ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ಲೈದುಬೈ ವಿಮಾನ ದಾಳಿಕೋರನನ್ನು ಬಿಡಲೊಪ್ಪದ ಪ್ರಯಾಣಿಕರು; ಏನಿದು ಹೊಸ ವಿಡಿಯೊ?

Flydubai Attack: ಫ್ಲೈ ವಿಮಾನ ದಾಳಿಗೆ ಸಂಬಂಧಿಸಿದ ಸರಣಿ ವಿಡಿಯೊಗಳು ಹೊರ ಬರುತ್ತಲೇ ಇವೆ. ಇದೀಗ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಪ್ರಯಾಣಿಕರು ದಾಳಿಕೋರನನ್ನು ಸೆರೆ ಹಿಡಿದಿರುವುದನ್ನು ಕಾಣಬಹುದು. ಅಲ್ಲದೇ ಆತನ ಬಿಡುಗಡೆಗೆ ನಿರಾಕರಿಸುವುದನ್ನು ಕೂಡ ತೋರಿಸಲಾಗಿದೆ.

ಫ್ಲೈದುಬೈ ವಿಮಾನ ದಾಳಿ: ಬಿಡುಗಡೆಯಾದ ಮತ್ತೊಂದು ಹೊಸ ವಿಡಿಯೊ

ಸಂಗ್ರಹ ಚಿತ್ರ -

ನವದೆಹಲಿ: ದುಬೈನಿಂದ (dubai) ಇಸ್ರೇಲ್ (Israel)ಗೆ ಸಾಗುತ್ತಿದ್ದ ಫ್ಲೈ ದುಬೈ ವಿಮಾನದಲ್ಲಿ(flydubai flight) ನಡೆದ ಭಯೋತ್ಪಾದಕ ದಾಳಿಗೆ (flight attack) ಸಂಬಂಧಿಸಿ ಇದೀಗ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದೆ.ಇದರಲ್ಲಿ ಫ್ಲೈದುಬೈ ವಿಮಾನದ ಸಹ ಪೈಲಟ್‌ ಹಮಾಮ್ ಅಲ್ ಹಮ್ಮಮಿನನ್ನು ಬಿಡುಗಡೆ ಮಾಡಲು ಪ್ರಯಾಣಿಕರು ನಿರಾಕರಿಸುವುದನ್ನು ಕಾಣಬಹುದು. ಸುಮಾರು 45 ಸೆಕೆಂಡುಗಳ ಈ ವಿಡಿಯೊದಲ್ಲಿ ದಾಳಿಕೋರನನ್ನು ವಿಮಾನದೊಳಗೆ ಕೈಗಳನ್ನು ಬೆನ್ನ ಹಿಂದೆ ಕಟ್ಟಿಸಿ ಮಂಡಿಯೂರಿ ಕುರಿಸಿದ್ದು, ಆತನ ಬಟ್ಟೆಗಳಲ್ಲಿ ರಕ್ತದ ಕಲೆಗಳಿರುವುದನ್ನು ಕಾಣಬಹುದಾಗಿದೆ.

ಇಸ್ರೇಲ್ ನ ಟೆಲ್ ಅವಿವ್ ಗೆ ದುಬೈನಿಂದ ತೆರಳುತ್ತಿದ್ದ ಫ್ಲೈದುಬೈ ವಿಮಾನ ಎಫ್ ಝೆಡ್1073 ರಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ ಒಮಾನಿ ಸಹ ಪೈಲಟ್‌ ಹಮಾಮ್ ಅಲ್ ಹಮ್ಮಮಿನನ್ನು ಪ್ರಯಾಣಿಕರು ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಸೌದಿ ಅರೇಬಿಯಾದಲ್ಲಿ ತುರ್ತು ಲ್ಯಾಂಡ್ ಆದ ಬಳಿಕವು ಪ್ರಯಾಣಿಕರು ಆತನನ್ನು ಪೊಲೀಸರಿಗೆ ಹೊರತುಪಡಿಸಿ ಬೇರೆ ಯಾರಿಗೂ ಬಿಟ್ಟುಕೊಡಲು ಒಪ್ಪಲಿಲ್ಲ.

“ಯುದ್ಧ ಇನ್ನೂ ಮುಗಿದಿಲ್ಲ”: ಫ್ಲೈದುಬೈ ವಿಮಾನ ದಾಳಿ ಬೆನ್ನಲ್ಲೇ ಇಸ್ರೇಲ್‌ಗೆ ಅಲ್‌ಖೈದಾ ಎಚ್ಚರಿಕೆ

ಈ ಕುರಿತು ಇಸ್ರೇಲ್ ಮಾಧ್ಯಮವೊಂದು ವಿಡಿಯೊ ಹಂಚಿಕೊಂಡಿತ್ತು. ಸುಮಾರು 45 ಸೆಕೆಂಡುಗಳ ಈ ವಿಡಿಯೊದಲ್ಲಿ ಹಮಾಮ್ ಅಲ್ ಹಮ್ಮಮಿ ವಿಮಾನದಲ್ಲಿ ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ಮಂಡಿಯೂರಿ ಕುಳಿತಿರುವುದನ್ನು ಕಾಣಬಹುದು. ಆತನನ್ನು ನಿಯಂತ್ರಣದಲ್ಲಿರಿಸಿದ್ದ ಪ್ರಯಾಣಿಕರು ಪೊಲೀಸರಿಗೆ ಮಾತ್ರ ಆತನನ್ನು ಒಪ್ಪಿಸುವುದಾಗಿ ಹೇಳುತ್ತಿರುವುದನ್ನು ಕಾಣಬಹುದು.

