತು ಭಾರತೀಯ ರೈತ ಒಕ್ಕೂಟದಿಂದ ನೀರಾವರಿ ತಜ್ಞ ಪ್ರೊ.ಸಿ. ನರಸಿಂಹಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಭೆ ನಡೆಸಿ ಮುಂಗಾರು ಭತ್ತದ ಬೆಳೆಗೆ ನೀರು ಬಿಡುಗಡೆ ಮಾಡಲೇಬೇಕು ಎಂದು ಒತ್ತಾಯಿಸಲಾಗಿದ್ದು, ಬಿಡುಗಡೆ ಮಾಡದಿ ದ್ದರೆ ಆ.16ರಂದು ದಾವಣಗೆರೆ ಬಂದ್, ರಾಷ್ಟ್ರೀಯ ಹೆದ್ದಾರಿ ತಡೆ, ರೈಲು ಸಂಚಾರ ತಡೆದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದು, ಆಗಸ್ಟ್ 15ರ ವರೆಗೆ ಗಡುವು ಸಹ ನೀಡಿದ್ದಾರೆ.

image

ಭದ್ರಾ ಆಣೆಕಟ್ಟು ನೀರು ಹರಿಸುವ ಬಗ್ಗೆ ಅಚ್ಚುಕಟ್ಟು ಭಾಗದ ರೈತರ ಮನವಿಯನ್ನು ಜಿಲ್ಲೆಯ ಸಚಿವರ ಗಮನಕ್ಕೆ ತಂದಿದ್ದೇವೆ. ನೀರಾವರಿ ಸಲಹಾ ಸಮಿತಿ ಸಭೆ ಕರೆಯುವ ಬಗ್ಗೆ ಸರಕಾರದ ಹಂತದಲ್ಲಿ ನಿರ್ಧಾರವಾಗಬೇಕಿದ್ದು, ರೈತರ ಮನವಿಯನ್ನು ಸರಕಾರದ ಗಮನಕ್ಕೂ ತಂದಿದ್ದೇವೆ.

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ
image

ಕಾಡಾ ಮಾಜಿ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಬೇಸಿಗೆ ವೇಳೆಯಲ್ಲೂ ಕೊನೆ ಭಾಗಕ್ಕೆ ನೀರು ತಲುಪಿಸಿದ್ದರು. ಆದರೆ, ಈಗಿನ ಅಧ್ಯಕ್ಷರು ಧೈರ್ಯ ಮಾಡುತ್ತಿಲ್ಲ. ಅಣೆಕಟ್ಟೆಯಲ್ಲಿ ಈಗಾಗಲೇ 172.5 ಅಡಿ ನೀರಿದೆ. ಆದ್ದರಿಂದ ಮೇಲ್ಭಾಗದ ರೈತರ ಮಾತು ಕೇಳದೆ ಕೊನೆಭಾಗದ ರೈತರ ಹಿತ ಕಾಪಾಡಲು ತುರ್ತಾಗಿ ನೀರು ಹರಿಸಬೇಕು. ನಮ್ಮ ನೀರು ನಮ್ಮ ಹಕ್ಕು, ನಮಗೆ ನೀರು ಕೊಡಿ.

-ಹಾಳೂರು ನಾಗರಾಜ್, ರೈತ ಮುಖಂಡ.
image

ಅಕ್ರಮ ಪಂಪ್‌ಸೆಟ್‌ನವರ ಲಾಭಿಯಿಂದ ನೀರು ಬಿಡುತ್ತಿಲ್ಲ. ಸದ್ಯ ಡ್ಯಾಂ ತುಂಬುವ ಹಂತದಲ್ಲಿದೆ. ಇನ್ನೂ ಎರಡು ತಿಂಗಳು ಮಳೆಗಾಲವಿದೆ. ಈ ಅವಧಿಯಲ್ಲಿ ಮಳೆಗಾಲದ ಬೆಳೆ ಸಲೀಸಾಗಿ ಬೆಳೆಯ ಬಹುದು. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕೂಡಲೇ ನಾಲೆಗೆ ನೀರು ಹರಿಸಬೇಕು. ಕೃಷಿ ಯನ್ನೇ ಬದುಕನ್ನಾಗಿಸಿ ಕೊಂಡ ರೈತರ ಹಿತ ಕಾಪಾಡಬೇಕು. ಈ ಕುರಿತು ಜಿಲ್ಲಾ ಸಚಿವರುಗಳು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕು.

- ಶಾಮನೂರು ಲಿಂಗರಾಜ್, ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