ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Allu Arjun: ಏರ್‌ಪೋರ್ಟ್‌ನಲ್ಲಿ ಮಾಸ್ಕ್ ತೆಗೆಯಲು ಒಪ್ಪದ ನಟ ಅಲ್ಲು ಅರ್ಜುನ್; ವಿಡಿಯೊ ವೈರಲ್

ಪುಷ್ಪಾ 2 ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್ ಹೆಚ್ಚಿದ್ದು ಸಿನಿಮಾ ರಂಗದಲ್ಲಿಯೂ ಹೊಸ ಹೊಸ ಆಫರ್ಸ್ ಬರುತ್ತಿದೆ. ಹೀಗಾಗಿ ಶೂಟಿಂಗ್ ಹಾಗೂ ವೈಯಕ್ತಿಕ ಕಾರಣದಿಂದ ಆಗಾಗ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಇದರ ಬೆನ್ನಲ್ಲೆ ಪುಷ್ಪ 2 ಸಿನಿಮಾ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರು ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಸದ್ಯ ಅವರ ವಿಡಿಯೊ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಏರ್‌ಪೋರ್ಟ್‌ನಲ್ಲಿ ಮಾಸ್ಕ್ ತೆಗೆಯಲು ಒಪ್ಪದ ನಟ ಅಲ್ಲು ಅರ್ಜುನ್

Profile Pushpa Kumari Aug 10, 2025 7:08 PM

ನವದೆಹಲಿ: ಆರ್ಯ, ಪುಷ್ಪ ಸಿನಿಮಾ ಖ್ಯಾತಿಯ ನಟ ಅಲ್ಲು ಅರ್ಜುನ್ (Allu Arjun) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಪುಷ್ಪ 2 ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್ ಹೆಚ್ಚಿದ್ದು ಸಿನಿಮಾರಂಗದಲ್ಲಿಯೂ ಹೊಸ ಹೊಸ ಆಫರ್ಸ್ ಬರುತ್ತಿದೆ. ಹೀಗಾಗಿ ಶೂಟಿಂಗ್ ಹಾಗೂ ವೈಯಕ್ತಿಕ ಕಾರಣದಿಂದ ಆಗಾಗ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಇದರ ಬೆನ್ನಲ್ಲೆ ಪುಷ್ಪ 2 ಸಿನಿಮಾ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರು ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಸದ್ಯ ಅವರ ವಿಡಿಯೊ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ಅಲ್ಲು ಅರ್ಜುನ್ ಅವರು ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡುತ್ತಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ವೈರಲ್ ಆದ ವಿಡಿಯೊದಲ್ಲಿ ನಟ ಅಲ್ಲು ಅರ್ಜುನ್ ಅವರು ಮಾಸ್ಕ್ ಹಾಕಿ ವಿಮಾನ ನಿಲ್ದಾಣದ ಪ್ರವೇಶ ದ್ವಾರದತ್ತ ಬರುತ್ತಿದ್ದರು. ಅದನ್ನು ಕಂಡ ಸಿಬಂದಿಗಳು ಅವರನ್ನು ತಡೆಹಿಡಿದಿದ್ದಾರೆ. ಅಲ್ಲಿದ್ದ ಸಿಬಂದಿಗಳು ಅವರನ್ನು ಪರಿಶೀಲನೆ ಮಾಡಬೇಕು ಎಂದು ಕೇಳಿದ್ದಾರೆ. ಹೀಗಾಗಿ ಅವರ ಮಾಸ್ಕ್ ಮತ್ತು ಸನ್ ಗ್ಲಾಸ್‌ಗಳನ್ನು ತೆಗೆಯುವಂತೆ ಹೇಳಿದ್ದಾರೆ. ಇದಕ್ಕೆ ನಟ ಅಲ್ಲು ಅರ್ಜು ಯಾಕೆ ? ಏನು ಎಂದೆಲ್ಲ ಸಿಬಂದಿಗಳ ಜೊತೆಗೆ ವಾಗ್ವಾದ ಮಾಡುತ್ತಿದ್ದು ಆ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.

ನಟ ಅಲ್ಲು ಅರ್ಜುನ್ ಅವರು ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡುತ್ತಿರುವ ದೃಶ್ಯ ಗಳನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ನಟ ಅಲ್ಲು ಅರ್ಜುನ್ ಜೊತೆಗಿದ್ದ ಒಬ್ಬರು ಅಲ್ಲಿನ ಅಧಿಕಾರಿಯೊಂದಿಗೆ ಮಾತನಾಡುತ್ತಿರುವುದು ಕೂಡ ಕಾಣಬಹುದು. ಇದಾಗಿ ಸ್ವಲ್ಪ ಸಮ ಯದ ಅನಂತರ ಮಾಸ್ಕ್ ತೆಗೆಯಲು ಒಪ್ಪಿದರು. ಈ ಮೂಲಕ ಅವರು ತಮ್ಮ ಮಾಸ್ಕ್ ಹಾಗೂ ಸನ್ ಗ್ಲಾಸ್ ತೆಗೆದಿದ್ದು ಸದ್ಯ ಈ ವಿಡಿಯೊ ವೈರಲ್ ಆಗುತ್ತಿದೆ.

ಈ ವಿಡಿಯೊ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದ್ದು ಈ ಬಗ್ಗೆ ನಾನಾ ತರನಾಗಿ ಕಾಮೆಂಟ್ ಮಾಡು ತ್ತಿದ್ದಾರೆ. ಸಿಬಂದಿಗಳು ಅವರ ಕರ್ತವ್ಯ ಪಾಲಿಸಿದ್ದಾರೆ. ಭದ್ರತಾ ಪ್ರೋಟೋಕಾಲ್ ಅನ್ನು ಎಲ್ಲರು ಅನುಸರಿಸಲೇ ಬೇಕು ಎಂದು ಬಳಕೆದಾರರೊಬ್ಬರು ಈ ಬಗ್ಗೆ ಕಾಮೆಂಟ್ ಹಾಕಿದ್ದಾರೆ. ಇದು ಪುಷ್ಪ ಸಿನಿಮಾ ಅಲ್ಲ ಈ ದೇಶದ ಕಾನೂನಿನಲ್ಲಿ ಎಲ್ಲರೂ ಸಮಾನರು, ನಿಯಮ ಇದ್ದರೆ ಅದನ್ನು ಪಾಲಿ ಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಹಾಕಿದ್ದಾರೆ.

ಪುಷ್ಪ 2 ಸಿನಿಮಾ ಬಳಿಕ ನಟ ಅಲ್ಲು ಅರ್ಜುನ್ ಅವರು ಅಟ್ಲೀ ನಿರ್ದೇಶನದ AA22xA6 ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇದೇ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಸಹ ನಟಿಸಿದ್ದಾರೆ. ಈ ಚಿತ್ರವು 2026 ರ ಡಿಸೆಂಬರ್ ಅಥವಾ 2027 ರ ಜನವರಿಯಲ್ಲಿ ಬಹು ಭಾಷೆಗಳಲ್ಲಿ ವಿಶ್ವಾದ್ಯಂತ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ.