World-Class Theme Park: ಬಾಲಭವನದಲ್ಲಿ ಶೀಘ್ರವೇ ವಿಶ್ವಮಟ್ಟದ ಥೀಮ್ ಪಾರ್ಕ್
ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ತಾಣದ ಬಾಲಭವನ ದಲ್ಲಿ ಸದ್ಯದ ಅಂತಾರಾಷ್ಟ್ರೀಯ ಮಟ್ಟದ ಥೀಮ್ ಪಾರ್ಕ್ ಆರಂಭವಾಗಲಿದೆ. ಅಮೆರಿಕದಲ್ಲಿ ರುವ ಡಿಸ್ನಿ ವರ್ಲ್ಡ್ ಹಾಗೂ ಅಬುದಾಬಿನಲ್ಲಿರುವ ಫೆರಾರಿ ವರ್ಲ್ಡ್ ಗಳಂತೆ ಮಕ್ಕಳ ಅತ್ಯಾ ಕರ್ಷಕ ಆಟೋಟಗಳ, ವಿನೋದಾವಳಿಗಳ ಸುಂದರ ಲೋಕವನ್ನೇ ಬಾಲಭವನದಲ್ಲಿ ನಿರ್ಮಿಸಲು ಸರಕಾರ ಮುಂದಾಗಿದೆ.
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮಕ್ಕಳಿಗಾಗಿ ವಿಶೇಷ ಆಟಗಳ ಅಪರೂಪದ ತಾಣ ನಿರ್ಮಾಣ, ಸಚಿವರು, ಅಧ್ಯಕ್ಷರ ವಿಶೇಷ ಆಸಕ್ತಿಯ ಯೋಜನೆ
ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ತಾಣದ ಬಾಲಭವನ ದಲ್ಲಿ ಸದ್ಯದ ಅಂತಾರಾಷ್ಟ್ರೀಯ ಮಟ್ಟದ ಥೀಮ್ ಪಾರ್ಕ್ ಆರಂಭವಾಗಲಿದೆ. ಅಮೆರಿಕ ದಲ್ಲಿರುವ ಡಿಸ್ನಿ ವರ್ಲ್ಡ್ ಹಾಗೂ ಅಬುದಾಬಿನಲ್ಲಿರುವ ಫೆರಾರಿ ವರ್ಲ್ಡ್ ಗಳಂತೆ ಮಕ್ಕಳ ಅತ್ಯಾಕರ್ಷಕ ಆಟೋಟಗಳ, ವಿನೋದಾವಳಿಗಳ ಸುಂದರ ಲೋಕವನ್ನೇ ಬಾಲಭವನ ದಲ್ಲಿ ನಿರ್ಮಿಸಲು ಸರಕಾರ ಮುಂದಾಗಿದೆ.
ಬಾಲಭವನದಲ್ಲಿ ಆಂತಾರಾಷ್ಟ್ರೀಯ ಮಟ್ಟದ ಮಕ್ಕಳ ಆಟೋಟಗಳ ಲೋಕ ಹಾಗೂ ಆಟಗಳನ್ನಾಡುತ್ತಲೇ ಮಕ್ಕಳ ಮನೋವಿಕಾಸ ಆಗಬೇಕೆನ್ನುವ ನಿಟ್ಟಿನಲ್ಲಿ ಬಾಲಭವನ ವನ್ನು ಒಂದು ಅಂತಾರಾಷ್ಟ್ರೀಯ ಥೀಮ್ ಪಾರ್ಕ್ ರೀತಿ ಅಭಿವೃದ್ದಿ ಮಾಡಬೇಕೆನ್ನುವ ಚಿಂತನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯದ್ದಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ನೆಹರು ಬಾಲಭವನ ಸುಮಾರು 11 ಎಕರೆ ಪ್ರದೇಶದಲ್ಲಿದ್ದು, ಇದು 1965 ರಿಂದಲೇ ಅಸ್ತಿತ್ವದಲ್ಲಿ ಇತ್ತು.
ಇದನ್ನೂ ಓದಿ: R T Vittalmurthy Column: ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ
ಆದರೂ 1985ರಲ್ಲಿ ಅಧಿಕೃತವಾಗಿ ಸೂಕ್ತ ಸೊಸೈಟಿಯೊಂದಿಗೆ ಆರಂಭವಾಗಿ ನಂತರ ಸುವ್ಯವಸ್ಥಿತ ರೀತಿಯಲ್ಲಿ ಉತ್ತಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಮೊಬೈಲ್ ಫೋನ್ ನಿಂದಾಗಿ ಮಕ್ಕಳ ಆಟೋಟವೇ ಕಡಿಮೆಯಾಗಿವೆ. ಹೀಗಾಗಿ ಮಕ್ಕಳು ಹೆಚ್ಚಾಗಿ ಆಟವಾಡುತ್ತಾ ಕಲಿಯ ಬೇಕೆಂದು ಬಾಲಭವನ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಹಾಗೆಯೇ ಮಕ್ಕಳನ್ನು ಬರೀ ಅಧ್ಯಯನಕ್ಕೆ ಮಾತ್ರ ಸೀಮೀತವಾಗದಂತೆ ನೋಡಿಕೊಳ್ಳಲು ಹಾಗೂ ಇತರ ಚಟುವಟಿ ಕೆಗಳೊಂದಿಗೂ ಅವರ ಮನಸ್ಸು ವಿಕಾಸವಾಗಬೇಕು. ಅವರ ಸರ್ವತೋಮುಖ ಬೆಳವಣಿಗೆ ಆಗಬೇಕೆಂದು ಸಚಿವರು ಕೆಲವು ವಿಶೇಷ ಕಾರ್ಯಕ್ರಮ ಗಳನ್ನೂ ಹಾಕಿಕೊಂಡಿದ್ದಾರೆ.
ಈ ತಾಣ ಹೇಗಿತ್ತು, ಹೇಗಾಯ್ತು?: ಕೋವಿಡ್ ಸಂದರ್ಭದಲ್ಲಿ ಅಪಾಯಗಳನ್ನು ತಪ್ಪಿಸಲು ಬಾಲಭವನವನ್ನು ಸುಮಾರು ಮೂರು ವರ್ಷಗಳ ಕಾಲ ಬಾಲ ಭವನವನ್ನು ಮುಚ್ಚಲಾಗಿತ್ತು. ನಂತರ 2023ರಲ್ಲಿ ಮತ್ತೆ ಆರಂಭಿಸಿ ಸಾಕಷ್ಟು ಅಭಿವೃದ್ದಿ ಮಾಡಲಾಗಿದೆ. ಈ ಮೂಲಕ ಮಕ್ಕಳ ಚಟುವಟಿಕೆಗಳನ್ನು ಹೆಚ್ಚಿಸಲಾಗಿದೆ.
ವಿಶೇಷವಾಗಿ ಮಕ್ಕಳ ರೈಲು ಈಗ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಅದರ ಸಂಚಾರದ ಸುತ್ತುಗಳು ಮತ್ತು ಅವರ ಬಳಕೆಯ ರೀತಿಯನ್ನು ಹಿಂದೆಂದಿಗಿಂತಲೂ ಹೆಚ್ಚಿಸಲಾಗಿದೆ. ಅದೇ ರೀತಿ 10 ವರ್ಷಗಳ ಕಾಲ ಸ್ಥಗಿತವಾಗಿದ್ದ ಹಾಯಿ ದೋಣಿ, ಬೋಟಿಂಗ್ ವ್ಯವಸ್ಥೆ ಯನ್ನು ಸುಧಾರಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ನೆರವಿನೊಂದಿಗೆ ಇದನ್ನು ಹೆಚ್ಚಿ ಅಭಿವೃದ್ಧಿ ಮಾಡಲಾಗಿದೆ. ಅನೇಕ ವರ್ಷಗಳಿಂದ ಮುಚ್ಚಲಾಗಿದ್ದ ಸೈನ್ಸ್ ಪಾರ್ಕ್, ಮಕ್ಕಳ ಪಾರ್ಕ್ ಮತ್ತು ವಿಕಲಾಂಗರ ಸ್ನೇಹಿ ಪಾರ್ಕ್ ಸೇರಿದಂತೆ ಅನೇಕ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಿ ಮಕ್ಕಳನ್ನು ಆಕರ್ಷಿಸುವಂತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಭವನದಲ್ಲಿ ಈಗ ಏನೆಲ್ಲಾ ಇದೆ ?
ಮಕ್ಕಳ ಚಟುವಟಿಕೆಗಳನ್ನು ಹೆಚ್ಚಿಸಲು ರಾಜ್ಯದ 224 ತಾಲೂಕುಗಳಲ್ಲೂ ಮಕ್ಕಳಿಗಾಗಿ ತಿಂಗಳಿಗೊಂದಾದರೂ ಕಾರ್ಯಕ್ರಮ ನಡೆಸಲೇಬೇಕೆಂದು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶಿಸಿದ್ದಾರೆ. ಇದನ್ನು ರಾಜ್ಯಾದ್ಯಂತ ಮಕ್ಕಳು ಸದ್ಬಳಕೆ ಮಾಡಿಕೊಂಡು ಜಾಗೃತಿ ಯಾಗುವಂತೆ ಮಾಲಾಗಿದೆ. ಈಗ ಮಕ್ಕಳ ವಿಶೇಷ ಕಾರ್ಯಕ್ರಮಗಳ ಮೂಲಕ ಅವರ ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕು. ಹೇಗೆ ಯಶಸ್ವಿಯಾಗಬೇಕೆನ್ನುವ ಜಾಗೃತಿ ಕಾರ್ಯಕ್ರಮ ಗಳನ್ನೂ ನಡೆಸಲಾಗುತ್ತಿದೆ. ಇದರಿಂದ ನಮ್ಮ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳಿಗೆ ಹೆಚ್ಚಿನ ಸಹಾಯವಾಗುತ್ತಿದೆ. ವಿಶೇಷವಾಗಿ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಟ್ರಾಫಿಕ್ ಪಾರ್ಕ್ ಕೂಡ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ಮಕ್ಕಳು ಸಣ್ಣ ಆಟಿಕೆ ವಾಹನಗಳನ್ನು ಚಲಿಸಿ, ಆ ಮೂಲಕ ಮಕ್ಕಳು ಸಿಗ್ನಲ್ʼಗಳನ್ನು ನೋಡಿ ಕೊಂಡು ನಿಲ್ಲುವುದು, ಹೋಗುವುದು ಸೇರಿದಂತೆ ಅನೇಕ ಸಂಚಾರಿ ನಿಯಮಗಳನ್ನು ಕಲಿಯುತ್ತಾರೆ.
ಹಾಗೆಯೇ ಪಾಲಿಸುತ್ತವೆ. ಜತೆಗೆ ಮಕ್ಕಳಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಆಕರ್ಷಣೆಯಾಗಿರುವ ಕಸದ ಬುಟ್ಟಿಗಳು ಮತ್ತು ಅದರ ಮೇಲೆ ಸಂದೇಶಗಳನ್ನು ಹಾಕಿ ಮಕ್ಕಳಿಂದ ಆಕರ್ಷಣೆಯಾಗುವಂತೆ ಮಾಡಲಾಗಿದೆ. ಈ ಮೂಲಕ ಮಕ್ಕಳು ಎಂದರಲ್ಲಿ ಕಸ ಹಾಕದೆ ಕಸದ ಬುಟ್ಟಿಯಲ್ಲಿ ಮಾತ್ರ ಹಾಕುವಂತೆ ಮಾಡಲಾಗಿದೆ.
ಬಡ ಮಕ್ಕಳ ವಿಶೇಷ ಆಟದ ತಾಣ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಂದ ನಂತರ ಬಾಲ ಭವನ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅವರ ಸಚಿವರಾದ ನಂತರ ಒಂದೂವರೆ ವರ್ಷಗಳ ಕಾಲ ಅವರೇ ಅಧ್ಯಕ್ಷರಾಗಿದ್ದರು. ನಂತರ ಸರಕಾರ ಹೊಸ ಅಧ್ಯಕ್ಷರನ್ನು ನೇಮಕ ಮಾಡಿತ್ತು. ಇವರು ಬಾಲ ಭವನಕ್ಕೆ ನೀಡಿದ ವಿಶೇಷ ಆಸಕ್ತಿಯಿಂದ ಇಂದು ಬಾಲಭವನ ಉತ್ತಮ ಹಾಗೂ ಅತ್ಯಂತ ಆಕರ್ಷಣೀಯವಾಗಿ ಕಾರ್ಯ ನಿರ್ವಹಿಸುವಂತಾಗಿದೆ. ಬಾಲ ಭವನ ರಾಜ್ಯದ 19 ಜಿಲ್ಲೆಗಳಲ್ಲಿ ಸ್ವಂತ ಸ್ವತ್ತುಗಳನ್ನು ಹೊಂದಿದೆ. ಇದರ ಪೈಕಿ 8 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡಗಳೂ ಇವೆ. ಈ ಆಸ್ತಿಗಳಲ್ಲಿ ಮಕ್ಕಳಿಗೆ ಬೇಕಾದ ಆಟಿಕೆಗಳನ್ನು ಆಭಿವೃದ್ಧಿ ಪಡಿಸುವುದು ಹಾಗೂ ಆ ಆಸ್ತಿಗಳು ಕಬಳಿಕೆಯಾಗಿ ಕೈ ತಪ್ಪದಂತೆ ರಕ್ಷಿಸುವಂತೆ ಮಾಡಿದ್ದಾರೆ. ಬಾಲ ಭವನದ ಮತ್ತೊಂದು ವಿಶೇಷ ಎಂದರೆ ಸುಮಾರು 30 ವರ್ಷಗಳ ಹಿಂದೆ ಇದ್ದ ಟಿಕೆಟ್ ದರವನ್ನೇ ಈಗಲೂ ಮುಂದುವರಿಸಲಾಗಿದೆ. ಮಕ್ಕಳ ಪ್ರವೇಶ ದರ ಮತ್ತು ಆಟಿಕೆಗಳ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಲಿಲ್ಲ. ಅದರ ನಿರ್ಧಾರ ವನ್ನೂ ಮಾಡಿಲ್ಲ. ಇದರಿಂದ ಎಲ್ಲಾ ವರ್ಗದ ಮಕ್ಕಳಿಗೂ ಇಲ್ಲಿನ ಆಟಿಕೆಗಳ ಸೌಲಭ್ಯ ಸಿಗುವಂತೆ ಮಾಡಲಾಗಿದೆ ಎಂದು ಜವಾಹರ ಬಾಲ ಭವನ ಕಾರ್ಯದರ್ಶಿ ಬಿ.ಎಚ್. ನಿಶ್ಚಲ್ ಹೇಳಿದ್ದಾರೆ.
![]()
ಬಾಲಭವನವನ್ನು ಮಕ್ಕಳ ಅಂತಾರಾಷ್ಟ್ರೀಯ ಆಟದ ತಾಣ ಮಾಡಬೇಕೆನ್ನುವುದು ನಮ್ಮ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅಧ್ಯಕ್ಷರಾದ ಬಿ.ಆರ್.ನಾಯ್ಡು ಅವರ ಕನಸಾಗಿತ್ತು. ಈಗ ನನಸಾಗುತ್ತಿದೆ. ಈಗ ಬೆಳಗಾವಿಯಲ್ಲಿ ಸುಮಾರು 80 ಕೋಟಿ ಮೌಲ್ಯದ 4 ಎಕರೆ ಆಸ್ತಿ ಬಾಲಭವನಕ್ಕೆ ಸಿಗುವಂತೆ ಮಾಡಿದ್ದಾರೆ. ಇಲ್ಲಿ ಮಕ್ಕಳಿಗಾಗಿ ವಿವಿಧ ಆಟಿಕೆಗಳು ಮತ್ತು ಆಟದ ತಾಣವನ್ನಾಗಿ ರೂಪಿಸಲಾಗುತ್ತಿದೆ.
-ಬಿ.ಎಚ್. ನಿಶ್ಚಲ್, ಜವಹರ ಬಾಲ ಭವನ ಕಾರ್ಯದರ್ಶಿ
![]()
ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೆಚ್ಚು ಆಸಕ್ತಿ ವಹಿಸಿರುವುದರಿಂದ ಬಾಲ ಭವನ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗಿದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿ ಪಡಿಸುವ ಪ್ರಯತ್ನ ಪ್ರಗತಿಯಲ್ಲಿದೆ.
- ಬಿ.ಆರ್.ನಾಯ್ಡು, ಅಧ್ಯಕ್ಷರು, ಜವಹರ ಬಾಲ ಭವನ.