ಮಚ್ಚಾರ್ ಮೇಲೆ ಅಲ್ ಹಮ್ಮಮಿ ವಿಮಾನದ ತುರ್ತು ರಕ್ಷಣಾ ಆಯುಧದಿಂದ ದಾಳಿ ನಡೆಸಿ ದುಬೈ ಫ್ಲೈ ವಿಮಾನವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದನು. ಈ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸ ಪ್ರದರ್ಶಿಸಿದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿದರು.



ಪ್ರಯಾಣಿಕರು ಸುಮಾರು ಒಂದು ಗಂಟೆ 40 ನಿಮಿಷಗಳ ಕಾಲ ಆತನನ್ನು ವಶದಲ್ಲಿರಿಸಿಕೊಂಡಿದ್ದರು. ಸ್ಥಳೀಯ ಪೊಲೀಸರಿಗೆ ಒಪ್ಪಿಸುವ ಮೊದಲು ಕೆಲವು ನಿಮಿಷಗಳ ಕಾಲ ಅವರು ಕಾಯುವ ನಿರ್ಧಾರವನ್ನು ಕೂಡ ಮಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಅಲ್ ಹಮ್ಮಮಿನನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದ ಇಬ್ಬರು ಪ್ರಯಾಣಿಕರೊಂದಿಗೆ ವಿಮಾನ ಸಿಬ್ಬಂದಿಯ ಸದಸ್ಯರು ಬಿಡುಗಡೆ ಮಾಡಿ ತಮಗೆ ಒಪ್ಪಿಸುವಂತೆ ಕೇಳಿಕೊಂಡರು. ಅವರು ಹಾಗೇಕೆ ಹೇಳುತ್ತಿದ್ದರು ಎಂಬುದು ನಮಗೆ ತಿಳಿದಿರಲಿಲ್ಲ. ಆದರೆ ಪ್ರಯಾಣಿಕರು ಅನುಮಾನ ವ್ಯಕ್ತಪಡಿಸಿ ಬಿಡುಗಡೆಗೆ ಒಪ್ಪಲಿಲ್ಲ. ಈ ಸಂದರ್ಭದಲ್ಲಿ ಅವರ ನಡುವೆ ವಾಗ್ವಾದ ನಡೆದಿದೆ.

ಸಹ ಪೈಲಟ್‌ನನ್ನು ಕೊಲ್ಲುವುದಕ್ಕಿಂತ ಹೆಚ್ಚಿನ ಹಾನಿಯನ್ನು ತಡೆಯುವುದು ಪ್ರಯಾಣಿಕರ ಉದ್ದೇಶವಾಗಿತ್ತು. ಪ್ರಯಾಣಿಕರು ಅಲ್ ಹಮ್ಮಾಮಿಗೆ ಆಮ್ಲಜನಕದ ಮುಖವಾಡವನ್ನು ಕೂಡ ನೀಡಿದ್ದರು. ಯಾಕೆಂದರೆ ಆತ ಬದುಕಿ ಉಳಿದು ತನಿಖಾಧಿಕಾರಿಗಳ ಮುಂದೆ ವಿಚಾರಣೆಯನ್ನು ಎದುರಿಸಬೇಕೆಂದು ಅವರು ಬಯಸಿದ್ದರು ಎನ್ನಲಾಗಿದೆ.

ದಾಳಿ ಸಮಯದಲ್ಲಿ ಫ್ಲೈದುಬೈ ವಿಮಾನದಲ್ಲಿದ್ದ ಇಬ್ಬರು ಹೆಚ್ಚುವರಿ ಪೈಲಟ್‌ಗಳು ಯಾರು? ಏನಿವರ ಪಾತ್ರ?

ವಿಮಾನವು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿದ ಮೇಲೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಈ ನಡುವೆ ಸ್ಮಿತ್ ಮಚ್ಚಾರ್ ಗೆ ಪ್ರಯಾಣಿಕರಾದ ಯಾನಿವ್ ಹಯೂನ್, ಅಸಫ್ ರಾಜುವಾನ್ ಮತ್ತು ತ್ಜ್ವಿಕಾ ಮೇನೆಸ್ ಸೇರಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕರಿಸಿದರು, ದಂತ ವೈದ್ಯ ಶೋಟಾ ಮುಸೇವ್ ಅವರು ಗಾಯಗೊಂಡಿದ್ದ ಸ್ಮಿತ್ ಮಚ್ಚಾರ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದರು.