ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಶ್ರೀರಾಮಚಂದ್ರ’ನಾದ ‘ಸು ಫ್ರಂ ಸೋ’ ಖ್ಯಾತಿಯ ರವಿ ಅಣ್ಣ; ನಟ ಶನೀಲ್‌ ಗೌತಮ್‌ ಹೊಸ ಸಿನಿಮಾ ಘೋಷಣೆ!

Shaneel Gautham: ʻಶ್ರೀರಾಮಚಂದ್ರʼ ಚಿತ್ರದ ಮೂಲಕ ‘ಸು ಫ್ರಮ್ ಸೋ’ ಖ್ಯಾತಿಯ ನಟ ಶನೀಲ್‌ ಗೌತಮ್‌ ನಾಯಕನಟರಾಗಿ ಹೊರಹೊಮ್ಮಿದ್ದಾರೆ. ನವೆಂಬರ್ 1ರ ಹುಟ್ಟುಹಬ್ಬದಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಭಾರಿ ನಿರೀಕ್ಷೆ ಹುಟ್ಟಿಸಿದೆ. ‘ಪೊಗರು’ ಗಂಗಾಧರ್ ನಿರ್ಮಾಣ ಹಾಗೂ ಚಂದ್ರಮೋಹನ್ ನಿರ್ದೇಶನದ ಈ ಕೌಟುಂಬಿಕ ಚಿತ್ರಕ್ಕೆ ನಿರ್ಮಾಪಕ ಉದಯ್ ಕೆ. ಮೆಹ್ತಾ ಕಥೆ ಬರೆದಿರುವುದು ವಿಶೇಷ.

ʻಸು ಫ್ರಂ ಸೋʼ ನಟ ಶನೀಲ್‌ ಗೌತಮ್‌ ಈಗ ʻಶ್ರೀರಾಮಚಂದ್ರʼ ಚಿತ್ರದಲ್ಲಿ ಹೀರೋ!

-

Avinash GR
Avinash GR Nov 2, 2026 5:14 PM

‘ಸು ಫ್ರಮ್ ಸೋ’ ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ‘ರವಿ ಅಣ್ಣ’ ಎಂದೇ ಮನೆಮಾತಾಗಿದ್ದ ನಟ ಶನೀಲ್ ಗೌತಮ್ ಈಗ ನಾಯಕನಾಗಿ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶನೀಲ್ ಗೌತಮ್ ಅವರ ಹುಟ್ಟುಹಬ್ಬದ (ನ.1) ವಿಶೇಷ ಸಂದರ್ಭದಲ್ಲಿ ಚಿತ್ರತಂಡವು ಅವರ ನಟನೆಯ ನೂತನ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್‌ ಲುಕ್ ಪೋಸ್ಟರ್‌ ಅನ್ನು ಅನಾವರಣಗೊಳಿಸಿದ್ದು, ಚಿತ್ರಕ್ಕೆ ‘ಶ್ರೀರಾಮಚಂದ್ರ’ ಎಂದು ಹೆಸರಿಡಲಾಗಿದೆ.

ʻಪೊಗರುʼ ನಿರ್ಮಾಪಕರ ಸಿನಿಮಾ

ಈ ಚಿತ್ರವನ್ನು ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ, ‘ಪೊಗರು’ ಖ್ಯಾತಿಯ ಬಿ.ಕೆ. ಗಂಗಾಧರ್ ನಿರ್ಮಿಸುತ್ತಿದ್ದು, ‘ಫಾರೆಸ್ಟ್’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೊಂದು ಸಂಪೂರ್ಣ ಕೌಟುಂಬಿಕ ಮನರಂಜನೆಯ ಚಿತ್ರವಾಗಿದ್ದು, ಕುಟುಂಬದ ಸಂಬಂಧಗಳು, ಭಾವನಾತ್ಮಕ ಸನ್ನಿವೇಶಗಳು, ಅಣ್ಣ-ತಂಗಿಯ ಮುದ್ದಾದ ಕಿತ್ತಾಟ ಹಾಗೂ ಹೊಟ್ಟೆ ಹುಣ್ಣಾಗಿಸುವ ಹಾಸ್ಯದ ಸಮ್ಮಿಲನ ಈ ಕಥೆಯಲ್ಲಿದೆ. ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ ಭಾವನಾತ್ಮಕವಾಗಿಯೂ ಆಡಿಯೆನ್ಸ್‌ ಜೊತೆ ಕನೆಕ್ಟ್‌ ಆಗುವಂತಹ ವಿಶಿಷ್ಟ ಕಥಾಹಂದರವನ್ನು ಹೆಣೆಯಲಾಗಿದೆಯಂತೆ.

ಕಥೆ ಬರೆದ ನಿರ್ಮಾಪಕ ಉದಯ್ ಕೆ. ಮೆಹ್ತಾ

ಈ ಚಿತ್ರದ ಮೂಲ ಕಥೆಯನ್ನು ಖ್ಯಾತ ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರು ಬರೆದಿದ್ದು, ನಿರ್ದೇಶಕ ಚಂದ್ರಮೋಹನ್ ಹಾಗೂ ನಟ ಶನೀಲ್ ಗೌತಮ್ ಜತೆಯಾಗಿ ಚಿತ್ರಕಥೆ ರಚಿಸಿದ್ದಾರೆ. ಈ ಚಿತ್ರಕಥೆಯನ್ನು ಅಂತಿಮಗೊಳಿಸಲು ಸುಮಾರು ಐದಾರು ತಿಂಗಳುಗಳ ಕಾಲ ಮಂಗಳೂರಿನಲ್ಲಿ ಪೂರ್ವಸಿದ್ಧತೆ ನಡೆಸಲಾಗಿತ್ತು. ಗುಣಮಟ್ಟದ ಕಥೆಯ ಹುಡುಕಾಟದಲ್ಲಿದ್ದ ನಿರ್ಮಾಪಕ ಬಿ.ಕೆ. ಗಂಗಾಧರ್ ಅವರು ಹಲವು ಕಥೆಗಳನ್ನು ಕೇಳಿದ ನಂತರ ಅಂತಿಮವಾಗಿ ಈ ಕಥೆಯನ್ನು ಆಯ್ಕೆ ಮಾಡಿ ಚಿತ್ರೀಕರಣಕ್ಕೆ ಗ್ರೀನ್‌ ಸಿಗ್ನಲ್ ತೋರಿಸಿದ್ದಾರೆ.

ನಾಯಕಿಯಾಗಿ ಎಂಟ್ರಿ ಕೊಟ್ಟ ಪರಿಪೂರ್ಣ ಚಂದ್ರಶೇಖರ್

ಉಡುಪಿ ಮೂಲದ ನಟಿ ಪರಿಪೂರ್ಣ ಚಂದ್ರಶೇಖರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ಇತರೆ ಭಾಷೆಗಳಲ್ಲಿ ನಟಿಸಿ ಅನುಭವವಿರುವ ಪರಿಪೂರ್ಣ ಅವರೊಂದಿಗೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಖ್ಯಾತಿಯ ಪ್ರವೀಣ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಸೇರಿದಂತೆ ದಕ್ಷಿಣ ಕನ್ನಡದ ಜನಪ್ರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Su From So: ಸು ಫ್ರಮ್ ಸೋ ಸಿನಿಮಾ ಒಟಿಟಿ ಡೇಟ್ ಫೇಕ್- ಹಾಟ್ ಸ್ಟಾರ್ ಸ್ಪಷ್ಟನೆ ಏನು?

ಬಹುತೇಕ ಚಿತ್ರೀಕರಣ ಮುಕ್ತಾಯ

ಈ ಚಿತ್ರಕ್ಕೆ ‘ಸು ಫ್ರಮ್ ಸೋ’ ಖ್ಯಾತಿಯ ಚಂದ್ರಶೇಖರನ್ ಅವರ ಛಾಯಾಗ್ರಹಣ ಹಾಗೂ ಲಿಖಿತ್ ಪ್ರಸಾದ್ ಶೆಟ್ಟಿ ಅವರ ಸಂಗೀತ ಸಂಯೋಜನೆ ಇದ್ದು, ಒಟ್ಟು 5 ಹಾಡುಗಳು ಚಿತ್ರದಲ್ಲಿರಲಿವೆ. ವಿಶೇಷವೆಂದರೆ, ‘ಸು ಫ್ರಮ್ ಸೋ’ ತಂಡದ ಸುಮಾರು ಶೇ.80ರಷ್ಟು ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಮುಂದಿನ 20 ದಿನಗಳಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಲು ಚಿತ್ರತಂಡ ಯೋಜಿಸಿದೆ.