ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

My Hero Movie: ಮೇ 30 ರಿಂದ ಅಮೇಜಾನ್ ಪ್ರೈಮ್‌ನಲ್ಲಿ ʼಮೈ ಹೀರೋʼ ಪ್ರದರ್ಶನ

My Hero Movie: ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ಮೈ ಹೀರೋ ಚಿತ್ರದಲ್ಲಿ ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ "ಮೈ ಹೀರೊ" ಚಿತ್ರಕ್ಕಿದೆ.

ಮೇ 30 ರಿಂದ ಅಮೇಜಾನ್ ಪ್ರೈಮ್‌ನಲ್ಲಿ ʼಮೈ ಹೀರೋʼ ಪ್ರದರ್ಶನ

Profile Prabhakara R May 25, 2025 6:25 PM

ಬೆಂಗಳೂರು: ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ʼಮೈ ಹೀರೋʼ (My Hero Movie) ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲದೇ ಪ್ರಪಂಚದ ಪ್ರಸಿದ್ಧ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಂಡು ಪ್ರಶಸ್ತಿಯನ್ನು ಪಡೆದುಕೊಂಡಿರುವ ಈ ಚಿತ್ರ ಇದೇ ಮೇ 30 ರಿಂದ ಅಮೇಜಾನ್ ಪ್ರೈಮ್ ನಲ್ಲಿ ಪ್ರದರ್ಶನವಾಗಲಿದೆ. ಇಡೀ ಪ್ರಪಂಚವೇ ಎದುರಿಸುತ್ತಿರುವ ಸೂಕ್ಷ್ಮ ಸಮಸ್ಯೆಯನ್ನು ಸಿನಿಮಾ ಮೂಲಕ ತೆರೆಯ ಮೇಲೆ ತರುವಲ್ಲಿ ನಿರ್ದೇಶಕ ಅವಿನಾಶ್ ವಿಜಯ್ ಕುಮಾರ್ ಗೆದ್ದಿದ್ದಾರೆ.

My Hero Movie (1)

ಈ ಚಿತ್ರ ಪ್ರಸಿದ್ಧ ಚಿತ್ರ ಎಸ್‌ಸಿ‌ಎ ಲಾಸ್ ಏಂಜಲಸ್ ಇಂಟರ್‌ನ್ಯಾಷನಲ್‌ ಅವಾರ್ಡ್ಸ್ (ಯುಎಸ್), ಐಎಫ್‌ಎ ಇಂಡೀ ಫಿಲ್ಮ್‌ ಅವಾರ್ಡ್ಸ್‌ (ಪಾಕಿಸ್ತಾನ), ಲಂಡನ್ ಲಿಫ್ಟ್-ಆಫ್ ಫಿಲ್ಮ್ ಫೆಸ್ಟಿವಲ್ (ಇಂಗ್ಲೆಂಡ್), ಚೆನ್ನೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಭಾರತ) ಮುಂತಾದ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ‌. ವೆಸ್ಟರ್ನ್ ಕೆನಡಿಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (ಕೆನಡಾ), ಬ್ಯಾಂಕಾಕ್‌ ಮೂವಿ ಅವಾರ್ಡ್ಸ್‌ (ಥಾಯ್ಲೆಂಡ್), ನ್ಯೂಯಾರ್ಕ್ ಇಂಟರ್‌ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ (ಯುಎಸ್), ಡಲಾಸ್ ಮೂವಿ ಫೆಸ್ಟ್‌ (ಯುಎಸ್), ಮಿಲಾನ್ ಇಂಡಿಪೆಂಡೆಂಟ್‌ ಅವಾರ್ಡ್ಸ್ (ಇಟಲಿ), ಜೈಪುರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಭಾರತ) ಸೇರಿ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಗಳಿಸಿದೆ.

My Hero Movie (2)

ಇನ್ನು ಸ್ವೀಡನ್ ಫಿಲ್ಮ್‌ ಅವಾರ್ಡ್ಸ್ (ಸ್ವೀಡನ್), ಹಾಲಿವುಡ್ ಇಂಟರ್‌ನ್ಯಾಷನಲ್‌ ಗೋಲ್ಡನ್ ಏಜ್ ಫೆಸ್ಟಿವಲ್ (ಅಮೆರಿಕ) ನಾಶ್ವಿಲ್ಲೆ ಇಂಡಿಪೆಂಡೆಂಟ್‌ ಫಿಲ್ಮ್‌ಮೇಕರ್ಸ್‌ ಫೆಸ್ಟಿವಲ್ (ಅಮೆರಿಕ) ಮುಂತಾದ ಚಲನಚಿತ್ರೋತ್ಸವಗಳಲ್ಲಿ ನಾಮ ನಿರ್ದೇಶನಗೊಂಡಿದೆ ಎಂದು ನಿರ್ದೇಶಕ ಅವಿನಾಶ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದತ್ತಣ್ಣ, ಪ್ರಕಾಶ್ ಬೆಳವಾಡಿ, ಎರಿಕ್ ರಾಬರ್ಟ, ನಿರಂಜನ್ ದೇಶಪಾಂಡೆ, ಅಂಕಿತ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Shiva Rajakumar: ಕಮಲ್‌ ಹಾಸನ್‌ ತಬ್ಬಿಕೊಂಡ ಕಾರಣಕ್ಕೆ 3 ದಿನ ಸ್ನಾನ ಮಾಡದ ಶಿವಣ್ಣ; ಏನಿದು ಫ್ಯಾನ್‌ ಬಾಯ್‌ ಮೂಮೆಂಟ್‌?

ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ "ಮೈ ಹೀರೊ" ಚಿತ್ರಕ್ಕಿದ್ದು, ಅವಿನಾಶ್ ವಿಜಯಕುಮಾರ್ ಅವರೆ ಸಂಭಾಷಣೆ ಬರೆದಿದ್ದಾರೆ.